(You can only view comments here. If you want to write a comment please download the app.)
ಭಾರ್ಗವ ಎಂ ಆರ್,ಮಂಡ್ಯ
12:35 AM, 07/01/2019
ಆಚಾರ್ಯರೇ ನಮಸ್ಕಾರಗಳು 🙏
ನೀವು ಮಡಿಯ ಬಗೆಗೆ ವಿವರಿಸುವಾಗ ಬ್ರಹ್ಮಚಾರಿಗಳಿಗೆ ಕಚ್ಛೆ ನಿಷೇಧ ಎಂದು ತಿಳಿಸಿರುತ್ತೀರಿ. ಕೌಪೀನ ಧರಿಸಿ ಮೇಲೆ ದಟ್ಟಿಯನ್ನು ಉಡಬೇಕು ಎಂದಿದ್ದೀರಿ.
ಇಲ್ಲಿ ಬ್ರಹ್ಮಚಾರಿಗಳು ಎಂದರೆ ಮದುವೆಯಾಗದವರು ಎಂದೇ? ಅಥವಾ ವಯಸ್ಸಿನ ಮಿತಿ ಇದೆಯೇ ? ಹಾಗೂ ಬ್ರಹ್ಮಚರ್ಯ ಆಚರಣೆ ವಿಧಿ ವಿಧಾನಗಳು ಯಾವುವು?
H. Suvarna kulkarni,Bangalore
7:44 PM , 30/10/2017
ಗುರುಗಳಿಗೆ ಪ್ರಣಾಮಗಳು ಒಂದು ದಿನದಲ್ಲಿ ಎರಡು ಬಾರಿ ಸ್ನಾನ ಮಾಡಬಾರದು ಎನ್ನುವುದು ಕೆಲವು ಹಿರಿಯರು ಹೇಳುವುದನ್ನು ಕೇಳಿದ್ದೇನೆ ಆದರೆಆಫೀಸ್ನಿಂದ ಬಂದು ಸ್ನಾನ ಮಾಡುವುದು ಆರೋಗ್ಯದೃಷ್ಟಿಯಿಂದ ಧಮ೯ದ ದೃಷ್ಟಿಯಿಂದ ಒಳ್ಳೆಯದು ಎಂದು ತಿಳಿಸಿದಿರಿ ಯಾವುದು ಸರಿ ಅಥವಾ ಯಾವ ಸಂದಬ೯ಕ್ಕೆ ಸರಿ ದಯವಿಟ್ಟು ತಿಳಿಸಿ ಕೊಡಿ
Vishnudasa Nagendracharya
ಎರಡು ಸ್ನಾನಗಳು ವಿಹಿತ. ಎರಡಕ್ಕಿಂತ ಹೆಚ್ಚು ಸ್ನಾನ ಬ್ರಹ್ಮಚಾರಿ ಮತ್ತು ಗೃಹಸ್ಥರಿಗೆ ಅಷ್ಟು ಪ್ರಶಸ್ತವಲ್ಲ. ವಿಶೇಷವ್ರತವನ್ನು ಸ್ವೀಕರಿಸಿರುವ ಗೃಹಸ್ಥ ಬ್ರಹ್ಮಚಾರಿಗಳೂ ಸಹ ಮೂರು ಕಾಲದಲ್ಲಿ ಸ್ನಾನ ಮಾಡಬಹುದು. ಈ ಎಲ್ಲ ಸ್ನಾನಗಳೂ ಕ್ರಿಯಾಸ್ನಾನಗಳು.
ಮಲಸ್ನಾನಕ್ಕೆ ಕಾಲ, ದೇಶ, ಪ್ರಸಂಗಗಳ ಕಟ್ಟುಪಾಡುಗಳಿಲ್ಲ. ಯಾವಾಗ ಮೈಲಿಗೆಯಾಗುತ್ತದಯೋ, ತುಂಬ ಬೆವರು ಮುಂತಾದವುಗಳಿಂದ ಗಲೀಜು ಉಂಟಾಗುತ್ತದೆಯೋ ಆಗ ಸ್ನಾನ. ಉದಾಹರಣೆಗೆ ರಾತ್ರಿ ಸ್ನಾನ ಮಾಡಬಾರದು ಎಂಬ ಮಾತಿದೆ. ರಾತ್ರಿ ಮೈಲಿಗೆಯ ಸ್ಪರ್ಶವಾದರೆ ಸ್ನಾನ ಮಾಡಲೇಬೇಕಲ್ಲವೇ?
