Article - VNA278

ಯೋಧರಿಗಾಗಿ ಪ್ರಾರ್ಥನೆ

ಅದೊಂದು ಶ್ಲೋಕವಿದೆ. ಪರೀಕ್ಷೆಗೆ ಕುಳಿತುಕೊಳ್ಳುವ ವಿದ್ಯಾರ್ಥಿಯಿಂದ ಆರಂಭಿಸಿ, ಜೀವನದ ಪರೀಕ್ಷೆಯನ್ನು ಎದುರಿಸುವ ವ್ಯಕ್ತಿಯಲ್ಲಿಯೂ, ಗಡಿಯನ್ನು ಕಾಯುಯ ಯೋಧನಲ್ಲಿಯೂ ಇರಲೇ ಬೇಕಾದ ಎಂಟು ಗುಣಗಳನ್ನು ತಿಳಿಸುವ, ಅವನ್ನು ನಮಗೆ ದಯಪಾಲಿಸುವ ಹನುಮನನ್ನು ಪ್ರಾರ್ಥಿಸುವ ಸುಂದರ, ಪುಟ್ಟ ಶ್ಲೋಕ.  ಆ ಶ್ಲೋಕದ ವಿವರಣೆ ಇಲ್ಲಿದೆ. ಯುದ್ಧದ ಸಂದರ್ಭದಲ್ಲಿ ನಾಗರೀಕರ ಕರ್ತವ್ಯದ ಚಿಂತನೆಯೊಂದಿಗೆ. 

6421 Views
Article - VNA277

ವಾರುಣೀ ಯೋಗ

ವಾರುಣೀ ಯೋಗ ಎಂದರೇನು, ಆ ದಿವಸ ಮಾಡಬೇಕಾದ ಕಾರ್ಯಗಳೇನು ಎಂದು ತಿಳಿಸುವ ಲೇಖನ. ಶ್ರಾದ್ಧ, ದಾನ ಮುಂತಾದವುಗಳಲ್ಲಿ ಮಾಡಬೇಕಾದ ಸಂಕಲ್ಪ ಮತ್ತು ಅದರ ಅರ್ಥದೊಂದಿಗೆ.

5252 Views
Article - VNA276

ಸಾಂವತ್ಸರಿಕ ಶ್ರಾದ್ಧವನ್ನು ಮೊದಲು ಅಥವಾ ನಂತರ ಮಾಡಬಹುದೇ?

ಕಾಲ ಶ್ರಾದ್ಧವನ್ನು ನಿಗದಿತ ದಿನದ ಮೊದಲೇ ಮಾಡಬಹುದೇ? ಸಮಯಕ್ಕೆ ಸರಿಯಾಗಿ ಮಾಡಲು ಅತ್ಯಂತ ಅನಾನುಕೂಲತೆ ಇದ್ದಾಗ ಯಾವಾಗ ಮಾಡಬೇಕು? ಕಾಲಶ್ರಾದ್ಧದ ಸಮಯಕ್ಕೆ ಅಶೌಚ ಬಂದರೆ, ಪತ್ನಿ ರಜಸ್ವಲೆಯಾದರೆ ಏನು ಮಾಡಬೇಕು? ಎಂಬ ಪ್ರಶ್ನೆಗಳಿಗೆ ನಮ್ಮ ಋಷಿಮುನಿಗಳು ನೀಡಿದ ಉತ್ತರ ಇಲ್ಲಿದೆ. 

11361 Views
Article - VNA275

ಜ್ಯೇಷ್ಠದಲ್ಲಿ ಜ್ಯೇಷ್ಠಸಂತಾನದ ಮದುವೆ

ಜ್ಯೇಷ್ಠ ಮಾಸದಲ್ಲಿ ಜ್ಯೇಷ್ಠಪುತ್ರನ ಮದುವೆ ಮಾಡಬಹುದೇ? ದ್ವಿಜ್ಯೇಷ್ಠ, ತ್ರಿಜ್ಯೇಷ್ಠ ಎಂಬ ಶಬ್ದಗಳ ಅರ್ಥ ಮತ್ತು ಅವುಗಳ ಕುರಿತ ವಿವರಣೆ ಇಲ್ಲಿದೆ. 

1236 Views
Article - VNA274

ವಿಲಂಬಿ ಮಾರ್ಗಶೀರ್ಷ ಕೃಷ್ಣ ಏಕಾದಶಿ

01/01/2019 ರಂದು ಉಪವಾಸವಿಲ್ಲ, 02/01/2019ರಂದು ಉಪವಾಸ. ಮೂರನೇ ತಾರೀಕು ಪಾರಣೆ. 

9278 Views
Article - VNA273

ವಿಲಂಬಿ ಮಾರ್ಗಶೀರ್ಷ ಶುಕ್ಲ ಏಕಾದಶೀ

18-12-2018 ರಂದು ಉಪವಾಸವೋ? 19-12-2018 ರಂದು ಉಪವಾಸವೋ? ವೈಕುಂಠೈಕಾದಶಿ ಗೀತಾಜಯಂತಿಗಳ ಆಚರಣೆ ಎಂದು? ಎಂಬ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ. 

8395 Views
Article - VNA271

ಅಶೌಚದಲ್ಲಿ ಗ್ರಹಣದ ಆಚರಣೆ

ಶೂದ್ರರು, ಹಸುಗೂಸುಗಳು, ಉಪನಯನವಾದ ಮಕ್ಕಳು, ಮದುವೆಯಾಗದ ಹೆಣ್ಣುಮಕ್ಕಳು, ರಜಸ್ವಲೆಯರು, ಜಾತಾಶೌಚದವರು, ಮೃತಾಶೌಚದವರು, ತೀವ್ರವಾದ ಖಾಯಿಲೆ ಇರುವವರು, ಪ್ರಯಾಣ ಮಾಡುವವರು ಯಾವ ರೀತಿ ಗ್ರಹಣದ ಆಚರಣೆ ಮಾಡಬೇಕು ಎಂದು ವಿವರಿಸುವ ಲೇಖನ. 

2175 Views
Article - VNA270

ಗ್ರಹಣದ ಸಂಕಲ್ಪ ಮತ್ತು ಸಮರ್ಪಣೆ

ಗ್ರಹಣಕಾಲದಲ್ಲಿ ಮಾಡುವ ಪಾರಾಯಣ, ಜಪ, ತರ್ಪಣ ಮುಂತಾದ ಸತ್ಕರ್ಮಗಳ ಮೊದಲು ಮಾಡಬೇಕಾದ ಸಂಕಲ್ಪ ಮತ್ತು ನಂತರ ಮಾಡಬೇಕಾದ ಸಮರ್ಪಣೆಯ ಕ್ರಮವನ್ನು ಅರ್ಥಸಹಿತವಾಗಿ ಇಲ್ಲಿ ವಿವರಿಸಲಾಗಿದೆ. 

2519 Views
Article - VNA269

27-07-2018 ರ ಚಂದ್ರಗ್ರಹಣ

27-07-2018 ರ ಚಂದ್ರಗ್ರಹಣದ ವಿವರಗಳು ಇಲ್ಲಿವೆ. 

5550 Views
Article - VNA268

ಧಾರಣ ಪಾರಣ ವ್ರತ

ಧಾರಣಪಾರಣವ್ರತ ಎಂದರೇನು, ಯಾವಾಗ ಮಾಡಬೇಕು, ಈ ವ್ರತದಿಂದ ಉಂಟಾಗುವ ಫಲಗಳೇನು, ವ್ರತದ ಕ್ರಮಗಳೇನು, ದಶಮಿಯ ದಿವಸ ಉಪವಾಸ ಒದಗಿದರೆ ಏನು ಮಾಡಬೇಕು, ವ್ರತದ ಸಮರ್ಪಣೆಯ ಕ್ರಮವೇನು ಎನ್ನುವದನ್ನು ವಿವರಿಸುವ ಲೇಖನ. 

6871 Views
Article - VNA267

ಡಾ. ವಿಠೋಬಾಚಾರ್ಯರಿಗೆ ಉತ್ತರ

ಶ್ರೀ ವಿದ್ಯಾಶ್ರೀಶತೀರ್ಥರನ್ನು ಕುರಿತು ನಾನು ಮಾಡಿದ ಬಹಿರಂಗ ಪ್ರಶ್ನೆಗಳಿಗೆ ಡಾ.ವಿಠೋಬಾಚಾರ್ಯರು ಎನ್ನುವವರು ಉತ್ತರ ನೀಡಿದ್ದಾರೆ. ಆ ಲೇಖನಕ್ಕೆ ನನ್ನ ಪ್ರತಿಕ್ರಿಯೆ ಇಲ್ಲಿದೆ. 

9832 Views
Article - VNA266

ತ್ರಯೀ ವಿದ್ಯಾ ಗುರು ಕುಲಮ್

ವೇದಗಳನ್ನು ಕಲಿಸಲು ಮಾಧ್ವರಲ್ಲಿರುವ ಏಕೈಕ ಗುರುಕುಲ, ಶ್ರೀರಂಗದ ತ್ರಯೀ ವಿದ್ಯಾ ಗುರುಕುಲಕ್ಕೆ ಬೇರೂರಿ ನಿಲ್ಲರು ಸಜ್ಜನರ ಸಹಾಯದ ಅಗತ್ಯವಿದೆ. ವಿವರಗಳನ್ನು ಲೇಖನದಲ್ಲಿ ನೀಡಿದ್ದೇನೆ. ವೇದ ವಿದ್ಯೆಯ ಸಂರಕ್ಷಣೆಗೆ ನೀವೂ ಕೈಜೋಡಿಸಿ, ನಿಮಗೆ ತಿಳಿದ ಸಜ್ಜನರಿಗೂ ಲೇಖನವನ್ನು ತಲುಪಿಸಿ, 

4083 Views
Article - VNA265

ಆಚಮನದ ಸಂದರ್ಭಗಳು

ಆಚಮನಗಳನ್ನು ಯಾವಯಾವ ಸಂದರ್ಭಗಳಲ್ಲಿ ಮಾಡಬೇಕು, ಯಾವಾಗ ಮಾಡಬಾರದು, ಮುಖ್ಯವಾದ ಆಚಮನ ಮಾಡಲು ಸಾಧ್ಯವಾಗದಿದ್ದಲ್ಲಿ ಬ್ರಾಹ್ಮಣರು ಬಲಗಿವಿಯನ್ನು ಮುಟ್ಟಿಕೊಳ್ಳಬೇಕು ಎನ್ನುತ್ತಾರೆ, ಅದು ಏಕೆ? ಬ್ರಾಹ್ಮಣೇತರರು ಏನು ಮಾಡಬೇಕು ಎನ್ನುವದರ ವಿವರ ಇಲ್ಲಿದೆ. 

3128 Views
Article - VNA264

ಸದಾಚಾರ ಸ್ಮೃತಿ — 14 — ಆಚಮನ ಮಾಡುವ ಕ್ರಮ

ಆಚಮನ ಎಂಬ ಶಬ್ದದ ಅರ್ಥ, ಯಾಕಾಗಿ ಆಚಮನ ಮಾಡಬೇಕು, ಆಚಮನ ಮಾಡುವ ನೀರು ಹೇಗಿರಬೇಕು ಆಚಮನ ಮಾಡುವ ಕ್ರಮ ಏನು ಎನ್ನುವದನ್ನು ಶಾಸ್ತ್ರವಚನಗಳ ಆಧಾರದಿಂದ ನಿರೂಪಿಸುವ ಲೇಖನ. 

4547 Views
Article - VNA263

ಅಧಿಕಮಾಸದ ಮಹಾ ಸತ್ಕರ್ಮಗಳು

ಎಲ್ಲ ದಾನಗಳಿಗಿಂತಲೂ ಎಲ್ಲ ವ್ರತಗಳಿಗಿಂತಲೂ ಅತ್ಯಧಿಕವಾಗಿ ಅನಂತ ಫಲವನ್ನು ನೀಡುವ, ಹಣ ಕಾಸಿನ ಚಿಂತೆಯಿಲ್ಲದೆ ಅತ್ಯಂತ ಸುಲಭವಾಗಿ ಮಾಡಬಹುದಾದ, ಶ್ರೀಹರಿ ವಾಯು ದೇವತಾ ಗುರುಗಳಿಗೆ ಅತ್ಯಂತ ಪ್ರಿಯವಾದ ಮಹಾಸತ್ಕರ್ಮಗಳ ಕುರಿತ ವಿವರಣೆ ಇಲ್ಲಿದೆ. 

3027 Views
Article - VNA262

ಅಧಿಕಮಾಸದ ದಾನದ ಮಂತ್ರಗಳು ಮತ್ತು ಕ್ರಮ

ಅಧಿಕಮಾಸದಲ್ಲಿ ಚಿಂತನೆ ಮಾಡಬೇಕಾದ 33 ದೇವತೆಗಳು, ಅವರಲ್ಲಿನ ತಾರತಮ್ಯ, ಸಂಕಲ್ಪದ ಕ್ರಮ, ಸಂಕಲ್ಪದಲ್ಲಿರಬೇಕಾದ ಎಚ್ಚರ, ಅರ್ಘ್ಯಪ್ರದಾನ, ದಾನದ ವಸ್ತುವಿನಲ್ಲಿ ಭಗವದ್ರೂಪಗಳ ಚಿಂತನೆ, ದೇವರ ಪ್ರಾರ್ಥನೆ, ದಾನ, ದಾನದ ಸಮರ್ಪಣೆ ಮತ್ತು ಸಂಕ್ಷಿಪ್ತ, ಅತೀಸಂಕ್ಷಿಪ್ತ ದಾನದ ಕ್ರಮವನ್ನು ಇಲ್ಲಿ ವಿವರಿಸಲಾಗಿದೆ. 

3294 Views
Article - VNA261

ಅಧಿಕಮಾಸದ ದಾನಗಳು

ದಾನ ಮಾಡುವ ಮುನ್ನ ಇರಬೇಕಾದ ಎಚ್ಚರಗಳು, ಮಾಡಬೇಕಾದಾಗ ಇರಬೇಕಾದ ಅನುಸಂಧಾನಗಳು, ದಾನ ಮಾಡಲು ಶಕ್ತಿಯೇ ಇಲ್ಲದಿದ್ದಾಗಲೂ ಏನು ಮಾಡಬೇಕು, ದೇವರು ಗುರುಗಳಿಗೆ ಪ್ರಿಯವಾದ ದಾನ ಮಾಡುವ ಮಾರ್ಗ ಯಾವುದು ಎನ್ನುವ ವಿಷಯಗಳ ಕುರಿತ ಲೇಖನ.

2593 Views
Article - VNA260

ವ್ರತಗಳ ಸಂಕಲ್ಪ ಮತ್ತು ಸಮರ್ಪಣೆ

ಅಧಿಕ ಮಾಸದಲ್ಲಿ ಆಚರಿಸಬೇಕಾದ ವ್ರತಗಳು, ಅವುಗಳ ಸಂಕಲ್ಪ ಮಾಡಬೇಕಾದ ಕ್ರಮ, ಸಮರ್ಪಣೆ ಮಾಡಬೇಕಾದ ಕ್ರಮಗಳ ವಿವರಣೆಯೊಂದಿಗೆ, ಅಧಿಕಮಾಸದಲ್ಲಿ ಚಿಂತನೆ ಮಾಡಬೇಕಾದ ರಾಧಾಪುರುಷೋತ್ತಮನ ಚಿತ್ರವೂ ಇಲ್ಲಿದೆ. 

3989 Views
Article - VNA259

ಶ್ರವಣೋಪವಾಸ

ಶ್ರವಣೋಪವಾಸ ಎಂದರೇನು, ಏಕೆ ಮಾಡಬೇಕು, ಮಾಡದಿದ್ದರೆ ಏನು ದೋಷ, ಮಾಡಿದರೆ ಏನು ಫಲ, ಈ ಬಾರಿ ಎಂದು ಶ್ರವಣೋಪವಾಸವಿದೆ, ಖಾಯಿಲೆ ಇರುವವರು, ಬಸುರಿ ಬಾಣಂತಿ ಮುಂತಾದ ಅಶಕ್ತರು ಹೇಗೆ ಮಾಡಬೇಕು ಇತ್ಯಾದಿ ಪ್ರಶ್ನೆಗಳಿಗೆ ಶ್ರೀ ಕೃಷ್ಣಾಚಾರ್ಯರು ಸ್ಮೃತಿಮುಕ್ತಾವಲಿಯಲ್ಲಿ ಸಂಗ್ರಹಿಸಿರುವ ಉತ್ತರಗಳ ವಿವರಣೆ ಇಲ್ಲಿದೆ. 

15372 Views
Article - VNA258

ಶಿವರಾತ್ರಿಯ ಆಚರಣೆಯ ಕ್ರಮ

ಶಿವರಾತ್ರಿ ಎಂದರೇನು, ಏಕೆ ಆಚರಿಸಬೇಕು, ಯಾವಾಗ ಆಚರಿಸಬೇಕು, ವೈಷ್ಣವರು ಹೇಗೆ ಆಚರಿಸಬೇಕು ಎನ್ನುವದರ ವಿವರ ಇಲ್ಲಿದೆ. 

5192 Views
Article - VNA257

31-01-2018 ಚಂದ್ರಗ್ರಹಣದ ಆಚರಣೆ

ಹೇಮಲಂಬ ಸಂವತ್ಸರದ ಮಾಘ ಶುದ್ಧ ಪೌರ್ಣಿಮೆಯ ಗ್ರಸ್ತೋದಯ ಚಂದ್ರಗ್ರಹಣದ ವೇಧಕಾಲ, ಸ್ನಾನದ ಸಮಯಗಳು ಮುಂತಾದವುಗಳ ವಿವರಣೆ ಇಲ್ಲಿದೆ.

5159 Views
Article - VNA256

ಧನುರ್ಮಾಸ

ಧನುರ್ಮಾಸ ಎಂದರೇನು?, ಧನುರ್ಮಾಸದ ಪೂಜಾಕಾಲ ಎಂದು ಆರಂಭ, ಧನುರ್ಮಾಸದ ಪ್ರಧಾನ ನಿಯಮಗಳು, ಧನುರ್ಮಾಸದ ಪೂಜೆ, ಚಳಿಯಲ್ಲಿ ಸ್ನಾನ ಮಾಡುವದು ಹೇಗೆ?, ಧನುರ್ಮಾಸದಲ್ಲಿ ಸ್ನಾನದ ಸಮಯ, ಪೂಜಾ ಸಮಯ, ಅರುಣೋದಯದ ಪೂಜೆಯೇ ಏಕೆ ಮುಖ್ಯ, ಧನುರ್ಮಾಸದ ಪೂಜೆ ಮಾಡದಿದ್ದಲ್ಲಿ ದೋಷ, ಪೂಜೆಯ ಅಧಿಕಾರವಿಲ್ಲದವರು ಏನು ಮಾಡಬೇಕು, ಪೂಜೆಯಿಂದ ದೊರೆಯುವ ಫಲಗಳು ಇಷ್ಟು ವಿಷಯಗಳ ಕುರಿತ ವಿವರಣೆ ಇಲ್ಲಿದೆ. 

5779 Views
Article - VNA255

ಚಾತುರ್ಮಾಸ್ಯ ಸಮರ್ಪಣೆಯ ಕ್ರಮ

ನಾಲ್ಕು ತಿಂಗಳು ಮಾಡಿದ ನಾಲ್ಕು ರೀತಿಯ ವ್ರತಗಳನ್ನು ನಾಲ್ಕು ರೂಪದ ಭಗವಂತನಿಗೆ ಸಮರ್ಪಿಸುವ ಕ್ರಮದ ವಿವರ. 

2632 Views
Article - VNA254

Bhagavatam Ready Reckoner

ಶ್ರೀಮದ್ ಭಾಗವತವನ್ನು ಪ್ರತೀದಿವಸ ಶ್ರವಣ ಮಾಡುತ್ತಿರುವವರ, ಮತ್ತೆಮತ್ತೆ ಕೇಳುತ್ತಿರುವವರ ಸಂಖ್ಯೆ ದಿವಸದಿಂದ ದಿವಸಕ್ಕೆ ಅಧಿಕವಾಗುತ್ತಿರುವದು, ಶ್ರೀಮದ್ ಭಾಗವತ ಹೇಳುತ್ತಿರುವ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಿರುವದು ತುಂಬ ಸಂತೋಷ ನೀಡುತ್ತಿದೆ. ನಿಮಗೆಲ್ಲ ಅನುಕೂಲವಾಗಲಿ ಎನ್ನುವ ಕಾರಣಕ್ಕೆ 11/10/2017 ರವೆರೆಗೆ ಪ್ರಕಟವಾಗಿರುವ 43 ಉಪನ್ಯಾಸಗಳಿಗೆ Link ಗಳನ್ನು ಇಲ್ಲಿ ನೀಡಲಾಗಿದೆ. ತಕ್ಷಣದಲ್ಲಿ ನಿಮಗೆ ಬೇಕಾದ ಉಪನ್ಯಾಸವನ್ನು ನೀವು ಪಡೆಯಬಹುದು. ಮತ್ತು, ಆಸಕ್ತರಾದ ಸಜ್ಜನರಿಗೂ ನೀಡಬಹುದು. ಜೊತೆಯಲ್ಲಿ, ನಮ್ಮ ರಜತ್ ಶ್ರೀಮದ್ ಭಾಗವತಕ್ಕಾಗಿ ರಚನೆ ಮಾಡಿ ನೀಡುತ್ತಿರುವ ಚಿತ್ರಗಳನ್ನೂ ಸಹ ಇದರಲ್ಲಿ ನೀಡಲಾಗಿದೆ. ಪ್ರತಿಯೊಬ್ಬ ಆಸಕ್ತ ಸಜ್ಜನರಿಗೂ ಇದನ್ನು ತಲುಪಿಸಿ. 

2795 Views
Article - VNA253

ಮಂಗಳಾಚರಣ ಶ್ಲೋಕಗಳು

ಮಂಗಳಾಚರಣ ಶ್ಲೋಕಗಳು

2151 Views
Article - VNA252

ಭಾಗವತಪ್ರವಚನೋತ್ಸವ

ಆಚಾರ್ಯರ ಭಾಗವತತಾತ್ಪರ್ಯಸಮೇತವಾಗಿ ಸಮಗ್ರ ಶ್ರೀಮದ್ ಭಾಗವತದ ಪ್ರತೀಶ್ಲೋಕದ ಮಹಾಪ್ರವಚನೋತ್ಸವದ ಕುರಿತ ಮಾಹಿತಿ. 

3359 Views
Article - VNA251

ಗುರು ದೇವತಾ ಅಭಿಷೇಕ

ಅಭಿಷೇಕದ ನೀರು, ಆರೋಹಣ ಕ್ರಮ, ಈ ಕ್ರಮದಲ್ಲಿ ವಹಿಸಬೇಕಾದ ಎಚ್ಚರ, ಅವರೋಹಣ ಕ್ರಮ	, ದೇವತಾಪುಂಗವರು	, ಮನೆಯಲ್ಲಿ ಇರಲೇಬೇಕಾದ ದೇವತಾಪ್ರತಿಮೆಗಳು, ಗುರು ಅಭಿಷೇಕ, ಶಂಖಾಭಿಷೇಕದ ಮಂತ್ರಗಳು, ಪ್ರಾಣದೇವರ ಅಭಿಷೇಕದ ಮಂತ್ರಗಳು, ಗರುಡ ಸ್ತೋತ್ರಗಳು	, ತಾರ್ಕ್ಷ್ಯಸೂಕ್ತ, ಶೇಷಸ್ತೋತ್ರಗಳು, ರುದ್ರಸ್ತೋತ್ರಗಳು, ಗಣಪತಿಸ್ತೋತ್ರಗಳು, ದೇವತಾಸ್ತೋತ್ರಗಳು, ಗುರುಸ್ತೋತ್ರಗಳು,  ಇಷ್ಟು ವಿಷಯಗಳ ವಿವರಣೆ ಈ ಲೇಖನದಲ್ಲಿದೆ. ಇದರ ಉಪನ್ಯಾಸ — VNU483

1663 Views
Article - VNA250

ಪೂಜೆಯ ನೀರು

 ದೇವರ ಪೂಜೆಯಲ್ಲಿ ನೀರಿಗೆ ಯಾಕಿಷ್ಟು ಮಹತ್ತ್ವ?  ಯಾವ ನೀರಿನಿಂದ ಪೂಜೆಯನ್ನು ಮಾಡಬೇಕು?  ಯಾವ ನೀರಿನಿಂದ ಮಾಡಬಾರದು?  ಎಂಬ ಪ್ರಶ್ನೆಗಳಿಗೆ ಉತ್ತರಗಳೊಂದಿಗೆ, ಪೂಜೆಯ ಸ್ನಾನಕ್ಕೆ ಒಯ್ಯಬೇಕಾದ ಪದಾರ್ಥಗಳು, ಅವುಗಳ ಕಾರ್ಯ, ಸ್ನಾನ ಮಾಡಿ ನೀರು ತರುವ ಕ್ರಮ, ತಂದ ಬಳಿಕ ಮಾಡಬೇಕಾದ ಕಾರ್ಯಗಳು ಇವೆಲ್ಲವನ್ನೂ ಸಚಿತ್ರವಾಗಿ ಇಲ್ಲಿ ನಿರೂಪಿಸಲಾಗಿದೆ. ಈ ವಿಷಯ ಎರಡು ಉಪನ್ಯಾಸಗಳಲ್ಲಿ ನಿರೂಪಿತವಾಗಿದೆ — VNU480 ಮತ್ತು VNU481

1274 Views
Article - VNA249

ರಜಸ್ವಲೆ ಎಂದರೆ ಬ್ರಹ್ಮಹತ್ಯೆ ಮಾಡಿದವಳಲ್ಲ

ರಜಸ್ವಲೆಯರೆಂದರೆ ಬ್ರಹ್ಮಹತ್ಯೆಯನ್ನು ಮಾಡಿದವರು ಎಂದೇ ತಿಳಿದವರು ಬಹಳ ಮಂದಿ. ಆದರೆ ಶಾಸ್ತ್ರ ಹೇಳುವದೇ ಬೇರೆ. ರಜಸ್ವಲೆ ಬ್ರಹ್ಮಹತ್ಯೆ ಮಾಡಿದವಳಲ್ಲ, ಬ್ರಹ್ಮಹತ್ಯೆಯನ್ನು ನೀಡುವವಳು. ಮಹಾಭಾರತದ ಮೋಕ್ಷಧರ್ಮಪರ್ವದಲ್ಲಿ ಬಂದಂತಹ ಮಹತ್ತ್ವದ ವಿಷಯದ ನಿರೂಪಣೆ ಇಲ್ಲಿದೆ. ಇಂದ್ರದೇವರ ಬ್ರಹ್ಮಹತ್ಯೆಯ ವಿಭಾಗ ಹೇಗಾಯಿತು, ಮತ್ತು ಯಾರುಯಾರಿಗೆ ಆ ಬ್ರಹ್ಮಹತ್ಯೆ ಬರುತ್ತದೆ ಎನ್ನುವದರ ವಿವರಣೆಯೊಂದಿಗೆ. ತಪ್ಪದೇ ಓದಿ. 

2449 Views
Article - VNA248

ಅಭ್ಯಂಗ

ಅಭ್ಯಂಗ ಎಂದರೇನು, ಯಾವ ಸಮಯದಲ್ಲಿ ಮಾಡಿಕೊಳ್ಳಬೇಕು, ಯಾವಾಗ ಮಾಡಿಕೊಳ್ಳಬಾರದು, ಉಂಟಾಗುವ ಫಲ, ಪುರುಷ ಮತ್ತು ಸ್ತ್ರೀಯರಿಗೆ ಶುಭಾಶುಭ ವಾರಗಳು, ನಿಷಿದ್ಧತಿಥಿಗಳು, ಅಭ್ಯಂಗ ಮಾಡಿಕೊಳ್ಳುವಾಗ ಪಾಲಿಸಬೇಕಾದ ಧರ್ಮಗಳು, ಮತ್ತು ಕನಸಿನಲ್ಲಿ ಅಭ್ಯಂಗ ಮಾಡಿಕೊಂಡರೆ ಏನು ಫಲ ಇತ್ಯಾದಿ ವಿಷಯಗಳನ್ನು ನಿರೂಪಿಸುವ ಲೇಖನ. 

1632 Views
Article - VNA247

ಅಂಭ್ರಿಣೀ ತಪ್ಪು, ಅಂಭೃಣಿಯೇ ಸರಿ.

ಬನ್ನಂಜೆ ಗೋವಿಂದಾಚಾರ್ಯರು ತನ್ನ ಪುಸ್ತಕಗಳಲ್ಲಿ ಅಂಭೃಣಿ ಎಂಬ ಶಬ್ದವೇ ತಪ್ಪು, ಸರಿಯಾದ ಪ್ರಯೋಗ ಅಂಭ್ರಿಣೀ ಎಂದು ಬರೆದಿದ್ದಾರೆ. ಆದರೆ, ವಸ್ತುಸ್ಥಿತಿಯಲ್ಲಿ ಅಂಭೃಣೀ ಎನ್ನುವದೇ ಸರಿ, ಬನ್ನಂಜೆಯ ಅರ್ಥಕ್ಕೆ ಪ್ರಮಾಣವೂ ಇಲ್ಲ, ವ್ಯಾಕರಣಕ್ಕೂ ವಿರುದ್ಧ ಎನ್ನುವದನ್ನು ಇಲ್ಲಿ ಪ್ರತಿಪಾದಿಸಲಾಗಿದೆ.  ಇದರ ಉಪನ್ಯಾಸ — VNU469

1431 Views
Article - VNA246

ನಿರ್ಮಾಲ್ಯವಿಸರ್ಜನೆ

ನಿರ್ಮಾಲ್ಯವಿಸರ್ಜನೆಯ ಕ್ರಮ, ಫಲ, ಇರಬೇಕಾದ ಎಚ್ಚರ, ಮಾಡಬೇಕಾದ ಅನುಸಂಧಾನ ಮುಂತಾದವುಗಳ ವಿವರಣೆಯುಳ್ಳ ಲೇಖನ. ಇದರ ಉಪನ್ಯಾಸ — VNU460

1412 Views
Article - VNA245

ನಿರ್ಮಾಲ್ಯವಿಸರ್ಜನೆಯ ಸಮಯ

ಪದ್ಯಮಾಲಾ ಗ್ರಂಥದ ಮೇಲ್ನೋಟದ ಅರ್ಥವನ್ನು ಆಧರಿಸಿ, ಮಧ್ಯಾಹ್ನ ಪೂಜೆಯ ಸಂದರ್ಭದಲ್ಲಿಯೇ ನಿರ್ಮಾಲ್ಯ ವಿಸರ್ಜನೆ ಮಾಡಬೇಕು ಎನ್ನುತ್ತಾರೆ, ಆದರೆ ಟೀಕಾಕೃತ್ಪಾದರ ಅಭಿಪ್ರಾಯವೇನು ಎನ್ನುವದನ್ನು ಪ್ರಾಚೀನ ಗ್ರಂಥಗಳ ಆಧಾರದೊಂದಿಗೆ ಇಲ್ಲಿ ನಿರೂಪಿಸಲಾಗಿದೆ. ವಿರೋಧಾಭಾಸದ ಪರಿಹಾರದೊಂದಿಗೆ.  ಇದರ ಉಪನ್ಯಾಸ — VNA459

756 Views
Article - VNA244

ನಿರ್ಮಾಲ್ಯತೀರ್ಥ ಮತ್ತು ಊರ್ಧ್ವಪುಂಡ್ರಧಾರಣೆ

ನಿರ್ಮಾಲ್ಯ ಅಭಿಷೇಕದ ಕಾಲದ ಕುರಿತು, ಹಾಗೂ ಗೋಪೀಚಂದನ ಧಾರಣೆಯ ಕುರಿತು ಇಂದಿನ ಮಾಧ್ವರಲ್ಲಿ ತುಂಬ ಜನ ಗೊಂದಲ ಮಾಡಿಕೊಂಡಿದ್ದಾರೆ. ಸ್ವಯಂ ಶ್ರೀಮದಾಚಾರ್ಯರು ಆಚರಿಸುತ್ತಿದ್ದ ಕ್ರಮದ ನಿರೂಪಣೆಯೊಂದಿಗೆ ಹಾಗೂ ಶಾಸ್ತ್ರ ವಚನಗಳ ಆಧಾರದೊಂದಿಗೆ ಆ ಗೊಂದಲದ ಪರಿಹಾರ ಇಲ್ಲಿದೆ. ಇದರ ಉಪನ್ಯಾಸ — VNU458

1021 Views
Article - VNA243

ಹರಿಗುರುಮಂಗಳಾಷ್ಟಕಮ್

ಶ್ರೀ ವಿದ್ಯಾರತ್ನಾಕರತೀರ್ಥಶ್ರೀಪಾದಂಗಳವರು ರಚಿಸಿರುವ ಶ್ರೀಹರಿಗುರುಮಂಗಳಾಷ್ಟಕದ ಸಾಹಿತ್ಯ. ಇದರ ಅರ್ಥಾನುಸಂಧಾನ VNU403 ರಿಂದ VNU417 ರವರೆಗಿನ ಉಪನ್ಯಾಸಗಳಲ್ಲಿ ಉಪಲಬ್ಧವಿದೆ. 

