ಒಣ ದ್ರಾಕ್ಷಿಯನ್ನು seedless ದ್ರಾಕ್ಷಿ ಇಂದ ಮಾಡುವುದಲ್ಲವೇ ? ಹೇಗೆ ಬಹು ಬೀಜ ಘಲವಾಗಲು ಸಾದ್ಯ ?
Vishnudasa Nagendracharya
ಇಂದಿನ ವಿಜ್ಞಾನಿಗಳು ದ್ರಾಕ್ಷಿಯಲ್ಲಿ ಒಳಗೆ ಬೀಜವಿಲ್ಲದಂತೆ ದ್ರಾಕ್ಷಿಯನ್ನು ಬೆಳೆಸಲು ಸಮರ್ಥರಾಗಿದ್ದಾರೆ. ಆದರೆ ಅದು ನಿರ್ಮಾಣವಾಗುವದು ಬೀಜದಿಂದಲೇ. ಮತ್ತು ದ್ರಾಕ್ಷಿ ಎಂದಿಗೂ ಬಹುಬೀಜಫಲವೇ.
ದ್ರಾಕ್ಷಿಯಲ್ಲಿ ಬೀಜವಿರಲಿ ಇಲ್ಲದಿರಲಿ, ಅದನ್ನು ಗಿಡದಲ್ಲಿಯೇ ಒಣಗಿಸಿದಾಗ ಒಣದ್ರಾಕ್ಷಿಯಾಗುತ್ತದೆ ಮತ್ತು ಬೀಜವಿದ್ದರೂ ತಿನ್ನಬಹುದು. ಬೀಜವಿಲ್ಲದ ಒಣದ್ರಾಕ್ಷಿಗಳೂ ಬರುತ್ತವೆ.
ಆದರೆ ಒಟ್ಟಾರೆ ದ್ರಾಕ್ಷಿ ಬಹುಬೀಜಫಲವಾದ್ದರಿಂದ ಸ್ವೀಕರಿಸಲು ಬರುವದಿಲ್ಲ.
Pruthvi Raj,Bangalore
8:31 PM , 03/10/2017
ಆಚಾರ್ಯರೇ ಒಣ ದ್ರಾಕ್ಷಿ ಬರುವುದಿಲ್ಲವೇ ?
Vishnudasa Nagendracharya
ದ್ರಾಕ್ಷಿ ಬಹುಬೀಜಫಲ. ಹೀಗಾಗಿ ಹಸೀ ದ್ರಾಕ್ಷಿಯೂ ಬರುವದಿಲ್ಲ. ಒಣ ದ್ರಾಕ್ಷಿಯೂ ಬರುವದಿಲ್ಲ.
Raghavendra,Bangalore
11:21 PM, 02/10/2017
ಅಚಾರ್ಯರೇ ಆಲೂಗೆಡ್ಡೆ ಮತ್ತು ದಂಟಿನ ಸೊಪ್ಪು ತೆಗೆದುಕೊಳ್ಳಬಹುದೇ? ಯಾವ ಯಾವ ಮಠಗಳಲ್ಲಿ ಇದನ್ನು ಬಳಸುತ್ತಾರೆ? ರಾಯರ ಮಠಕ್ಕೆ ಬರುತ್ತದೆಯೇ?
Vishnudasa Nagendracharya
ಎರಡನ್ನೂ ತೆಗೆದುಕೊಳ್ಳಬಹುದು. ಎಲ್ಲ ಮಠದವರೂ ಸ್ವೀಕರಿಸುತ್ತಾರೆ. ನಾನು ಈ ಹಿಂದೆ ತಿಳಿಸಿದಂತೆ ಆಲೂಗಡ್ಡೆಯನ್ನು ಕೆಲವರು ಮಾತ್ರ ಸ್ವೀಕರಿಸುವಿದಲ್ಲ. (ಕೇವಲ ಚಾತುರ್ಮಾಸ್ಯದಲ್ಲಿ ಅಲ್ಲ, ಒಟ್ಟಾರೆ ಯಾವ ಸಂದರ್ಭದಲ್ಲಿಯೂ ಸ್ವೀಕರಿಸುವದಿಲ್ಲ)
Pruthvi Raj,Bangalore
2:59 PM , 02/10/2017
ಆಚಾರ್ಯರಿಗೆ ನಮಸ್ಕಾರಗಳು, ದ್ವಿದಳ ವ್ರತಕ್ಕೆ ಯಾವ ಯಾವ ಹಣ್ಣು ನೈವೇದ್ಯಕ್ಕೆ ಬರುತ್ತದೆ ಎಂದು ತಿಳಿಸಿ.
ವಿಸ್ತೃತವಾದ ವಿಷಯ. ಸಮಯ ದೊರೆತ ತಕ್ಷಣ ಬರೆಯುತ್ತೇನೆ. ಬಹಳ ಬಾರಿ ಕೇಳಿದ್ದೀರಿ. ಇನ್ನೂ ಸಮಯ ದೊರೆತಿಲ್ಲ.
Jayatirtha Nilogal,Dharwad
10:40 PM, 01/10/2017
"ಫಲಾನಿ ಬಹುಬೀಜಾನಿ, ಧಾನ್ಯಾನಿ ದ್ವಿದಳಾನಿಚ" ಯಾವ ಬೀಜಗಳಿಂದ ಎಣ್ಣೆಯನ್ನು ತೆಗೆಯಲು ಬರುತ್ತದೋ ಅಂತಹ ಬೀಜಗಳಿಗಳು exception, ಎಳ್ಳು, ನೆಲಗಡಲೆ, ಸೂರ್ಯಕಾಂತಿ etc ಎಂದು ನಮ್ಮ ತಂದೆಯವರು ಹೇಳಿದ ನೆನಪು..........ಜಯತೀರ್ಥ ನಿಲೋಗಲ್ಲ