ಸ್ವರ್ಣಗೌರಿ ಆಚರಣೆ ಮಾಡದೆ ಕೇವಲ ಗಣೇಶ ಚೌತಿಯ ಆಚರಣೆ ಮಾಡುವವರು ಚೌತಿಯಂದೇ ವಿಸರ್ಜನೆಯನ್ನು ಮಾಡಬಹುದು.
ಸ್ವರ್ಣಗೌರಿಯ ಆಚರಣೆಯನ್ನು ಮಾಡಿದವರು ಈ ಬಾರಿ ಮೂರನೆಯ ದಿವಸದಂದು (ಶನಿವಾರ) ವಿಸರ್ಜನೆ ಮಾಡಬಹುದು.
ಪ್ರತೀದಿವಸ ಬೆಳಿಗ್ಗೆ ಷೋಡಶೋಪಚಾರ ಪೂಜೆ ಸಂಜೆ ಪಂಚೋಪಚಾರ ಪೂಜೆಯನ್ನು ಮಾಡಬೇಕು.
ಸುದರ್ಶನಚಂದ್ರ,ಕೋಲಾರ
1:12 PM , 21/08/2017
ಆಚಾರ್ಯರಿಗೆ ನಮಸ್ಕಾರಗಳು,
ಈ ಬಾರಿ (ಹೇಮಲಂಬ ಸಂವತ್ಸರದಲ್ಲಿ) ಗೌರಿಯನ್ನು ಯಾವತ್ತು ಕಳುಹಿಸಬೇಕು? ದಯಮಾಡಿ ತಿಳಿಸಿ.