1430 Views
Article - VNA242

ವಿಹಿತ ನಿಷಿದ್ಧ ತರಕಾರಿ ಹಣ್ಣುಗಳು

ಯಾವ ತರಕಾರಿ, ಹಣ್ಣುಗಳನ್ನು ದೇವರಿಗೆ ಸಮರ್ಪಿಸಬಹುದು, ಯಾವುದನ್ನು ಸಮರ್ಪಿಸಬಾರದು ಎನ್ನುವದರ ಪಟ್ಟಿ ಇಲ್ಲಿದೆ. 

5286 Views
Article - VNA241

ಅಕ್ಷಯತೃತೀಯಾ

ಅಕ್ಷಯ ತೃತೀಯಾವನ್ನು ಎಂದು ಆಚರಿಸಬೇಕು, ಹೇಗೆ ಆಚರಿಸಬೇಕು, ಬೆಳ್ಳಿ ಬಂಗಾರಗಳನ್ನು ಕೊಳ್ಳುವದನ್ನು ಶಾಸ್ತ್ರ ವಿಧಿಸುತ್ತದೆಯೇ, ಅಕ್ಷಯ ತೃತೀಯಾದ ಕುರಿತು ನಮ್ಮ ಶಾಸ್ತ್ರಗಳು ಏನು ಹೇಳುತ್ತವೆ ಇತ್ಯಾದಿ ಪ್ರಶ್ನೆಗಳಿಗೆ ಉತ್ತರಗಳನ್ನೊಳಗೊಂಡ ಲೇಖನ. 

3358 Views
Article - VNA240

ದೇವರ ಮನೆಯ ಸ್ವಚ್ಛತೆ

 ಮನೆಯಲ್ಲಿ ದೇವರ ಮನೆಯ ಆವಶ್ಯಕತೆ,  ದೇವರ ಮನೆ ಹೇಗಿರಬೇಕು,  ಸಂಮಾರ್ಜನದಿಂದ ದೊರೆಯುವ ಮಹಾಫಲಗಳು,  ಸ್ವಚ್ಛತೆಯನ್ನು ಯಾವಾಗ ಮಾಡಬೇಕು,  ಪಾಪರಾಶಿಯ ಪರಿಹಾರ,  ಒಂದು ಕಲ್ಪದವರೆಗೆ ಮಹರ್ಲೋಕದ ಪ್ರಾಪ್ತಿ,  ಗೋದಾನದ ಫಲ,  ಸೆಗಣಿಯಿಂದ ಸಾರಿಸಿದರೆ ಚಾಂದ್ರಾಯಣದ ಫಲ,  ಸುಣ್ಣ ಬಣ್ಣ ಮಾಡಿದರೆ ಹರಿಲೋಕ,  ಸಮಸ್ತಸಂಪತ್ತಿನ ಪ್ರಾಪ್ತಿ,  ಸದ್ಗುಣಸಂಪನ್ನ ರಾಜಜನ್ಮ ಪ್ರಾಪ್ತಿ,  ಇರುವೆ ಮುಂತಾದವಕ್ಕೆ ತೊಂದರೆಯಾಗಬಾರದು,  ಸ್ವಚ್ಛತೆಯ ಪದಾರ್ಥಗಳು,  ಹುಲ್ಲಿನ ಪೊರಕೆ ,  ಶುದ್ಧವಾದ ನೀರು,  ಪ್ಲಾಸ್ಟಿಕ್ಕು, ಕೆಮಿಕಲ್ಲುಗಳ ಉಪಯೋಗ ಬೇಡ,  ರಂಗೋಲಿಯ ಫಲ,  ದೀಪವನ್ನು ಬೆಳಗಿಸಬೇಕು,  ಸ್ವಚ್ಛ ಮಾಡಬೇಕಾದರೆ ಅನುಸಂಧಾನ ಇಷ್ಟು ವಿಷಯಗಳ ವಿವರಣೆ ಈ ಲೇಖನದಲ್ಲಿದೆ. 

1611 Views
Article - VNA239

ದೇವರ ಪೂಜೆಯ ಪಕ್ಷಿನೋಟ

ದೇವರ ಪೂಜೆಯಲ್ಲಿ ಯಾವ ಕ್ರಿಯೆ ಮೊದಲು, ಯಾವ ಕ್ರಿಯೆ ಅನಂತರ, ಒಟ್ಟಾರೆ ದೇವರ ಪೂಜೆಯಲ್ಲಿನ ಕ್ರಿಯೆಗಳು ಯಾವುವು ಎಂದು ತಿಳಿಸುವ ಲೇಖನ. ಇದರ ಉಪನ್ಯಾಸ VNU431. 

1673 Views
Article - VNA238

ದೇವರ ಪೂಜೆಯ ಫಲಗಳು

ಶ್ರೀಹರಿಯ ಅನಂತ ಪ್ರೀತಿಯನ್ನು ಕರುಣಿಸುವ, ಮಹಾಪಾತಕಗಳನ್ನೂ ಪರಿಹರಿಸುವ, ವಿಷ್ಣುಮಾಯೆಯನ್ನೂ ನಮ್ಮಿಂದ ಗೆಲ್ಲಿಸುವ ದೇವರ ಪೂಜೆಯ ಮಹಾಮಾಹಾತ್ಮ್ಯಗಳನ್ನು ಹಿಂದಿನ ಲೇಖನಗಳಲ್ಲಿ ತಿಳಿದೆವು. ನಮ್ಮ ಮನಸ್ಸಿನ ಸಣ್ಣಸಣ್ಣ ಅಪೇಕ್ಷೆಗಳನ್ನೂ ಸಹ ಪೂರೈಸುವ ಕಾಮಧೇನು ಈ ದೇವರಪೂಜೆ ಎನ್ನುವದನ್ನು ಶ್ರೀಮದಾಚಾರ್ಯರು ಪ್ರತಿಪಾದಿಸುತ್ತಾರೆ. ಅವರ ಪವಿತ್ರವಚನಗಳ ಅರ್ಥಾನುಸಂಧಾನ ಇಲ್ಲಿದೆ. ಇದರ ಉಪನ್ಯಾಸ VNU430

4217 Views
Article - VNA237

ದೇವರ ಪೂಜೆಯ ಮಾಹಾತ್ಮ್ಯ

ಶ್ರೀಮದಾಚಾರ್ಯರು ಕೃಷ್ಣಾಮೃತಮಹಾರ್ಣವ ಮುಂತಾದ ಕೃತಿಗಳಲ್ಲಿ ದೇವರ ಪೂಜೆಯ ಮಾಹಾತ್ಮ್ಯವನ್ನು ದಿವ್ಯವಾದ ಕ್ರಮದಲ್ಲಿ ತಿಳಿಸಿ ಹೇಳಿದ್ದಾರೆ. ದೇವರ ಪೂಜೆಯ ಕುರಿತು ನಮಗೆ ಶ್ರದ್ಧೆ ಮೂಡಿಸುವ, ಇರುವ ಶ್ರದ್ಧೆಯನ್ನು ನೂರ್ಮಡಿ ಮಾಡುವ ಆ ಭಗವತ್ಪಾದರ ಪರಮಪವಿತ್ರ ವಚನಗಳ ಅರ್ಥಾನುಸಂಧಾನ ಇಲ್ಲಿದೆ. 

867 Views
Article - VNA236

ದೇವರ ಪೂಜೆಯಿಂದ ದೊರೆಯುವ ಪುಣ್ಯ

ಶೌಚ, ಆಸನ, ಪ್ರಾಣಾಯಾಮ, ಅಪರಿಗ್ರಹ, ಅಹಿಂಸಾ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ತಪಸ್ಸು, ತುಷ್ಟಿ, ಯಜ್ಞ, ಸ್ವಾಧ್ಯಾಯ, ದೇವರಪೂಜೆ, ಧಾರಣಾ, ಶ್ರವಣ, ಮನನ, ಧ್ಯಾನ, ಸಮಾಧಿ, ವ್ಯಾಖ್ಯಾನ, ಭಕ್ತಿ ಎಂಬ ಶಾಸ್ತ್ರ ತಿಳಿಸುವ ಇಪ್ಪತ್ತು ಸಾಧನೆಗಳನ್ನು ತಿಳಿಸಿ ಯಾವಯಾವ ಕರ್ಮಗಳಿಂದ ಎಷ್ಟೆಷ್ಟು ಫಲ ಬರುತ್ತದೆ ಎನ್ನುವದನ್ನು ತಿಳಿಸಿ ದೇವರಪೂಜೆಯಿಂದ ಉಂಟಾಗುವ ಫಲ ‘ಅನಂತ’ ಎನ್ನುವ ಶ್ರೀಮದಾಚಾರ್ಯರು ತಿಳಿಸಿದ ಪರಮಮಂಗಳ ತತ್ವವನ್ನು ಇಲ್ಲಿ ನಿರೂಪಿಸಲಾಗಿದೆ.  ಇದರ ಉಪನ್ಯಾಸ VNU426

1083 Views
Article - VNA235

ದೇವರ ಪೂಜೆಯನ್ನು ಏಕೆ ಮಾಡಬೇಕು?

ಯಾವುದೇ ಸತ್ಕರ್ಮವನ್ನು ಮಾಡಬೇಕಾದರೂ ಅದರ ಉದ್ದೇಶ, ಫಲ, ಕಾರಣಗಳನ್ನು ತಿಳಿಯದೇ ಮಾಡಬಾರದು ಎನ್ನುವದು ಶಾಸ್ತ್ರಗಳ ನಿಲುವು. ದೇವರ ಪೂಜೆ ಪ್ರತೀನಿತ್ಯ ನಾವು ಆಚರಿಸಬೇಕಾದ ಮಹಾಸತ್ಕರ್ಮ. ಯಾಕಾಗಿ ದೇವರ ಪೂಜೆಯನ್ನು ಮಾಡಬೇಕು ಎನ್ನುವ ಪ್ರಶ್ನೆಗೆ ಶ್ರೀಕೃಷ್ಣ ಗೀತೆಯಲ್ಲಿ ನೀಡಿರುವ ನಾಲ್ಕು ಮಹತ್ತ್ವದ ಉತ್ತರಗಳನ್ನು ಶ್ರೀಮದಾಚಾರ್ಯರು ತಂತ್ರಸಾರಸಂಗ್ರಹದಲ್ಲಿ ನೀಡಿರುವ ಮತ್ತೊಂದು ಅದ್ಭುತ ಉತ್ತರವನ್ನು ಇಲ್ಲಿ ಸಂಗ್ರಹಿಸಿ ನೀಡಲಾಗಿದೆ. ಇದರ ಉಪನ್ಯಾಸ VNU425.

1849 Views
Article - VNA234

ಯುಗಾದಿಯ ಆಚರಣೆಯ ಕ್ರಮ

ಯುಗಾದಿಯಂದು ಯಾವ ಯುಗವೂ ಅರಂಭವಾಗಿಲ್ಲ, ಆದರೂ ಯುಗಾದಿ ಎಂದು ಏಕೆ ಕರೆಯುತ್ತಾರೆ, ಉಗಾದಿ ಎನ್ನುವ ಪ್ರಯೋಗ ತಪ್ಪಲ್ಲವೇ ಎಂಬ ಪ್ರಶ್ನೆಗಳಿಗೆ ಉತ್ತರವನ್ನು ನೀಡುವದರೊಂದಿಗೆ, ಯುಗಾದಿಗಾಗಿ ನಾವು ಮಾಡಿಕೊಳ್ಳಬೇಕಾದ ಸಿದ್ಧತೆಗಳೇನು, ಅಭ್ಯಂಗ ಹೇಗೆ ಮಾಡಬೇಕು, ಪಂಚಾಂಗಶ್ರವಣ ಯಾವಾಗ, ಹೇಗೆ ಮತ್ತು ಏಕೆ, ಬೇವುಬೆಲ್ಲದ ಸ್ವೀಕಾರವನ್ನು ಮಾಡುವ ಕ್ರಮ, ಯುಗಾದಿಯ ವಿಶೇಷ ಅಡಿಗೆಗಳು ಇಷ್ಟು ವಿಷಯಗಳ ಕುರಿತ ವಿವರಣೆ ಈ ಲೇಖನದಲ್ಲಿದೆ. 

7229 Views
Article - VNA233

ಹಬ್ಬವಿಲ್ಲದವರು ಹಬ್ಬಗಳನ್ನು ಆಚರಿಸುವದು ಹೇಗೆ?

ನಮ್ಮ ಜ್ಞಾತಿಗಳು ಮೃತರಾದಾಗ ಒಂದು ವರ್ಷ ಮನೆಯಲ್ಲಿ ಹಬ್ಬ ಇರುವದಿಲ್ಲ. ಆಗ ಪೂರ್ಣವಾಗಿ ಹಬ್ಬವನ್ನು ಬಿಡಬೇಕೇ ಅಥವಾ ಯಾವ ಆಚರಣೆ ಮಾಡಬಹುದು? ಹಾಗೂ ಹಬ್ಬದ ದಿವಸವೇ ಮನೆಯಲ್ಲಿ ಶ್ರಾದ್ಧವಿದ್ದಾಗ, ಅಥವಾ ನಮಗೆ ಮೈಲಿಗೆಯಿದ್ದಾಗ ಏನು ಮಾಡಬೇಕು ಎಂಬ ಪ್ರಶ್ನೆಗಳಿಗೆ ಉತ್ತರ ಈ ಲೇಖನದಲ್ಲಿದೆ. 

3143 Views
Article - VNA232

ಯುಗಾದಿ ಆಚರಣೆ ಎಂದು ಮಾಡಬೇಕು?

ಹೇಮಲಂಬ ಸಂವತ್ಸರದ ಯುಗಾದಿಯನ್ನು 28ನೆಯ ತಾರೀಕು ಮಂಗಳವಾರ ಮಾಡಬೇಕೋ, 29ನೆಯ ತಾರೀಕು ಬುಧವಾರ ಮಾಡಬೇಕೋ ಎಂಬ ಪ್ರಶ್ನೆ ಅನೇಕರಲ್ಲಿದೆ. 29ನೆಯ ತಾರೀಕಿನಂದೇ ಏಕೆ ಆಚರಿಸಬೇಕು ಎನ್ನುವದನ್ನು ಧರ್ಮಶಾಸ್ತ್ರದ ವಚನಗಳ ಆಧಾರದಿಂದ ವಿವರಿಸುವ ಲೇಖನ. 

2347 Views
Article - VNA231

ಉತ್ತರಾದಿಮಠದ ಸ್ಪಷ್ಟೀಕರಣಕ್ಕೆ ಉತ್ತರ

ಶ್ರೀಸತ್ಯಾತ್ಮತೀರ್ಥರ ಶಿಷ್ಯ ಹಾಗೂ ಭಕ್ತವೃಂದ ಎಂಬ ಹೆಸರಿನಲ್ಲಿ ಒಂದು ಪ್ರತಿಕ್ರಿಯೆ ಬಂದಿದೆ. ನರಹರಿಸುಮಧ್ವ ಅವರು ಇದು ಉತ್ತರಾದಿಮಠದ ಸ್ಪಷ್ಟೀಕರಣ ಎಂದು ಪ್ರಕಟಿಸಿದ್ದಾರೆ. ಅದಕ್ಕೆ ಉತ್ತರ. 

4788 Views
Article - VNA230

ಶ್ರೀ ವಿಜಯೀಂದ್ರರು ಬರೆದ ಅದ್ವೈತಸಿದ್ಧಿಯ ಖಂಡನೆಯನ್ನು ಸತ್ಯಾತ್ಮರು ಓದಿಲ್ಲವೇ?

ಶ್ರೀಮಚ್ಚಂದ್ರಿಕಾಚಾರ್ಯರ ಸಾಕ್ಷಾತ್ ಶಿಷ್ಯರಾದ ಶ್ರೀ ವಿಜಯೀಂದ್ರಗುರುಸಾರ್ವಭೌಮರು ಅದ್ವೈತಸಿದ್ಧಿಯಲ್ಲಿನ ಆಕ್ಷೇಪಗಳಿಗೆ ಉತ್ತರವಾಗಿ ನ್ಯಾಯಾಮೃತಕ್ಕೆ ವ್ಯಾಖ್ಯಾನವನ್ನು ರಚಿಸಿದ್ದಾರೆ. ಮಧುಸೂದನಸರಸ್ವತಿಯ ಗೂಢಾರ್ಥದೀಪಿಕಾ ಎಂಬ ಗ್ರಂಥವನ್ನೂ ಖಂಡಿಸಿದ್ದಾರೆ. ಹೀಗಾಗಿ ಚಂದ್ರಿಕಾಚಾರ್ಯರ ಶಿಷ್ಯರು ಅದ್ವೈತಸಿದ್ಧಿಗೆ ಉತ್ತರ ನೀಡಲಿಲ್ಲ ಎನ್ನುವದು ಸುಳ್ಳು ಎನ್ನುವದನ್ನು ಈ ಲೇಖನದಲ್ಲಿ ಪ್ರತಿಪಾದಿಸಲಾಗಿದೆ. ತಮ್ಮ ಜ್ಞಾನ ಮತ್ತು ತಪಸ್ಸುಗಳಿಂದ, ಭಕ್ತರ ಮೇಲೆ ಮಾಡುತ್ತಿರುವ ಅನುಗ್ರಹಗಳಿಂದಲೇ ಮಹಾನುಭಾವರೆಂದರು ಸರ್ವರಿಂದಲೂ ಪೂಜ್ಯರಾದ ಶ್ರೀ ರಘೂತ್ತಮಸ್ವಾಮಿಗಳ ಮಾಹಾತ್ಮ್ಯವನ್ನು ಹೇಳಲು ಸುಳ್ಳುಕಥೆಗಳ ಆವಶ್ಯಕತೆಯಿಲ್ಲ ಎಂಬ ಮಾತಿನ ಸಮರ್ಥನೆಯೊಂದಿಗೆ. 

2530 Views
Article - VNA228

ಸತ್ಯಾತ್ಮರು ಹೇಳಿದ ಸುಳ್ಳುಕಥೆ

“ಶ್ರೀವ್ಯಾಸರಾಜರಿಗೂ ಅವರ ಶಿಷ್ಯರಿಗೂ ನ್ಯಾಯಾಮೃತದ ಖಂಡನೆಗೆ ಉತ್ತರ ನೀಡಲು ಸಾಧ್ಯವಾಗದೇ ಇದ್ದಾಗ ವ್ಯಾಸರಾಜರು ರಘೂತ್ತಮರ ಬಳಿಗೆ ತಮ್ಮ ಶಿಷ್ಯರನ್ನು ಕಳುಹಿಸಿದರು” ಎಂಬ ಸತ್ಯಾತ್ಮರು ಹೇಳಿರುವ ಕಥೆ ಅಪ್ಪಟ ಸುಳ್ಳು ಎನ್ನುವದನ್ನು, ಶ್ರೀ ವ್ಯಾಸರಾಜರ ಕಾಲಕ್ಕೆ ರಘೂತ್ತಮರು ಹುಟ್ಟೇ ಇರಲಿಲ್ಲ ಮತ್ತು ಖಂಡನೆ ಬರೆದ ಮಧುಸೂದನ ಸರಸ್ವತಿಯೂ ಹುಟ್ಟಿರಲಿಲ್ಲ ಎನ್ನುವದನ್ನು ಪ್ರಮಾಣಗಳ ಸಮೇತವಾಗಿ ಪ್ರತಿಪಾದಿಸುವ ಲೇಖನ. ಇದರ ಉಪನ್ಯಾಸ - VNU419

7120 Views
Article - VNA227

ನನಗೆ ಪೀಠಾಧಿಪತ್ಯದ ಅಪೇಕ್ಷೆ ಇಲ್ಲ

ಶ್ರೀಮದ್ ವ್ಯಾಸರಾಜಸಂಸ್ಥಾನದ ಪೀಠಾಧಿಪತ್ಯಕ್ಕೆ ನಾನು ಆಸೆ ಪಡುತ್ತಿದ್ದೇನೆಂದೂ ಅದಕ್ಕಾಗಿಯೇ ಏನೇನೋ ಪ್ರಯತ್ನ ಮಾಡುತ್ತಿದ್ದೇನೆಂದೂ ಕೆಲವರು ಮೇಲಿಂದ ಮೇಲೆ ನನ್ನ ಕುರಿತು ಅಪಪ್ರಚಾರ ನಡೆಸಿದ್ದಾರೆ.  ನನಗೆ ಪೀಠಾಧಿಪತ್ಯದ ಆಪೇಕ್ಷೆಯಾಗಲೀ ಅಥವಾ ಮಠದಲ್ಲಿ ಯಾವುದೇ ಸ್ಥಾನಮಾನದ ಕುರಿತ ಬಯಕೆಯಾಗಲೀ ಇಲ್ಲ, ನನ್ನ ಕುಲಗುರುಗಳ ಪರಮಾನುಗ್ರಹದಿಂದ ನನಗೆ ದೊರೆತಿರುವ ಎರಡಕ್ಷರದಿಂದ ಆ ಮಹಾಪೀಠದ ಸೇವೆ ಜ್ಞಾನಕಾರ್ಯದ ಮುಖಾಂತರ ನಡೆಯುತ್ತಿದೆ, ಮುಂದೆಯೂ ನಡೆಯುತ್ತದೆ ಎಂದು ದೃಢೀಕರಿಸುವ ಸ್ಪಷ್ಟೀಕರಣ ಪತ್ರ. 

2368 Views
Article - VNA226

ಷಷ್ಟಿಪೂರ್ತಿಶಾಂತಿ

ಷಷ್ಠಿಪೂರ್ತಿಶಾಂತಿ ಎಂದರೇನು? ಏಕೆ ಮಾಡಬೇಕು? ಯಾವಾಗ ಮಾಡಬೇಕು? ಎಲ್ಲಿ ಮಾಡಬೇಕು? ಶಾಂತಿಯನ್ನು ಆಚರಿಸಿಕೊಳ್ಳುವ ಕ್ರಮ, ಶಾಂತಿನಿಮತ್ತಕವಾದ ಜಪ	, ಶಾಂತಿಯ ಪೂರ್ವಸಿದ್ಧತೆಗಳು, ಪೂಜಾಮಂಟಪ, ಹೋಮದ ಕುಂಡಗಳು	, ಅಭಿಷೇಕದ ವೇದಿಕೆ, ಶಾಂತಿಲ್ಲಿ ಇರಬೇಕಾದ ಅನುಸಂಧಾನ ಮತ್ತು ಗುರುಸ್ಮರಣೆ ಇಷ್ಟು ವಿಷಯಗಳ ಕುರಿತ ವಿವರಣೆ ಈ ಲೇಖನದಲ್ಲಿದೆ. 

2882 Views
Article - VNA225

ಶಿವಸ್ತುತಿ

ಪಾರಾಯಣಕ್ಕೆ ಅನುಕೂಲವಾಗುವಂತೆ ಶ್ರೀ ನಾರಾಯಣಪಂಡಿತಾಚಾರ್ಯರು ರಚಿಸಿರುವ ಶ್ರೀ ಶಿವಸ್ತುತಿ ಕನ್ನಡ ಮತ್ತು ಸಂಸ್ಕೃತ ಎರಡೂ ಲಿಪಿಗಳಲ್ಲಿ ಇಲ್ಲಿದೆ. ಇದರ ಪಠಣದ ಆಡಿಯೋ VNU399ರಲ್ಲಿದೆ. 

2224 Views
Article - VNA224

ಶಾಂತಿಗಳ ಆಚರಣೆಯ ಕ್ರಮ

ಈ ಲೇಖನದಲ್ಲಿ ಶಾಂತಿ ಎಂದರೇನು, ಯಾಕೆ ಮಾಡಬೇಕು, ಹೇಗೆ ಮಾಡಬೇಕು, ಶಾಂತಿಗಳಲ್ಲಿ ಎಷ್ಟು ವಿಧಗಳಿವೆ. ಅವನ್ನು ಮಾಡಬೇಕಾದರೆ ಇರಬೇಕಾದರೆ ಯಾವ ಎಚ್ಚರ ನಮ್ಮಲ್ಲಿರಬೇಕು, ತಾಪತ್ರಯ ಎಂಬ ಶಬ್ದದ ಅರ್ಥವೇನು, ದೇವತೆಗಳು ತೊಂದರೆ ನೀಡುವದು ತಪ್ಪಲ್ಲವೇ? ಎಂಬ ಪ್ರಶ್ನೆಗಳಿಗೆ ಉತ್ತರದೊಂದಿಗೆ ಶ್ರೀಮದಾಚಾರ್ಯರು ತಿಳಿಸಿದ ಶಾಂತಿಯ ಸರ್ವಶ್ರೇಷ್ಠ ಕ್ರಮದ ವಿವರಣೆ ಈ ಲೇಖನದಲ್ಲಿದೆ. 

1227 Views
Article - VNA223

ಸದಾಚಾರಸ್ಮೃತಿ — 13 — ದಂತಧಾವನದಲ್ಲಿ ವಿಧಿ-ನಿಷೇಧಗಳು

ಹಲ್ಲುಜ್ಜದೇ ದೇವರಪೂಜೆ ಮಾಡುವದು ಅಪರಾಧ ಮಧ್ಯಾಹ್ನ ಹಲ್ಲುಜ್ಜಬಾರದು	 ಸೂರ್ಯೋದಯಕ್ಕೆ ಮುಂಚೆಯೇ ದಂತಧಾವನ	 ಸ್ನಾನಕ್ಕಿಂತ ಮುಂಚೆಯೇ ದಂತಧಾವನ ಶೌಚಕ್ಕಿಂತ ಮುಂಚೆಯೂ ಮಾಡಬಹುದು	 ಶ್ರೋತ್ರಾಚಮನ ಮಾಡಿ ದಂತಧಾವನ ನಿಷಿದ್ಧ ದಂತಕಾಷ್ಠಗಳು ದಂತಕಾಷ್ಠದ ಲಕ್ಷಣಗಳು ದಂತಕಾಷ್ಠದ ಗಾತ್ರ ವಿಹಿತ ಕಾಷ್ಠಗಳು ದಂತಧಾವನದಲ್ಲಿ ದಿಕ್ಕುಗಳು ಹಲ್ಲುಜ್ಜುವ ಕ್ರಮ ಉಳಿದ ಕಾಷ್ಠವನ್ನು ನೈರುತ್ಯದಲ್ಲಿ ಹಾಕಬೇಕು ದಂತಧಾವನಕ್ಕೆ ನಿಷಿದ್ಧದಿವಸಗಳು ನಿಷಿದ್ಧದಿವಸಗಳಲ್ಲಿ ಹಲ್ಲನ್ನು ಸ್ವಚ್ಛಗೊಳಿಸುವ ಕ್ರಮ ಇಷ್ಟು ವಿಷಯಗಳು ಈ ಲೇಖನದಲ್ಲಿವೆ. 

1283 Views
Article - VNA222

ಸದಾಚಾರಸ್ಮೃತಿ — 12 — ದಂತಕಾಷ್ಠಗಳ ಬಳಕೆಯಲ್ಲಿನ ವೈಜ್ಞಾನಿಕತೆ

ನಿಮಗೆ ಗೊತ್ತೆ, ನಮ್ಮ ಸುತ್ತಮುತ್ತಲೂ ಸಿಗುವ ಮರಗಳ ಕಡ್ಡಿಯನ್ನು ಹಲ್ಲುಜ್ಜುವದಕ್ಕಾಗಿ ಉಪಯೋಗಿಸುವದರಿಂದ ಕಿವುಡು ಪರಿಹಾರ, ಬುದ್ಧಿಯ ಚುರುಕುತನ, ವಾಕ್-ಶಕ್ತಿ, ಮಧುರಸ್ವರ, ದೇಹದ ಕಾಂತಿ ಮುಂತಾದವುಗಳನ್ನು ಸುಲಭವಾಗಿ ಪಡೆಯಲು ಸಾಧ್ಯ. ಮನುಕುಲದ ಮೇಲ ಅನುಗ್ರಹ ಮಾಡಲಿಕ್ಕಾಗಿಯೇ ಗ್ರಂಥಗಳನ್ನು ರಚಿಸಿರುವ ಶ್ರೀ ಗರ್ಗಾಚಾರ್ಯರು, ಅಶ್ವಲಾಯನರು ಯಾವ ಕಡ್ಡಿಯಿಂದ ಹಲ್ಲುಜ್ಜುವದರಿಂದ ಯಾವ ರೀತಿಯ ಪ್ರಯೋಜನವನ್ನು ನಾವು ಪಡೆಯುತ್ತೇವೆ ಎನ್ನುವದನ್ನು ತಿಳಿಸಿದ್ದಾರೆ. ಅವುಗಳ ವಿವರಣೆ ಇಲ್ಲದಿ. ಈ ವಿಷಯದ ಉಪನ್ಯಾಸದ ಸಂಖ್ಯೆ — VNU387. 

1238 Views
Article - VNA221

ಭೀಷ್ಮಾಷ್ಟಮೀ ಆಚರಣೆ

ಭೀಷ್ಮಾಷ್ಟಮೀ ಆಚರಣೆ ಭೀಷ್ಮಾಷ್ಟಮಿಯನ್ನು ಎಂದು ಆಚರಿಸಬೇಕು, ತರ್ಪಣವನ್ನು ಯಾರುಯಾರು ನೀಡಬೇಕು? ನಮ್ಮ ಪಿತೃಗಳಿಗೂ ತಿಲತರ್ಪಣ ನೀಡಬಹುದೇ?  ರಾತ್ರಿ ಊಟ ಮಾಡಬಹುದೇ ಮಾಡಬಾರದೇ ? ಎಂಬ ಪ್ರಶ್ನೆಗಳಿಗೆ ಉತ್ತರದೊಂದಿಗೆ ತರ್ಪಣವನ್ನು ನೀಡದಿದ್ದರೆ ಪುಣ್ಯಹಾನಿ	 ಶ್ರಾದ್ಧ ಮಾಡಿದರೆ ಸತ್ಸಂತಾನಪ್ರಾಪ್ತಿ ತರ್ಪಣದ ಸಂಕಲ್ಪ	 ತರ್ಪಣದ ಮಂತ್ರಗಳು ಮತ್ತು ಆ ಮಂತ್ರಗಳ ಪರಿಶುದ್ದಪಾಠ ಇವಿಷ್ಟು ವಿಷಯಗಳು ಈ ಲೇಖನದಲ್ಲಿವೆ. 