ಹಾಗೆ ಇಲ್ಲಿ ಆಫೀಸಿನಿಂದ ಬಂದ ಬಳಿಕ ಸ್ನಾನದ ಕುರಿತ ಮಾತಿದೆ.
ಮೈಲಿಗೆಯ ಸಂಭವನೀಯತೆ ಅಧಿಕವಾಗಿ ಇರುವದರಿಂದ ಸ್ನಾನವನ್ನು ಮಾಡಬೇಕು ಎಂದು ಹೇಳಲಾಗಿದೆ.
ಕ್ರಿಯಾಸ್ನಾನ ಎಂದರೆ ಮಂತ್ರಪುರಸ್ಸರವಾಗಿ ಮಾಡುವ ಸ್ನಾನ. ಮಂತ್ರ, ಅರ್ಘ್ಯ ಎಲ್ಲವೂ ಇವೆ. ಮಲಸ್ನಾನ ಎಂದರೆ ದೇಹದ ಮೈಲಿಗೆಯನ್ನು ಕಳೆದುಕೊಳ್ಳಲು ಮಾಡುವ ಸ್ನಾನ.
Pranesh ಪ್ರಾಣೇಶ,Bangalore
6:21 AM , 30/10/2017
ಆಚಾರ್ಯ ಕೆಲವೊಂದು ಹತ್ತಿ ಹಾಗೂ ರೇಶಿಮೆ ವಸ್ತ್ರದ ಅಂಚು ಬಂಗಾರದ ಬಣ್ಣದ ವಸ್ತುವಿನಿಂದ ಕೂಡಿರುತ್ತದೆ ಅದು ಪ್ಲಾಸ್ಟಿಕ್ ಎಂದು ತಿದುಕೊಂಡೆ
ಶುದ್ಧ ರೇಶಿಮೆ ವಸ್ತ್ರ ಈ ರೀತಿಯಾದ ಅಂಚನ್ನು ಕೂಡಿರದೆ self border ಆಗಿ ಬರುತ್ತೆ ಅಂತಃ ಪಂಚೆ ಆಹ್ನಿಕ ಕ್ಕೆ ಜಪಕ್ಕೆ ಉಡಬಹುದೇ
Note : ಥಾನ್ ಬಟ್ಟೇ ಇಂದ ಹರಿಸಿದ ರೇಶಿಮೆ ವಸ್ತ್ರ ದ ಎರಡೂ ತುದಿಗಳನ್ನು ಹೊಳೆದು ಜಪಕ್ಕೆ ಉಡುಬಹುದೇ
ಅಚಾರ್ಯ ಪ್ರಯಾಣ ಸಮಯದಲ್ಲಿ ಬಟ್ಟೆಗಳ ಉಪಯೋಗ ವಿಧಿ ತಿಳಿಸಿ
ಉ: ರೇಶಿಮೆ ವಸ್ತ್ರ ಪರ ಊರಿಗೆ ತೆಗೆದುಕೊಂಡು ಹೋದಾಗ ಹೇಗೆ ಬಳಸಬೇಕು
Vishnudasa Nagendracharya
ರೇಶಿಮೆ ಮುಂತಾದ ವಸ್ತ್ರಗಳಿಗೆ ಅಶೌಚ ಉಳ್ಳವರ ಸಂಪರ್ಕವಾದರೆ ಅದು ಮೈಲಿಗೆಯೇ. ಹೀಗಾಗಿ ವಸ್ತ್ರಗಳನ್ನು ಬ್ಯಾಗಿನಲ್ಲಿಟ್ಟುಕೊಂಡು ಬಸ್ಸು ರೈಲುಗಳಲ್ಲಿ ಹೋದಾಗ ಮೈಲಿಗೆಯಾಗುವದು ಸಹಜ. ಆದ್ದರಿಂದ ಒಂದು ಕೃಷ್ಣಾಜಿನದ ಪೆಟ್ಟಿಗೆಯಲ್ಲಿ ಅಥವಾ ಕೃಷ್ಣಾಜಿನದಲ್ಲಿ ಸುತ್ತಿ ತೆಗೆದುಕೊಂಡು ಮಡಿಯಲ್ಲಿ ಬಳಸಬೇಕು.
