(You can only view comments here. If you want to write a comment please download the app.)
Raghavendra,Bangalore
5:07 PM , 04/08/2019
ಗುರುರಾಯರ ಆರಾಧನೆ ದಧಿವ್ರತದಲ್ಲಿ ಬರುತ್ತದೆ. ಆದರೆ ಬಹುತೇಕ ಮಠಗಳಲ್ಲಿ ಪಂಚಾಮೃತಕ್ಕೆ ಗಟ್ಟಿ ಮೊಸರು ಬಳಸುತ್ತಾರೆ. ಮಠಗಳಲ್ಲೇ ಹೀಗೆ ಮಾಡಿದರೆ ಮಠಗಳನ್ನು ಅನುಸರಿಸುವ ನಮ್ಮ ಪಾಡೇನು? ರಾಯರಿಗೆ ಅರ್ಪಿತವಾದ ಫಲ ಪಂಚಾಂಮೃತ ಸ್ವೀಕಾರ ಮಾಡಬೇಕೋ ಬಿಡಬೇಕೋ... ಧರ್ಮ ಸಂಕಟ
Vishnudasa Nagendracharya
ಶಾಸ್ತ್ರವಿರುದ್ಧವಾಗಿ ಯಾರೇ ನಡೆದರೂ ತಪ್ಪೇ. ಆಯಾ ಮಾಸದಲ್ಲಿ ನಿಷಿದ್ಧವಾದ ಪದಾರ್ಥವನ್ನು ಬಳಸಿ ನೈವೇದ್ಯ ಪಂಚಾಮೃತಗಳನ್ನು ಮಾಡಿದರೆ ಸರ್ವಥಾ ಸ್ವೀಕಾರ ಮಾಡಬಾರದು.
ಒಂದು ಉದಾಹರಣೆ — ನೀವು ವ್ರತ ಮಾಡುತ್ತಿದ್ದೀರಿ, ಯಾವುದೋ ಮಠಕ್ಕೆ ಹೋಗಿದ್ದೀರಿ. ಅಲ್ಲಿ ವ್ರತದ ಅಡಿಗೆ ಮಾಡಿಲ್ಲ, ನೀವು ಸ್ವೀಕರಿಸುತ್ತೀರೋ, ಇಲ್ಲ. ಹಾಗೆಯೇ ಇದು.
ಇಲ್ಲಿ, ಪಂಚಾಮೃತವನ್ನು ಗುರುಗಳ ವೃಂದಾವನಕ್ಕೆ ಅಭಿಷೇಕ ಮಾಡಿರುತ್ತಾರಲ್ಲ, ಅದಕ್ಕಾಗಿ ಪ್ರಶ್ನೆ ಮಾಡುತ್ತಿದ್ದೇವೆ ಎಂದು ನೀವು ಹೇಳಬಹುದು.
ವ್ರತ ಮಾಡುವ ಸಾಮಾನ್ಯರಾದ ನಾವು ನೀವೇ ಅವ್ರತದನ್ನು ಸ್ವೀಕಾರ ಮಾಡುವದಿಲ್ಲ ಎಂದಾದ ಬಳಿಕ, ರಾಯರು ಹೇಗೆ ಸ್ವೀಕಾರ ಮಾಡುತ್ತಾರೆ. ಅವರು ಮಾಡಿರುವದೇ ಇಲ್ಲ.
ಹೀಗಾಗಿ ಅದು ರಾಯರ ಪ್ರಸಾದವಾಗಿರುವದೇ ಇಲ್ಲವಾದ್ದರಿಂದ, ಪ್ರಸಾದವನ್ನು ಧಿಕ್ಕರಿಸಿದಂತಾಗುವದೇ ಇಲ್ಲ.
Arun Kumar M N,Banglore
7:26 AM , 23/08/2018
ವಿಹಿತ ಪದಾರ್ಥಗಳು ಯಾವ್ಯಾವುದು..??
Vishnudasa Nagendracharya
VNA242
ವಿಹಿತ ನಿಷಿದ್ಧ ತರಕಾರಿ ಹಣ್ಣುಗಳು
ಈ ಲೇಖನದಲ್ಲಿ ವಿವರಣೆಯಿದೆ.
ನೀವು ಹೇಳಿದ ಕ್ರಮದಲ್ಲಿ ಮಿಕ್ಸಿ ಮುಂತಾದವುಗಳಿಂದಲೂ ಬೆಣ್ಣೆ ತೆಗೆದು ಮಜ್ಜಿಗೆಯನ್ನು ಬಳಸಬಹುದು.
ಇಡಿಯ ತಿಂಗಳು ಅದನ್ನೂ ತ್ಯಾಗ ಮಾಡಿದರೆ ಖಂಡಿತ ತಪ್ಪಿಲ್ಲ. ನಮ್ಮ ಮನೆಯಲ್ಲಿ ಇದೇ ಕ್ರಮ. ಬೆಣ್ಣೆ ತೆಗೆದ ಮಜ್ಜಿಗೆಯಿದ್ದರೆ ಬಳಸುತ್ತೇವೆ. ಇಲ್ಲವಾದಲ್ಲಿ ಬಳಸುವದೇ ಇಲ್ಲ.