2862 Views
Article - VNA220

ರಥಸಪ್ತಮೀ ಆಚರಣೆ — 2 — ಸೂರ್ಯಪೂಜಾವಿಧಾನ

ರಥಸಪ್ತಮಿಯಂದು ಸೂರ್ಯನನ್ನು ಪೂಜಿಸುವ ವಿಧಾನ, ಅರ್ಘ್ಯಪ್ರದಾನ ಮಾಡುವ ರೀತಿ, ಕೂಷ್ಮಾಂಡದಾನನ ಕ್ರಮದ ವಿವರಣೆಯೊಂದಿಗೆ ಶ್ರೇಷ್ಠವಾದ ಆರೋಗ್ಯವನ್ನು ಅನುಗ್ರಹಿಸುವ ಆರೋಗ್ಯಸಪ್ತಮೀವ್ರತದ ಆಚರಣೆಯ ವಿವರಣೆ ಈ ಲೇಖನದಲ್ಲಿದೆ. 

4513 Views
Article - VNA219

ರಥಸಪ್ತಮೀ ಆಚರಣೆ — 1 — ಸ್ನಾನದ ಕ್ರಮ

 ರಥಸಪ್ತಮಿಯನ್ನು ಎಂದು ಆಚರಿಸಬೇಕು, ರಥಸಪ್ತಮಿಯ ಆಚರಣೆಯ ಕ್ರಮ, ಅರುಣೋದಯದಲ್ಲಿ ಸ್ನಾನ, ಅರುಣೋದಯಕಾಲದಲ್ಲಿ ಗೃಹಸ್ಥರು ಸ್ನಾನ ಮಾಡಬಹುದೇ? ಎಂಬ ಪ್ರಶ್ನೆಗೆ ಉತ್ತರ, ಸ್ನಾನದ ಸಂಕಲ್ಪ, ಅರುಣಪ್ರಾರ್ಥನಾಮಂತ್ರ, ಸ್ನಾನದಲ್ಲಿ ಸಪ್ತಮೀಪ್ರಾರ್ಥನಾಮಂತ್ರಗಳು, ಸೂರ್ಯದರ್ಶನ, ಸೂರ್ಯಪ್ರಾರ್ಥನಾಮಂತ್ರ, ಇಷ್ಟು ವಿಷಯಗಳು ಈ ಲೇಖನದಲ್ಲಿ ಇವೆ. 

6835 Views
Article - VNA218

2017ರ ಉಪಾಕರ್ಮದ ಚರ್ಚೆ

ದುರ್ಮುಖ ಸಂವತ್ಸರದಲ್ಲಿ ಉಪಾಕರ್ಮದ ಕುರಿತಾಗಿ ವಿವಾದ ಉಂಟಾದದ್ದು ಎಲ್ಲರಿಗೂ ತಿಳಿದಿದೆ. ಹೇಮಲಂಬ ಸಂವತ್ಸರದಲ್ಲಿಯೂ ಉಪಾಕರ್ಮದ ವಿಷಯದಲ್ಲಿ ಗೊಂದಲ ಕಂಡು ಬಂದಿರುವದರಿಂದ ಇದರ ಕುರಿತ ಒಂದು ವಸ್ತುನಿಷ್ಠ ಚರ್ಚೆಯನ್ನು ಹಾಗೂ ದೋಷರಹಿತ ನಿರ್ಣಯವನ್ನೂ ಈಗಲೇ ಪ್ರಕಟಿಸುತ್ತಿದ್ದೇನೆ. ಪಂಚಾಂಗಕರ್ತರು ಈಗಲೇ ಇದರ ಕುರಿತು ಚರ್ಚೆ ಮಾಡಿ ನಿರ್ಣಯಕ್ಕೆ ಬಂದಲ್ಲಿ ಜನಸಾಮಾನ್ಯರಿಗೆ ಯಾವುದೇ ಗೊಂದಲವಿರುವದಿಲ್ಲ ಎಂಬ ಕಾರಣಕ್ಕಾಗಿ. 

3260 Views
Article - VNA217

ಶ್ರೀ ವಿಶ್ವೋತ್ತಮತೀರ್ಥರೆಂಬ ದಿವ್ಯ ಚೇತನ

 ಇಂತಹ ಘೋರ ಕಲಿಯುಗದಲ್ಲಿಯೂ ಏಕಾಂತ ಸಾಧನೆಯನ್ನು ಅವಶ್ಯವಾಗಿ ಮಾಡಿ ಹರಿಪ್ರಸಾದವನ್ನು ಪಡೆಯಬಹುದು ಎನ್ನುವದಕ್ಕೆ, ತನ್ನ ಭಕ್ತರಿಗೆ ಅಂತ್ಯಕಾಲದಲ್ಲಿ ಶ್ರೀಹರಿ ತನ್ನ ಸ್ಮರಣೆಯ ಸೌಭಾಗ್ಯವನ್ನು ಅನುಗ್ರಹಿಸುತ್ತಾನೆ ಎನ್ನುವದಕ್ಕೆ ಸಾಕ್ಷಿಯಾಗಿ ನಿಂತ ಶ್ರೀ ವಿಶ್ವೋತ್ತಮತೀರ್ಥಶ್ರೀಪಾದಂಗಳವರಿಗೊಂದು ನುಡಿನಮನ. 

3299 Views
Article - VNA216

ಅತಿರಿಕ್ತೋಪವಾಸ ಚರ್ಚೆ — 2

“ಸೂರ್ಯಸಿದ್ಧಾಂತದ ದಶಮೀ ದ್ವಾದಶಿಗಳನ್ನು ಆರ್ಯಮಾನಕ್ಕಾಗಿ ಪರಿವರ್ತಿಸಲನ್ನು ಲಿಪ್ತಿಗಳನ್ನು ಬಳಸಲಾಗುತ್ತದೆ” ಎನ್ನುವ ವಾದವನ್ನು ಇಲ್ಲಿ ವಿಮರ್ಶಿಸಲಾಗಿದೆ. 

1728 Views
Article - VNA215

December 25 ರಂದು ಅತಿರಿಕ್ತೋಪವಾಸವಿಲ್ಲ

ದುರ್ಮುಖ ಸಂವತ್ಸರದ ಮಾರ್ಗಶೀರ್ಷ ಕೃಷ್ಣಪಕ್ಷದಲ್ಲಿ December 25ರಂದು ಅತಿರಿಕ್ತ ಉಪವಾಸವಿದೆ ಎಂದು ಕೆಲವರು ತಿಳಿದಿದ್ದಾರೆ. ವಸ್ತುಸ್ಥಿತಿಯಲ್ಲಿ ಅತಿರಿಕ್ತೋಪವಾಸ ಇಲ್ಲ. ಅದರ ಕುರಿತ ಪ್ರತಿಪಾದನೆ ಈ ಲೇಖನದಲ್ಲಿದೆ.  23 ಶುಕ್ರವಾರ ದಶಮೀ. ಹರಿವಾಸರವಿಲ್ಲ. 24 ಶನಿವಾರ ಏಕಾದಶಿ. 25 ಭಾನುವಾರ ದ್ವಾದಶೀ. 10:15 ರವರೆಗೆ ಹರಿವಾಸರ. ಆ ನಂತರ ಪಾರಣೆ.

6552 Views
Article - VNA214

ಪ್ರಾಯಿಕತ್ವಶಬ್ದದ ಅರ್ಥದ ಕುರಿತ ಚರ್ಚೆ

 ಶ್ರೀ ಕಂಬಾಲೂರು ರಾಮಚಂದ್ರತೀರ್ಥಶ್ರೀಪಾದಂಗಳವರ ವ್ಯಾಖ್ಯಾನದ ಮೇಲಿನ ಆಕ್ಷೇಪಕ್ಕೆ ಉತ್ತರ ಶ್ರೀಮದಾಚಾರ್ಯರು ಮತ್ತು ಟೀಕಾಕೃತ್ಪಾದರು ಪ್ರಯೋಗ ಮಾಡಿರುವ ಪ್ರಾಯಿಕತ್ವ ಎನ್ನುವ ಶಬ್ದಕ್ಕೆ ಪ್ರಾಚುರ್ಯ ಎಂದು ಶ್ರೀಮದ್ ರಾಮಚಂದ್ರತೀರ್ಥಗುರುಸಾರ್ವಭೌಮರು ಮತ್ತು ಶ್ರೀಮದ್ ಭಾಷ್ಯದೀಪಿಕಾಚಾರ್ಯರು ಅರ್ಥವನ್ನು ಹೇಳಿದ್ದಾರೆ. ಆ ಅರ್ಥವನ್ನು ಮತ್ತು ಅದರ ವಿವರಣೆಯ ಕುರಿತು ಕೆಲವರು ಮಾಡಿರುವ ಆಕ್ಷೇಪಕ್ಕೆ ಇಲ್ಲಿ ವಿಸ್ತೃತವಾದ ಉತ್ತರವನ್ನು ನೀಡಿ, ಶ್ರೀಮದಾಚಾರ್ಯರ, ಶ್ರೀಮಟ್ಟೀಕಾಕೃತ್ಪಾದರ, ಕೋಶಗ್ರಂಥಗಳ ಮತ್ತು ಲೌಕಿಕಪ್ರಯೋಗಗಳ ಆಧಾರವನ್ನು ನೀಡಿ ಪ್ರಾಯಿಕತ್ವ ಎನ್ನುವದಕ್ಕೆ ಪ್ರಾಚುರ್ಯ ಎಂದೇ ವಾಚ್ಯಾರ್ಥ, ಪ್ರಾಧಾನ್ಯ ಅಲ್ಲ ಎನ್ನುವದನ್ನು ಪ್ರತಿಪಾದಿಸಿ ಶ್ರೀಪದ್ಮನಾಭತೀರ

1849 Views
Article - VNA213

ಶ್ರೀ ಪದ್ಮನಾಭತೀರ್ಥರಲ್ಲಿ ನಾವು ಬೇಡಬೇಕಾದ್ದೇನು?

ಶ್ರೀಮದಾಚಾರ್ಯರು ತಮ್ಮ ಪರಂಪರೆಯಲ್ಲಿ ಬಂದಿರುವ ಒಬ್ಬೊಬ್ಬ ಮಹನೀಯರಲ್ಲಿಯೂ ಒಂದೊಂದು ದಿವ್ಯವಾದ ಮಾಹಾತ್ಮ್ಯವನ್ನು ಪ್ರಕಟ ಮಾಡಿದ್ದಾರೆ. ಕಷ್ಟ ಪರಿಹಾರಕ್ಕಾಗಿ ಒಬ್ಬರಲ್ಲಿ, ಶತ್ರುಗಳ ಬಾಧೆ ಪರಿಹಾರಕ್ಕಾಗಿ ಒಬ್ಬರಲ್ಲಿ, ಜ್ಞಾನ ನೀಡಲು, ಭಕ್ತಿನೀಡಲು ಹೀಗೆ ಸಜ್ಜನರ ಮೇಲೆ ಸರ್ವರೀತಿಯ ಅನುಗ್ರಹವನ್ನು ಮಾಡಲು ಆಚಾರ್ಯರು ಒಬ್ಬೊಬ್ಬ ಗುರುಗಳಲ್ಲಿ ಸನ್ನಿಹಿತರಾಗಿದ್ದಾರೆ. ಶ್ರೀ ಪದ್ಮನಾಭತೀರ್ಥರಲ್ಲಿರುವ ಅವರ ಸನ್ನಿಧಾನ ಎಂತಹುದು, ಆ ಗುರುಗಳಲ್ಲಿ ನಾವು ಬೇಡಬೇಕಾದ್ದೇನು ಎಂದು ವಿವರಿಸುವ, ಹಾಗೂ ಇತ್ತೀಚಿನ ವ್ಯಕ್ತಿಯೊಬ್ಬರು ಪದ್ಮನಾಭತೀರ್ಥರನ್ನು ಆದರಿಸುವ ನೆಪದಲ್ಲಿ ಉಳಿದ ಮಧ್ವಶಿಷ್ಯರಿಗೆ ಅವಮಾನ ಮಾಡಿರುವದು, ಹಾಗೂ ಮತ್ತೊಬ್ಬ ವ್ಯಕ್ತಿ ಉಳಿದವರನ್ನು ಆದರಿಸುವ ನೆಪದಲ್ಲಿ ಪದ

1590 Views
Article - VNA212

ಸದಾಚಾರಸ್ಮೃತಿ — 11 — ಶೌಚದ ವಿಧಿಗಳು

ಯಾವ ಪ್ರದೇಶ, ಕಾಲ, ಸಂದರ್ಭಗಳಲ್ಲಿ ಮಲಮೂತ್ರ ವಿಸರ್ಜನೆ ಮಾಡಬಾರದು ಎನ್ನುವ ನಿಷೇಧಗಳನ್ನು ಹಿಂದಿನ ಲೇಖನದಲ್ಲಿ ತಿಳಿದೆವು. ಮಲಮೂತ್ರವಿಸರ್ಜನೆಯ ಕಾಲದಲ್ಲಿ ಅನುಸರಿಸಬೇಕಾದ ವಿಧಿಗಳ ಕುರಿತು ಈ ಲೇಖನದಲ್ಲಿ ತಿಳಿಯುತ್ತೇವೆ.  ಈ ವಿಷಯದ ಕುರಿತ ಉಪನ್ಯಾಸ — VNU368

1308 Views
Article - VNA211

ಸದಾಚಾರಸ್ಮೃತಿ — 10 — ಶೌಚದಲ್ಲಿ ನಿಷೇಧಗಳು

ಬಯಲಶೌಚದ ಹಿಂದಿರುವ ವೈಜ್ಞಾನಿಕ ಅಂಶಗಳನ್ನು, ಇಂದಿಗೆ ಅದು ವಿರೂಪಗೊಂಡಿರುವದನ್ನು ಹಿಂದಿನ ಲೇಖನದಲ್ಲಿ ಮನಗಂಡೆವು. ಶೌಚವನ್ನು ಯಾವ ರೀತಿಯಾಗಿ ಆಚರಿಸಬೇಕು ಮತ್ತು ಯಾವ ರೀತಿಯಾಗಿ ಆಚರಿಸಬಾರದು ಎಂಬ ಎರಡೂ ವಿಷಯಗಳನ್ನು ಶಾಸ್ತ್ರಗಳು ಅತ್ಯಂತ ಸ್ಪಷ್ಟವಾಗಿ ತಿಳಿಸುತ್ತವೆ. ಶೌಚದಲ್ಲಿನ ನಿಷೇಧಗಳ ಕುರಿತು ತಿಳಿಸುವ ಲೇಖನಿವಿದು.  ಇದರ ಕುರಿತ ಉಪನ್ಯಾಸ VNU367

2008 Views
Article - VNA210

ದೀಪಾವಳೀ ಆಚರಣೆ — 7 — ಪಗಡೆಯಾಡಬಾರದು

ಬಲಿಪ್ರತಿಪದೆಯಂದು ಪಗಡೆಯಾಟವಾಡುವ ಪದ್ದತಿ ಅನೇಕ ಕಡೆಯಲ್ಲಿ ಇಂದಿಗೂ ಉಳಿದುಕೊಂಡಿದೆ. ಶಾಸ್ತ್ರದ ವಚನಗಳನ್ನೂ ಅದಕ್ಕೆ ಪ್ರಮಾಣವನ್ನಾಗಿ ನೀಡುತ್ತಾರೆ. ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು ಪಗಡೆಯಾಟದ ಕುರಿತು ನೀಡಿರುವ ನಿರ್ಣಯದ ವಿವರಣೆ ಈ ಲೇಖನದಲ್ಲಿದೆ. 

3998 Views
Article - VNA209

ದೀಪಾವಳೀ ಆಚರಣೆ — 6 — ಬಲೀಂದ್ರಪೂಜಾ

ಕಾರ್ತೀಕ ಶುದ್ಧ ಪ್ರತಿಪದೆಯಂದು ಮಾಡಬೇಕಾದ ಬಲೀಂದ್ರಪೂಜೆಯ ಕ್ರಮವನ್ನು ವಿವರಿಸುವ ಲೇಖನ

4451 Views
Article - VNA208

ದೀಪಾವಳೀ ಆಚರಣೆ — 5 — ಲಕ್ಷ್ಮೀಪೂಜಾವಿಧಾನ

ಅಮಾವಾಸ್ಯೆಯಂದು ಲಕ್ಷ್ಮೀಪೂಜೆಯನ್ನು ಮಾಡುವ ಕ್ರಮ, ನಡುರಾತ್ರಿಯಲ್ಲಿ ಅಲಕ್ಷ್ಮಿಯನ್ನು ಹೊರ ಹಾಕುವ ವಿಧಾನಗಳನ್ನು ತಿಳಿಸುವ ಲೇಖನ. 

7286 Views
Article - VNA207

ದೀಪಾವಳಿ ಆಚರಣೆ — 4 — ಯಮತರ್ಪಣ

ನರಕಚತುರ್ದಶಿಯಂದು ಮಾಡಲೇಬೇಕಾದ ಒಂದು ಸತ್ಕರ್ಮ, ಯಮತರ್ಪಣ. ತಂದೆ ಇರುವವರೂ, ಇಲ್ಲದವರೂ ಯಮಧರ್ಮರಾಜರಿಗೆ ತರ್ಪಣವನ್ನು ನೀಡಲೇಬೇಕು. ಯಮತರ್ಪಣದ ವಿಧಿವಿಧಾನಗಳು, ಸಂಕಲ್ಪ, ಯಮಧರ್ಮರಾಜರ ಹದಿನಾಲ್ಕು ಹೆಸರುಗಳು ಅವುಗಳ ಅರ್ಥ, ತರ್ಪಣವನ್ನು ನೀಡುವ ಕ್ರಮ, ರಾತ್ರಿಯಲ್ಲಿ ಊಟ ಮಾಡಬೇಕೇ ಮಾಡಬಾರದೇ ಎಂಬ ಪ್ರಶ್ನೆಗೆ ಉತ್ತರ, ಇವಿಷ್ಟು ಈ ಲೇಖನದಲ್ಲಿದೆ. 

4854 Views
Article - VNA206

ದೀಪಾವಳೀ ಆಚರಣೆ — 3 — ಅಭ್ಯಂಗ

ನರಕಚತುರ್ದಶಿಯಂದು ಮಾಡಬೇಕಾದ ಅಭ್ಯಂಗದ ಕುರಿತ ಲೇಖನ. ಅಭ್ಯಂಗ ಎಂದರೇನು?	 ಏಕೆ ಮಾಡಬೇಕು? ಎಳ್ಳೆಣ್ಣೆಯನ್ನೇ ಏಕೆ ಉಪಯೋಗಿಸಸಬೇಕು, ಯಾರು ಮಾಡಬೇಕು?	 ಯಾರು ಮಾಡಬಾರದು? ಅಭ್ಯಂಗದ ಕಾಲ ಯಾವುದು, ಅಭ್ಯಂಗದ ಕ್ರಮ ಏನು, ಸ್ನಾನ ಮಾಡುವ ಕ್ರಮವೇನು ಮುಂತಾದ ಪ್ರಶ್ನೆಗಳಿಗೆ ಪ್ರಾಚೀನ ಋಷಿಮುನಿಗಳು ನೀಡಿದ ಉತ್ತರವನ್ನು ಒಳಗೊಂಡ ಲೇಖನ. ಸ್ಥಿರವಾದ ಸಂಪತ್ತನ್ನು ಕರುಣಿಸುವ ಲಕ್ಷ್ಮೀಪೂಜೆಯ ಕುರಿತೂ ಸಹ ಇಲ್ಲಿ ವಿವರಣೆಯಿದೆ. 

6096 Views
Article - VNA205

ಸದಾಚಾರಸ್ಮೃತಿ — 09 — ಬಯಲಶೌಚ

ಮಲಮೂತ್ರವಿಸರ್ಜನೆಯ ವಿಷಯದಲ್ಲಿ ನಮ್ಮ ಋಷಿಮುನಿಗಳು ವಿಧಿಸುವದು ಬಹಿಃಶೌಚವನ್ನು. ಆದರೆ ಇವತ್ತು ಹಳ್ಳಿಗಳಲ್ಲಿ ಇರುವ ಬಯಲ ಶೌಚ ಖಂಡಿತ ಶಾಸ್ತ್ರೀಯವೂ ಅಲ್ಲ, ಸಮಾಜಸಮ್ಮತವೂ ಅಲ್ಲ. ನಮ್ಮ ಪ್ರಾಚೀನ ಋಷಿಮುನಿಗಳು ಎಂದಿಗೂ ಪ್ರಕೃತಿಗೆ ಮಾರಕವಾದ ಬದುಕನ್ನು ಉಪದೇಶಿಸಲಿಲ್ಲ. ಪ್ರಕೃತಿಗೆ ಆಪ್ಯಾಯಮಾನವಾಗಿ ಬದುಕುತ್ತಿದ್ದವರು ಅವರು. ನಮ್ಮ ಪ್ರಾಚೀನರ ಬಯಲ ಶೌಚದ ಹಿಂದೆ ಅದೆಂತಹ ವೈಜ್ಞಾನಿಕತೆ ಅಡಗಿದೆ, ಹಾಗೂ ಟಾಯ್ಲೆಟ್ಟಿನ ಉಪಯೋಗದಿಂದ ಈಗಾಗಲೇ ಪ್ರಕೃತಿಯ ಮೇಲೆ ಉಂಟಾಗಿರುವ ಪರಿಣಾಮವೇನು ಎನ್ನುವದನ್ನು ಈ ಲೇಖನದಲ್ಲಿ ತಿಳಿಯುತ್ತೇವೆ. ಈ ವಿಷಯದ ಕುರಿತ ಉಪನ್ಯಾಸ VNU359. ತಪ್ಪದೇ ಕೇಳಿ. 

1992 Views
Article - VNA204

ಸದಾಚಾರಸ್ಮೃತಿ — 08 — ಹಾಸಿಗೆಯಲ್ಲಿ ವಿಷ್ಣುಸ್ಮರಣೆ

ವಿಷ್ಣು ವೈಷ್ಣವರ ಸ್ಮರಣೆಯನ್ನು ಮಾಡುತ್ತಲೇ ನಿದ್ರೆಯಿಂದ ಏಳಬೇಕು ಎನ್ನುವದು ಆಚಾರ್ಯರ ಆದೇಶ. ಆ ಸ್ಮರಣೆಯನ್ನು ಯಾವ ರೀತಿ ಮಾಡಬೇಕು, ಹಾಸಿಗೆಯಲ್ಲಿ ಶ್ಲೋಕಗಳನ್ನು ಪಠಿಸಬಹುದೇ, ಪಠಿಸಬಹುದಾದರೆ ಯಾವ ಶ್ಲೋಕಗಳನ್ನು ಪಠಿಸಬೇಕು, ಅವುಗಳ ಅರ್ಥವೇನು ಮುಂತಾದ ವಿಷಯಗಳ ಕುರಿತ ವಿಸ್ತೃತ ವಿವರಣೆ ಈ ಲೇಖನದಲ್ಲಿದೆ. ಈ ವಿಷಯದ ಕುರಿತ ಉಪನ್ಯಾಸದ ಸಂಖ್ಯೆ VNU358. 

3788 Views
Article - VNA203

ಕಾರ್ತಿಕಸ್ನಾನವಿಧಿ

ಬ್ರಹ್ಮಹತ್ಯೆ, ಭ್ರೂಣಹತ್ಯೆಯಂತಹ ಮಹಾಪಾತಕಗಳನ್ನೂ ನಾಶ ಮಾಡುವ ಮಹಾಸತ್ಕರ್ಮ ಕಾರ್ತಿಕಸ್ನಾನ. ಈ ಸ್ನಾನದ ಸಂಕಲ್ಪ, ಪ್ರಾರ್ಥನೆ, ಸ್ನಾನದ ಕ್ರಮ, ಅರ್ಘ್ಯ ನೀಡುವ ಕ್ರಮ, ಮಂತ್ರಗಳ ಅರ್ಥವನ್ನೂ ಈ ಲೇಖನದಲ್ಲಿ ವಿವರಿಸಲಾಗಿದೆ. ಮುಖ್ಯವಾಗಿ ರಾಧಾದಾಮೋದರನಿಗೆ ಸ್ನಾನಕಾಲದಲ್ಲಿ ಅರ್ಘ್ಯ ನೀಡಬಾರದು, ಸ್ನಾನ ಮುಗಿಸಿ ಗೋಪೀ ಮುದ್ರೆಗಳನ್ನು ಧಾರಣೆ ಮಾಡಿ ಶಂಖದಲ್ಲಿ ಬಂಗಾರ, ರತ್ನ, ಹೂ, ನೀರನ್ನು ಹಾಕಿ ಅದರಿಂದ ಅರ್ಘ್ಯ ನೀಡಬೇಕು, ಹಾಗೆ ನೀಡುವದರಿಂದ ಸಮಗ್ರ ಭೂಮಿಯನ್ನು ಬಂಗಾರದಿಂದ ತುಂಬಿಸಿ ಜ್ಞಾನಿಗಳಿಗೆ ನೀಡಿದ ಪುಣ್ಯವನ್ನು ಶ್ರೀಹರಿ ಕರುಣಿಸುತ್ತಾನೆ ಎಂಬ ಪ್ರಮೇಯವನ್ನು ಆಧಾರಗಳ ಸಮೇತ ಪ್ರತಿಪಾದಿಸಲಾಗಿದೆ. 

5161 Views
Article - VNA202

ಸಾವನ್ನು ಎದುರಿಸುವ ಬಗೆ — 3

ಸಾವಿನ ಹೊಸ್ತಿಲಿನಲ್ಲಿದ್ದಾಗ, ಹಿಂದೆ ಮಾಡಿದ ಪಾಪಗಳ ಕುರಿತು ಇರಬೇಕಾದ ಎಚ್ಚರ, ಮಾಡಬೇಕಾದ ಪ್ರಾಯಶ್ಚಿತ್ತಗಳು, ದೇವರಪೂಜೆ, ನೈವೇದ್ಯ, ಏಕಾದಶಿ, ನಮಸ್ಕಾರ, ಲೇಖನಯಜ್ಞ ಮುಂತಾದವುಗಳಲ್ಲಿ ಇರಬೇಕಾದ ಆದರ, ಅನುಷ್ಠಾನ ಮಾಡಬೇಕದ ಕ್ರಮಗಳನ್ನು ವಿವರಿಸುವ ಲೇಖನ. 

2431 Views
Article - VNA201

ದ್ವಿದಳವ್ರತದ ವಿಧಿನಿಷೇಧಗಳು

ದ್ವಿದಳವ್ರತದಲ್ಲಿ ನಿಷಿದ್ಧವಾದ ಪದಾರ್ಥಗಳು ಯಾವುವು, ಉಪಯೋಗಿಸಬೇಕಾದ ಪದಾರ್ಥಗಳು ಯಾವುವು, ಯಾವ ರೀತಿಯ ಅಡಿಗೆ ಸೂಕ್ತ ಎಂಬುದರ ಕುರಿತ ಲೇಖನ. ಕಡಲೇಕಾಯಿ ಬೀಜವನ್ನು ಸ್ವೀಕರಿಸಬೇಕೇ ಸ್ವೀಕರಿಸಬಾರದೆ ಎಂಬ ವಿಷಯದ ಕುರಿತ ವಿವರಣೆಯೂ ಇಲ್ಲಿದೆ. 

5116 Views
Article - VNA200

ಸಾವನ್ನು ಎದುರಿಸುವ ಬಗೆ — 2

ಮನುಷ್ಯ ಸತ್ತ ತಕ್ಷಣ ಏನಾಗುತ್ತದೆ ಎನ್ನುವದನ್ನು ಅರ್ಥ ಮಾಡಿಕೊಂಡಾಗ ಅಲ್ಲಿರುವ ಸಮಸ್ಯೆಗಳೇನು, ಅದನ್ನು ಎದುರಿಸುವ ರೀತಿ ಯಾವುದು ಎಂದು ತಿಳಿಯಲು ಸಾಧ್ಯ. ಹೀಗಾಗಿ  ನಾವು ಸತ್ತ ತಕ್ಷಣ ಏನಾಗುತ್ತದೆ, ತಕ್ಷಣ ನಾವು ಪಡೆಯುವಂತಹ ಶರೀರ ಎಂತಹುದು, ಯಮಲೋಕದ ಮಾರ್ಗ ಹೇಗಿರುತ್ತದೆ ಎನ್ನುವದನ್ನು ವಿವರಿಸುವಂತಹ ಲೇಖನವಿದು. 

2152 Views
Article - VNA199

ಸಾವನ್ನು ಎದುರಿಸುವ ಬಗೆ — 1

ಆಚಾರ್ಯರೇ, ಶಾಸ್ತ್ರೋಕ್ತವಾದ ರೀತಿಯಲ್ಲಿ ಸಾವನ್ನು ಹೇಗೆ ಎದುರಿಸಬೇಕು, ನಮಗೆ ಸಾವಾಗುತ್ತದೆ ಎಂದು ನಿರ್ಣಯವಾದಾಗ ಯಾವ ರೀತಿ ಬದುಕಬೇಕು ಎನ್ನುವದನ್ನು ವಿಸ್ತಾರವಾಗಿ ಬರೆದು ತಿಳಿಸಿ ಎಂದು ನನ್ನ ಆತ್ಮೀಯರೊಬ್ಬರು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಉತ್ತರವಾಗಿ ಇದು ಮೊದಲನೆಯ ಲೇಖನ. ಓದಿ. 

2339 Views
Article - VNA198

ಅವರ ಸಾವೇ ಅಷ್ಟು ಅದ್ಬುತವಾಗಿತ್ತೆಂದರೆ…

ಬನ್ನಂಜೆ ಗೋವಿಂದಾಚಾರ್ಯರ ಸಂಶೋಧನೆಗಳಲ್ಲಿ ಒಂದು ಬೆಲೆಕಟ್ಟಲಾಗದ ರತ್ನ — ಶ್ರೀ ಪಲಿಮಾರು ಮಠದ ಶ್ರೀ ರಘೂತ್ತಮತೀರ್ಥರ ನಿರ್ಯಾಣದ ಕುರಿತ ತಾಡೆವಾಲೆಯ ಸಂಶೋಧನೆ. ಶ್ರೀ ಹೃಷೀಕೇಶತೀರ್ಥರ ದಿವ್ಯ ತಪಸ್ವಿಪರಂಪರೆಯಲ್ಲಿ ಬಂದಂತಹ ಶ್ರೀ ರಘೂತ್ತಮತೀರ್ಥರು ಸಾವನ್ನು ಸ್ವಾಗತಿಸಿದ ರೀತಿಯನ್ನು, ನಿರ್ಯಾಣದ ದಿವಸ ಅವರು ಮಾಡಿದ ಅನುಷ್ಠಾನಗಳನ್ನು ದಾಖಲಿಸುವ ಈ ಕೃತಿ ಮಾಧ್ವಪರಂಪರೆಯ ಜ್ಞಾನಿಗಳ ಬದುಕು ಹೇಗಿರುತ್ತಿತ್ತು ಎನ್ನುವದನ್ನು ನಿರೂಪಿಸುತ್ತದೆ. ಆಶ್ವೀನ ಶುದ್ಧ ಪಂಚಮಿ ಶ್ರೀ ರಘೂತ್ತಮತೀರ್ಥರ ನಿರ್ಯಾಣದ ಪವಿತ್ರ ದಿವಸ. ಆ ಮಹಾಗುರುಗಳ ಸ್ಮರಣೆಗಾಗಿ ಈ ಲೇಖನ. 

