Acharyarige namaskara, shraadada divasa maneyavaru (hendathi) take idaaga shraadha maadabaarada? Athava muttadallu maadvahuda illa hendathi oralli illa Andare maadvahuda, athava here yaare maneyavaru Jenny makkalu horagaadaga shraada maadabaarada, dayavittu thilisi...
Vishnudasa Nagendracharya
ಶ್ರಾದ್ಧದ ಅನೇಕ ಮುಖ್ಯ ನಿಯಮಗಳಲ್ಲಿ ಒಂದು ಮಗ ಶ್ರಾದ್ಧವನ್ನು ಮಾಡಬೇಕು, ಸೊಸೆ ಅಡಿಗೆಯನ್ನು ಮಾಡಬೇಕು ಎಂದು.
ಇವತ್ತಿಗೆ ಆ ನಿಯಮವನ್ನೇ ಪಾಲಿಸುತ್ತಿಲ್ಲ. ಅಡಿಗೆಯವರ ಕೈಯಲ್ಲಿ ಅಡಿಗೆ ಮಾಡಿಸಲಾಗುತ್ತದೆ. ಶ್ರಾದ್ಧದ ದರ್ಭಬ್ರಾಹ್ಮಣರಿಗೆ ಬಡಿಸುವ ಅಡಿಗೆಯನ್ನಾದರೂ ಸೊಸೆ ಮಾಡಲೇಬೇಕು.
ಸೊಸೆ ಒಳಗಿಲ್ಲದಿದ್ದರೆ ಶ್ರಾದ್ಧಕ್ಕೆ ಅಡಿಗೆಯಿಲ್ಲ, ಅಡಿಗೆಯಿಲ್ಲದೆ ಶ್ರಾದ್ಧವಿಲ್ಲವಾದ್ದರಿಂದ ರಜಸ್ವಲೆಯಾಗಿದ್ದಾಗ ಶ್ರಾದ್ಧ ಮಾಡದೇ ಐದು ಅಥವಾ ಏಳು ದಿವಸಗಳ ನಂತರ ಶ್ರಾದ್ಧ ಮಾಡಬೇಕು ಎಂದು ಶಾಸ್ತ್ರ ವಿಧಿಸುತ್ತದೆ.
ಕರ್ತೃವಿನ ಹೆಂಡತಿಯನ್ನು ಹೊರತು ಪಡಿಸಿ ಬೇರೆಯವರು ಮನೆಯಲ್ಲಿ ರಜಸ್ವಲೆಯಾಗಿದ್ದರೆ ಶ್ರಾದ್ಧವನ್ನು ನಿಲ್ಲಿಸಬೇಕಾಗಿಲ್ಲ.
ಆದರೆ ಇವತ್ತಿನ ದಿವಸಗಳಲ್ಲಿ ಎಲ್ಲರೂ ಮಠಗಳಲ್ಲಿಯೇ ಶ್ರಾದ್ಧ ಮಾಡುತ್ತಿರುವದರಿಂದ ಈ ನಿಯಮವನ್ನು ಅನುಸರಿಸುತ್ತಿರುವವರು ಕಡಿಮೆ. ಆದರೆ ಅವಶ್ಯವಾಗಿ ಅನುಸರಿಸಬೇಕಾದ ಧರ್ಮವಿದು.

Pranesh ಪ್ರಾಣೇಶ,Bangalore
2:08 PM , 13/07/2017
ಆಚಾರ್ಯ ಈ ಕಾಲದಲ್ಲಿ ಸಾಮೂಹಿಕ ಉಪನಯ ನ ಮಾಡುತ್ತೇವೇ ಇದು ಸರಿಯೇ?
ನಾವು ಉಪಾಕರ್ಮ ಸಂಧರ್ಭದಲ್ಲಿ ಆ ವರ್ಷದಲ್ಲಿ ಚಿಂತನ ಮಾಡಿದ ಗ್ರಂಥ ಸಂಮರ್ಪಣೆ ಮಾಡುತ್ತೇವೆ ಆದರೆ ನಾವು ಅಷ್ಟು ಶಾಸ್ತ್ರಾ ಅಧ್ಯಯನ ಮಾಡಿರುವುದಿ ಲ್ಲ ಸಮರ್ಪಣೆ ಹೇಗೆ ಕೂಡುತ್ತದೆ
Vishnudasa Nagendracharya
ಮಕ್ಕಳಿಗೆ ಉಪನಯನ ಮಾಡುವವರು ಬೇರೇ ಬೇರೆ ಇದ್ದಲ್ಲಿ (ಒಬ್ಬೊಬ್ಬ ವಟುವಿಗೆ ಒಂದು ದಂಪತಿಗಳು) ಸಾಮೂಹಿಕ ಉಪನಯನ ದೋಷವಲ್ಲ. ಒಬ್ಬರೇ ದಂಪತಿಗಳು ಅನೇಕರಿಗೆ ಏಕಮುಹೂರ್ತದಲ್ಲಿ ಉಪನಯನ ಮಾಡಲು ಸಾಧ್ಯವಿಲ್ಲ.
ಇಂದಿನ ಉಪಾಕರ್ಮ ಕೇವಲ ಒಂದು ವಿಡಂಬನೆಯಷ್ಟೇ. ನಿಜವಾದ ಅರ್ಥದಲ್ಲಿ ನಡೆಯುತ್ತಿಲ್ಲ.
ವಿಚಿತ್ರ ಎಂದರೆ, ಸ್ವಲ್ಪ ಮಟ್ಟಿಗೆ ಕಲಿತವರೂ ಸಹ, ಕಲಿತದ್ದನ್ನು ಸಮರ್ಪಿಸದೇ ಎರಡನೆಯ ವರ್ಷ ಸಮರ್ಪಿಸಿದ್ದನ್ನೇ ಕಡೆಯವರೆಗೆ ಸಮರ್ಪಿಸುತ್ತಿರುತ್ತಾರೆ.
ವೇದಾಧ್ಯಯನ ನಡೆಯುವ ಗುರುಕುಲಗಳಲ್ಲಿ ಮಾತ್ರ ಇದ್ದುದರಲ್ಲಿ ಉತ್ತಮಕ್ರಮದೊಳಗೆ ಉಪಾಕರ್ಮಗಳು ಜರುಗುತ್ತವೆ.