Article - VNA228

ಸತ್ಯಾತ್ಮರು ಹೇಳಿದ ಸುಳ್ಳುಕಥೆ

17/03/2017


Download Article Share to facebook View Comments



6752 Views

Comments

(You can only view comments here. If you want to write a comment please download the app.)
  • Vittal Kulkarni,Yadgir

    10:00 AM, 16/04/2017

    Gurugalige vandanegalu
    Satyatma gurugalu sullu heliddare anta antiddira adare avara peetha thumba uttungada peetha anta tamagu tilida vishayane adare adu navu nivu thappu madidira anta helodu thumba kettadu anta nanna anisike mattu gurugalada satyatma thirtharu kaliyugada kalpavruksha esto janarige ashakiranavu houdu addarinda avara volle abhiprayagalu matra namma jeevanadalli alavadisona. Indu namma brahmana samajavu muluguva stitiyalliyu kuda deshavae namma gurugala kade nodta ide. Avaru thappu madidare annovastu navu shaktaralla astu bele ide aa peethakke
    
    Mathada peetharohana andare samanya vishayavalla,mattu adu sigodu samanya janarige alla adannu nirdharisodu navugallu alla(not political ellection to elecet like voters)adu nirdhara agodu moola ramana agneyante anta tamagu gotta vishaya. Navu ellaru kudi oggattagiddare yaru nammannu kenakolla nammalle bheda bhava beda annodu nanna anisike.ellaru kudi satyatma gurugala ashirvadakke patra ragona
    
    Idaralli enadru thappu iddare kshamisi bidi pojjyaniya gurugale

    Vishnudasa Nagendracharya

    ಶ್ರೀ ಸತ್ಯಾತ್ಮರ ವ್ಯಕ್ತಿತ್ವ, ಸಂನ್ಯಾಸ, ಪೀಠದ ಕುರಿತು ನಾನು ಯಾವ ಆಕ್ಷೇಪವನ್ನೂ ಮಾಡಿಲ್ಲ. 
    
    ದೊಡ್ಡ ಪೀಠದಲ್ಲಿರುವ ದೊಡ್ಡ ವ್ಯಕ್ತಿಗಳು ಇಡಿಯ ಮಾಧ್ವಸಮಾಜದ ಗುರುಗಳ ಕುರಿತು ಹಾಗೆ ಮಾತನಾಡಿದಾಗ ಸಹನೆ ಮಾಡಬೇಕೇ?
    
    ಶ್ರೀ ರಾಜೇಂದ್ರತೀರ್ಥಶ್ರೀಪಾಂದಗಳವರು, ಶ್ರೀ ಶ್ರೀಪಾದರಾಜರು, ಶ್ರೀ ವ್ಯಾಸರಾಜರು, ಶ್ರೀ ರಾಮಚಂದ್ರತೀರ್ಥಶ್ರೀಪಾದಂಗಳವರು, ಶ್ರೀ ರಾಘವೇಂದ್ರಸ್ವಾಮಿಗಳು, ಶ್ರೀ ಲಕ್ಷ್ಮೀನಾರಾಯಣತೀರ್ಥಶ್ರೀಪಾದಂಗಳವರು, ಶ್ರೀ ಸುಮತೀಂದ್ರತೀರ್ಥರು ಮುಂತಾದ ಮಹಾನುಭಾವರು ಸಮಗ್ರ ಮಾಧ್ವಸಮಾಜದ ಗುರುಗಳು. 
    
    ಸತ್ಯಾತ್ಮತೀರ್ಥರು ಸಾವಿರಾರು ಜನರಿಗೆ ಅನುಗ್ರಹ ಮಾಡಿದ್ದಾರೆ. ಆದರೆ, ಶ್ರೀ ಪ್ರಹ್ಲಾದರಾಜರ ಅವತಾರರಾದ, ವಾಯುದೇವರ ಸನ್ನಿಧಾನಪಾತ್ರರಾದ, ಮಾಧ್ವಸಿದ್ಧಾಂತಕ್ಕೆ ಭದ್ರಕೋಟೆಯ ಗ್ರಂಥರತ್ನಗಳನ್ನು ರಚಿಸಿದ, ಲಕ್ಷಾಂತರ ಕುಟುಂಬಗಳಿಗೆ ಲಕ್ಷಾಂತರ ಎಕರೆ ಜಮೀನು, ಮನೆ, ವಿದ್ಯೆಗಳನ್ನು ನೀಡಿ ರಕ್ಷಿಸಿದ, ಇಂದಿಗೂ ತಮ್ಮ ನಾಮಸ್ಮರಣೆಯಿಂದಲೇ ಭಕ್ತಕೋಟಿಯನ್ನು ರಕ್ಷಿಸುತ್ತಿರುವ ಶ್ರೀಮದ್ ವ್ಯಾಸರಾಜಗುರುಸಾರ್ವಭೌಮರ ಕುರಿತು ಅಗೌರವದಿಂದ ಅವರೂ ಮಾತನಾಡಬಾರದು. 
    
    ಶ್ರೀಮದ್ ವ್ಯಾಸರಾಜ ಗುರುಸಾರ್ವಭೌಮರಿಲ್ಲದೆ ಮಾಧ್ವಸಮಾಜದ ಅಸ್ತಿತ್ವವೇ ಇಲ್ಲ. ಅವರ ಕುರಿತು ಯಾರೂ ಎಂದಿಗೂ ಅಪಸ್ವರದ ಮಾತಾಡಬಾರದು. ಆಡಿದರೆ ಸಹನೆಯನ್ನೂ ಮಾಡಬಾರದು. 
    