2604 Views
Article - VNA196

ಗಣಪತಿಪೂಜಾಸಿದ್ಧತೆ

ಗಣಪತಿಯ ಪೂಜೆಯನ್ನು ಮಾಡಬೇಕಾದರೆ ಮಾಡಿಕೊಳ್ಳಬೇಕಾದ ಸಿದ್ಧತೆಗಳ ಕುರಿತ ಲೇಖನ. ಗಣಪತಿಯ ಪೂಜಾಕ್ರಮದ ಕುರಿತ ಉಪನ್ಯಾಸ ಮುಂದಿನದು. ಅದನ್ನು ಕೇಳುವದಕ್ಕಿಂತ ಮಂಚೆ ಇದನ್ನು ಕೇಳಿ ಎಲ್ಲ ಸಿದ್ಧತೆಯನ್ನು ಮಾಡಿಕೊಳ್ಳಿ.

3162 Views
Article - VNA195

ಶ್ರೀರಾಘವೇಂದ್ರದಂಡಕಮ್

ಸುದೀರ್ಘವಾದ ಒಂದೇ ವಾಕ್ಯದಲ್ಲಿ ಶ್ರೀರಾಘವೇಂದ್ರಸ್ವಾಮಿಗಳ ನಿತ್ಯಾಹ್ನೀಕವನ್ನು ವರ್ಣನೆ ಮಾಡುವ ಶ್ರೀ ಅಪ್ಪಣಾಚಾರ್ಯರು ರಚಿಸಿರುವ ಶ್ರೀರಾಘವೇಂದ್ರದಂಡಕದ ಪೂರ್ಣ ಪಾಠ ಇಲ್ಲಿದೆ. ಸಂಸ್ಕೃತದ ಶಬ್ದಗಳಲ್ಲಿ ಅದೆಂತಹ ಸೊಬಗಿದೆ ಎಂದು ಮನಗಾಣಿಸುವ ಗದ್ಯವಿದು. 

2961 Views
Article - VNA194

ರಾಯರ ದಿನಚರಿ

ಶ್ರೀರಾಘವೇಂದ್ರ ಗುರುಸಾರ್ವಭೌಮರ ಸಾಕ್ಷಾತ್ ಶಿಷ್ಯರಾದ ಅವರ ಪೂರ್ಣಾನುಗ್ರಹವನ್ನು ಪಡೆದ ಶ್ರೀ ಅಪ್ಪಣಾಚಾರ್ಯರು ತಮ್ಮ ಗುರುಗಳು ಯಾವ ರೀತಿಯಾಗಿ ಪ್ರತೀನಿತ್ಯವೂ ಭಗವದಾರಾಧನೆಯನ್ನು ಮಾಡುತ್ತಿದ್ದರು ಎಂದು ತಮ್ಮ ರಾಘವೇಂದ್ರದಂಡಕ ಎಂಬ ಅದ್ಭುತ ಕೃತಿಯಲ್ಲಿ ದಾಖಲಿಸಿಟ್ಟಿದ್ದಾರೆ. ನಮ್ಮೆಲ್ಲರ ಗುರುಗಳಾದ ಶ್ರೀ ರಾಘವೇಂದ್ರಸ್ವಾಮಿಗಳು ಅದೆಷ್ಟು ಅದ್ಭುತವಾಗಿ ಜೀವನವನ್ನು ನಡೆಸುತ್ತಿದ್ದರು ಎನ್ನುವದನ್ನು ಸ್ಮರಣೆ ಮಾಡಿದಾಗ ನಾವು ಸದಾಚಾರಿಗಳಾಗಲು ಸಾಧ್ಯ. ಆ ರಾಘವೇಂದ್ರದಂಡಕದ ಅನುವಾದ ಈ ಲೇಖನದಲ್ಲಿದೆ.

2483 Views
Article - VNA193

ಸೂರ್ಯನ ರಾಶಿ ಪ್ರತ್ಯಕ್ಷಸಿದ್ಧ

"ಉಪಾಕರ್ಮ ಒಂದು ಚಿಂತನೆ" ಎಂಬ ಲೇಖನದಲ್ಲಿ ಸಂಕ್ರಾಂತಿ ಪ್ರತ್ಯಕ್ಷವೇ ಅಲ್ಲ ಎಂದು ಬರೆಯಲಾಗಿದೆ. ಸ್ವಯಂ ಶ್ರೀಮದಾಚಾರ್ಯರು ಮತ್ತು ಶ್ರೀ ತ್ರಿವಿಕ್ರಮಪಂಡಿತಾಚಾರ್ಯರ ಎರಡು ವಾಕ್ಯಗಳ ಆಧಾರದೊಂದಿಗೆ ಕಿರಣಗಳಿಂದ ಸೂರ್ಯನ ರಾಶಿಯನ್ನು ತಿಳಿಯುವ ಕ್ರಮ ಪ್ರತ್ಯಕ್ಷವೇ ಎಂದು ಈ ಲೇಖನದಲ್ಲಿ ಪ್ರತಿಪಾದಿಸಲಾಗಿದೆ. 

2432 Views
Article - VNA192

ಉಪಾಕರ್ಮದ ಕುರಿತ ಚರ್ಚೆ

ಶ್ರೀ ದುರ್ಮುಖಸಂವತ್ಸರದ ಋಗ್ವೇದಿಗಳ ನಿತ್ಯೋಪಾಕರ್ಮದ ಕುರಿತ ಚರ್ಚೆ. 17-08-2016 ಬುಧವಾರದಂದೇ ಋಗ್ವೇದಿಗಳು ನಿತ್ಯೋಪಾಕರ್ಮವನ್ನು ಮಾಡಬೇಕು ಎನ್ನುವದನ್ನು ಪ್ರತಿಪಾದಿಸುವ ಲೇಖನ. 

6119 Views
Article - VNA191

ಶ್ರೀ ವಿದ್ಯಾಸಿಂಧುತೀರ್ಥಶ್ರೀಪಾದರ ಮಾಹಾತ್ಮ್ಯ

ಸಾವಿರ ಕೇಜಿ ಬಂಗಾರವನ್ನು ಸಮಾಜಕ್ಕಾಗಿ ಕೈಯೆತ್ತಿ ನೀಡಿದ ಮಹಾನುಭಾವರು, ಪೂರ್ವಾಶ್ರಮದ ತಮ್ಮ ಐದು ವರ್ಷದ ಮಗನಿಗೆ ಮಾತ್ರ ಹಣ ನೀಡಲಿಲ್ಲ. ಮಠದಲ್ಲಿಯೂ ಇರಿಸಿಕೊಳ್ಳಲಿಲ್ಲ. ಸಂನ್ಯಾಸಿಯಾದವರು, ಅದರಲ್ಲಿಯೂ ಶ್ರೀಮದಾಚಾರ್ಯರ ಪರಮಾದ್ಭುತಪೀಠದ ಅಧಿಪತಿಯಾದವರು ಪೂರ್ವಾಶ್ರಮದೊಂದಿಗೆ ಹೇಗಿರಬೇಕು ಎನ್ನುವದನ್ನು ತೋರಿಸಿಕೊಟ್ಟ ಮಹಾನುಭಾವರ ಕುರಿತ ಲೇಖನ.

2165 Views
Article - VNA190

ಪ್ರಭಾತಪಂಚಕಮ್ — 2

 ನಿದ್ರೆಯನ್ನು ಗೆಲ್ಲಲು ಯಾವ ಭಗವದ್ರೂಪದ ಚಿಂತನೆ ಮಾಡಬೇಕು, ಬೆಳಿಗ್ಗೆ ಎದ್ದ ತಕ್ಷಣ ದುಷ್ಟರನ್ನು ಕಂಡರೆ, ದುಷ್ಟರ ನೆನಪು ಮಾಡಿಕೊಂಡೇ ಎದ್ದರೆ ಆಗುವ ಅಶುಭದ ಪರಿಹಾರಕ್ಕೆ ಯಾವ ರೂಪವನ್ನು ಚಿಂತಿಸಬೇಕು, ಸಂಸಾರದ ಭಾರವನ್ನು ಹೊತ್ತು ಸುಗಮವಾಗಿ ಸಾಧನೆಯ ಮಾರ್ಗದಲ್ಲಿ ನಡೆಯಲು ಯಾರನ್ನು ಸ್ಮರಿಸಬೇಕು, ಬಯಸಿದ್ದನ್ನು ಪಡೆಯಲು ಯಾರನ್ನು ಬೆಳಿಗ್ಗೆ ಏಳುತ್ತಿದ್ದಂತೆ ನೆನೆಯಬೇಕು, ಯಾವ ಮಂಗಳರೂಪದ ಸ್ಮರಣೆಯಿಂದ ಇಡಿಯ ದಿವಸ ಮಂಗಲಮಯವಾಗುತ್ತದೆ ಎಂಬ ಪ್ರಶ್ನೆಗಳಿಗೆ ಶ್ರೀ ಲಕ್ಷ್ಮೀವಲ್ಲಭತೀರ್ಥಶ್ರೀಪಾದರು ನೀಡಿರುವ ಉತ್ತರದ ವಿವರಣೆ ಈ ಲೇಖನದಲ್ಲಿದೆ. 

2014 Views
Article - VNA189

ಪ್ರಭಾತಪಂಚಕಮ್ — 1

ನಮಗೆ ನಾವು ಸುಪ್ರಭಾತವನ್ನು ಹೇಳಿಕೊಳ್ಳಬೇಕು ಎಂದು ಆದೇಶಿಸಿದವರು ಶ್ರೀ ವೇದವ್ಯಾಸದೇವರು. ಆ ಮಹಾಧರ್ಮವನ್ನು ಆಚರಿಸಿ ತೋರಿದವರು ರುದ್ರದೇವರು. ಈ ಸತ್ಸಂಪ್ರದಾಯವನ್ನರಿತ ನಮ್ಮ ಶ್ರೀಮದ್ ವ್ಯಾಸರಾಜಸಂಸ್ಥಾನದ ವಿದ್ಯಾಸಿಂಹಾಸನಾಧೀಶ್ವರರಾದ ಶ್ರೀಲಕ್ಷ್ಮೀವಲ್ಲಭತೀರ್ಥಶ್ರೀಪಾದರು ಇಡಿಯ ಮಾಧ್ವಪರಂಪರೆಯಲ್ಲಿಯೇ ಅತ್ಯಪೂರ್ವವಾದ ಒಂದು ಪ್ರಭಾತಪಂಚಕವನ್ನು ಬರೆದು ನೀಡಿದ್ದಾರೆ. ಅದ್ಭುತಾರ್ಥಗರ್ಭಿತವಾಗ ಆ ಸ್ತೋತ್ರದ ಮೊದಲ ಶ್ಲೋಕದ ಅನುವಾದ ಈ ಲೇಖನದಲ್ಲಿದೆ, ಪರಮಾತ್ಮನ ದಶಾವತಾರಗಳಲ್ಲಿ ನಾವು ಮಾಡಬೇಕಾದ ಪ್ರಾರ್ಥನೆಯ ಚಿಂತನೆಯೊಂದಿಗೆ. 

1753 Views
Article - VNA188

ಶ್ರೀಮದಾಚಾರ್ಯರ ವೃಂದಾವನಿದೆಯೇ?

ಆಚಾರ್ಯರು ವೃಂದಾವನಸ್ಥರಾದರೇ ಎಂಬ ಪ್ರಶ್ನೆಗೆ ನಮ್ಮ ಪರಂಪರೆಯ ವಿಭೂತಿಪುರುಷರಾದ ಶ್ರೀ ವಾದಿರಾಜಗುರುಸಾರ್ವಭೌಮರು ನೀಡಿರುವ ಉತ್ತರದ ವಿವರಣೆ ಈ ಲೇಖನದಲ್ಲಿದೆ. 

3469 Views
Article - VNA187

ಸದಾಚಾರಸ್ಮೃತಿ — 07 — ಬ್ರಾಹ್ಮಮುಹೂರ್ತದಲ್ಲಿ ಏಳಲು ಸುಲಭೋಪಾಯ

ನಿದ್ರೆಯ ಆರು ರೀತಿಯ ಅವಧಿಗಳನ್ನು ತಿಳಿದೆವು, ಬ್ರಾಹ್ಮಮುಹೂರ್ತದಲ್ಲಿ ಮಲಗಿರುವದರಿಂದ ಮಾಡಿದ ಪುಣ್ಯವೆಲ್ಲವೂ ಕ್ಷಯವಾಗುತ್ತದೆ ಎನ್ನುವದನ್ನೂ ತಿಳಿದೆವು.  ಈಗ ಪ್ರಶ್ನೆ. ನಮಗೆ ಏಳಬೇಕೆಂಬ ಅಪೇಕ್ಷೆಯೂ ಇದೆ, ಏಳಲು ಅವಕಾಶವೂ ಇದೆ. ಆದರೆ ಏಳಲು ಸಾಧ್ಯವಾಗುತ್ತಿಲ್ಲ. ಏನು ಮಾಡಬೇಕು?  ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು ಮಂದರಾದ ನಮ್ಮ ಈ ಪ್ರಶ್ನೆಗೂ ಉತ್ತರವನ್ನಿತ್ತಿದ್ದಾರೆ. ಆ ಉತ್ತರದ ನಿರೂಪಣೆ ಈ ಲೇಖನದಲ್ಲಿ. 

2436 Views
Article - VNA186

ಸದಾಚಾರಸ್ಮೃತಿ — 06 — ನಿದ್ರೆಯ ಅವಧಿ ಮತ್ತು ಏಳುವ ಸಮಯ

ಶಾಸ್ತ್ರ ತಿಳಿಸುವ ಆರು ರೀತಿಯ ನಿದ್ರೆಯ ಅವಧಿಯನ್ನು ವಿವರಿಸುವ ಲೇಖನವಿದು. ಬ್ರಾಹ್ಮಮುಹೂರ್ತದಲ್ಲಿ ಯಾಕಾಗಿ ಏಳಬೇಕು, ಉಂಟಾಗುವ ಆಧ್ಯಾತ್ಮಿಕ ಪ್ರಯೋಜನಗಳೇನು, ಸಂನ್ಯಾಸಿಗಳು ಯಾವಾಗ ಏಳಬೇಕು, ಗೃಹಸ್ಥರು ಯಾವಾಗ ಎಂಬ ವಿಷಯಗಳೊಂದಿಗೆ, ಗಳಿಗೆ, ಮುಹೂರ್ತ ಮತ್ತು ಯಾಮ ಎನ್ನುವ ಶಬ್ದಗಳ ಅರ್ಥವವಿರಣೆ ಈ ಲೇಖನದಲ್ಲಿದೆ. 

2026 Views
Article - VNA185

ಸದಾಚಾರಸ್ಮೃತಿ — 05 — ದೇವರಿಗೇಕೆ ಕರ್ಮಗಳನ್ನು ಸಮರ್ಪಿಸಬೇಕು

ಈ ಪ್ರಶ್ನೆಗೆ ಶ್ರೀಮದಾಚಾರ್ಯರು ನೀಡಿರುವ ಉತ್ತರಗಳ ಸಂಗ್ರಹ ಈ ಲೇಖನದಲ್ಲಿದೆ.

1723 Views
Article - VNA184

ಅಂಗಗಳ ಕಸಿಯನ್ನು ಶಾಸ್ತ್ರೀಯವಾಗಿ ಹೇಗೆ ಒಪ್ಪಲು ಸಾಧ್ಯ?

ಸತ್ತ ದೇಹದಲ್ಲಿರುವ ಯಾವ ಇಂದ್ರಿಯಗಳೂ ಕಾರ್ಯ ಮಾಡುವದಿಲ್ಲ ಎಂದು ಶಾಸ್ತ್ರ ಹೇಳುತ್ತದೆ, ಆದರೆ ಸತ್ತ ದೇಹದಿಂದ ಕಣ್ಣು ಮುಂತಾದವನ್ನು ತೆಗೆದು ಕಣ್ಣಿಲ್ಲದವರಿಗೆ ಕಸಿ ಮಾಡಿದಾಗ ಕಣ್ಣು ಕೆಲಸ ಮಾಡುವದು ಕಂಡಿದೆ. ಹೀಗಾಗಿ ಶಾಸ್ತ್ರ ಹೇಳುವದನ್ನು ಹೇಗೆ ಒಪ್ಪಲು ಸಾಧ್ಯ ಎಂಬ ಪ್ರಶ್ನೆಗೆ ಶಾಸ್ತ್ರೀಯವಾದ ಉತ್ತರ ಈ ಲೇಖನದಲ್ಲಿದೆ. 

2337 Views
Article - VNA183

ಸದಾಚಾರಸ್ಮೃತಿ — 04 — ಕರ್ಮಗಳಲ್ಲಿ ಅನುಸಂಧಾನ — 3

ಆಚಾರ್ಯರ ಸದಾಚಾರಸ್ಮೃತಿಯ ಮೊದಲ ವಾಕ್ಯದ ಅರ್ಥಾನುಸಂಧಾನವನ್ನು ಮಾಡುತ್ತ ಶ್ರೀ ರಾಘವೇಂದ್ರಸ್ವಾಮಿಗಳು ತಿಳಿಸಿಕೊಟ್ಟ “ತ್ವದಾಜ್ಞಯಾ, ತ್ವತ್ಪ್ರಸಾದಾತ್, ತ್ವತ್ಪ್ರೇರಣಯಾ, ತ್ವತ್ಪ್ರೀತ್ಯರ್ಥಂ, ತ್ವಾಮುದ್ದಿಶ್ಯ, ತ್ವಾಮನುಸ್ಮರನ್ನೇವ” ಎಂಬ ಅನುಸಂಧಾನಗಳಲ್ಲಿ ಮೊದಲ ಮೂರನ್ನು ಅರ್ಥ ಮಾಡಿಕೊಂಡೆವು. ಕಡೆಯ ಮೂರು ಅನುಸಂಧಾನಗಳ ವಿವರಣೆ ಈ ಲೇಖನದಲ್ಲಿ.

1863 Views
Article - VNA182

ಸದಾಚಾರಸ್ಮೃತಿ — 03 — ಕರ್ಮಗಳಲ್ಲಿ ಅನುಸಂಧಾನ — 2

ಆಚಾರ್ಯರ ಮಂಗಳಾಚಾರಣ ಶ್ಲೋಕದಲ್ಲಿನ ನಿರ್ಮಮಃ ಮತ್ತು ಕರ್ಮಾಣಿ ಸಂನ್ಯಸ್ಯ ಎಂಬ ತತ್ವಗಳನ್ನು ಯಥಾಶಕ್ತಿ ಅರ್ಥ ಮಾಡಿಕೊಂಡೆವು. ಈ ಲೇಖನದಲ್ಲಿ ಅಧ್ಯಾತ್ಮಚೇತಸಾ ಎಂಬ ಪದದ ಅರ್ಥಾನುಸಂಧಾನವಿದೆ. ದೇವರ ಆಜ್ಞೆ, ಪ್ರಸಾದ, ಪ್ರೇರಣೆಗಳನ್ನು ನೆನೆಯುವ ಬಗೆಯ ಚಿಂತನೆಯಿದೆ. 

1541 Views
Article - VNA181

ಸದಾಚಾರಸ್ಮೃತಿ — 02 — ಕರ್ಮಗಳಲ್ಲಿ ಅನುಸಂಧಾನ — 1

ನಾಹಂ ಕರ್ತಾ ಹರಿಃ ಕರ್ತಾ ತತ್ಪೂಜಾ ಕರ್ಮಚಾಖಿಲಮ್” ಎಂಬ ಶ್ಲೋಕದ ವಿವರಣೆ ಈ ಲೇಖನದಲ್ಲಿದೆ. ಆಚಾರ್ಯರ ಸದಾಚಾರಸ್ಮೃತಿಯ ಅರ್ಥಾನುಸಂಧಾನ ಈ ಲೇಖನ ಮತ್ತು ಉಪನ್ಯಾಸಗಳಿಂದ ಆರಂಭ. 

1610 Views
Article - VNA180

ಸದಾಚಾರಸ್ಮೃತಿ — 01 — ಸದಾಚಾರದ ಆವಶ್ಯಕತೆ ಮತ್ತು ಗ್ರಂಥಗಳು

ಸದಾಚಾರವನ್ನು ಯಾಕಾಗಿ ಅನುಷ್ಠಾನ ಮಾಡಬೇಕು, ಸಾಧನೆಯಲ್ಲಿ ಸದಾಚಾರದ ಪಾತ್ರವೇನು ಎನ್ನುವ ಪ್ರಶ್ನೆಗಳಿಗೆ ಶ್ರೀಮದಾಚಾರ್ಯರು ಗೀತಾಭಾಷ್ಯ ಮುಂತಾದ ಗ್ರಂಥಗಳಲ್ಲಿ ನೀಡಿರುವ ಉತ್ತರಗಳ ಅನುಸಂಧಾನ ಮತ್ತು ನಮ್ಮ ಮಾಧ್ವಪರಂಪರೆಯಲ್ಲಿ ಇರುವ ಸದಾಚಾರದ ಗ್ರಂಥಗಳ ಮಾಹಿತಿ ಈ ಲೇಖನದಲ್ಲಿದೆ. 

1658 Views
Article - VNA179

ವಿದ್ಯಾವಂತರಿಗೆ ಪ್ರಿಯರಾಗಿದ್ದ ಶ್ರೀ ವಿದ್ಯಾಕಾಂತತೀರ್ಥರು

ಶ್ರೀಮದ್ ವ್ಯಾಸರಾಜಸಂಸ್ಥಾನದ ಜ್ಞಾನನಿಧಿ ಶ್ರೀ ವಿದ್ಯಾಕಾಂತತೀರ್ಥಶ್ರೀಪಾದರ ಆರಾಧನಾಮಹೋತ್ಸವದ ನಿಮಿತ್ತ ಲೇಖನ. 

1756 Views
Article - VNA178

ಅಶ್ವತ್ಥದ ಬೀಜ

ಬೀಜದಿಂದ ಮರ ಹುಟ್ಟುತ್ತದೆ. ಈ ಪ್ರಕ್ರಿಯೆ ದೇವರ ಅಸ್ತಿತ್ವವನ್ನು ಸಮರ್ಥಿಸುವ ರೀತಿಯ ವಿವರ ಈ ಲೇಖನದಲ್ಲಿ. 

974 Views
Article - VNA177

ದೇವರ ಅಸ್ತಿತ್ವದ ಸಮರ್ಥನೆ

ವೀರ್ಯ ಎನ್ನುವ ಶಬ್ದ ಕೇಳಿದ ತಕ್ಷಣ ಕೀಳುಜನರ ಮನಸ್ಸಿನಲ್ಲಿ ಕಾಮ ಕೆರಳುತ್ತದೆ. ಆದರೆ, ಆ ವೀರ್ಯ ಎನ್ನುವದು ದೇವರ ಅಸ್ತಿತ್ವವನ್ನು ಸಾರಿ ಹೇಳುವ ಪದಾರ್ಥ ಎಂದು ಶಾಸ್ತ್ರ ಪ್ರತಿಪಾದಿಸುವ ಬಗೆಯನ್ನು ಈ ಲೇಖನದಲ್ಲಿ ಕಾಣುತ್ತೀರಿ. 

1079 Views
Article - VNA176

ಕರ್ಮಸಿದ್ಧಾಂತದ ಸಮರ್ಥನೆ

ನಾವು ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮಗಳು ಈ ಜನ್ಮದಲ್ಲಿ ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಕುರಿತ ಚರ್ಚೆ. 

1463 Views
Article - VNA175

ಪುನರ್ಜನ್ಮದ ಸಮರ್ಥನೆ

ದೇಹ ಜೀವನಲ್ಲ ಎಂದಾದ ಬಳಿಕ, ದೇಹ ಸತ್ತರೆ ಅದರೊಳಗಿನ ಜೀವ ಏನಾಗುತ್ತಾನೆ, ದೇಹ ನಿರ್ಮಾಣವಾಗುವ ಮೊದಲು ಎಲ್ಲಿದ್ದ ಎಂಬ ಪ್ರಶ್ನೆಗಳನ್ನಿಟ್ಟುಕೊಂಡು ತತ್ವವನ್ನು ಹುಡಕಲು ಆರಂಭಿಸಿದರೆ ಮೊದಲು ನಮ್ಮ ಕೈಗೆ ಎಡತಾಕುವದು ಜನ್ಮಾಂತರಗಳು. ಅವನ್ನು ಒಪ್ಪುವ ಅನಿವಾರ್ಯತೆಯ ಪ್ರತಿಪಾದನೆ ಈ ಲೇಖನದಲ್ಲಿ. 

1165 Views
Article - VNA174

ಜೀವನ ಅಸ್ತಿತ್ವದ ಸಮರ್ಥನೆ

ನಾಸ್ತಿಕರ ಪ್ರಕಾರ ಜೀವ ಎನ್ನುವ ವಸ್ತುವೇ ಇಲ್ಲ. ಭೂಮಿ ನೀರು ಬೆಂಕಿ ಗಾಳಿಗಳ ಮಿಶ್ರಣಕ್ಕೇ ಜೀವ ಎಂಬ ವ್ಯವಹಾರ ಎನ್ನುವದು ಅವರ ಪ್ರತಿಪಾದನೆ. ಆದರ ವಿಮರ್ಶೆ ಮತ್ತು ಜೀವನ ಅಸ್ತಿತ್ವವನ್ನು ಒಪ್ಪುವ ಅನಿವಾರ್ಯತೆಯನ್ನು ಈ ಲೇಖನ ಉಪನ್ಯಾಸಗಳಲ್ಲಿ ಪ್ರತಿಪಾದಿಸಲಾಗಿದೆ. 

898 Views
Article - VNA173

ದೇವರ ಅಭಾವವನ್ನು ಪ್ರತಿಪಾದಿಸಲು ಸಾಧ್ಯವಿಲ್ಲ

ದೇವರು ಇಲ್ಲ ಎಂದು ಪ್ರತಿಪಾದಿಸುವದೇ ನಮ್ಮ ಉದ್ದೇಶ, ಹೀಗಾಗಿ ದೇವರ ಅಭಾವವೇ ನಮ್ಮ ಶಾಸ್ತ್ರದ ವಿಷಯ ಎಂಬ ಚಾರ್ವಾಕರ ವಾದದ ವಿಮರ್ಶೆ ಈ ಲೇಖನದಲ್ಲಿ. 

850 Views
Article - VNA172

ನಾಸ್ತಿಕವಾದಗಳ ವಿಮರ್ಶೆ

ದೇವರ ಅಸ್ತಿತ್ವ 02/08. ಒಂದು ವಾಕ್ಯಕ್ಕಾಗಲೀ, ವಾದಕ್ಕಾಗಲೀ, ಶಾಸ್ತ್ರಕ್ಕಾಗಲೀ ನಿರ್ದಿಷ್ಟ ವಿಷಯವಿರಬೇಕು, ಆವಶ್ಯಕ ಪ್ರಯೋಜನವಿರಬೇಕು. ನಾಸ್ತಿಕರ ವಾದಕ್ಕೆ ವಿಷಯವೂ ಇಲ್ಲ ಪ್ರಯೋಜನವೂ ಇಲ್ಲ ಎನ್ನುವದರ ಸಮರ್ಥನೆ ಇಲ್ಲಿದೆ. 

1402 Views
Article - VNA171

ನಾಸ್ತಿಕರ ವಾದಗಳು

ದೇವರ ಅಸ್ತಿತ್ವದ ಕುರಿತ ಚರ್ಚೆಯ ಪ್ರವೇಶಿಕೆ ನಾಸ್ತಿಕ ದರ್ಶನದ ಪರಿಚಯ, ನಾಸ್ತಿಕ ಎನ್ನುವ ಶಬ್ದದ ಅರ್ಥ ಮತ್ತು ನಾಸ್ತಿಕರ ವಾದಗಳು ಈ ಲೇಖನದ ವಿಷಯ. 

1508 Views
Article - VNA170

ಗುರ್ವಷ್ಟಕಮ್

ವಿಜಯನಗರ ಸಾಮ್ರಾಜ್ಯದ ಪತನದ ನಂತರ ರಾಜಕೀಯವಿಪ್ಲವದ ವಿಷಮಕಾಲದಲ್ಲಿ ಪ್ರತೀದಿವಸವೂ ಬಂದೊದಗುತ್ತಿದ್ದ ನಾನವಿಧ ಆಪತ್ತುಗಳ ಪರಿಹಾರಕ್ಕಾಗಿ ಶ್ರೀ ರಾಮತೀರ್ಥಶ್ರೀಪಾದಂಗಳವರು ರಚಿಸಿದ ಗುರ್ವಷ್ಟಕವಿದು. ಸಿದ್ಧ ಸ್ತೋತ್ರ. 

1784 Views
Article - VNA169

ರಾಜಗುರುಗಳೆಂದರೆ ಹೀಗಿರಬೇಕು

ರಾಜಗುರುವಿನ ಸ್ಥಾನ ಎಂದರೆ ವೈಭವವನ್ನು ಅನುಭವಿಸುವ ಸ್ಥಾನವಲ್ಲ, ಸಮಾಜವನ್ನು ಕಟ್ಟುವ ಉಳಿಸುವ ಸ್ಥಾನ ಎನ್ನುವ ವಿಷಯವನ್ನು ತಮ್ಮ ಜೀವನದಲ್ಲಿ ಆಚರಿಸಿ ತೋರಿಸಿದವರು ಶ್ರೀಮಚ್ಚಂದ್ರಿಕಾಚಾರ್ಯರು. ಅವರ ನಿಸ್ಪೃಹವ್ಯಕ್ತಿತ್ವದ, ದೂರದೃಷ್ಟಿಯ, ಸಾಮಾಜಿಕ ಕಳಕಳಿಯ ಮಹಸದ್ಗುಣಗಳಿಗೆ ಸಮರ್ಪಿತವಾದ ಲೇಖನಪುಷ್ಪವಿದು. 

2686 Views
Article - VNA168

ಮೂಗುತಿ ಧರಿಸುವದು ಸನಾತನಸಂಪ್ರದಾಯ

 ಶ್ರೀಯುತ ಹರಿಕೃಷ್ಣ ಕೊಲ್ಹಾರರು ಒಂದು ಪ್ರಶ್ನೆಯನ್ನು ಕೇಳಿದ್ದಾರೆ — ಬನ್ನಂಜೆ ಗೋವಿಂದಾಚಾರ್ಯರು ವಿಜಯ ಕರ್ನಾಟಕ "ಭೋಧಿ ವೃಕ್ಷ" ದಲ್ಲಿ ಹಿಂದು ಸಂಪ್ರದಾಯದಲ್ಲಿ ಸ್ತ್ರೀಯರಿಗೆ ಕಿವಿ ಚುಚ್ಚಿಕೊಳ್ಳುವದು ಮಾತ್ರ ಇದೆ ಅಂತ ಮತ್ತು ಮೂಗು ಚುಚ್ಚಿಸಿಕೊಳ್ಳುವದು ಅದು ಮುಸ್ಲಿಂ ಸಂಪ್ರದಾಯದಿಂದ ಬಂದಿದ್ದು ಅಂತ ತಿಳಿಸಿದ್ದಾರೆ..... ಇದು ನಿಜವೇ ? ಮೂಗು ಚುಚ್ಚಿಸಿಕೊಳ್ಳುವದು ಮತ್ತು ಮೂಗುತಿ ಧರಿಸುವದು ಸನಾತನ ಸಂಪ್ರಾದಯ, ಮುಸಲ್ಮಾನರ ಪ್ರಭಾವದಿಂದ ಬಂದದ್ದಲ್ಲ ಎನ್ನುವದನ್ನು ಆಧಾರಗಳ ಸಮೇತವಾಗಿ ಇಲ್ಲಿ ಪ್ರತಿಪಾದಿಸಲಾಗಿದೆ. 