Pranesh ಪ್ರಾಣೇಶ,Bangalore
6:28 AM , 30/10/2017
ಅಚಾರ್ಯ ಪ್ರಯಾಣ ಸಮಯದಲ್ಲಿ ಬಟ್ಟೆಗಳ ಉಪಯೋಗ ವಿಧಿ ತಿಳಿಸಿ
ಉ: ರೇಶಿಮೆ ವಸ್ತ್ರ ಪರ ಊರಿಗೆ ತೆಗೆದುಕೊಂಡು ಹೋದಾಗ ಹೇಗೆ ಬಳಸಬೇಕು
Pranesh ಪ್ರಾಣೇಶ,Bangalore
10:41 PM, 29/10/2017
ಆಚಾರ್ಯ ಸ್ತ್ರೀಯರ ಸ್ನಾನ ತಿಳಿಸಿದ್ದೀರಿ ಸ್ನಾನ ನಂತರ ವಿಧಿಗಳನ್ನು ತಿಳಿಸಿ
ಕೆಲವು ನದಿ ಸ್ನಾನದಲ್ಲಿ ಸ್ತ್ರೀಯರು ಬಟ್ಟೆ ಬದಲಿಸಲು ಆಗುವುದೇ ಇಲ್ಲ ಇಂತಹ ಸಂಧರ್ಭದಲ್ಲಿ ಒದ್ದೆ ಬಟ್ಟೆಯಲ್ಲೇ ಯೋಗ್ಯ ಸ್ಥಳಕ್ಕೆ ಹೋಗಿ ಬದಲಿಸುತ್ತಾರೆ ಈ ವಿಧಾನ ಸರಿಯೇ?
ಜನನಾ ಮರಣ ರಾಜಸ್ವಲೆ ಆಶೌಚ ಸಂಧರ್ಭದಲ್ಲಿ ಉಣ್ಣೆಯ ಬಟ್ಟೆ ಮುಟ್ಟಿದಾಗ ಅದರ ಶುದ್ದಿ ಹೇಗೆ
Pranesh ಪ್ರಾಣೇಶ,Bangalore
10:41 PM, 29/10/2017
ಆಚಾರ್ಯ ಸ್ತ್ರೀಯರ ಸ್ನಾನ ತಿಳಿಸಿದ್ದೀರಿ ಸ್ನಾನ ನಂತರ ವಿಧಿಗಳನ್ನು ತಿಳಿಸಿ
ಕೆಲವು ನದಿ ಸ್ನಾನದಲ್ಲಿ ಸ್ತ್ರೀಯರು ಬಟ್ಟೆ ಬದಲಿಸಲು ಆಗುವುದೇ ಇಲ್ಲ ಇಂತಹ ಸಂಧರ್ಭದಲ್ಲಿ ಒದ್ದೆ ಬಟ್ಟೆಯಲ್ಲೇ ಯೋಗ್ಯ ಸ್ಥಳಕ್ಕೆ ಹೋಗಿ ಬದಲಿಸುತ್ತಾರೆ ಈ ವಿಧಾನ ಸರಿಯೇ?
ಜನನಾ ಮರಣ ರಾಜಸ್ವಲೆ ಆಶೌಚ ಸಂಧರ್ಭದಲ್ಲಿ ಉಣ್ಣೆಯ ಬಟ್ಟೆ ಮುಟ್ಟಿದಾಗ ಅದರ ಶುದ್ದಿ ಹೇಗೆ