Article - VNA200

ಸಾವನ್ನು ಎದುರಿಸುವ ಬಗೆ — 2

06/10/2016


Download Article Share to facebook View Comments2879 Views

Comments

(You can only view comments here. If you want to write a comment please download the app.)
 • ಭಾರದ್ವಾಜ,ಬೆಂಗಳೂರು

  2:38 PM , 25/11/2017

  ಶ್ರೀಗುರುಭ್ಯೋ ನಮಃ
  
  
  ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು
  
  ದುಂದುಕಾರಿ ಪಿಶಾಚಯೋನಿಯಲ್ಲಿ ಶ್ರೀಮದ್ ಭಾಗವತದ ಶ್ರವಣ(ಸಾಧನೆ) ಮಾಡಿ ಉದ್ದಾರವಾದನಲ್ಲ ಗುರುಗಳೆ. ಇದನ್ನು ಹೇಗೆ ಅರ್ಥ ಮಾಡಿಕೊಳ್ಳುವುದು ? ದಯಮಾಡಿ ತಿಳಿಸಿ

  Vishnudasa Nagendracharya

  ಅದರ ಉಪನ್ಯಾಸದಲ್ಲಿಯೇ ವಿವರಿಸಿದ್ದೇನೆ. 
  
  ಗೋಕರ್ಣ ಮಾಡಿದ ಗಯಾಶ್ರಾದ್ಧದ ಫಲವಾಗಿ ಧುಂಧುಕಾರಿಗೆ ಭಾಗವತಶ್ರವಣ ಮಾಡುವ ಅರ್ಹತೆ ಲಭಿಸಿತು. ಅವನು ಭಕ್ತಿಯಿಂದ ಶ್ರದ್ಧೆಯಿಂದ ಶ್ರವಣ ಮಾಡಿದ್ದಕ್ಕಾಗಿ ಫಲವನ್ನೂ ಪಡೆದ. 
 • Jayashree Karunakar,Bangalore

  10:08 PM, 23/11/2017

  ಗುರುಗಳೆ
  
  ೧. ಮಹಾಪುಣ್ಯವಂತರು ಮೂರೂಮುಕ್ಕಾಲು ಗಂಟೆಯಲ್ಲಿ ಯಮಲೋಕವನ್ನು ಸೇರುತ್ತಾರೆ ಅದಕ್ಕಾಗಿಯೇ ಶವ ಸಂಸ್ಕಾರವನ್ನು ಅಷ್ಟರೂಳಗೆ ಮಾಡಬೇಕೆಂದಿರಿ. ಅದಕ್ಕೂ ಯಮಲೋಕದ ಪ್ರಯಾಣಕ್ಕೂ ಎನುಸಂಭಂಧ ?
  
  ೨. ಜೀವನ ದೇಹ ತ್ಯಾಗದ ನಂತರ ಅವನಲ್ಲಿ ಲಿಂಗದೇಹ, ಅನಿರುದ್ಧ ಶರೀರದ ಮೇಲೆ ಯಾತನೆಯನ್ನು ಅನುಭವಿಸಲು ಯಾತನಾ ಶರೀರ ಬರುವುದಾ ?

  Vishnudasa Nagendracharya

  ೧. ಶವ ಸಂಸ್ಕಾರವಾಗದ ಹೊರತು ಜೀವನಿಗೆ ಮುಂದಿನ ಮಾರ್ಗವನ್ನು ಯಮದೇವರು ತಿಳಿಸುವದಿಲ್ಲ. 
  
  ೨. ಹೌದು. ಯಾತನಾ/ಭೋಗ ಶರೀರಗಳೂ ಸ್ಥೂಲಶರೀರಗಳೇ. 
  
  
 • H. Suvarna kulkarni,Bangalore

  10:15 AM, 02/11/2017

  ಒಳ್ಳೇ ಸಮಂಜಸ ವಾದ ಮತ್ತು ಸರಿಯಾದ ಉತ್ತರ
 • Mohan,Bengaluru

  2:40 PM , 01/11/2017

  ಅಚಾರ್ಯರಿಗೆ ಪ್ರಣಾಮಗಳು..🙏🙏
  ಯಾತನಾಮಯ ಶರೀರದಿಂದ ತನ್ನ ಮಕ್ಕಳಿಗೆ, ಬಂಧುಗಳಿಗೆ ವಿಷ್ಣುವಿನ ಸ್ಮರಣೆ ಮಾಡು ಅಂತ ಹೇಳುವ ಬದಲು ಆ ಜೀವನೇ ಭಗವಂತನ ನಾಮೋಚ್ಚಾರಣೆ ಮಾಡಬಹುದಲ್ಲ? ಅಥವಾ ಮಾಡಿದರೂ ಅದು ಹರಿಗರ್ಪಿತವಾಗುವುದಿಲ್ಲವೇ?

  Vishnudasa Nagendracharya

  ನಾವು ಮನುಷ್ಯರಾಗಿದ್ದಾಗ ಮಾತ್ರ ಸಾಧನೆ ಮಾಡಲು ಸಾಧ್ಯ, ಅರ್ಥಾತ್ ಇಲ್ಲಿ ಮಾಡುವ ಕರ್ಮಗಳು ಮಾತ್ರ ಸಾಧನೆ ಎಂದು ಕರೆಸಿಕೊಳ್ಳುತ್ತವೆ. 
  
  ಯಾತನಾಶರೀರ, ಯಾತನೆಗಾಗಿ ಮಾತ್ರ. ಸಾಧನೆಗಾಗಿ ಅಲ್ಲ. ಹೀಗಾಗಿ ಅಲ್ಲಿ ನಾಮಸ್ಮರಣೆಯನ್ನೂ ಮಾಡಲಾಗುವದಿಲ್ಲ. ನಾಮಸ್ಮರಣೆಯಿಂದ ಉದ್ಧಾರ ಎಂದು ತಿಳಿದಿರುತ್ತದೆ. ಆದರೆ, ನಾಮಸ್ಮರಣೆ ಮಾಡಲಾಗುವದಿಲ್ಲ. ಕದಾಚಿತ್ ದೇವರ ಹೆಸರನ್ನು ಹೇಳಿದರೂ ಅದೂ ಸಾಧನೆಯ ಲೆಕ್ಕಕ್ಕಿಲ್ಲ. ಕ್ರೀಡಾಂಗಣದಿಂದ ಹೊರಬಿದ್ದ ಆಟಗಾರನ ಆಟ ಹೇಗೆ ಲೆಕ್ಕಕ್ಕಿರುವದಿಲ್ಲವೋ ಹಾಗೆ. 
 • Sathyanarayana R B,Bangalore

  3:15 PM , 01/11/2017

  Excellent acharyare...and good question as well