1014 Views
Article - VNA167

ಶ್ರೀಮದಾಚಾರ್ಯರು ಕಲಿಸಿದ ಬದುಕಿನ ಪಾಠ

ತತ್ವಗಳನ್ನು ನಿರ್ಣಯಿಸಲು ಆಚಾರ್ಯರು ತೋರಿಸಿದ ನಿರ್ದುಷ್ಟ ಮಾರ್ಗ ಯಶಸ್ಸಿನ ಮೂರು ಮೂಲಮಂತ್ರಗಳನ್ನು ಹೇಳಿಕೊಟ್ಟ ಆಚಾರ್ಯರು ಕೌಟುಂಬಿಕ ನೆಮ್ಮದಿಗೆ ಶ್ರೀಮದಾಚಾರ್ಯರ ನಾಲ್ಕು ಸೂತ್ರಗಳು ಇವುಗಳ ಕುರಿತ ವಿವರಣೆ ಈ ಲೇಖನದಲ್ಲಿದೆ. 

1965 Views
Article - VNA166

ಶ್ರೀ ವಿದ್ಯಾಶ್ರೀಧರತೀರ್ಥರ ಮಾಹಾತ್ಮ್ಯ

ಸಮಾಜ ತಾನು ಸಮೃದ್ಧವಾಗಿದ್ದಾಗ ಕೈತುಂಬಿ ಗುರುಮಠಕ್ಕೆ ದಕ್ಷಿಣೆ ಸಂಪತ್ತುಗಳನ್ನು ನೀಡುತ್ತದೆ. ಆದರೆ ಅಂತಹ ಸಮಾಜದಲ್ಲಿ ಸಂಪತ್ತಿನ ಕೊರತೆ ಉಂಟಾದಾಗ ಗುರುಮಠಗಳು ಹೇಗಿರಬೇಕು ಎನ್ನುವದನ್ನು ಆಚರಿಸಿ ತೋರಿಸಿದ ಒಬ್ಬ ಮಹಾನುಭಾವ ಪೀಠಾಧಿಪತಿಗಳ ಕುರಿತು ನಾವಿಲ್ಲಿ ತಿಳಿಯುತ್ತೇವೆ. 

1297 Views
Article - VNA165

ಬುದ್ಧಿಜೀವಿಗಳ ದ್ವಂದ್ವ

ದೈವದ ಕಲ್ಲಿನ ಮೇಲೆ ಮೂತ್ರ ಮಾಡಿದ್ದ, ಸಂಸ್ಕಾರದಲ್ಲಿ ಬ್ರಾಹ್ಮಣಧರ್ಮಗಳನ್ನು ಹೀನಾಯವಾಗಿ ಚಿತ್ರಿಸಿದ್ದ ಅನಂತಮೂರ್ತಿ, ಹರಿದ್ವಾರದಲ್ಲಿ ತಂದೆಯ ಶ್ರಾದ್ಧ ಮಾಡಿ ಕಾಶಿಯ ವಿಶ್ವನಾಥನಿಗೆ ಪೂಜೆ ಸಲ್ಲಿಸಿದ್ದರ ವಿವರವನ್ನು ಅನಂತಮೂರ್ತಿಯವರ ಮಡದಿ ಎಸ್ತರ್ ನೀಡಿದ್ದಾರೆ. ಆ ಕುರಿತ ಒಂದು ಲೇಖನ. 

2181 Views
Article - VNA164

ಪ್ರಭಾತಪಂಚಕಮ್

ದೇವರಿಗೆ ಸುಪ್ರಭಾತ ಹಾಡಿದವರುಂಟು, ದೇವತೆಗಳಿಗೆ ಹಾಡಿದವರುಂಟು, ಗುರುಗಳಿಗೆ ಹಾಡಿದವರುಂಟು. ಆದರೆ ನಮಗೆ ಸುಪ್ರಭಾತವನ್ನು ನಾವೇ ಹಾಡಿಕೊಳ್ಳುವ ಪರಿಯನ್ನು ಅದರಲ್ಲಿಯೂ ಒಂದು ಸರ್ವೋತ್ತಮವಾದ ಚಿಂತನೆಯನ್ನು ಬೆಳಗಿನ ಕಾಲದಲ್ಲಿ ಮಾಡುವ ಸೌಭಾಗ್ಯವನ್ನು ನಮಗೆ ಕರುಣಿಸಿದವರು ವಿದ್ಯಾಕರ್ಣಾಟಕಸಿಂಹಾಸನಾಧೀಶ್ವರರಾದ ಶ್ರೀಮದ್ವ್ಯಾಸರಾಜಸಂಸ್ಥಾನದ ಭೂಷಾಮಣಿಗಳಾದ ಶ್ರೀ ಲಕ್ಷ್ಮೀವಲ್ಲಭತೀರ್ಥಶ್ರೀಪಾದಂಗಳವರು. ಆ ಸ್ತೋತ್ರದ ಪರಿಚಯ ಈ ಲೇಖನದಲ್ಲಿದೆ. ಇಡಿಯ ಸ್ತೋತ್ರದ ಅರ್ಥಾನುಸಂಧಾನ ಐದು ಉಪನ್ಯಾಸಗಳಲ್ಲಿ ಬರಲಿದೆ. 

1036 Views
Article - VNA163

ಶ್ರೀ ಭಾಷ್ಯದೀಪಿಕಾಚಾರ್ಯರೆಂಬ ಅಸದೃಶ ತಪಸ್ವಿ

ಟೀಕಾ-ಟಿಪ್ಪಣಿಗಳಿಂದ ಯುಕ್ತವಾದ ಸರ್ವಮೂಲಗ್ರಂಥಗಳನ್ನು ಯಾವ ರೀತಿ ಅಧ್ಯಯನ ಮಾಡಬೇಕು ಎಂದು ತೋರಿಕೊಟ್ಟ, ಪರಿಶುದ್ಧವಾದ ವಿದ್ಯಾಪರಂಪರೆಯಿಂದ ಜ್ಞಾನವನ್ನು ಪಡೆದು ಶ್ರೀಮತ್ಸೂತ್ರಭಾಷ್ಯದ ಅಕ್ಷರಅಕ್ಷರಗಳ ಸಾಂಪ್ರದಾಯಿಕ ಅರ್ಥಗಳನ್ನು ಗ್ರಂಥದಲ್ಲಿ ದಾಖಲಿಸಿದ ಶ್ರೀಜಗನ್ನಾಥತೀರ್ಥಶ್ರೀಪಾದಂಗಳವ ಆರಾಧನಾಮಹೋತ್ಸವ ನಿಮಿತ್ತ ಅವರು ನಮ್ಮ ಮೇಲೆ ಮಾಡಿರುವ ಮಹೋಪಕಾರದ ಸ್ಮರಣೆ. 

1796 Views
Article - VNA162

ದೇವರ ಅಸ್ತಿತ್ವ

ಶ್ರೀಮದಾಚಾರ್ಯರು, ಶ್ರೀಮಟ್ಟೀಕಾಕೃತ್ಪಾದರು, ಶ್ರೀ ತ್ರಿವಿಕ್ರಮಪಂಡಿತಾಚಾರ್ಯರು ಮತ್ತು ಶ್ರೀ ವಾದಿರಾಜರು ತಮ್ಮ ಕೃತಿಗಳಲ್ಲಿ ದೇವರ ಅಸ್ತಿತ್ವದ ಕುರಿತು ಇರುವ ಆಕ್ಷೇಪಗಳಿಗೆ ನೀಡಿರುವ ಉತ್ತರಗಳ ಸಂಗ್ರಹ. 

4043 Views
Article - VNA160

ಉಡುಪಿ ಯಾತ್ರೆಯ ಕ್ರಮ

ಸರ್ವೋತ್ತಮಕ್ಷೇತ್ರವಾದ ಉಡುಪಿಯ ಯಾತ್ರೆಯನ್ನು ಯಾವ ರೀತಿ ಮಾಡಬೇಕು, ಹೊರಡುವ ಮುನ್ನ, ಹೊರಟ ನಂತರ, ಉಡುಪಿಯನ್ನು ಸೇರಿದ ನಂತರ, ಮನಗೆ ಹಿಂತಿರುಗಿದ ಬಳಿಕ ಯಾವ ಕ್ರಮಗಳನ್ನು ಅನುಸರಿಸಬೇಕು ಎಂದು ವಿವರಿಸುವ ಲೇಖನ. 

3001 Views
Article - VNA156

ದೀಪಾವಳೀ ಆಚರಣೆ — 2 — ಗಂಗೆಪೂಜೆ

 ಆಶ್ವೀನ ಕೃಷ್ಣ ತ್ರಯೋದಶಿ ನೀರು ತುಂಬುವ ಹಬ್ಬ. ಮಾರನೆಯ ದಿವಸದ ಅಭ್ಯಂಗಕ್ಕೆ ಪೂರ್ವಸಿದ್ಧತೆ. ನೀರು ತುಂಬಿಸುವ ರೀತಿ, ಗಂಗಾಪೂಜೆಯಕ್ರಮಗಳ ವಿವರಣೆ ಈ ಲೇಖನದಲ್ಲಿದೆ. 

4930 Views
Article - VNA155

ದೀಪಾವಳೀ ಆಚರಣೆ — 1 — ಆರತಿ, ದೀಪ

ಗೋವತ್ಸದ್ವಾದಶಿಯಿಂದ ಬಲಿಪಾಡ್ಯಮಿಯವರೆಗೆ ಐದು ರಾತ್ರಿಗಳಲ್ಲಿ ಆಚರಿಸುವ ಪಂಚರಾತ್ರಿಗಳ ಹಬ್ಬ ದೀಪಾವಳಿ. ಈ ಐದು ರಾತ್ರಿಗಳಲ್ಲಿ ಪ್ರಧಾನವಾದ ನೀರಾಜನದ (ಆರತಿ) ಕ್ರಮ ಮತ್ತು ತ್ರಯೋದಶಿಯಿಂದು ಅಪಮೃತ್ಯು ಪರಿಹಾರಕ್ಕಾಗಿ ಮಾಡಬೇಕಾದ ಯಮದೀಪದಾನದ ಕ್ರಮವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. 

6996 Views
Article - VNA154

ಮದುವೆಯ ಸಿದ್ಧತೆ — 2

 ಗಂಡು ಹೆಣ್ಣು ಮದುವೆಯಾಗಬೇಕಾದರೆ ಅವರ ದೇಹಸೌಂದರ್ಯದ ಪಾತ್ರ ಎಷ್ಟು ಎನ್ನುವದರ ಕುರಿತ ವಿವರಣೆ ಈ ಲೇಖನದಲ್ಲಿದೆ. ಹುಡುಗನನ್ನು ಆರಿಸುವ ಮುನ್ನ ಹುಡುಗಿಯರು ತಿಳಿಯಬೇಕಾದ ವಿಷಯದೊಂದಿಗೆ. 

2157 Views
Article - VNA153

ಮದುವೆಯ ಸಿದ್ಧತೆ — 1

ಶ್ರೀಮತೀ ಸ್ವಾತಿ ರಮೇಶ್ ಅವರು ಒಂದು ಪ್ರಶ್ನೆಯನ್ನು ಕೇಳಿದ್ದಾರೆ —  ಪೂಜ್ಯ ಆಚಾರ್ಯರಿಗೆ ನಮಸ್ಕಾರಗಳು. ನಮ್ಮ ಮಗಳಿಗೆ ಮದುವೆ ಮಾಡಬೇಕು ಎಂದು ಆಲೋಚಿಸುತ್ತಿದ್ದೇವೆ. ಆದರೆ ಇತ್ತೀಚಿನ ದಿವಸಗಳಲ್ಲಿ ಮದುವೆಯಾದ ಒಂದೆರಡು ವರ್ಷಗಳಲ್ಲಿಯೇ ಮದುವೆಗಳು ಮುರಿದು ಬೀಳುತ್ತಿರುವದು ನಮಗೆ ಆತಂಕ ಮೂಡಿಸಿದೆ. ಯಾವ ರೀತಿಯ ಕ್ರಮ ಅನುಸರಿಸಿದರೆ ನಮ್ಮ ಮಕ್ಕಳ ಜೀವನ ಸುಭದ್ರವಾಗುತ್ತದೆ ಮತ್ತು ಗಂಡು ನೋಡುವದರಿಂದ ಆರಂಭಿಸಿ ನಾವು ಅನುಸರಿಸಬೇಕಾದ ಕ್ರಮಗಳನ್ನು ದಯವಿಟ್ಟು ತಿಳಿಸಿ.  ಈ ಪ್ರಶ್ನೆಗೆ ಉತ್ತರವಾಗಿ ಈ ಮೊದಲನೆಯ ಲೇಖನ. 

2688 Views
Article - VNA151

ಅಶಕ್ತರ ಚಾತುರ್ಮಾಸ್ಯ

ಆರೋಗ್ಯದ ಸಮಸ್ಯೆ ಇರುವವರು, ಕೆಲಸದಲ್ಲಿ ಅಪಾರ ದೈಹಿಕ ಶ್ರಮ ಇರುವವರು, ಹತ್ತಾರು ದಿವಸಗಳ ಮನೆಯಿಂದ ಹೊರಗೆ ಇರಬೇಕಾದವರು ಯಾವ ರೀತಿ ಚಾತುರ್ಮಾಸ್ಯವನ್ನು ಆಚರಿಸಬಹುದು ಎನ್ನುವದರ ಕುರಿತ ವಿವರಣೆ ಈ ಲೇಖನದಲ್ಲಿದೆ. 

4919 Views
Article - VNA150

ದ್ವಿದಳವ್ರತ

ಆಶ್ವಯುಜ ಶುದ್ಧ ಏಕಾದಶಿಯಂದು ಮಾಡಬೇಕಾದ ಕ್ಷೀರವ್ರತದ ಸಮರ್ಪಣೆ ಮತ್ತು ದ್ವಿದಳವ್ರತದ ಸಂಕಲ್ಪದ ಕ್ರಮ ಮತ್ತು ಪಠಿಸಬೇಕಾದ ಶ್ಲೋಕಗ ಅರ್ಥವಿವರಣೆ ಈ ಲೇಖನದಲ್ಲಿದೆ. 

2293 Views
Article - VNA149

ಅಖಿಲಗುಣಸದ್ಧಾಮಾ ಶ್ರೀಮಧ್ವನಾಮಾ

ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರ ಭೂಮವ್ಯಕ್ತಿತ್ವವನ್ನು ಶಬ್ದಗಳಲ್ಲಿ ಹಿಡಿದಿಡಲು ಮಹಾದೇವತೆಗಳಿಗೂ ಸಾಧ್ಯವಿಲ್ಲ. ಆದರೂ, ನಮ್ಮ ಮನಸ್ಸಿನ ಕೊಳೆಯನ್ನು ಕಳೆಯಲು, ಮಾತಿನ ಶುದ್ಧಿಯನ್ನು ಗಳಿಸಲು, ಆ ಪರಮಾದ್ಭುತ ವ್ಕಕ್ತಿತ್ವದ ಗುಣಕೀರ್ತನೆಯನ್ನು ನಾವೆಲ್ಲರೂ ಮಾಡಬೇಕು. ಅಂತಹುದೊಂದು ಪ್ರಯತ್ನದಿಂದ ಮೂಡಿಬಂದದ್ದು ಈ ಲೇಖನ. 

3147 Views
Article - VNA148

ನಿರ್ಮಾಲ್ಯತೀರ್ಥ ಮತ್ತು ಗೋಪೀಚಂದನ

ನಿರ್ಮಾಲ್ಯತೀರ್ಥದಿಂದಲೇ ಗೋಪೀಚಂದನ ಹಚ್ಚಿಕೊಳ್ಳಬೇಕು ಎನ್ನುತ್ತಾರೆ, ಅಂದರೆ ನಿರ್ಮಾಲ್ಯವಿಸರ್ಜನೆಯವರೆಗಿನ ಎಲ್ಲ ಕರ್ಮಗಳನ್ನೂ ಗೋಪೀಚಂದನ ಇಲ್ಲದೇ ಮಾಡಬೇಕು, ಇದು ತಪ್ಪಲ್ಲವೇ? ಗೋಪೀಚಂದನವನ್ನು ಧರಿಸದೇ ಯಾವ ಸತ್ಕರ್ಮವನ್ನೂ ಮಾಡಬಾರದಲ್ಲವೇ. ಮತ್ತೂ ಹಿಂದಿನ ದಿವಸದ ನಿರ್ಮಾಲ್ಯದಿಂದ ಇಂದು ಗೋಪೀಚಂದನ ಹಚ್ಚಿಕೊಳ್ಳುವದು ಶಾಸ್ತ್ರಸಮ್ಮತವೇ ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಶ್ರೀಮದಾಚಾರ್ಯರು ಪಾಲಿಸುತ್ತಿದ್ದ ಸಂಪ್ರದಾಯದ ವಿವರಣೆಯೊಂದಿಗೆ. 

1662 Views
Article - VNA147

ಕುಮಾರೀ ಪೂಜಾವಿಧಾನ

ನವರಾತ್ರಿಯಲ್ಲಿ ಕುಮಾರಿಯರಲ್ಲಿ ದುರ್ಗೆಯನ್ನು ಚಿಂತಿಸಿ ಪೂಜಿಸಬೇಕು. ಪೂಜೆಯ ಹಿಂದಿನ ಉದ್ದೇಶ, ಪೂಜೆ ಮಾಡುವ ಕ್ರಮ, ಪೂಜೆಯಿಂದ ಪಡೆಯುವ ಫಲಗಳ ನಿರೂಪಣೆಯೊಂದಿಗೆ ಹಿಂದೆಂದಿಗಿಂತಲೂ ಇಂದಿಗೆ ಕುಮಾರೀಪೂಜೆ ಅತ್ಯಂತ ಆವಶ್ಯಕ ಎನ್ನುವದನ್ನು ಈ ಲೇಖನದಲ್ಲಿ ಪ್ರತಿಪಾದಿಸಲಾಗಿದೆ. ದುರ್ಗಾದೇವಿ ಎಂದರೆ ಲಕ್ಷ್ಮಿಯೋ, ಪಾರ್ವತಿಯೋ ಎಂಬ ಪ್ರಶ್ನೆಗೂ ಇಲ್ಲಿ ಉತ್ತರವಿದೆ. 

4923 Views
Article - VNA146

ನವರಾತ್ರಿ ಪೂಜಾವಿಧಿ

ನವರಾತ್ರಿವ್ರತದಲ್ಲಿ ಮಾಡಬೇಕಾದ ಘಟಸ್ಥಾಪನೆ, ದೀಪಸ್ಥಾಪನೆ, ಕುಮಾರೀಪೂಜೆಯ ವಿಧಿಗಳನ್ನು ವಿವರಿಸುವ ಲೇಖನ. 

4956 Views
Article - VNA145

ಮಧ್ಯಮಪಿಂಡದಿಂದ ಸತ್ಸಂತಾನ

ಶ್ರಾದ್ಧದಲ್ಲಿ ಮಧ್ಯಮಪಿಂಡವನ್ನು ಹೆಂಡತಿಗೆ ತಿನ್ನಲು ನೀಡುವದರಿಂದ ಮನೆಯಲ್ಲಿ ಸತ್ಸಂತಾನವುಂಟಾಗುತ್ತದೆ. ಅನೇಕ ಶ್ರದ್ಧಾಳುಗಳಿಗೆ ಅನುಭವದಿಂದ ಸಿದ್ದವಾಗಿರುವ ವಿಷಯವಿದು. ಮಧ್ಯಮಪಿಂಡವನ್ನೇ ಏಕೆ ನೀಡಬೇಕು, ಹೇಗೆ ನೀಡಬೇಕು ಮುಂತಾದ ಪ್ರಶ್ನೆಗಳಿಗೆ ಉತ್ತರ ನೀಡುವದರೊಂದಿಗೆ ಪಿಂಡವನ್ನು ತಿನ್ನುವದು ಎಷ್ಟು ಸರಿ ಎಂಬ ಆಧುನಿಕರ ಪ್ರಶ್ನೆಗೂ ಈ ಲೇಖನದಲ್ಲಿ ಉತ್ತರವಿದೆ. 

2447 Views
Article - VNA144

ಪಿತೃದೇವತೆಗಳು

ಪಿತೃಗಳು ಬೇರೆ ಪಿತೃದೇವತೆಗಳು ಬೇರೆ. ಪಿತೃದೇವತೆಗಳ ಲಕ್ಷಣ, ಅವರಲ್ಲಿ ಇರುವ ಪಿತೃಪತಿ, ಪಿತೃಗಣ, ಚಿರಪಿತೃ ಎನ್ನುವ ವಿಭಾಗಗಳು. ಶ್ರೀಮದಾಚಾರ್ಯರು ಪಿತೃಗಳ ಕುರಿತು ತಿಳಿಸಿರುವ ಅಪೂರ್ವವಾದ ಪ್ರಮೇಯ, ಇವೆಲ್ಲವನ್ನೂ ನಿರೂಪಿಸುವ ಲೇಖನ. 

2334 Views
Article - VNA143

ಧರ್ಮಪಿಂಡ ಮತ್ತು ಸನಾತನಧರ್ಮದ ಶ್ರೇಷ್ಠತೆ

ಅದು ಗೌರೀಹಬ್ಬವಾಗಿರಲಿ, ಸಂಕ್ರಾಂತಿಯಾಗಿರಲಿ, ಗ್ರಹಣದ ಆಚರಣೆಯಾಗಿರಲಿ, ಶ್ರಾದ್ಧವಾಗಿರಲಿ ಕಡೆಗೆ ಸಂಧ್ಯಾವಂದನೆಯಾಗಿರಲಿ, ಪ್ರತಿಯೊಂದರಲ್ಲಿಯೂ ಮಾನವೀಯತೆ, ಸೌಹಾರ್ದಭಾವನೆ, ಜಗತ್ತಿಗೆ ಒಳಿತನ್ನು ಬಯಸುವ ಅಂಶ ಇದ್ದೇ ಇರುತ್ತದೆ. ಕೇವಲ ಸ್ವಾರ್ಥಕ್ಕಾಗಿ ಧರ್ಮದ ಆಚರಣೆಯನ್ನು ನಮ್ಮ ವೇದ ಪುರಾಣಗಳು ವಿಧಿಸಿಯೇ ಇಲ್ಲ. ಪಿತೃಪಕ್ಷದ ಶ್ರಾದ್ಧದಲ್ಲಿಯೂ ಸಹ ಅದೆಂತಹ ಉದಾತ್ತವಾದ ಆಚರಣೆಯನ್ನು ನಮ್ಮ ಪ್ರಾಚೀನರು ನಮಗೆ ವಿಧಿಸಿದ್ದಾರೆ ಎನ್ನುವದನ್ನು ಈ ಲೇಖನ ವಿವರಿಸುತ್ತದೆ. 

2738 Views
Article - VNA141

ಅವಿಧವಾನವಮೀ ಶ್ರಾದ್ಧ

ಅವಿಧವಾನವಮಿಯಂದು ಒಂದೇ ಪಿಂಡವನ್ನಿಟ್ಟು ಶ್ರಾದ್ಧ ಮಾಡಬೇಕು ಮತ್ತು ಗಂಡ ಸತ್ತ ಬಳಿಕ ತಾಯಿಗೆ ಅವಿಧವಾನಮವೀಶ್ರಾದ್ಧವನ್ನು ಮಾಡಬಾರದು ಎಂದು ಅವಿಧವಾನವಮಿಯ ಕುರಿತು ಇರುವ ಎರಡು ವಿವಾದಗಳ ಕುರಿತ ಚರ್ಚೆ ಇಲ್ಲಿದೆ. ಅವಿಧವಾನವಮಿಯಂದು ಮೂರು ಪಿಂಡಗಳ ಶ್ರಾದ್ಧ ಮತ್ತು ಗಂಡ ಸತ್ತ ಬಳಿಕವೂ ತಾಯಿಗೆ ಅವಿಧವಾನವಮೀ ಶ್ರಾದ್ಧವನ್ನು ಮಾಡಬೇಕು ಎನ್ನುವದನ್ನು ಶಾಸ್ತ್ರವಚನಗಳ ಆಧಾರದ ಮೇಲೆ ಇಲ್ಲಿ ಪ್ರತಿಪಾದಿಸಲಾಗಿದೆ. ಹಾಗೆಯೇ ಅವಿಧವಾನವಮಿಯ ಶ್ರಾದ್ಧದ ವಿಶೇಷಗಳ ಕುರಿತೂ ಸಹ ಇಲ್ಲಿ ವಿವರಣೆಯಿದೆ. 

5538 Views
Article - VNA140

ಪಿಂಡವಿಸರ್ಜನೆಯ ಕ್ರಮಗಳು

ಪಿತೃಗಳಿಗೆ ಪಿಂಡಪ್ರದಾನವನ್ನು ಮಾಡುವದು ಎಷ್ಟು ಶ್ರೇಷ್ಠವೋ, ಅಷ್ಟೇ ಮುಖ್ಯವಾದದ್ದು ಆ ಪಿಂಡಗಳ ವಿಸರ್ಜನೆ. ಶಾಸ್ತ್ರ ತಿಳಿಸುವ ಐದು ಶ್ರೇಷ್ಠ ಕ್ರಮಗಳ ಕುರಿತ ವಿವರಣೆ ಈ ಲೇಖನದಲ್ಲಿದೆ. 

3049 Views
Article - VNA139

ದರ್ಭಬ್ರಾಹ್ಮಣರು

ದರ್ಭೆಗಳಲ್ಲಿಯೇ ಯಾಕಾಗಿ ಬ್ರಾಹ್ಮಣರನ್ನು ಚಿಂತಿಸಿ ಶ್ರಾದ್ಧವನ್ನು ಮಾಡಬೇಕು ಮತ್ತು, ಆ ದರ್ಭಬ್ರಾಹ್ಮಣರಿಗೆ ನೀಡಿದ ದಕ್ಷಿಣೆಯನ್ನು ಮತ್ತೆ ಬೇರೆಯವರಿಗೆ ನೀಡುವದು ಎಷ್ಟು ಸರಿಯಾಗುತ್ತದೆ ಎಂಬ ಪ್ರಶ್ನೆಗಳಿಗೆ ಉತ್ತರದೊಂದಿಗೆ ಆ ಸಂದರ್ಭಗಳಲ್ಲಿ ಇರಬೇಕಾದ ಅನುಸಂಧಾನಗಳ ಕುರಿತ ವಿವರಣೆ ಈ ಲೇಖನದಲ್ಲಿದೆ. 

2289 Views
Article - VNA138

ಶ್ರಾದ್ಧದಲ್ಲಿ ವಿಷ್ಣುಸ್ಮರಣೆ

ಶ್ರಾದ್ಧ ಮಾಡುವ ಸಂದರ್ಭದಲ್ಲಿ ನಿರಂತರವಾಗಿ ಯಾಕೆ ಭಗವಂತನನ್ನು ಸ್ಮರಿಸಬೇಕು ಎನ್ನುವದಕ್ಕೆ ಕಾರಣವನ್ನು, ಆ ಸ್ಮರಣೆಯ ಮಹತ್ತ್ವವನ್ನು ನಿರೂಪಿಸುವ ಲೇಖನ. 

2301 Views
Article - VNA137

ಮಹಾಲಯದಲ್ಲಿ ಕರ್ತವ್ಯ ಅಕರ್ತವ್ಯಗಳು

ಪಿತೃಪಕ್ಷದಲ್ಲಿ ತಂದೆ ಇಲ್ಲದವರು, ತಂದೆ ಇದ್ದು ತಾಯಿ ಇಲ್ಲದವರು, ತಂದೆ ತಾಯಿ ಇಬ್ಬರೂ ಜೀವಂತವಿರುವವರು ಹಾಗೂ ಹೆಣ್ಣುಮಕ್ಕಳು ಪಾಲಿಸಬೇಕಾದ ನಿಯಮಗಳನ್ನು ಕುರಿತು ತಿಳಿಸುವ ಲೇಖನ. 

5998 Views
Article - VNA136

ಮಹಾಲಯ ಶ್ರಾದ್ಧ ಮಾಡಲು ಶ್ರೇಷ್ಠ ಮತ್ತು ನಿಷಿದ್ಧ ದಿವಸಗಳು

ಪಿತೃಪಕ್ಷದಲ್ಲಿ ನಿತ್ಯವೂ ಶ್ರಾದ್ಧ ಮಾಡಬೇಕು. ಮಾಡಲು ಸಾಧ್ಯವಿಲ್ಲದಿದ್ದಾಗ ಒಂದು ದಿವಸವಂತೂ ಮಾಡಲೇಬೇಕು. ಆದರೆ, ನಮಗನುಕೂಲವಾದ ದಿವಸ ಎಂದು ನಿಷಿದ್ಧ ದಿವಸಗಳಲ್ಲಿಯೂ ಶ್ರಾದ್ಧ ಮಾಡಿದರೆ ಸಂತಾನಹಾನಿ ಧನನಷ್ಟಗಳುಂಟಾಗುತ್ತವೆ ಎಂದು ವಸಿಷ್ಠರು ತಿಳಿಸುತ್ತಾರೆ. ಒಂದೇ ಬಾರಿ ಶ್ರಾದ್ಧ ಮಾಡುವವರಿಗೆ ಯಾವ ದಿವಸಗಳು ನಿಷಿದ್ಧ ಮತ್ತು ಯಾವ ದಿವಸ ಶ್ರೇಷ್ಠ ಎಂದು ತಿಳಿಸುವ ಲೇಖನ. 

7015 Views
Article - VNA135

ರಾಮಾಯಣದ ಕಾಲ ನಿಷ್ಕರ್ಷೆ

ರಾಮಾಯಣ ನಡೆದದ್ದು 24ನೆಯ ಮಹಾಯುಗದಲ್ಲಿ ಎಂಬ ಬನ್ನಂಜೆಯ ದುರ್ವಾದವನ್ನು ಖಂಡಿಸಿ, 28ನೆಯ ಮಹಾಯುಗದಲ್ಲಿಯೇ ಶ್ರೀರಾಮ ಅವತರಿಸಿದ್ದು ಎಂಬ ಶ್ರೀ ಯಾದವಾರ್ಯರ ನಿರ್ಣಯವನ್ನು ಇಲ್ಲಿ ಸಮರ್ಥವಾಗಿ ಪ್ರತಿಪಾದಿಸಲಾಗಿದೆ. 

1865 Views
Article - VNA134

ಅನಂತನ ಅನಂತತೆ

ನಮ್ಮ ಅಂತರ್ಯಾಮಿಯಾಗಿ ನಮ್ಮ ಪುಟ್ಟ ಹೃದಯಮಂದಿರದಲ್ಲಿ ವಾಸ ಮಾಡಿಕೊಂಡಿರುವ ಆ ವಾಸುದೇವನ ಬಗೆಬಗೆಯ ಅನಂತತೆಯ ಚಿಂತನೆ ಇಲ್ಲಿದೆ. ನಮ್ಮನ್ನು ಆಶ್ಚರ್ಯದ ಕಡಲಿನಲ್ಲಿ ಮುಳುಗಿಸುವ ಅವನ ಆನಂತ್ಯ ಮತ್ತು ಕಾರುಣ್ಯಗಳ ಬಗ್ಗೆ ನಾವಿಲ್ಲಿ ತಿಳಿಯುತ್ತೇವೆ. 

