(You can only view comments here. If you want to write a comment please download the app.)
Mallesh,Bangalore
10:38 AM, 28/11/2019
ಗುರುಗಳಿಗೆ ನನ್ನ ಭಕ್ತಿಪೂರಕ ನಮಸ್ಕಾರಗಳು.... ನನ್ನ ಮನದಲ್ಲಿ ಇದ್ದ ಪ್ರಶ್ನೆಗೆ ನೂರಕ್ಕೆ ನೂರರಷ್ಟು ಉತ್ತರ ಸಿಕ್ಕಿದೆ... ಆದರೂ ಮನಸ್ಸು ಇನ್ನೂ ಬೇಕು ಬೇಡಗಳಿಲ್ಲಿ ಸಿಲುಕಿ ನರಳಾಡುತಿದೆ..
K.Raghu,Bengaluru
7:35 PM , 19/01/2018
Sri gurubyonamaha acharyare hengasaru mathu hennu makkalu sri vishnu sahasrranama helabahude dayavittu tilisi Raghu Bengaluru
Shravan Prabhu,Kumta near gokarn
10:14 PM, 19/04/2017
Acharyarige sasthanga namaskaragalu.
Acharyare, "DEVARU NAMAGEKE KASHTA NEEDUTTANE" emba articlenalli adbhutavagi vivarane neediddiri.
Acharyare, devaru poorva janmadalli maadida papa karmada phalavannu mundina janmadalli needutteve endu keliddene.
Acharyare, obba nyayadheesha yarigadaru SHIKSHE yannu neediddare aa vyakthige tanu enu tappu maadiddene ennuva ariviruttade, Mattu adara bagge pashatapa paduva avkashavuu iruutade.
Acharyare, naavu hindina janmadalli enu papa maadiddevo gottilla, adara arivuu illa, pashatapa paduva avkashavu illavenda mele aa papakke SHIKSHE kottu proyajana vadaru enu.
Udaharanege: obba kalla Tanna edee jeevanadalli kallatana madi nantara ondu Dina sattu, aa kallana papada SHIKSHE yannu BHAGAVANTA mundina janmadalli kottaare upayoga videye? Aa kallanige taanu maadida papada areeve illa venda mele ,aa SHIKSHE kottu proyajana vadaru enu? Dayavittu tilisi Kodi🙏🙏🙏
Ondu vele nanna prashne asambadha vagiddare dayavittu kshamisi🙏🙏🙏
Vishnudasa Nagendracharya
ಅತ್ಯುತ್ತಮವಾದ ಪ್ರಶ್ನೆ.
ನಾವು ಈಜನ್ಮದಲ್ಲಿ ದುಃಖ ಅನುಭವಿಸುತ್ತಿದ್ದೇವೆ ಎನ್ನುವದೇ ನಾವು ಹಿಂದೆ ಪಾಪ ಮಾಡಿದ್ದಕ್ಕೆ ಸಾಕ್ಷಿ. ಇಲ್ಲದಿದ್ದಕೆ ದುಃಖಕ್ಕೆ ಕಾರಣವೇನು. ನಾವು ಮಾಡಿದ ತಪ್ಪುಗಳೇ ನಮ್ಮ ದುಃಖಕ್ಕೆ ಕಾರಣವಾದರೆ, ಮಗು ಹುಟ್ಟುತ್ತಲೇ ರೋಗ ಇಟ್ಟುಕೊಂಡು ಹುಟ್ಟುತ್ತದಲ್ಲ ಅದಕ್ಕೇನು ಕಾರಣ. ತಾನು ನಡೆಯಬೇಕಾದ ಸ್ಥಳದಲ್ಲಿಯೇ ನಡೆಯುತ್ತಿರುವ, ಎಚ್ಚರದಿಂದಿರುವ ವ್ಯಕ್ತಿಗೆ ದಿಢೀರನೆ ಗಾಡಿಯೊಂದು ಬಂದು ಗುದ್ದಿ ಅಪಘಾತ ಮಾಡುತ್ತದಲ್ಲ ಅದಕ್ಕೇನು ಕಾರಣ. ಯಾರೋ ತಪ್ಪು ಮಾಡಿದರು ಎಂಬ ಕಾರಣಕ್ಕೆ, ಅವರನ್ನು ಬೈಯಲಾಗದ ಸಿಟ್ಟಿಗೆ ಬಂದ ಗಂಡ ತಪ್ಪೇ ಮಾಡದ ಹೆಂಡತಿಯ ಮೇಲೆ ಚೀರಾಡಿ ಅವಳಿಗೆ ನೋವು ನೀಡುತ್ತಾನಲ್ಲ, ಅದಕ್ಕೇನು ಕಾರಣ.
ಹೀಗೆ, ನಮ್ಮ ತಪ್ಪಿಲ್ಲದಿದ್ದರೂ ನಾವು ದುಃಖ ನೋವು ಅನುಭವಿಸುವದು ಕಂಡಿದೆ. ಕಾರಣವಿಲ್ಲದೇ ಕಾರ್ಯವಿಲ್ಲ. ಹೀಗಾಗಿ ಈ ಜನ್ಮದಲ್ಲಿ ತಪ್ಪು ಮಾಡಿಲ್ಲ, ಆದರೆ ಈ ನೋವಿಗೆ ಕಾರಣವಾದ ಒಂದು ಪಾಪವನ್ನು ಹಿಂದಿನ ಜನ್ಮಗಳಲ್ಲಿ ಮಾಡಿದ್ದೇವೆ. ಶಾಸ್ತ್ರದಿಂದ ಈ ಎಚ್ಚರವನ್ನು ತಂದುಕೊಳ್ಳಬೇಕು. ಮತ್ತು ಇನ್ನು ಮುಂದೆ ತಪ್ಪು ಮಾಡದೇ ಬದುಕಬೇಕು.
ಪರಮಾತ್ಮನಿಗೆ ಇದೇ ಅಪೇಕ್ಷೆ ಇರುವದು. ನಾವು ನಮ್ಮ ಬುದ್ಧಿಯನ್ನು ಉಪಯೋಗಿಸಬೇಕಾಗಿದೆ. ಶಾಸ್ತ್ರದ ಅಧ್ಯಯನ ಮಾಡಿ, ಕರ್ಮಗಳ ಕುರಿತು ತಿಳಿದು, ಆ ಕರ್ಮಗಳ ಸಂಕೋಲೆಯಿಂದ ಹೊರ ಬರಲು ಭಗವಂತನನ್ನು ಪ್ರಾರ್ಥಿಸಬೇಕು, ಅವನು ನಮ್ಮನ್ನು ಉದ್ಧರಿಸಬೇಕು.
ಇದೇ ಸಂಸಾರದಾಟದ ತಿರುಳು.
ನಮ್ಮನ್ನು ಉದ್ಧಾರ ಮಾಡಲು ಪರಮಾತ್ಮ ನೀಡಿರುವ ದಾರಿ.