ಒಂಭತ್ತು ಪದ್ಯಗಳ ಸ್ತೋತ್ರವನ್ನು ಸಾಮಾನ್ಯವಾಗಿ ನವರತ್ನಮಾಲಿಕೆ ಎನ್ನುತ್ತಾರೆ.
ನಮ್ಮ ಮಾಧ್ವರಲ್ಲಿ ಅಷ್ಟಕಗಳು ಹೆಚ್ಚಿವೆ. ನವರತ್ನಮಾಲಿಕೆ ಎಂದು ಹೆಸರು ಪಡೆದ ಪ್ರತ್ಯೇಕವಾಗಿ ಸ್ತೋತ್ರ ನಮ್ಮಲ್ಲಿಲ್ಲ. ಪ್ರಮೇಯನವಮಾಲಿಕಾ ಎಂದು ಶ್ರೀ ನಾರಾಯಣಪಂಡಿತಾಚಾರ್ಯರ ಕೃತಿಯಿದೆ. 33 ಶ್ಲೋಕಗಳ ಕೃತಿ. ಅಲ್ಲಿ ನವ ಎಂದರೆ ಒಂಭತ್ತು ಎಂದು ಅರ್ಥವಲ್ಲ. ಹೊಸದು ಎಂದರ್ಥ.
ನವರತ್ನಮಾಲಿಕೆ ಎಂದು ತುಂಬ ಪ್ರಸಿದ್ಧವಾದ ಎರಡು ದೇವೀಸ್ತೋತ್ರಗಳಿವೆ. ಅವುಗಳಲ್ಲಿ ಒಂದನ್ನು ಶಂಕರರು ಬರೆದಿದ್ದಾರೆ ಎಂದು ಹೇಳುತ್ತಾರೆ. ಮತ್ತೊಂದನ್ನು ಶ್ಯಾಮಾಶಾಸ್ತ್ರಿಗಳು ಬರೆದಿದ್ದಾರೆ.