4352 Views
Article - VNA132

ದಧಿವ್ರತದ ಸಮರ್ಪಣೆ ಮತ್ತು ಕ್ಷೀರವ್ರತದ ಸಂಕಲ್ಪ

ಭಾದ್ರಪದ ಶುದ್ಧ ಏಕಾದಶಿಯಂದು ಜಯಾಪತಿ ಸಂಕರ್ಷಣನಿಗೆ ಮಾಡಬೇಕಾದ ದಧಿವ್ರತದ ಸಮರ್ಪಣೆ ಮತ್ತು ಕೃತಿಪತಿ ಪ್ರದ್ಯುಮ್ನನ ಪ್ರೀತಿಗಾಗಿ ಮಾಡಬೇಕಾದ ಕ್ಷೀರವ್ರತದ ಸಂಕಲ್ಪದ ಮಂತ್ರಗಳ ಅರ್ಥವಿವರಣೆ ಹಾಗೂ ಮೊಸರಿನ ದಾನವನ್ನು ನೀಡುವ ಕ್ರಮವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ

2149 Views
Article - VNA131

ನಗುವರಲ್ಲೋ ರಂಗಯ್ಯ ನಿನ್ನಾಟವ ಕಂಡು

ಪರಮಾತ್ಮನಿಗೆ ನಾವು ಉದ್ಧಾರವಾಗುವದೇ ಅಪೇಕ್ಷೆ ಇದ್ದರೆ, ನಾವು ಭವಬಂಧನದಿಂದ ಮುಕ್ತರಾಗುವದೇ ಬೇಕಾಗಿದ್ದರೆ ಅವನ್ಯಾಕೆ ಈ ಮಾರ್ಗವನ್ನು ಇಷ್ಟು ಕಠಿಣ ಮಾಡಬೇಕಿತ್ತು. ಅಷ್ಟೇ ಅಲ್ಲ, ನಮ್ಮಿಂದ ತಪ್ಪು ಮಾಡಿಸುವವನೂ ಅವನೇ, ಪಶ್ಚಾತ್ತಾಪ ಮೂಡಿಸುವವನೂ ಅವನೇ, ಪ್ರಾಯಶ್ಚಿತ್ತ ಮಾಡಿಸುವವನೂ ಅವನೇ, ಪ್ರಾರ್ಥನೆ ಮಾಡಿಸುವವನೂ, ಆ ಪ್ರಾರ್ಥನೆಗೆ ಒಲಿದು ಉದ್ಧರಿಸುವವನೂ ಅವನೇ. ಯಾಕೀ ಸುತ್ತು ಬಳಸಿನ ದಾರಿಯನ್ನು ದೇವರು ಅನುಸರಿಸುತ್ತಾನೆ ಎಂಬ ಪ್ರಶ್ನೆಗೆ ಉತ್ತರ ಈ ಲೇಖನದಲ್ಲಿದೆ. 

2648 Views
Article - VNA129

ಗೌರೀಗಣಪತಿಯರ ವಿಸರ್ಜನೆ

ಇಂದಿನ ಕೆರೆಗಳೂ ಮಲಿನವಾಗಿವೆ. ಮಲಮೂತ್ರಗಳ ಕೊಂಪೆಯಾಗಿರುವ ಕೆರೆಗಳಲ್ಲಿ ಗೌರೀ ಗಣಪತಿಯರ ವಿಸರ್ಜನೆ ಅಪರಾಧವಾಗುತ್ತದೆ. ಪರಿಸರಕ್ಕೆ ತುಂಬ ಆಪ್ಯಾಯಮಾನವಾದ ಕ್ರಮದಲ್ಲಿ, ಶಾಸ್ತ್ರ ಒಪ್ಪುವ ರೀತಿಯಲ್ಲಿ ಮನೆಯಲ್ಲಿಯೇ ಗೌರೀ ಗಣಪತಿಯರನ್ನು ವಿಸರ್ಜಿಸುವ ಕ್ರಮವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. 

3084 Views
Article - VNA128

ಗೌರೀನಾಮಸ್ಮರಣೆ

ಪಾರ್ವತೀದೇವಿಯ ಇಪ್ಪತ್ತೆಂಟು ಹೆಸರುಗಳ ಅರ್ಥಾನುಸಂಧಾನ

1706 Views
Article - VNA127

ಗಣಪತಿಯ ಪ್ರತಿಮೆಗೆ ಸಿಂಧೂರ ಲೇಪಿಸುವ ಕ್ರಮ

ಕುಂಬಾರರು ನಿರ್ಮಾಣ ಮಾಡಿರುವ ಶುದ್ಧ ಜೇಡಿಮಣ್ಣಿನ ಗಣಪತಿಯ ಪ್ರತಿಮೆಯನ್ನು ತಂದು ಅದಕ್ಕೆ ಕುಂಕುಮ, ಸಿಂಧೂರಗಳನ್ನು ಲೇಪಿಸುವ ಕ್ರಮವನ್ನು ಚಿತ್ರಗಳ ಸಮೇತವಾಗಿ ಈ ಲೇಖನದಲ್ಲಿ ವಿವರಿಸಲಾಗಿದೆ. 

2621 Views
Article - VNA126

ಸ್ವರ್ಣಗೌರೀವ್ರತದ ಹಿನ್ನೆಲೆ

 ಸ್ವರ್ಣಗೌರೀ ವ್ರತವನ್ನು ಯಾಕಾಗಿ ಆಚರಿಸಬೇಕು, ತೃತೀಯಾದಂದೇ ಯಾಕೆ ಆಚರಿಸಬೇಕು, ಮಣ್ಣಿನ ಪ್ರತಿಮೆಯನ್ನೇ ಯಾಕೆ ಮಾಡಿಸಬೇಕು, ಹೇಗೆ ಮಾಡಿಸಬೇಕು, ಮನೆಗೆ ತರುವ ಕ್ರಮವೇನು ಎನ್ನುವದನ್ನು ವಿವರಿಸುವ ಲೇಖನ. ಈ ವಿಷಯದ ಕುರಿತ ವಿಡಿಯೋ ಉಪನ್ಯಾಸವನ್ನೂ YouTube ನಲ್ಲಿ ಪ್ರಕಟಿಸಲಾಗಿದೆ. 

2561 Views
Article - VNA125

ನಮ್ಮ ಸಂಸ್ಕೃತಿಯನ್ನು ಹಾಳು ಮಾಡುತ್ತಿರವವರು ಯಾರು?

ಗಣಪತಿಯ ಹಬ್ಬ ಬಂದಿದೆ. ಮಾಡಬೇಕಾದ್ದನ್ನು ತಿಳಿಯುವದಕ್ಕಿಂತ ಮುಂಚೆ ಮಾಡಬಾರದ್ದರ ಕುರಿತು ಎಚ್ಚರ ನೀಡಬೇಕು. ಈ ಲೇಖನ ಅದರ ಕುರಿತು. ನೀವೂ ಓದಿ. ಮಕ್ಕಳಿಗೂ ಓದಲು ನೀಡಿ. ನಿಮ್ಮವರಿಗೂ ತಲುಪಿಸಿ. ವಿಕೃತಿರಹಿತವಾದ ಗಣಪತಿ ಪೂಜೆ ನಡೆಯಲು ನೆರವಾಗಿ. 

2624 Views
Article - VNA120

ಗರ್ಭಸ್ತುತಿ

ಪರಮಾತ್ಮ ಅವತರಿಸಿದ ಜನ್ಮಾಷ್ಟಮಿಯ ಶುಭದಿನದಂದು ವಿಶ್ವನಂದಿನಿಯ ಬಾಂಧವರಿಗೆ ಪ್ರೀತಿಯ ಉಡುಗೊರೆ. ಶ್ರೀಕೃಷ್ಣ ಇನ್ನೇನು ಅವತಾರ ಮಾಡುತ್ತಾನೆ ಎನ್ನುವಾಗ ಬ್ರಹ್ಮರುದ್ರರು ಬಂದು ಗರ್ಭದಲ್ಲಿರುವ ಪರಮಾತ್ಮನನ್ನು ಸ್ತೋತ್ರ ಮಾಡುತ್ತಾರೆ. ಜನ್ಮಾಷ್ಟಮಿಯಂದು ಶ್ರೀಮದ್ ಭಾಗವತದ ಪಠಣ, ವಾಚನ, ಅರ್ಥಾನುಸಂಧಾನಗಳನ್ನು ಮಾಡುವದರಿಂದ ಕೋಟಿ ಜನ್ಮಗಳ ಪಾಪ ಪರಿಹಾರವಾಗುತ್ತದೆ ಎಂಬ ವೇದವ್ಯಾಸರ ಆದೇಶದಂತೆ ಈ ಪವಿತ್ರ ದಿವಸ ಭಾಗವತದ ಈ ಗರ್ಭಸ್ತುತಿಯ ಅರ್ಥಾನುಸಂಧಾನದ ಲೇಖನ. 

2739 Views
Article - VNA119

ಜನ್ಮಾಷ್ಟಮೀ ಆಚರಣೆಯ ಕ್ರಮ — 3/3

ಜನ್ಮಾಷ್ಟಮಿಯಂದು ಮಾಡಬೇಕಾದರಾತ್ರಿಪೂಜೆ, ಪರಿವಾರಪೂಜೆ, ಯಶೋದಾ, ದೇವಕಿಯರಲ್ಲಿ ಪ್ರಾರ್ಥನೆ,ಅರ್ಘ್ಯಪ್ರದಾನ,ಚಂದ್ರನಿಗೆ ಅರ್ಘ್ಯಪ್ರದಾನ,ಸಮರ್ಪಣೆ ಹಾಗೂ ಮಾರನೆಯ ದಿವಸ ಆಚರಿಸಬೇಕಾದ ಪಾರಣೆ, ಮತ್ತು ವ್ರತಸಮರ್ಪಣೆಗಳ ಕುರಿತ ವಿವರ ಈ ಲೇಖನದಲ್ಲಿದೆ.

4580 Views
Article - VNA118

ಜನ್ಮಾಷ್ಟಮೀ ಆಚರಣೆಯ ಕ್ರಮ — 2/3

ಶ್ರೀಕೃಷ್ಣಾಷ್ಟಮೀ, ಶ್ರೀಕೃಷ್ಣಜಯಂತೀ ವ್ರತಗಳ ಸಿದ್ಧತೆ, ಸ್ನಾನಮಂತ್ರ, ಸಂಕಲ್ಪದ ಮಂತ್ರಗಳು, ಅವುಗಳ ಅರ್ಥದ ವಿವರಣೆ ಈ ಲೇಖನದಲ್ಲಿದೆ. ರಜಸ್ವಲೆಯರು, ವೃದ್ಧಿ, ಅಶೌಚ ಇರುವವರು ಏನು ಮಾಡಬೇಕು ಎನ್ನುವ ಪ್ರಶ್ನೆಗೆ ಉತ್ತರವೂ ಈ ಲೇಖನದಲ್ಲಿದೆ. 

4920 Views
Article - VNA117

ಜನ್ಮಾಷ್ಟಮೀ ಆಚರಣೆಯ ಕ್ರಮ — 1/3

ಶ್ರೀ ಕೃಷ್ಣಾಷ್ಟಮೀ ಮತ್ತು ಶ್ರೀ ಕೃಷ್ಣಜಯಂತೀಗಳ ವ್ಯತ್ಯಾಸ, ಮಹತ್ತ್ರ, ಕೃಷ್ಣನ ಜನ್ಮದಿಂದೇ ಯಾಕೆ ಉಪವಾಸ ಮಾಡಬೇಕು, ಉಳಿದ ಅವತಾರಗಳಲ್ಲಿ ಯಾಕೆ ಮಾಡಬಾರದು, ಬುದ್ಧಜಯಂತಿಯಂದು ಯಾಕೆ ಉಪವಾಸ ಆಚರಿಸಬಾರದು ಎಂಬೆಲ್ಲ ವಿಷಯಗಳನ್ನು ನಿರೂಪಿಸುವ ಲೇಖನ. 

4469 Views
Article - VNA115

ನಕ್ಷತ್ರಮಾಲಿಕೆ ಎಂದರೇನು?

 ನಕ್ಷತ್ರಮಾಲಿಕಾಸ್ತೋತ್ರ ಎಂದು ಸಂಸ್ಕೃತ ಮತ್ತು ಕನ್ನಡ ಸಾಹಿತ್ಯದಲ್ಲಿ ಬಳಕೆಯಿರುವ ಒಂದು ಸ್ತೋತ್ರದ ಪದ್ಧತಿ. ಅದರ ಕುರಿತ ವಿವರಣೆ ಈ ಲೇಖನದಲ್ಲಿದೆ. 

1220 Views
Article - VNA114

ರಾಯರೆಂಬ ಮಹಾಪ್ರಕಾಶ

ಶ್ರೀ ರಾಯರ ಹೃದಯದಿಂದ ಹೊರಹೊಮ್ಮಿದ ತೇಜಸ್ಸು ಜಗತ್ತಿನ ಸಮಸ್ತ ತೇಜೋರಾಶಿಗಳನ್ನೂ ಮೀರಿಸುತ್ತದೆ ಎಂದು ಶ್ರೀ ವಾದೀಂದ್ರತೀರ್ಥರು ತಿಳಿಸುತ್ತಾರೆ. ರಾಯರಿಗೆ ಸೂರ್ಯ ಚಂದ್ರರಿಗಿಂತಲೂ ಮಿಗಿಲಾದ ತೇಜಸ್ಸು ಹೇಗೆ ಬರಲು ಸಾಧ್ಯ ಎಂಬ ಪ್ರಶ್ನೆಗೆ ಉತ್ತರ ಪಡೆಯುತ್ತ ವಾದೀಂದ್ರತೀರ್ಥರು ತಿಳಿಸಿದ ಶ್ರೀ ರಾಘವೇಂದ್ರಗುರುಸಾರ್ವಭೌಮರ ಮಹಾಮಾಹಾತ್ಮ್ಯದ ಚಿಂತನೆ ಈ ಲೇಖನದಲ್ಲಿದೆ. 

1759 Views
Article - VNA113

ಮನೆಯಲ್ಲಿಯೇ ರಾಯರ ಆರಾಧನೆ ಮಾಡುವ ಕ್ರಮ

ಕಾರಣಾಂತರಗಳಿಂದ ಮಠಗಳಿಗೆ ಹೋಗದವರು, ಹೋಗಲಿಕ್ಕೆ ಸಾಧ್ಯವಾಗದವರು ತಮ್ಮತಮ್ಮ ಮನೆಯಲ್ಲಿಯೇ ರಾಯರನ್ನು ಆರಾಧಿಸಿ ಅವರ ಅನುಗ್ರಹವನ್ನು ಪಡೆಯುವ ಕುರಿತ ವಿವರಣೆ ಈ ಲೇಖನದಲ್ಲಿ. 

4659 Views
Article - VNA111

ಮೂರು ಇಂದ್ರಪದವಿಗಳು

ಪಾಂಡವರು ಹಾಗೂ ಕೃಷ್ಣ ಒಂದೊಂದು ಮನ್ವಂತರದಲ್ಲಿ ಒಬ್ಬೊಬ್ಬರು ಇಂದ್ರಪದವಿಯಲ್ಲಿದ್ದರು. ಅವರಲ್ಲಿ ಪುರಂದರನು (ಅರ್ಜುನ) ಮಾತ್ರ ಎರಡನೆ ಬಾರಿ ಇಂದ್ರಪದವಿಯನ್ನು ಆಳುತ್ತಿರುವದು. ಇಂದ್ರನ ಕಕ್ಷೆ ಎಂಟನೆಯದು. ಭೀಮ ಕೃಷ್ಣರ ಪ್ರಶ್ನೆ ಏಳುವದಿಲ್ಲ. ಆದರೆ, ಧರ್ಮರಾಜ ಹಾಗೂ ನಕುಲ ಸಹದೇವರು ಹನ್ನೆರಡನೆ ಮತ್ತು ಹದಿನೆಂಟನೆ ಕಕ್ಷೆಯಲ್ಲಿ ಇರುವವರು. ಹೀಗಾಗಿ ಇಂದ್ರಪದವಿಯನ್ನು ಹೇಗೆ ಆಳಿದರು? ತಾರತಮ್ಯಕ್ಕೆ ಚ್ಯುತಿ ಬಂದಂತಾಗಲಿಲ್ಲವೇ? ಎಂಬ ಪ್ರಶ್ನೆಗೆ ಈ ಲೇಖನದಲ್ಲಿ ವಿಸ್ತೃತವಾದ ಉತ್ತರವಿದೆ. 

1403 Views
Article - VNA110

ದಧಿವ್ರತ

ಏಕಾದಶಿಯಂದು ಮಾಡಬೇಕಾದ ಶಾಕವ್ರತದ ಸಮರ್ಪಣೆ, ಉಪಾಯನದಾನ, ಧಧಿವ್ರತದ ಸಂಕಲ್ಪ, ಯಾವ ಮಜ್ಜಿಗೆ ವ್ರತಕ್ಕೆ ಬರುತ್ತದೆ ಯಾವುದು ಬರುವದಿಲ್ಲ ಎನ್ನುವ ವಿಷಯಗಳ ಕುರಿತ ಲೇಖನ. 

4735 Views
Article - VNA109

ಜಗದಂಬಿಕೆಗೊಂದು ನುಡಿ ನಮನ

ಮಹಾಲಕ್ಷ್ಮೀದೇವಿ ನಮ್ಮ ಮೇಲೆ ಮಾಡಿರುವ ಮಾಡುತ್ತಿರುವ ಅನಂತ ಅನುಗ್ರಹದ ಸ್ಮರಣೆಯೊಂದಿಗೆ ಅವಳನ್ನು ಪ್ರಾರ್ಥಿಸುವ ಎರಡು ಪದ್ಯಗಳ ಅರ್ಥಾನುಸಂಧಾನ ಈ ಲೇಖನದಲ್ಲಿದೆ. 

2207 Views
Article - VNA108

ಶ್ರೀ ಶ್ರೀಶಗುಣದರ್ಪಣಮ್

ವೇದಗಳನ್ನು ಸ್ತ್ರೀಯರು ಪಠಿಸಬಾರದು. ಆದರೆ ವೇದಗಳಲ್ಲಿ ಬಂದಿರುವ ಜ್ಞಾನ, ಪ್ರಾರ್ಥನೆಗಳಿಂದ ಅವರು ದೂರವಾಗಬಾರದು ಎನ್ನುವ ಕಾರಣಕ್ಕೆ ಶ್ರೀ ವಾದಿರಾಜಗುರುಸಾರ್ವಭೌಮರು ವೇದೋಕ್ತವಾದ ಮಹಾಲಕ್ಷ್ಮಿಯ ಮಾಹಾತ್ಮ್ಯವನ್ನು ಶ್ರೀಶಗುಣದರ್ಪಣ ಎಂಬ ಅದ್ಭುತ ಸಿದ್ಧ ಸ್ತೋತ್ರವನ್ನು ರಚಿಸಿ ನೀಡಿದ್ದಾರೆ. ಮಹಾಲಕ್ಷ್ಮೀದೇವಿಯಿಂದ ನಾವು ಪಡೆಯಬೇಕಾಗಿರುವ ಸರ್ವಶ್ರೇಷ್ಠ ಅನುಗ್ರಹದ ಪ್ರಾಪ್ತಿಗಾಗಿ ನಾವು ಮಾಡಬೇಕಾದ ಮಹತ್ತ್ವದ ಉಪಾಸನೆಯ ವಿವರಣೆ ಈ ಲೇಖನದಲ್ಲಿದೆ. 

1977 Views
Article - VNA107

ದೈವೀ ಸಂಪತ್ತು ಮತ್ತು ಆಸುರೀ ಸಂಪತ್ತು

ಮಹಾಲಕ್ಷ್ಮೀದೇವಿ ಅನುಗ್ರಹಿಸುವ ಸಂಪತ್ತಿಗೂ ಅಲಕ್ಷ್ಮಿ ನೀಡುವ ಸಂಪತ್ತಿಗೂ ಇರುವ ವ್ಯತ್ಯಾಸಗಳು ಹಾಗೂ ಮಹಾಲಕ್ಷ್ಮೀದೇವಿಯ ಬಳಿ ಯಾವ ಸಂಪತ್ತನ್ನು ಬೇಡಬೇಕು ಎಂದು ವಿವರಿಸುವ ಲೇಖನ. 

1699 Views
Article - VNA106

ಆದಿದಂಪತಿಗಳ ಆದರ್ಶ ದಾಂಪತ್ಯ

ಸತ್ಯಭಾಮಾದೇವಿ ಒಮ್ಮೆ ಹುಸಿಮುನಿಸು ತೋರಿದಾಗ ಪರಮಾತ್ಮ ನಡೆದುಕೊಂಡ ರೀತಿ, ಪರಮಾತ್ಮ ಪಾರಿಜಾತವನ್ನು ತಂದ ಕಥೆಯ ಚಿತ್ರಣದೊಂದಿಗೆ ಗೃಹಸ್ಥರು ಅಳವಡಿಸಿಕೊಳ್ಳಬೇಕಾದ ಗುಣಗಳ ಕುರಿತ ಚಿಂತನೆ ಈ ಲೇಖನದಲ್ಲಿದೆ. 

2140 Views
Article - VNA103

ಕಲ್ಲಿನ ನಾಗರ ಮತ್ತು ನಿಜವಾದ ನಾಗರ

“ಕಲ್ಲಿನ ನಾಗರಕ್ಕೆ ಪೂಜೆ ಮಾಡುತ್ತೀರಿ, ನಿಜವಾದ ಹಾವು ಕಂಡರೆ ಹೊಡೆದು ಸಾಯಿಸುತ್ತೀರಿ” ಎಂಬ ಆಕ್ಷೇಪಕ್ಕೆ ಉತ್ತರ ಈ ಲೇಖನದಲ್ಲಿದೆ. 

1711 Views
Article - VNA102

ನಾಗರಪಂಚಮೀ

ನಾಗರಚೌತಿ ಮತ್ತು ನಾಗರಪಂಚಮಿಗಳನ್ನು ಆಚರಿಸುವ ಕ್ರಮ, ಹಾಲೆರೆಯಬೇಕಾದರೆ ಹೇಳಬೇಕಾದ ಶ್ಲೋಕ ಮತ್ತು ಅದರ ಅರ್ಥಾನುಸಂಧಾನ, ಶೇಷದೇವರು, ಸುಬ್ರಹ್ಮಣ್ಯ ಮತ್ತು ವಾಸುಕಿ ಇವರಲ್ಲಿರುವ ವ್ಯತ್ಯಾಸ ಮುಂತಾದ ವಿಷಯಗಳ ನಿರೂಪಣೆಯಿರುವ ಲೇಖನ. 

6838 Views
Article - VNA101

ಶಾಕವ್ರತ

ಶಾಕವ್ರತದಲ್ಲಿ ನಿಷಿದ್ಧ ಪದಾರ್ಥಗಳು ಯಾವುವು, ಯಾವನ್ನು ಸ್ವೀಕರಿಸಬಾರದು, ಯಾವನ್ನು ಸ್ವೀಕರಿಸಬೇಕು ಮತ್ತು ಅಡಿಗೆಯ ಪದ್ಧತಿಯೇನು ಎಂದು ತಿಳಿಸುವ ಲೇಖನ. 

5913 Views
Article - VNA100

ನಾನೇ ದೇವರೆಂಬ ಜ್ಞಾನ ಅನರ್ಥಕಾರಿ

ನಾನೇ ದೇವರು ಎಂದು ತಿಳಿಯುವದರಿಂದ ಉಂಟಾಗುವ ಅನರ್ಥಗಳ ಕುರಿತು ಭಗವದ್ಗೀತೆ ಭಾಗವತ ಹರಿವಂಶಗಳಲ್ಲಿ ಬಂದಿರುವ ವಿಷಯದ ನಿರೂಪಣೆ ಈ ಲೇಖನದಲ್ಲಿದೆ. 

1355 Views
Article - VNA099

ಮಡಿಮೈಲಿಗೆ — 3

ಪಾಪವನ್ನು ಮಾಡಿದವರು ಮಡಿಯಲ್ಲ, ಆದರೆ ಪಾಪ ಮಾಡಿದವರು ಅದರ ಪರಿಹಾರಕ್ಕಾಗಿ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು, ಆ ಪ್ರಾಯಶ್ಚಿತ್ತಗಳಲ್ಲಿ ಮಂತ್ರಗಳ ಪಠಣೆಯೂ ಇದೆ. ಪಾಪ ಮಾಡಿದವರು ಮಡಿಯೇ ಆಗುವದಿಲ್ಲ ಎಂದಾದರೆ ಪ್ರಾಯಶ್ಚಿತ್ತ ಹೇಗೆ ಮಾಡಿಕೊಳ್ಳುವದು ಎಂಬ ಪ್ರಶ್ನೆಗ ಉತ್ತರ ಮತ್ತು ಮಡಿಯನ್ನು ಗಳಿಸುವ ಪ್ರಕ್ರಿಯೆಗಳ ಕುರಿತ ವಿವರಣೆ ಈ ಲೇಖನದಲ್ಲಿದೆ. 

1596 Views
Article - VNA098

ಮಡಿಮೈಲಿಗೆ — 2

ಮೈಲಿಗೆಯ ಕುರಿತು ತಿಳಿದೆವು. ಈಗ ಮಡಿಯ ಸರದಿ. ಮಡಿಯಾಗಲು ಯಾವ ರೀತಿ ಸ್ನಾನ ಮಾಡಬೇಕು. ಯಾವ ಬಟ್ಟೆಗಳು ಮಡಿಗೆ ಬರುತ್ತವೆ, ಯಾವುದು ಬರುವದಿಲ್ಲ ಎನ್ನುವದರ ಕುರಿತ ವಿವರಣೆ ಇಲ್ಲಿದೆ. 

3210 Views
Article - VNA097

ಮಡಿಮೈಲಿಗೆ — 1

ಮಡಿ ಎನ್ನವದನ್ನು ಆಚಾರ್ಯರು ಯಾವ ಶಬ್ದದಿಂದ ಕರೆದಿದ್ದಾರೆ, ಮೈಲಿಗೆಗಳಲ್ಲಿ ಎಷ್ಟು ವಿಧ, ಯಾವ ರೀತಿ ಪರಿಹಾರವಾಗುತ್ತವೆ ಮುಂತಾದ ವಿಷಯಗಳ ನಿರೂಪಣೆಯಿರುವ ಲೇಖನ, ಶ್ರೀ ವಿದ್ಯಾಧಿರಾಜಗುರುಸಾರ್ವಭೌಮರು ಒಳಗಿನ-ಹೊರಗಿನ ಮಡಿಯ ಕುರಿತು ತಿಳಿಸಿರುವ ಮಾತುಗಳ ಅನುಸಂಧಾನದೊಂದಿಗೆ.

3484 Views
Article - VNA095

ಚಾತುರ್ಮಾಸ್ಯ ಮತ್ತು ಶಾಕವ್ರತದ ಸಂಕಲ್ಪ

ಚಾತುರ್ಮಾಸ್ಯ ವ್ರತಾಚರಣೆ ಮಾಡುವವರೆ ಆಷಾಢ ಶುದ್ಧ ಏಕಾದಶಿಯಂದು ಮಾಡಬೇಕಾದ ಚಾತುರ್ಮಾಸ್ಯದ ಸಂಕಲ್ಪದ ಕ್ರಮ ಮತ್ತು ವಿವರಣೆ ಇಲ್ಲಿದೆ. ಶೂದ್ರರು ಯಾವ ರೀತಿ ಸಂಕಲ್ಪ ಮಾಡಬೇಕು ಎಂಬ ವಿವರಣೆಯೊಂದಿಗೆ. 

5692 Views
Article - VNA094

ಚಾತುರ್ಮಾಸ್ಯದ ಮಾಹಾತ್ಮ್ಯ

ಚಾತುರ್ಮಾಸ್ಯ ವ್ರತ ಎನ್ನುವದು ಪರಮಾತ್ಮನ ಕಾರುಣ್ಯದ ಅದ್ಭುತವಾದ ಕುರುಹು. ಭವಸಾಗರದಿಂದ ನಮ್ಮನ್ನು ಉದ್ಧರಿಸುವ ಈ ಶ್ರೇಷ್ಠ ವ್ರತದ ಕುರಿತು ಸ್ವಯಂ ಪರಮಾತ್ಮನೇ ತಿಳಿಸಿ ಹೇಳಿರುವ ಮಾತುಗಳ ಅನುಸಂಧಾನ ಈ ಲೇಖನದಲ್ಲಿ. 

2887 Views
Article - VNA093

ಮೂರು ಮಹಾವ್ರತಗಳು

ಸಜ್ಜನನಾದವನು ಮಾಡಲೇಬೇಕಾದ ವ್ರತಗಳು ಕೃಷ್ಣಾಷ್ಟಮೀ. ಏಕಾದಶೀ, ಚಾತುರ್ಮಾಸ್ಯ. ನಾವು ನಿಮ್ಮ ಜೀವನದಲ್ಲಿ ಯಾವ ವ್ರತವನ್ನು ಬಿಟ್ಟರೂ ಇವನ್ನು ಮಾತ್ರ ಸರ್ವಥಾ ಬಿಡತಕ್ಕದ್ದಲ್ಲ. ನಮ್ಮಲ್ಲಿನ ಭಕ್ತಿ, ಜ್ಞಾನ, ವೈರಾಗ್ಯಗಳನ್ನು ಅಭಿವ್ಯಕ್ತಿಗೊಳಿಸುವ, ನಮ್ಮ ಸಾಧನಮಾರ್ಗದ ಉಪದ್ರವಗಳನ್ನು ವಿನಾಶ ಮಾಡುವ, ನಮ್ಮನ್ನು ಸಂಸಾರಸಾಗರದಿಂದ ಉದ್ಧರಿಸುವ ಗುರುಗಳ ಬಳಿ ನಮ್ಮನ್ನು ಕರೆದುಕೊಂಡು ಹೊಗುವ ಈ ಶ್ರೇಷ್ಠವ್ರತಗಳ ಮಾಹಾತ್ಮ್ಯದ ಚಿಂತನೆ ಈ ಲೇಖನದಲ್ಲಿದೆ. 

2690 Views
Article - VNA092

ಅಂಧೊsಹಂ ಕರುಣಾಸಿಂಧೋ

 ಶ್ರೀ ವಾದಿರಾಜರು ನಮ್ಮ ಮೇಲೆ ಅನುಗ್ರಹ ಮಾಡಿ ರಚನೆ ಮಾಡಿ ನೀಡಿದ ಶ್ಲೋಕವೊಂದಿದೆ. ಆ ಶ್ಲೋಕ ಸಮಸ್ಯೆಗಳ ಕಾಡಿನಲ್ಲಿ ಕಳೆದುಹೋದ ನಮಗೆ ಮಾರ್ಗದರ್ಶಕ. ಕಷ್ಟಗಳ ಹೊಡೆತದಲ್ಲಿ ಸಿಲುಕಿ ಮೃತಪ್ರಾಯರಾದವರಿಗೆ ಸಂಜೀವನಿ. ಆ ದಿವ್ಯ ಪ್ರಾರ್ಥನೆ ನೋವಿನ ಸುಳಿಯಲ್ಲಿ ಮುಳುಗುತ್ತಿರುವವರಿಗೆ ದೊರೆಯುವ ಬಲಿಷ್ಠವಾದ ಆಸರೆ. ಪ್ರತಿಯೊಬ್ಬ ಮನುಷ್ಯ ತನ್ನ ಜೀವನದಲ್ಲಿ ಪ್ರತೀನಿತ್ಯ ಪಠಿಸಬೇಕಾದ ದಿವ್ಯಮಂತ್ರ ಆ ಶ್ಲೋಕ. 

