(You can only view comments here. If you want to write a comment please download the app.)
Madhusudan Gururajarao Chandragutti,Belagavi
2:37 PM , 28/12/2019
ಪೂಜ್ಯ ಆಚಾರ್ಯರಿಗೆ ಹೃತ್ಪೂರ್ವಕ ಪ್ರಣಾಮಗಳು. ಸ್ನಾನದ ನಂತರ ಶ್ರೀ ಹರಿವಾಯುಸ್ತುತಿಯನ್ನು ಪಠಿಸಿ ನಂತರವೇ ಗೋಪಿಚಂದನ ಮುದ್ರೆಗಳನ್ನು ಧರಿಸಬೇಕು ಎಂದು ಕೆಲವರು ಹೇಳುತ್ತಾರೆ. ಅಂಥ ನಿಯಮವಿದೆಯೇ? ದಯವಿಟ್ಟು ತಿಳಿಸಬೇಕು.
Pavan,Bengaluru
1:13 PM , 14/08/2018
ಹಿಂದಿನ ದಿನದ ನಿರ್ಮಾಲ್ಯ ಮುಗಿದ ನಂತರ ನಿರ್ಮಾಲ್ಯ ತೀರ್ಥ ತೆಗೆದುಕೊಳ್ಳುವ ಮುಂಚಿತವಾಗಿ ಅದನ್ನು ಬೇರೆ ಮಾಡಿ ಮಡಿಯಲ್ಲಿ ಇಟ್ಟುಕೊಂಡರೆ ಮಾರನೇದಿನ ಗೋಪಿಚಂದನ ಧಾರಣೆಗೆ ಉಪಯೋಗಿಸ ಬಹುದ....??
Vishnudasa Nagendracharya
ಉಪಯೋಗಿಸಬಹುದು. ಆದರೆ ಶುದ್ಧ ಮಡಿಯಲ್ಲಿ ದೇವರ ಪೂಜೆಯನ್ನು ಮಾಡುವಾಗ ಆ ದಿವಸದ ನಿರ್ಮಾಲ್ಯದಿಂದಲೇ ಗೋಪೀಚಂದನವನ್ನು ಹಚ್ಚಿಕೊಳ್ಳುವದು ಉತ್ತಮ.
ಕೆಲವರಲ್ಲಿ ಆ ಪದ್ಧತಿ ಇದೆ.
ಮಾಡಬಹುದು.
ಶಾಸ್ತ್ರದ ಪ್ರಕಾರ, ಸಾಲಿಗ್ರಾಮ, ಸುದರ್ಶನ, ಚಕ್ರಾಂಕಿತ, ಪ್ರತಿಮೆ, ವಿಷ್ಣುಪಾದಗಳಿಗೆ ಅಭಿಷೇಕವಾದರೇ ತೀರ್ಥವಾಗುವದು.
ಆದರೆ ಸುದರ್ಶನಕ್ಕೆ ಮಾತ್ರ ಅಭಿಷೇಕ ಪೂಜೆಯ ಪದ್ಧತಿ ಅನಿವಾರ್ಯಸಂದರ್ಭಗಳಲ್ಲಿ ಮಾಡುವ ಪದ್ಧತಿ ನಮ್ಮಲ್ಲಿದೆ. ಹೀಗಾಗಿ ತಪ್ಪಿಲ್ಲ.