2124 Views
Article - VNA091

ಸುಖಪ್ರಸವಕ್ಕಾಗಿ ಪ್ರಾರ್ಥನಾಮಂತ್ರ

ಗರ್ಭದಲ್ಲಿರುವ ಮಗು ಮತ್ತು ಗರ್ಭಿಣಿಯ ರಕ್ಷಣೆಗಾಗಿ, ಹಾಗೂ ಸುಖಪ್ರಸವಕ್ಕಾಗಿ ಪಠಿಸಬೇಕಾದ ಶ್ಲೋಕ.

3065 Views
Article - VNA090

ಶ್ರೀಹರಿಭಕ್ತಿಸಾರ — 45

ವಾಲ್ಮೀಕಿ, ಕುಚೇಲ, ಧ್ರುವ, ವಿಭೀಷಣ ಇವರೆಲ್ಲರೂ ಭಗವದ್ಭಕ್ತರ ಮುಖಾಂತರ ಭಗವಂತನ ಸಂಪರ್ಕಕ್ಕೆ ಬಂದು ಅವನನ್ನು ಭಜಿಸಿ ಅವನ ಅನುಗ್ರಹವನ್ನು ಪಡೆದವರು. ಆದರೆ, ತನ್ನನ್ನು ಮರೆತು, ಹರಿದಾಸರಿಂದ ದೂರವಾಗಿ ಬದುಕುವ ಯೋಗ್ಯಜೀವರನ್ನೂ ಭಗವಂತ ಕಡೆಗಣಿಸುವದಿಲ್ಲ, ತಾನೇ ಮುಂದಾಗಿ ಬಂದು ಅವರನ್ನು ರಕ್ಷಿಸುತ್ತಾನೆ, ಅವರನ್ನು ಸನ್ಮಾರ್ಗದಲ್ಲಿ ನಡೆಸುತ್ತಾನೆ ಎಂಬ ತತ್ವವನ್ನು ಅಜಾಮಿಳನ ವೃತ್ತಾಂತದ ಮುಖಾಂತರ ಶ್ರೀ ಕನಕದಾಸರಿಲ್ಲಿ ಚಿಂತಿಸಿದ್ದಾರೆ. 

1159 Views
Article - VNA089

ಶ್ರೀಹರಿಭಕ್ತಿಸಾರ — 44ನೆಯ ಪದ್ಯ

ಜಗತ್ತಿನ ಎಲ್ಲ ಭಕ್ತರಿಗೆ, ಸಾರ್ವಭೌಮರಿಗೆ, ಋಷಿಗಳಿಗೆ, ದೇವತೆಗಳಿಗೆ ಮಾಡಿದ ಅನುಗ್ರಹ-ಕ್ಕಿಂತಲೂ ಹೆಚ್ಚಾಗಿ ಪರಮಾತ್ಮ ಮುಖ್ಯಪ್ರಾಣನ ಮೇಲೆ ಮಾಡುತ್ತಾನೆ ಎಂಬ ತತ್ವವನ್ನು ಮತ್ತು ಪರಮಾತ್ಮನ ಹಾಗೆ ಮತ್ತೊಬ್ಬರಿಗೆ ಅನುಗ್ರಹ ಮಾಡಲು ಸಾಧ್ಯವೇ ಇಲ್ಲ ಎಂಬ ಶ್ರೇಷ್ಠ ತತ್ವವನ್ನು ಹನುಮಂತನಿಗೆ ಶ್ರೀರಾಮಚಂದ್ರದೇವರು ಬ್ರಹ್ಮಪದವಿಯನ್ನು ಅನುಗ್ರಹಿಸಿದ ಪ್ರಸಂಗದ ಮೂಲಕ ಈ ಪದ್ಯದಲ್ಲಿ ಚಿಂತಿಸುತ್ತಾರೆ.

547 Views
Article - VNA088

ಶ್ರೀಹರಿಭಕ್ತಿಸಾರ — 43ನೆಯ ಪದ್ಯ

ಒಬ್ಬ ವ್ಯಕ್ತಿ ತೊಂದರೆ ಮಾಡಿದರೆ ಅವನ ಇಡಿಯ ಕುಲವನ್ನು ದ್ವೇಷಿಸುವ ಮನುಷ್ಯರೆಲ್ಲಿ, ತನ್ನ ಹೆಂಡತಿಯನ್ನು ಅಪಹಾರ ಮಾಡಿದವನ ತಮ್ಮ ಬಂದು ಆಶ್ರಯ ಕೇಳಿದರೆ ನೀಡಿದ ನಮ್ಮ ಸ್ವಾಮಿಯೆಲ್ಲಿ ಎಂದು ಅದ್ಭುತವಾದ ಕ್ರಮದಲ್ಲಿ ಶ್ರೀ ಕನಕದಾಸಾರ್ಯರು “ಮತಿಗೆಟ್ಟ ಮಾನವರ” ಮಾತಿಗೆ ಉತ್ತರ ನೀಡುತ್ತಾರೆ. ಆ ಪದ್ಯದ ವಿವರಣೆ ಇಲ್ಲಿದೆ. 

436 Views
Article - VNA087

ಶ್ರೀಹರಿಭಕ್ತಿಸಾರ — 42ನೆಯ ಪದ್ಯ

ಕೇವಲ ಭಕ್ತರಿಗೆ ಸರ್ವಾಭೀಷ್ಟಗಳನ್ನು ನೀಡುವದಷ್ಟೇ ಅಲ್ಲ, ಪರಮಾತ್ಮ ಭಕ್ತರು ದುರ್ಮಾರ್ಗದಲ್ಲಿದ್ದಾಗ ಹಿರಿಯ ಜನರ ಮುಖಾಂತರ ಅವನನ್ನು ಉದ್ಬೋಧಿಸಿ ಸನ್ಮಾರ್ಗಕ್ಕೆ ತರುತ್ತಾನೆ, ಅವನ ಪಾಪಗಳೆಲ್ಲವನ್ನೂ ಪರಿಹರಿ-ಸುತ್ತಾನೆ ಎಂಬ ಮಾತನ್ನು ವಾಲ್ಮೀಕಿಯ ಉದ್ಧಾರದ ಪ್ರಸಂಗದಿಂದ ದಾಸರು ಚಿಂತಿಸುತ್ತಾರೆ

363 Views
Article - VNA086

ಶ್ರೀ ಜಯತೀರ್ಥಗುರುಂ ಭಜೇ

ಶ್ರೀಮಚ್ಚಂದ್ರಿಕಾಚಾರ್ಯರು, ಶ್ರೀವಾದಿರಾಜರು, ಶ್ರೀ ವಿಜಯದಾಸರು, ಶ್ರೀ ಆನೆಪ್ಪಾಚಾರ್ಯರು ಮುಂತಾದ ಮಹಾನುಭಾವರು ಶ್ರೀಮಟ್ಟೀಕಾಕೃತ್ಪಾದರನ್ನು ಕೊಂಡಾಡಿರುವ ಕೆಲವು ಶ್ಲೋಕಗಳ ಅರ್ಥಾನುಸಂಧಾನದೊಂದಿಗೆ ಟೀಕಾಕೃತ್ಪಾದರಿಗೆ ನುಡಿನಮನ.

2152 Views
Article - VNA085

ಗುರುವಂದನೆ

ನಮಗೆ ಜ್ಞಾನವನ್ನು ಕರುಣಿಸಿ, ಸಾಧನೆ ಮಾಡುವ ಪರಿಯನ್ನು ತೋರಿ, ನಮ್ಮನ್ನು ಅನುಗ್ರಹಿಸಲೆಂದೇ ಭೂಮಿಯಲ್ಲಿ ಅವತರಿಸಿ ಬಂದ ಶ್ರೀ ವೇದವ್ಯಾಸದೇವರು, ಶ್ರೀಮದಾಚಾರ್ಯರಿಂದಾರಂಭಿಸಿ ಸಮಸ್ತಗುರುಗಳನ್ನು ನೆನೆದು ನಮಸ್ಕರಿಸಲು ಸಹಾಯಕವಾದ ಲೇಖನ. 

3566 Views
Article - VNA084

ಮಾಧ್ವಸಾಹಿತ್ಯಕ್ಕೆ ಬನ್ನಂಜೆ ಗೋವಿಂದಾಚಾರ್ಯರಿಂದ ಸಂದ ಕೊಡುಗೆಗಳು ಆದ ಅಪಚಾರಗಳು

ಬನ್ನಂಜೆಯ ಸಂಶೋಧನೆಗಳ ಸರಿತಪ್ಪುಗಳ ವಿಮರ್ಶೆಯ ಪುಸ್ತಕ

4056 Views
Article - VNA083

ಶ್ರೀಹರಿಭಕ್ತಿಸಾರ — 41

ಪರಮಾತ್ಮನೇ ಕರ್ಮಗಳಿಗೆ ಫಲನೀಡುವ ಸ್ವತಂತ್ರ ಎಂದು ಚಿಂತನೆ ಮಾಡಿದ ಶ್ರೀ ಕನಕದಾಸಾರ್ಯರು ‘ಶ್ರೀಹರಿ ನಮ್ಮ ಯೋಗ್ಯತಾನುಸಾರವಾಗಿ ಫಲ ನೀಡುತ್ತಾನೆ ಆದ್ದರಿಂದ, ಅದೇನು ಅವನ ಹೆಚ್ಚುಗಾರಿಕೆಯಲ್ಲ’ ಎಂಬ ಕುಯುಕ್ತಿಯನ್ನು ತುಂಬ ಸುಂದರವಾಗಿ ಈ ಪದ್ಯದಲ್ಲಿ ಖಂಡಿಸುತ್ತಾರೆ. ಕನಕದಾಸರ ಚಾವಟಿಯೇಟಿನಂತಹ ಮಾತು ಹೇಗಿರುತ್ತದೆ ಎನ್ನುವದನ್ನು ಇಲ್ಲಿ ಮನಗಾಣುತ್ತೇವೆ. ಇದರ ಉಪನ್ಯಾಸವನ್ನು ತಪ್ಪದೇ ಕೇಳಿ. 

388 Views
Article - VNA082

ಶ್ರೀಹರಿಭಕ್ತಿಸಾರ — 40

ಪರಮಾತ್ಮ ಕೇವಲ ಕರ್ಮಗಳ ಲೇಪವಿರದವನಷ್ಟೇ ಅಲ್ಲ, ಅವನ ಅನುಗ್ರಹವಿದ್ದಾಗ ಮಾತ್ರ ನಾವು ಮಾಡುವ ಕರ್ಮಗಳು ಫಲಪ್ರದವಾಗುವತ್ತವೆ ಎನ್ನುವ ಮಾತನ್ನು ಶ್ರೀ ಕನಕದಾಸಾರ್ಯರು ಈ ಪದ್ಯದಲ್ಲಿ ಪ್ರತಿಪಾದಿಸುತ್ತಾರೆ. ಭ್ರಮರಕೀಟನ್ಯಾಯದ ಉಲ್ಲೇಖದೊಂದಿಗೆ. ಇದರ ಉಪನ್ಯಾಸ ಎರಡು ಉಪನ್ಯಾಸಗಳಲ್ಲಿ ಬಂದಿವೆ.

381 Views
Article - VNA081

ಶ್ರೀಹರಿಭಕ್ತಿಸಾರ — 39

ಶ್ರೀಕೃಷ್ಣ ಗೋಪಿಕೆಯರ ಮೇಲೆ, ತನ್ನ ಮಡದಿಯರಾಗಬೇಕು ಎಂದು ಕನ್ಯೆಯರಾಗಿ ಹುಟ್ಟಿ ಬಂದ ಅಗ್ನಿಪುತ್ರರ ಮೇಲೆ ಮಾಡಿದ ಪರಮಾನುಗ್ರಹವನ್ನು ಚಿಂತಿಸುವ ಪದ್ಯ. 

325 Views
Article - VNA080

ನಿಯತಪತಿಪತ್ನಿಭಾವ

ಮೋಕ್ಷದಲ್ಲಿಯೂ ಪತ್ನಿಯಾಗಿ ಇರುವವಳಳನ್ನು ನಿಯತಪತ್ನಿ ಎನ್ನುತ್ತಾರೆ, ಮೋಕ್ಷದಲ್ಲಿಯೂ ಗಂಡನಾಗಿ ಇರುವವನನ್ನು ನಿಯತಪತಿ ಎನ್ನುತ್ತಾರೆ. ಈ ತತ್ವದ ಕುರಿತ ವಿವರಣೆ ಈ ಲೇಖನದಲ್ಲಿದೆ. 

1457 Views
Article - VNA079

ಶ್ರೀಹರಿಭಕ್ತಿಸಾರ — 38

ಕರ್ಣ ಹಿಂದೆ ಸುಗ್ರೀವನಾಗಿದ್ದಾಗ ಮಾಡಿದ ಪಾಪಕ್ಕೆ ಶ್ರೀಕೃಷ್ಣ ಶಿಕ್ಷೆಯನ್ನು ನೀಡುತ್ತಿದ್ದಾನೆ, ಸರಿ. ಆದರೆ, ಅವನನ್ನು “ಕೊಲ್ಲ ಬಗೆದವನಗಾಗಿ” ಪಾಂಡವರ ಪಾಳೆಯಕ್ಕೆ ಬಾ ಎಂದು ಕರೆದದ್ದು ಎಷ್ಟು ಸರಿ ಎಂಬ ಪ್ರಶ್ನೆಗೆ ಶ್ರೀ ಕನಕದಾಸಾರ್ಯರು ಅದ್ಭುತವಾದ ಉತ್ತರ  ಉಪನ್ಯಾಸದಲ್ಲಿದೆ. ತಪ್ಪದೇ ಕೇಳಿ. ದೇವರ ಶರಣಾಗತಿಯಿಂದ ದೊರೆಯುವ ಫಲವೇನು ಎನ್ನುವದರ ವಿವರಣೆಯೂ ಇದೆ. 

308 Views
Article - VNA078

ಶ್ರೀಹರಿಭಕ್ತಿಸಾರ — 37

ಶ್ರೀಕೃಷ್ಣ ಕರ್ಣನಿಗೆ ಅನ್ಯಾಯ ಮಾಡಿದನೇ? ಶ್ರೀಮದಾಚಾರ್ಯರು ನೀಡಿದ ಅದ್ಭುತ ಉತ್ತರಗಳ ಸಂಕಲನ ಇಲ್ಲಿದೆ. ಇದರ ಉಪನ್ಯಾಸವನ್ನು  VNU432 ತಪ್ಪದೇ ಕೇಳಿ. 

437 Views
Article - VNA077

ಶ್ರೀಹರಿಭಕ್ತಿಸಾರ — 36

ಅಭಿಮನ್ಯುವಿನ ಮರಣದ ಪ್ರಸಂಗದಲ್ಲಿ ತಿಳಿಯಬೇಕಾದ ವಿಷಯಗಳ ಕುರಿತ ಚಿಂತನೆ ಇಲ್ಲಿದೆ. ಇದರ ಉಪನ್ಯಾಸ VNA427

922 Views
Article - VNA076

ಶ್ರೀಹರಿಭಕ್ತಿಸಾರ — 35

ಪರ್ಣಾಶಾ ಎಂಬ ನದಿಯ ಮತ್ತು ವರುಣನ ಮಗ ಶ್ರುತಾಯುಧ ಎಂಬ ರಾಜ. ಅವನ ಬಳಿ ಒಂದು ಅದ್ಭುತವಾದ ಗದೆಯಿರುತ್ತದೆ. ಯುದ್ಧದಲ್ಲಿ ಅರ್ಜುನನಿಂದ ಬಸವಳಿದು ಹೋದ ಶ್ರುತಾಯುಧ ತನ್ನ ಗದೆಯನ್ನು ತೆಗೆದುಕೊಂಡು ಬಂದು ಅರ್ಜುನನ ರಥವೇರಿ ಅರ್ಜುನನನ್ನು ಹೊಡೆಯುವ ಬದಲು ಶ್ರೀಕೃಷ್ಣನನ್ನು ಹೊಡೆಯುತ್ತಾನೆ. ಆಗ ಆ ಗದೆ ಅವನ ತಲೆಗೇ ತಿರುಗಿ ಅಪ್ಪಳಿಸಿ ಹೊಡೆಯುತ್ತದೆ. ತಲೆ ನೂರು ಹೋಳಾಗಿ ಶ್ರುತಾಯುಧ ಸತ್ತು ಬೀಳುತ್ತಾನೆ. ಈ ಘಟನೆಯ ವಿವರ ಈ ಲೇಖನದಲ್ಲಿದೆ. ಈ ಪ್ರಸಂಗ ಸೂಚನೆ ಮಾಡುವ ಆಧ್ಯಾತ್ಮಿಕ ಅರ್ಥದ ಕುರಿತ ಚಿಂತನೆ ಉಪನ್ಯಾಸದಲ್ಲಿದೆ. VNU423

431 Views
Article - VNA075

ಶ್ರೀಹರಿಭಕ್ತಿಸಾರ — 34

ಘೋರವಾದ ಯುದ್ಧ ನಡೆಯುತ್ತಿರುವ ರಣರಂಗದ ಮಧ್ಯದಲ್ಲಿ ರಥದಿಂದ ಕುದುರೆಗಳನ್ನು ಬಿಚ್ಚಿ ಅವಕ್ಕೆ ನೀರುಣಿಸಿ ಆಹಾರ ತಿನ್ನಿಸಿದ, ಜಯದ್ರಥನ ಸಂಹಾರದ ಮೈನವಿರೇಳಿಸುವ ಘಟನೆಯ ವಿವರಣೆ ಇಲ್ಲಿದೆ. ಈ ಘಟನೆಗಳ ಆಧ್ಯಾತ್ಮಿಕ ಅರ್ಥವನ್ನು ವಿವರಿಸುವ ಉಪನ್ಯಾಸಗಳನ್ನು ತಪ್ಪದೇ ಕೇಳಿ. VNU421, 422

341 Views
Article - VNA074

ಶ್ರೀಹರಿಭಕ್ತಿಸಾರ — 33

ಜೀವರಿಗೂ ಭಗವಂತನಿಗೂ ಇರುವ ಸಂಬಂದವನ್ನು ಮಹಾಭಾರತದ ಮುಖಾಂತರ ನಿರೂಪಿಸುವ ಪದ್ಯ. ಇದರ ಉಪನ್ಯಾಸ — VNU420

327 Views
Article - VNA073

ಶ್ರೀ ಹರಿಭಕ್ತಿಸಾರ - 32

ಮೂವತ್ತೆರಡನೆಯ ಪದ್ಯದ ಅರ್ಥಾನುಸಂಧಾನ

389 Views
Article - VNA072

ಶ್ರೀಹರಿಭಕ್ತಿಸಾರ — 31

ಆಂತರಿಕಶತ್ರುಗಳನ್ನು, ಬಾಹ್ಯಶತ್ರುಗಳನ್ನು, ಹಿತಶತ್ರುಗಳನ್ನು, ಸಮೂಹಶತ್ರುಗಳನ್ನು ಯಾವ ರೀತಿಯಾಗಿ ಗೆಲ್ಲಬೇಕು ಎನ್ನುವದರ ವಿವರಣೆ ಈ ಪದ್ಯದ ಉಪನ್ಯಾಸದಲ್ಲಿದೆ — VNU418

348 Views
Article - VNA071

ಶ್ರೀಹರಿಭಕ್ತಿಸಾರ — 30

ಬಲಿಯ ಬಂಧಿಸಿದ ಕೆಲಸ ಉತ್ತಮವಾಯ್ತು ಎಂದು ಶ್ರೀ ಕನಕದಾಸಾರ್ಯರು ಹೇಳುತ್ತಾರೆ. ಬಂಧಿಸಿದ್ದು ಕಾರುಣ್ಯ ಹೇಗಾಗಲು ಸಾಧ್ಯ ಎಂಬ ಪ್ರಶ್ನೆಗೆ, ಹಾಗೂ ದ್ರೌಪದೀ ದೇವಿಯರ ವಸ್ತ್ರಾಪಹರಣದ ಕಾಲಕ್ಕೆ ಪಾಂಡವರು ಯಾಕೆ ಸುಮ್ಮನಿದ್ದರು ಎಂಬ ಪ್ರಶ್ನೆಗೆ ಉತ್ತರವನ್ನು ಉಪನ್ಯಾಸದಲ್ಲಿ ಕೇಳುತ್ತೇವೆ. ಮತ್ತು ದ್ರೌಪದೀ ವಸ್ತ್ರಾಪಹರಣ ಸಂಕೇತಿಸುವ ನಮ್ಮ ಜೀವನದ ಘಟನೆಗಳನ್ನು, ನಾವು ಪರಮಾತ್ಮನನ್ನು ಬೇಡಬೇಕಾದ ಬಗೆಯ ವಿವರಣೆಯೂ ಇದರ ಉಪನ್ಯಾಸದಲ್ಲಿದೆ. VNU406 

567 Views
Article - VNA070

ಶ್ರೀಹರಿಭಕ್ತಿಸಾರ — 29

ದೇವರ ದ್ವೇಷವನ್ನು ಮಾಡಿದವರಿಗೂ ಮುಕ್ತಿಯಾಗುತ್ತದೆ ಎಂದು ಪುರಾಣಗಳಲ್ಲಿ ಕೇಳುತ್ತೇವೆ. ಶ್ರೀಕನಕದಾಸಾರ್ಯರೂ ಸಹ ವೈರವ ಮಾಡಿದವರಿಗೆ ಅಮರಪದವಿಯನಿತ್ತೆ ಎಂದು ಹೇಳಿದ್ದಾರೆ. ಈ ವಚನಗಳ ಆಂತರ್ಯವನ್ನು ಉಪನ್ಯಾಸದಲ್ಲಿ VNU402 ವಿವರಿಸಲಾಗಿದೆ. 

525 Views
Article - VNA069

ಶ್ರೀಹರಿಭಕ್ತಿಸಾರ — 28

ಹಗೆಯರಿಗೆ ವರವೀವರಿಬ್ಬರು, ತೆಗೆಯಲರಿಯರು ಕೊಟ್ಟ ವರಗಳ ಎಂದು ಶ್ರೀ ಕನಕದಾಸಾರ್ಯರು ಹೇಳುತ್ತಾರೆ. ಬ್ರಹ್ಮದೇವರು ಕೊಟ್ಟವರವನ್ನು ಬ್ರಹ್ಮದೇವರಿಗೆ ಸಮಾನರಾದ ಮುಖ್ಯಪ್ರಾಣದೇವರು ಮೀರಿರುವದನ್ನು ಹತ್ತಾರು ಕಡೆಯಲ್ಲಿ ಕಾಣುತ್ತೇವೆ. ಬ್ರಹ್ಮದೇವರ ವರವನ್ನು ವಾಯುದೇವರಿಗೆ ಮೀರಲಿಕ್ಕೆ ಸಾಧ್ಯ ಎಂದ ಬಳಿಕ ಬ್ರಹ್ಮದೇವರಿಗೂ ಸಾಧ್ಯ ಎಂದು ನಿರ್ಣೀತವಾಯಿತು. ಅಂದ ಮೇಲೆ ದಾಸರಾಯರು ಹೀಗೆ ಹೇಳಿದ್ದು ಎಷ್ಟು ಸರಿ ಎಂಬ ಪ್ರಶ್ನೆಗೆ ಶ್ರೀ ಕನಕದಾಸರೇ ನೀಡಿರುವ ಉತ್ತರದ — ಶ್ರೀಮಧ್ವಸಿದ್ಧಾಂತದ ಶ್ರೇಷ್ಠ ಸಿದ್ಧಾಂತದನು — ನಿರೂಪಣೆ ಇದರ ಉಪನ್ಯಾಸದಲ್ಲಿದೆ. [VNU400] ತೆಗೆದು ಕೊಡುವ ಸಮರ್ಥರಾರೀ ಎಂಬ ಅದ್ಭುತವಾಕ್ಯದ ಅರ್ಥಾನುಸಂಧಾನದೊಂದಿಗೆ. 

413 Views
Article - VNA068

ಶ್ರೀಹರಿಭಕ್ತಿಸಾರ — 27

ದೇವರೂ ಶರಣಾಗತರಕ್ಷಕ, ಒಬ್ಬ ಸದ್ಗುಣಿ ರಾಜನೂ ಶರಣಾಗತರಕ್ಷಕ ಇಬ್ಬರಲ್ಲೂ ವ್ಯತ್ಯಾಸವೇನು ಎನ್ನುವ ಪ್ರಶ್ನೆಗೆ ಶ್ರೀ ಕನಕದಾಸಾರ್ಯರು ನೀಡಿರುವ ಅದ್ಭುತ ಉತ್ತರದ ವಿವರಣೆ ಈ ಉಪನ್ಯಾಸದಲ್ಲಿದೆ. ತಪ್ಪದೇ ಕೇಳಿ.  ಉಪನ್ಯಾಸದ ಸಂಖ್ಯೆ — VNU394

483 Views
Article - VNA067

ಶ್ರೀಹರಿಭಕ್ತಿಸಾರ — 26

ಇಪ್ಪತ್ತಾರನೆಯ ಪದ್ಯದ ವಿವರಣೆ.  ಇದರ ಉಪನ್ಯಾಸ VNU393 ದಲ್ಲಿ “ಸಾಗರನ ಮಗಳರಿಯದಂತೆ ಸರಾಗದಲ್ಲಿ ಸಂಚರಿಸುತಿಹ” “ಕರಿರಾಜ ಕರೆಯಲು ಸಿರಿಗೆ ಹೇಳದೆ ಬಂದೆ” ಇತ್ಯಾದಿ ಮಾತುಗಳನ್ನು ನೋಡಿದಾಗ ಶ್ರೀಹರಿಯೂ ಸಹ ಕ್ಷುದ್ರ ಗಂಡಸರ ಹಾಗೆ ಹೆಂಡತಿಗೆ ತಿಳಿಸದಂತೆ ಓಡಾಡುತ್ತಾನೆ ಮತ್ತು ಲಕ್ಷ್ಮೀದೇವಿಗೆ ತಿಳಿಯದ ಸ್ಥಳಕ್ಕೆ ಹೋಗುತ್ತಾನೆ ಎಂದರೆ ಲಕ್ಷ್ಮೀದೇವಿಯಿಲ್ಲದ ಸ್ಥಳಕ್ಕೆ ಹೋಗುತ್ತಾನೆ ಎಂದಾಗುತ್ತದೆ, ಹೀಗಾಗಿ ದೇವರಿಗೂ ಲಕ್ಷ್ಮೀದೇವಿಯರಿಗೂ ವಿಯೋಗವಿದೆ. ಅಂದಮೇಲೆ ದಾಸಸಾಹಿತ್ಯದ ಈ ವಚನಗಳನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು ಎಂಬ ಪ್ರಶ್ನೆಗೆ ಈ ಉಪನ್ಯಾಸದಲ್ಲಿ ಉತ್ತರವಿದೆ. 

459 Views
Article - VNA066

ಶ್ರೀಹರಿಭಕ್ತಿಸಾರ — 25

ಭಗವಂತನನ್ನು ವಿಶ್ವಕುಟುಂಬಿ ಎಂದು ಚಿಂತಿಸಿ ಪ್ರಾರ್ಥಿಸುವದನ್ನು ತಿಳಿಸಿಕೊಡುವ ಪದ್ಯ — ಸಿರಿಯು ಕುಲಸತಿ ಸುತನು ಕಮಲಜ ಎನ್ನುವದು. ಮಂಗಳಾಷ್ಟಕದ ಉಪನ್ಯಾಸದಲ್ಲಿ ದೇವರ ಮಹಾಕುಟುಂಬದ ವೈಭವವನ್ನು ಚಿಂತಿಸಿದ್ದೇವೆ. ಇಲ್ಲಿ, ದೇವರನ್ನು ಯಾಕಾಗಿ ವಿಶ್ವಕುಟುಂಬಿ ಎಂದು ಚಿಂತಿಸಬೇಕು, ಆ ವಿಶ್ವಕುಟುಂಬಿಯಲ್ಲಿ ಏನನ್ನು ಪ್ರಾರ್ಥನೆ ಮಾಡಬೇಕು ಎನ್ನುವದನ್ನು ಇಲ್ಲಿ ತಿಳಿಯುತ್ತೇವೆ. ಇದರ ಉಪನ್ಯಾಸ VNU392

486 Views
Article - VNA065

ಇಷ್ಟು ಸುಲಭವಾಗಿಯೂ ಒಲಿಯುವರುಂಟೇ?

ತಮ್ಮಿಂದ ಒಂದು ಸಣ್ಣ ಪುಟ್ಟ ಸಹಾಯ ಜರುಗುವದಿದ್ದರೂ ಈ ಲೋಕದ ಜನ ಅದೆಷ್ಟು ಬಿಂಕ ತೋರುತ್ತಾರೆ, ಅಂತಹುದರಲ್ಲಿ ನಮ್ಮ ಅಂತರ್ಯಾಮಿ ನಮಗೊಲಿದು ನಮ್ಮನ್ನು ಅನುಗ್ರಹಿಸುವ ಪರಿ ಅದೆಷ್ಟು ಹಿರಿದಾದದ್ದು ಎಂದು ಪ್ರತಿಪಾದಿಸುವ ಲೇಖನ. ಆಚಾರ್ಯರು ಕೃಷ್ಣಾಮೃತಮಹಾರ್ಣವದಲ್ಲಿ ತಿಳಿಸಿದ ತತ್ವಚಿಂತನೆಯೊಂದಿಗೆ. 

1642 Views
Article - VNA057

ಮುದ್ದಾಗಿ ಇರಬೇಕು ಮುನಿಯೋಗಿಗಳಿಗೆ

ಶ್ರೀಮಚ್ಚಂದ್ರಿಕಾಚಾರ್ಯರಂತಹ ಮುನಿವರೇಣ್ಯರಿಗೆ, ಶ್ರೀ ಸುರೇಂದ್ರತೀರ್ಥರಂತಹ ಯೋಗಿವರೆಯಣ್ಯರಿಗೆ ಮುದ್ದಾಗಿದ್ದವರು, ಅರ್ಥಾತ್ ಅವರ ಪ್ರೇಮಕ್ಕೆ, ವಾತ್ಸಲ್ಯಕ್ಕೆ, ಅನುಗ್ರಹಕ್ಕೆ ಪಾತ್ರರಾಗಿದ್ದವರು ಶ್ರೀ ವಿಜಯೀಂದ್ರತೀರ್ಥಶ್ರೀಪಾದಂಗಳವರು. ಯಾವ ಸದ್ಗುಣಗಳಿದ್ದಾಗ ನಾವು ನಮಗಿಂತ ಹಿರಿಯರಾದ ಜ್ಞಾನಿಗಳಿಗೆ, ಶ್ರೀಹರಿಗೆ ಪ್ರಿಯರಾಗುತ್ತೇವೆ ಎಂಬ ತತ್ವದ ಚಿಂತನೆ ಈ ಲೇಖನದಲ್ಲಿದೆ. 

2493 Views
Article - VNA054

ಶ್ರೀ ಗಿರಿಜಾಕಲ್ಯಾಣ

ಸ್ಕಂದಪುರಾಣ ಮತ್ತು ಪದ್ಮಪುರಾಣಗಳಲ್ಲಿ ನಿರೂಪಿತವಾಗಿರುವ ಗಿರಿಜಾಕಲ್ಯಾಣಪ್ರಸಂಗದ ಕುರಿತ ಹದಿನಾರು ಉಪನ್ಯಾಸಗಳಲ್ಲಿನ ವಿಷಯಗಳ ಮಾಹಿತಿ ಈ ಲೇಖನದಲ್ಲಿದೆ. VNU039 ರಿಂದ VNU054 ರ ವರೆಗೆ ಗಿರಿಜಾಕಲ್ಯಾಣದ ಹದಿನಾರು ಉಪನ್ಯಾಸಗಳು ದೊರೆಯುತ್ತವೆ.

1310 Views
Article - VNA048

ವಂದೇ ಶ್ರೀಪಾದರಾಜಮ್

ಶ್ರೀಮನ್ ಮಾಧ್ವಪರಂಪರೆಯ ಭೂಷಾಮಣಿ ಶ್ರೀ ಶ್ರೀಪಾದರಾಜರ ಸ್ಮರಣೆ

1895 Views
Article - VNA047

ಶ್ರೀ ಭಾಗೀರಥೀ ಜಯಂತೀ

ಭಗೀರಥ ದೇವಗಂಗೆಯನ್ನು ಸ್ವರ್ಗದಿಂದ ಭೂಮಿಗೆ ಹರಿಸಿದ ದಿವಸ ಜ್ಯೇಷ್ಠಶುದ್ಧದಶಮೀ. ಭಾಗೀರಥೀ ಹರಿಯುವದಕ್ಕಿಂತಲೂ ಮುಂಚೆಯೂ ಗಂಗೆ ಹರಿಯುತ್ತಳೇ ಇದ್ದಳು. ಆದರೂ ಏಕಾಗಿ ಭಗೀರಥ ತಪಸ್ಸು ಮಾಡಿದ? ಎಂದ ಪ್ರಶ್ನೆಗೆ ಉತ್ತರ ಮತ್ತು ಆಕಾಶಗಂಗೆ, ಭೂಗಂಗೆ, ಪಾತಾಳಗಂಗೆ ಮುಂತಾದ ವಿಶೇಷವಿಷಯಗಳ ನಿರೂಪಣೆ ಈ ಲೇಖನದಲ್ಲಿ. 

1497 Views
Article - VNA045

ಶ್ರೀಹರಿಭಕ್ತಿಸಾರ — 18

ಹದಿನಾಲ್ಕನೆಯ ಪದ್ಯದ ವಿವರಣೆ. ಇದರ ಉಪನ್ಯಾಸ VNU377

536 Views
Article - VNA044

ಶ್ರೀಹರಿಭಕ್ತಿಸಾರ — 17

ಹದಿನಾಲ್ಕನೆಯ ಪದ್ಯದ ವಿವರಣೆ. ಇದರ ಉಪನ್ಯಾಸ VNU376

470 Views
Article - VNA043

ಶ್ರೀಹರಿಭಕ್ತಿಸಾರ — 16

ಹನ್ನೆರಡನೆಯ ಪದ್ಯದ ವಿವರಣೆ. ಇದರ ಉಪನ್ಯಾಸ VNU374

449 Views
Article - VNA042

ಗಂಡ ಹೆಂಡಿರ ಜಗಳದ ಕುರಿತು…

ಗಂಡ ಹೆಂಡತಿಯ ಮಧ್ಯದಲ್ಲಿ ಯಾವ ರೀತಿಯ ಜಗಳ ಇರಲೇಬೇಕು, ಯಾವುದು ಇರಲೇಬಾರದು, ಜಗಳಕ್ಕೆ ಕಾರಣಗಳೇನೇನು ಮುಂತಾದ ವಿಷಯಗಳ ಕುರಿತ ಲೇಖನ. 

5342 Views
Article - VNA041

ದೇವರು ಜೀವರಿಗೇಕೆ ಬುದ್ಧಿ ನೀಡಿದ?

 ನರಚಿತ್ತಕ್ಕೆ ಬಂದದ್ದು ಲವಲೇಶ ನಡೆಯದು ಎಂದಾದ ಬಳಿಕ, ಹರಿಚಿತ್ತವೇ ಸತ್ಯ ಎಂದಾದ ಬಳಿಕ ನರನಿಗೆ ಇದು ಸರಿ ಇದು ತಪ್ಪು ಎಂದು ನಿರ್ಣಯ ಮಾಡುವ ಬುದ್ಧಿಯನ್ನಾದರೂ ಯಾಕೆ ನೀಡಿದ ದೇವರು ? ವ್ಯರ್ಥವಲ್ಲವೇ? ಎಂಬ ಪ್ರಶ್ನೆಗೆ ಉತ್ತರ ಈ ಲೇಖನ. 

1127 Views
Article - VNA040

ಶ್ರೀಹರಿಭಕ್ತಿಸಾರ — 15

ಹನ್ನೆರಡನೆಯ ಪದ್ಯದ ವಿವರಣೆ. ಇದರ ಉಪನ್ಯಾಸ VNU374

479 Views
Article - VNA039

ಶ್ರೀಹರಿಭಕ್ತಿಸಾರ — 14

ಹನ್ನೊಂದನೆಯ ಪದ್ಯದ ವಿವರಣೆ. ಇದರ ಉಪನ್ಯಾಸ VNU373

575 Views
Article - VNA038

ದೇವರೇಕೆ ನಮಗೆ ಕಷ್ಟ ನೀಡುತ್ತಾನೆ?

ತನ್ನ ಪ್ರಾರಬ್ಧಕರ್ಮಕ್ಕೆ ಅನುಗುಣವಾಗಿ ಫಲ ಅನುಭವಿಸುವದಾದರೆ ದೇವರ ಪಾತ್ರ ಏನು? ಅವನ ಮೊರೆ ಯಾಕೆ ಹೋಗಬೇಕು? ಎಂಬ ಪ್ರಶ್ನೆಗೆ ಈ ಲೇಖನದಲ್ಲಿ ವಿಸ್ತಾರವಾದ ಉತ್ತರವಿದೆ.

1548 Views
Article - VNA037

ಶ್ರೀಹರಿಭಕ್ತಿಸಾರ — 13

ಹತ್ತನೆಯ ಪದ್ಯದ ವಿವರಣೆ. ಇದರ ಉಪನ್ಯಾಸ VNU371

492 Views
Article - VNA036

ಭಗವದ್ಗೀತೆಯ ಸಾರವೇನು?

ಸಮಗ್ರ ಭಗವದ್ ಗೀತೆಯ ಸಾರವನ್ನು ಹೊತ್ತ ಭಗವಂತನ ಒಂದು ವಾಕ್ಯದ ಅರ್ಥಾನುಸಂಧಾನ

1267 Views
Article - VNA035

ಗುರುಗಳು ಎಂದರೆ ಹಾಗಿರಬೇಕು

ಗುರು ಎಂದ ಬಳಿಕ ಯಾವ ಗುಣಗಳಿರಲೇಬೇಕು ಎನ್ನುವದರ ಕುರಿತ ಚರ್ಚೆಯನ್ನು ಮಾಡಿ ನಮ್ಮ ಶ್ರೀ ಬ್ರಹ್ಮಣ್ಯತೀರ್ಥಶ್ರೀಪಾದಂಗಳವರಲ್ಲಿ ಆ ಮಹಾಸದ್ಗುಣಗಳು ಹೇಗೆ ಮೇಳವಿಸಿವೆ ಎಂದು ಚಿತ್ರಿಸುವ ಲೇಖನ. 

2286 Views
Article - VNA034

ಶ್ರೀಹರಿಭಕ್ತಿಸಾರ — 12

ಶ್ರೀಹರಿಭಕ್ತಿಸಾರದ ಒಂಭತ್ತನೆಯ ಪದ್ಯದ ಅರ್ಥವನ್ನು ವಿವರಿಸುವ ಲೇಖನ. 

408 Views
Article - VNA033

ಶ್ರೀಹರಿಭಕ್ತಿಸಾರ — 11

ಶ್ರೀಹರಿಭಕ್ತಿಸಾರದ ಎಂಟನೆಯ ಪದ್ಯದ ಅರ್ಥವನ್ನು ವಿವರಿಸುವ ಲೇಖನ. 

600 Views
Article - VNA032

ಶ್ರೀಹರಿಭಕ್ತಿಸಾರ — 10

ಶ್ರೀಹರಿಭಕ್ತಿಸಾರದ ಏಳನೆಯ ಪದ್ಯದ ಅರ್ಥವನ್ನು ವಿವರಿಸುವ ಲೇಖನ. 

1636 Views
Article - VNA031

ಶ್ರೀಹರಿಭಕ್ತಿಸಾರ — 9

ಶ್ರೀಹರಿಭಕ್ತಿಸಾರದ ಆರನೆಯ ಪದ್ಯದ ಅರ್ಥವನ್ನು ವಿವರಿಸುವ ಲೇಖನ. 

1471 Views
Article - VNA030

ಶ್ರೀಹರಿಭಕ್ತಿಸಾರ — 8

ಶ್ರೀಹರಿಭಕ್ತಿಸಾರದ ಐದನೆಯ ಪದ್ಯದ ಅರ್ಥವನ್ನು ವಿವರಿಸುವ ಲೇಖನ. 

1630 Views
Article - VNA028

ವೇದವ್ಯಾಸ-ಪ್ರಾದುರ್ಭಾವ

ಮಹಾಭಾರತ ಮತ್ತು ಮಹಾಭಾರತತಾತ್ಪರ್ಯನಿರ್ಣಯದಲ್ಲಿ ನಿರೂಪಿತವಾಗಿರುವ ಶ್ರೀ ವೇದವ್ಯಾಸದೇವರ ಅದ್ಭುತಪ್ರಾದುರ್ಭಾವದ ಪ್ರಸಂಗದ ವಿವರಣೆಯುಳ್ಳ ಲೇಖನ. 

955 Views
Article - VNA027

ಸತ್ಯವತೀ-ಪರಾಶರ ಸಮಾಗಮ

ಶ್ರೀ ವೇದವ್ಯಾಸಜಯಂತಿಯ ನಿಮಿತ್ತ ನನ್ನ ವೇದವ್ಯಾಸಾವತಾರ ಪುಸ್ತಕದಿಂದ ಆಯ್ದ ವೇದವ್ಯಾಸಪ್ರಾದುರ್ಭಾವದ ಮೊದಲನೆಯ ಭಾಗ. 

1072 Views
Article - VNA026

ಶ್ರೀನಿವಾಸಕಲ್ಯಾಣ ಸುಳ್ಳುಕಥೆಯೇ?

ಶ್ರೀಮತೀ ವಿಜಯಲಕ್ಷ್ಮಿಯವರು ಒಂದು ಪ್ರಶ್ನೆ ಕೇಳಿದ್ದಾರೆ — ಬನ್ನಂಜೆಯವರು ಶ್ರೀನಿವಾಸಕಲ್ಯಾಣ ನಿಜವಾಗಿ ನಡೆದ ಘಟನೆಯೇ ಅಲ್ಲ ಎಂದು ಹೇಳುತ್ತಾರೆ, ಇದು ಸರಿಯೇ ಎಂದು. ಈ ಪ್ರಶ್ನೆಗೆ ಉತ್ತರವಾಗಿ ಶ್ರೀಮದಾಚಾರ್ಯರು ಶ್ರೀನಿವಾಸಕಲ್ಯಾಣದ ಕುರಿತು ನೀಡಿರುವ ನಿರ್ಣಯವನ್ನು ವಿವರಿಸುವ ಲೇಖನವಿದು. 

2407 Views
Article - VNA025

ಕಷ್ಟಗಳನ್ನು ಎದುರಿಸಲು ಅಷ್ಟ ಸೂತ್ರಗಳು

ಕಷ್ಟವನ್ನು ಎದುರಿಸಬೇಕಾದರೆ ಅವಶ್ಯವಾಗಿ ಬೇಕಾದ ಮನೋಬಲವನ್ನು ಸಂಪಾದಿಸುವ ಮಾರ್ಗವನ್ನು ತಿಳಿಸುವ ಲೇಖನ

1679 Views
Article - VNA024

ಕಷ್ಟವನ್ನು ಗೆಲ್ಲುವ ರೀತಿ - 1

ಕಷ್ಟ - ದುಃಖ- ನೋವು- ಅವಮಾನಗಳನ್ನು ಯಾವ ರೀತಿ ಎದುರಿಸಿ ಗೆಲ್ಲಬೇಕು ಎಂದು ಶಾಸ್ತ್ರ ತಿಳಿಸಿ ಕೊಟ್ಟ ಮಾರ್ಗವನ್ನು ವಿವರಿಸುವ ಲೇಖನಗುಚ್ಛದಲ್ಲಿ ಮೊದಲನೆಯದು. 

1142 Views
Article - VNA023

ಶ್ರೀಹರಿಭಕ್ತಿಸಾರ — 7

ಶ್ರೀಹರಿಭಕ್ತಿಸಾರದ ನಾಲ್ಕನೆಯ ಪದ್ಯದ ಅರ್ಥವನ್ನು ವಿವರಿಸುವ ಲೇಖನ. ಇದರ ಉಪನ್ಯಾಸ VNU362

1752 Views
Article - VNA022

ಶ್ರೀಹರಿಭಕ್ತಿಸಾರ — 6

ಹರಿಭಕ್ತಿಸಾರದ ಮೂರನೆಯ ಪದ್ಯದ ಅರ್ಥಾನುಸಂಧಾನ. ಈ ವಿಷಯದ ಉಪನ್ಯಾಸದ ಸಂಖ್ಯೆ — VNU361

1934 Views
Article - VNA021

ಶ್ರೀಹರಿಭಕ್ತಿಸಾರ — 5

ಕಾಮನಿಗ್ರಹವನ್ನು ಪಡೆಯಲು, ರೋಗಾದಿಗಳಿಂದ ದೂರವಾಗಲು ಪರಮಾತ್ಮನನ್ನು ಏನೆಂದು ಉಪಾಸಿಸಬೇಕು ಎಂದು ತಿಳಿಸುವ, ಅವನ ಕಾರುಣ್ಯವನ್ನು ಅವನ ಮಾಹಾತ್ಮ್ಯವನ್ನು ಚಿಂತಿಸುವ ಶ್ರೀ ಹರಿಭಕ್ತಿಸಾರದ ಎರಡನೆಯ ಪದ್ಯದ ಎರಡನೆಯ ಭಾಗದ ಅರ್ಥಾನುಸಂಧಾನ. ಈ ವಿಷಯದ ಉಪನ್ಯಾಸ VNU360

2525 Views
Article - VNA020

ಶ್ರೀಹರಿಭಕ್ತಿಸಾರ — 4

ಎರಡನೆಯ ಪದ್ಯದ ಮೊದಲ ಭಾಗದ ವಿವರಣೆ. ದೇವರ ಅದ್ಭುತವಾದ ಮಾಹಾತ್ಮ್ಯಗಳು, ದೇವತೆಗಳ ಮೂಲರೂಪ ಅವತಾರರೂಪಗಳಲ್ಲಿ ಇರುವ ವ್ಯತ್ಯಾಸ, ಪರಮಾತ್ಮನ ಮೂಲರೂಪ ಅವತಾರರೂಪಗಳಲ್ಲಿ ಆ ವ್ಯತ್ಯಾಸ ಇಲ್ಲದೇ ಇರುವದು, ಅವನ ಪರಿಪೂರ್ಣತೆಯ ಕುರಿತು ಶ್ರೀ ಕನಕದಾಸರು ಅದ್ಭುತವಾದ ವಿಷಯಗಳನ್ನು ಅನುಸಂಧಾನ ಮಾಡಿದ್ದಾರೆ. ಆವರ ಶಬ್ದಗಳ ಅನುವಾದ ಈ ಲೇಖನದಲ್ಲಿದೆ. ಈ ವಿಷಯದ ಉಪನ್ಯಾಸ VNU357.

2043 Views
Article - VNA019

ಶ್ರೀಹರಿಭಕ್ತಿಸಾರ — 3

ಮೊದಲನೆಯ ಪದ್ಯದ ಎರಡನೆಯ ಭಾಗದ ವಿವರಣೆ. ರಾಯ ಎಂಬ ಪದದ ಔಚಿತ್ಯ, ರಾಮಚಂದ್ರನನ್ನು ರಘುಕುಲವರ್ಯ ಎಂದು ಈ ಪದ್ಯದಲ್ಲಿ ಸ್ಮರಣೆ ಮಾಡಲು ಇರುವ ಕಾರಣಗಳು, ಭೂಸುರಪ್ರಿಯ ಎಂಬ ಶಬ್ದದ ಹಿಂದಿನ ಭಾವ, ಕನಕದಾಸರ ಜೀವನದ ಮಹತ್ತ್ವದ ಘಟನೆಗಳ ಚಿಂತನೆ ಈ ಲೇಖನದಲ್ಲಿದೆ. 

1550 Views
Article - VNA018

ಶ್ರೀಹರಿಭಕ್ತಿಸಾರ — 2

ಶ್ರೀ ಹರಿಭಕ್ತಿಸಾರದ ಮೊದಲನೆಯ ಪದ್ಯದ ಅರ್ಥಾನುಸಂಧಾನ ಈ ಲೇಖನದಲ್ಲಿದೆ. ಶ್ರೀ ಕನಕದಾಸರ ಪದಪ್ರಯೋಗಕೌಶಲ, ಆ ಪದಗಳ ಗರ್ಭದಲ್ಲಡಗಿರುವ ಪ್ರಮೇಯರತ್ನಗಳು ನಮ್ಮನ್ನು ಅಕ್ಷರಶಃ ಬೆರಗುಗೊಳಿಸುತ್ತವೆ.  ಈ ಲೇಖನ ಉಪನ್ಯಾಸ ರೂಪದಲ್ಲಿಯೂ ಪ್ರಕಟವಾಗಿದೆ. VNU354 ಮತ್ತು VNU355

2305 Views
Article - VNA017

ಶ್ರೀ ಹರಿಭಕ್ತಿಸಾರ — 1

ಶ್ರೀ ಹರಿಭಕ್ತಿಸಾರ ವ್ಯಾಖ್ಯಾನದ ಪ್ರವೇಶಿಕೆ. ಶ್ರೀ ಕನಕದಾಸರ ಸರ್ವೋತ್ತುಂಗ ಕೃತಿಯ ಮಾಹಾತ್ಮ್ಯವನ್ನು ಚಿಂತಿಸುವ ಭಾಗ. 

2237 Views
Article - VNA014

ಮೂರ್ಖರಾದರು ಲೋಕದೊಳಗೆ - 3

ಮಾಡಲಿಕ್ಕಾಗದ ಕೆಲಸವನ್ನು ಮಾಡುವವನು ಮೂರ್ಖ, ಮಾಡಬೇಕಾದ ಕೆಲಸವನ್ನು ಮಾಡಿದಿರುವವನೂ ಮೂರ್ಖ ಎನ್ನುವ ಮಾತನ್ನು ಪುರಂದರದಾಸರು ಈ ಪದ್ಯದಲ್ಲಿ ನಮಗೆ ಮನವರಿಕೆ ಮಾಡಿಸುತ್ತಾರೆ. 

1301 Views
Article - VNA013

ಸಂಕಲ್ಪದ ಅರ್ಥ

ಪ್ರತೀ ಸತ್ಕರ್ಮದ ಆರಂಭದಲ್ಲಿ ಮಾಡಬೇಕಾದ ಸಂಕಲ್ಪದ ಅರ್ಥವನ್ನು ತಿಳಿಸುವ ಲೇಖನ

2385 Views
Article - VNA012

ಮಕ್ಕಳ ಪ್ರತಿಭೆಯ ಕುರಿತು

ಬಾಲ್ಯದಲ್ಲಿ ನಮ್ಮ ಮಕ್ಕಳಲ್ಲಿ ತೋರುವ ಪ್ರತಿಭೆ ಹೆಮ್ಮರವಾಗಿ ಬೆಳೆಯಲು ನಾವೇನು ಮಾಡಬೇಕು, ಏನು ಮಾಡಬಾರದು ಎಂದು ತಿಳಿಸುವ ಲೇಖನ. ಶ್ರೀಮದಾಚಾರ್ಯರ ಬದುಕಿನ ಒಂದು ಘಟನೆಯ ವಿವರಣೆಯೊಂದಿಗೆ. 

1067 Views
Article - VNA011

ಪತ್ನಿಯನ್ನು ಪ್ರೀತಿಸುವದೂ ಸಹ ಭಗವದಾರಾಧನೆ

“ಸಾಧನಜೀವನದಲ್ಲಿ ಹೆಗಲೆಣೆಯಾಗಿ ಹೆಜ್ಜೆಹಾಕುವ ನನ್ನ ಹೆಂಡತಿಯನ್ನು ನಾನು ತುಂಬುಪ್ರೇಮದಿಂದ ಕಾಣುವಂತೆ ಮಾಡು, ನಮ್ಮಿಬ್ಬರಲ್ಲಿ ಶಾಶ್ವತಪ್ರೇಮವಿರುವಂತೆ ಅನುಗ್ರಹಿಸು” ಎಂದು ಪರಮಾತ್ಮನನ್ನು ಪ್ರಾರ್ಥಿಸುವದೂ ನಿಷ್ಕಾಮಕರ್ಮವೇ ಎಂದು ಸಾರಿ ಹೇಳಿದ ಶಾಸ್ತ್ರ ಶ್ರೀಮಧ್ವಶಾಸ್ತ್ರ. ಆ ಮಾತಿನ ಚಿಂತನೆ ಇಲ್ಲಿದೆ. 

2083 Views
Article - VNA010

ನಾಮಗಿರಿಕ್ಷೇತ್ರ

ನಿತ್ಯ ದೇವರ ಪೂಜೆಗೆ ಉಂಟಾಗುವ ವಿಘ್ನಗಳನ್ನು ಪರಿಹರಿಸುವ, ಹಣದ ಸಮಸ್ಯೆಯನ್ನು, ಮೇಲಧಿಕಾರಿಗಳ ಕಿರುಕುಳವನ್ನು, ದಾಂಪತ್ಯದಲ್ಲಿನ ಸಮಸ್ಯೆಗಳನ್ನು ಪರಿಹರಿಸುವ ಶ್ರೀಲಕ್ಷ್ಮೀನೃಸಿಂಹದೇವರ ಜಾಗೃತಸನ್ನಿಧಾನದ ಕ್ಷೇತ್ರ ನಾಮಗಿರಿಯ ಕುರಿತ ಲೇಖನ. 

2297 Views
Article - VNA009

ಪ್ರಶ್ನೆ ಅಂತಾ ಕೇಳುವ ಮುನ್ನ....

ಹಿರಿಯರನ್ನು ಗುರುಗಳನ್ನು ಪ್ರಶ್ನೆ ಕೇಳುವದಕ್ಕಿಂತ ಮುಂಚೆ ನಮಗಿರಬೇಕಾದ ಎಚ್ಚರಗಳ ಕುರಿತ ಲೇಖನ. 

1429 Views
Article - VNA008

ಸಂಸಾರವನ್ನು ಗೆಲ್ಲಬೇಕಾದರೆ ನಾವಿದನ್ನು ಅನುಷ್ಠಾನಕ್ಕೆ ತರಲೇಬೇಕು

ಗೀತೆಯಲ್ಲೊಂದು ಮಾತಿದೆ. ಆ ಮಾತು ಭಗವಂತನಿಂದ ನಾವೆಷ್ಟು ದೂರವಿದ್ದೇವೆ ಎನ್ನುವದನ್ನು ಹೇಳುತ್ತದೆ. ಆ ಮಾತು ಸಂಸಾರಸಾಗರದಲ್ಲಿ ನಾವೆಷ್ಟು ಆಳದಲ್ಲಿ ಮುಳುಗಿದ್ದೀವಿ ಎನ್ನುವದನ್ನು ಮನಗಾಣಿಸುತ್ತದೆ. ಆ ಮಾತು ನಮ್ಮನ್ನು ಅದೇ ಸಾಗರದಿಂದ ಮೇಲೆದ್ದು ಬರಲು ಪ್ರೇರಿಸುತ್ತದೆ. ಆ ಮಾತು ಈಜಾಡುವ ಕೈಗೆ ಆನೆಯ ಬಲವನ್ನು ನೀಡುತ್ತದೆ. ಆ ಮಾತಿನ ಕುರಿತ ಮಾತು ಈ ಲೇಖನ. 

1908 Views
Article - VNA007

ಮತ್ತೊಬ್ಬರು ದುಃಖದಲ್ಲಿದ್ದಾಗ ಮಧ್ಯದಲ್ಲಿ ನುಸುಳುವ ಮುನ್ನ…

ಒಬ್ಬರ ಪರಿಚಯವಿರಲಿ, ಬಿಡಲಿ, ಹತ್ತಿರದವರಾಗಿರಲಿ, ದೂರದವರಾಗಿಲಿ ಎಲ್ಲರ ವಿಷಯದಲ್ಲಿಯೂ ಮೂಗು ತೂರಿಸುವ ವ್ಯಕ್ತಿಗಳು, ಸುಮ್ಮಸುಮ್ಮನೇ ತಮ್ಮ ಕೈಲಾಗದಿದ್ದರೂ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿಬಿಡುವ ಜನ ಕಲಿಯಬೇಕಾದ ಪಾಠ ಈ ಲೇಖನದಲ್ಲಿದೆ. 

916 Views
Article - VNA006

ಮತ್ತೊಬ್ಬರ ಮನೆಗೆ ಕಾಲಿಡುವ ಮುನ್ನ…

ಅದೊಂದು ಶ್ರೇಷ್ಠ ಸದ್ಗುಣವಿದೆ. ಹೆಣ್ಣಮಕ್ಕಳ ಹೃದಯದಲ್ಲಿ ಗಂಡಸರಿಗೆ ಶಾಶ್ವತ ಗೌರವವನ್ನು ಕಲ್ಪಿಸುವ ಸದ್ಗುಣ. ಬೇರೆಯವರ ಮನೆಗೆ — ಅದರಲ್ಲಿಯೂ ಸಣ್ಣಮಕ್ಕಳು, ಹೆಣ್ಣುಮಕ್ಕಳಿರುವ ಮನೆಗೆ, ಕೊಠಡಿಗೆ — ಪ್ರವೇಶ ಮಾಡುವ ಮುನ್ನ ಗಂಡಸರಿಗೆ ಇರಬೇಕಾದ ಎಚ್ಚರಗಳ ಕುರಿತು ಭೀಮನ ದೃಷ್ಟಾಂತದಿಂದ ಶ್ರೀಮದಾಚಾರ್ಯರು ನಿರೂಪಿಸಿರುವ ಆ ಸದ್ಗುಣದ ಕುರಿತ ಚಿಂತನೆ ಈ ಲೇಖನದಲ್ಲಿದೆ. 

1512 Views
Article - VNA005

ಗ್ರಹಣಕಾಲದಲ್ಲಿ ದಿಗ್ದೇವತೆಗಳ ಪ್ರಾರ್ಥನೆ

ಗ್ರಹಣಕಾಲದಲ್ಲಿ ಎಂಟೂ ದಿಕ್ಕಿನ ದೇವತೆಗಳಿಗೆ ಪ್ರಾರ್ಥನೆ ಸಲ್ಲಿಸಬೇಕೆಂದು ಶಾಸ್ತ್ರ ವಿಧಿಸುತ್ತದೆ. ಆ ಪ್ರಾರ್ಥನಾಶ್ಲೋಕಗಳು ಮತ್ತು ಅವುಗಳ ಅರ್ಥವಿವರಣೆ ಇಲ್ಲಿದೆ. 

7057 Views
Article - VNA004

ಗ್ರಹಣದ ಅನುಷ್ಠಾನಗಳು

ಪರ್ವಕಾಲಗಳಲ್ಲಿಯೇ ಶ್ರೇಷ್ಠವಾದ ಪರ್ವಕಾಲ ಗ್ರಹಣದಕಾಲ. ಗ್ರಹಣದ ಸಂದರ್ಭದಲ್ಲಿ ಮಾಡಬೇಕಾದ, ಮಾಡಬಾರದ, ಮಾಡಬಹುದಾದ, ಮಾಡಲೇಬೇಕಾದ ಕರ್ಮಗಳ ಕುರಿತ ಚಿಂತನೆ ಇಲ್ಲಿದೆ.

10100 Views
Article - VNA003

ಮೂರ್ಖರಾದರು ಲೋಕದೊಳಗೆ — ಎರಡನೆಯ ಚರಣದ ಅರ್ಥ

ಮನುಷ್ಯ ತನ್ನ ಜವಾಬ್ದಾರಿಯ ವಿಷಯಗಳಲ್ಲಿ ಮತ್ತು, ಬಡತನದ ವಿಷಯದಲ್ಲಿ ಅದ್ಹೇಗೆ ಮೂರ್ಖನಂತೆ ವರ್ತಿಸುತ್ತಾನೆ ಎನ್ನುವದನ್ನು ಶ್ರೀ ಪುರಂದರದಾಸರು ತಮ್ಮ ಈ ಪದ್ಯದ ಎರಡನೆಯ ನುಡಿಯಲ್ಲಿ ತಿಳಿಸುತ್ತಾರೆ. ಅದರ ಅರ್ಥಾನುಸಂಧಾನ ಇಲ್ಲಿದೆ. 

1315 Views
Article - VNA002

ಮೂರ್ಖರಾದರು ಲೋಕದೊಳಗೆ — ಪಲ್ಲವಿ ಮತ್ತು ಮೊದಲನೆಯ ಚರಣದ ಅರ್ಥ

ಮನುಷ್ಯನ ವಿವಿಧ ರೀತಿಯ ಮೂರ್ಖತನಗಳ ಕುರಿತ ಶ್ರೀ ಪುರಂದರ ದಾಸರ ಪದ್ಯವೊಂದಿದೆ, ಮೂರ್ಖರಾದರು ಲೋಕದೊಳಗೆ ಎಂದು. ಜೀವನದ ಅದೆಷ್ಟು ಪ್ರಸಂಗಗಳಲ್ಲಿ ನಾವು ಅದೆಷ್ಟು ಮೂರ್ಖರಂತೆ ವರ್ತಿಸುತ್ತಿರುತ್ತೇವೆ, ಅಷ್ಟೇ ಅಲ್ಲ ಮೂರ್ಖರಂತೆ ವರ್ತಿಸಿಯೂ ನಮ್ಮನ್ನು ನಾವು ಬುದ್ಧಿವಂತರು ಎಂದುಕೊಂಡಿರುತ್ತೇವೆ ಎನ್ನುವದನ್ನು ಮನಗಾಣಿಸುವ ಆ ಕೃತಿಯ ಅನುವಾದದ ಮೊದಲ ಕಂತು ಈ ಲೇಖನ. 

3013 Views
Article - VNA001

ಹರಟೆ ಹೊಡೆಯೋಣ ಎಂದು ಕೂಡುವ ಮುನ್ನ...

ಕೆಲವರ ಸ್ವಭಾವ, ಎದುರಿಗೊಬ್ಬ ವ್ಯಕ್ತಿ ಕಂಡರೆ ಸಾಕು, ಹರಟೆಗಿಳಿದುಬಿಡುತ್ತಾರೆ. ಎದುರಿಗಿನ ವ್ಯಕ್ತಿ ಜಾಸ್ತಿ ಮಾತನಾಡದಿದ್ದರೂ, ತಮ್ಮ ಮಾತನ್ನು ಕೇಳದಿದ್ದರೂ, ಕೇಳಲು ಅಪೇಕ್ಷೆಯನ್ನು ತೋರದಿದ್ದರೂ ಸುಮ್ಮನೆ ಮಾತನಾಡುತ್ತಿರುತ್ತಾರೆ. ಇನ್ನು ಆತ್ಮೀಯರು ದೊರಕಿಬಿಟ್ಟರಂತೂ ಸಮಯದ ಪರಿವೆಯಲ್ಲದೆ ಹರಟೆಗೆ ತೊಡಗುತ್ತಾರೆ. ಅಂತಹ ಜನರಿಗೆ ಮಾಧ್ವಪರಂಪರೆಯ ಭೂಷಾಮಣಿ ಶ್ರೀ ಯಾದವಾರ್ಯರು ಕಲಿಸುವ ಅದ್ಭುತ ಪಾಠವೊಂದು ಇಲ್ಲಿದೆ. ಓದಿ. 

1924 Views