    ನಿಮಗೆ ಸತ್ಯಾತ್ಮರ ಕುರಿತು ಎಷ್ಟು ಭಕ್ತಿಯಿದೆಯೋ ಅದರ ಸಾವಿರ ಪಟ್ಟು ಮಿಗಿಲಾದ ಭಕ್ತಿ ಸಮಗ್ರ ಮಾಧ್ವಸಮಾಜಕ್ಕೆ ಶ್ರೀ ವ್ಯಾಸರಾಜಾದಿ ಮಹಾನುಭಾವರ ಕುರಿತು ಇದೆ. 
    
    ಇಷ್ಟಾಗಿ ಸತ್ಯಾತ್ಮರಾಗಲೀ ಅವರ ಶಿಷ್ಯವೃಂದವಾಗಲೀ ಈ ಕಥೆಯನ್ನು ಸುಳ್ಳು ಎಂದು ಒಪ್ಪಲು ತಯಾರಿಲ್ಲ. ಅದನ್ನು ಸರಿ ಎಂದು ಮುಂದೆ ಯಾವಾಗಲೋ ಯಾರಾದರೂ ಪ್ರತಿಪಾದಿಸಬಹುದು ಎಂದೇ ಬರೆದಿದ್ದಾರೆ. ತಪ್ಪಾದಾಗ ತಪ್ಪನ್ನು ತಪ್ಪು ಎಂದು ಒಪ್ಪುವದು ಸಜ್ಜನರ ಲಕ್ಷಣವಲ್ಲವೇ?
    
    ಸತ್ಯಾತ್ಮರು ಯಾರನ್ನೂ ಕ್ಷಮೆ ಕೇಳಬೇಕಾಗಿಲ್ಲ. ಕ್ಷಮೆ ಕೇಳುವ ಸ್ಥಾನದಲ್ಲಿ ಅವರಿಲ್ಲ. ತುಂಬ ಎತ್ತರದ ಸ್ಥಾನದಲ್ಲಿದ್ದಾರೆ. ಆದರೆ ಈ ಕಥೆ ತಪ್ಪಾದದ್ದು ಎಂದು ಹೇಳಿಕೆ ನೀಡಬೇಕಲ್ಲವೇ. 
    
    ನೂರಾರು ದೊಡ್ಡ ಗುಣಗಳಿಂದ ಒಂದು ಸಣ್ಣ ತಪ್ಪು ಅವಶ್ಯವಾಗಿ ಮುಚ್ಚಿ ಹೋಗಬಹುದು. ಆದರೆ, ತಮ್ಮ ಗುರುಗಳನ್ನು ವೈಭವೀಕರಿಸುವ ನೆಪದಲ್ಲಿ ಮಾಧ್ವಪರಂಪರೆಯ ಭೂಷಾಮಣಿಗಳ ಅವಹೇಳನ (ಕಂಬಾಲೂರು ರಾಮಚಂದ್ರತೀರ್ಥರು ವಾದವನ್ನು ಎದುರಿಸಲಾಗದೇ ಓಡಿಹೋದರು ಮಂತಾದ ಎಲ್ಲವೂ) ಮಹತ್ತರ ತಪ್ಪುಗಳು. ಶ್ರೀಮದಾಚಾರ್ಯರೇ ನಿರ್ಣಯಿಸಿದ್ದಾರೆ — “ಸ್ವಾತ್ಮೋತ್ತಮೇಷ್ವಥ ಸುರೇಷು ವಿಶೇಷತಶ್ಚ ಸ್ವಲ್ಪೋಪಿ ದೋಷ ಉರುತಾಮಭಿಯಾತಿ ಯಸ್ಮಾತ್” ಎಂದು. ನಮಗಿಂತ ಹಿರಿಯರಲ್ಲಿ ಮಾಡುವ ಸಣ್ಣ ಅಪರಾಧವೂ ಮಹತ್ತರವಾದದ್ದು ಎಂದದರರ್ಥ. 
     
    ಸತ್ಯಾತ್ಮರ ಶಿಷ್ಯರೇ, ಸತ್ಯಾತ್ಮರಿಗೆ ನರೇಂದ್ರ ಮೋದಿಯವರ ದೃಷ್ಟಾಂತ ನೀಡಿದ್ದಾರೆ. ಹೀಗಾಗಿ ಅದೇ ನೆಲೆಗಟ್ಟಿನ ಮೇಲೆ ನಿಂತು ಪ್ರಶ್ನಿಸುತ್ತೇನೆ ಕೇಳಿ — ನರೇಂದ್ರ ಮೋದಿಯವರು ಅಪ್ಪಟ ದೇಶಭಕ್ತ. ನಮ್ಮ ದೇಶದ ಆಶಾಕಿರಣ. ಅವರಿಂದ ಮಹತ್ತರ ದೇಶಸೇವೆ ಸಲ್ಲುತ್ತಿದೆ. ಆದರೆ ಅವರಿಂದ ಬುದ್ಧಿಪೂರ್ವಕವಾಗಿ ಒಂದು ದೇಶದ್ರೋಹ ಜರುಗಿದರೆ ನಾವು ಒಪ್ಪುತ್ತೇವೆಯೇ? ಒಪ್ಪಬೇಕೆ?
    
    ಹಾಗೆ ಸತ್ಯಾತ್ಮರು ಉತ್ತಮವಾದ ರೀತಿಯಲ್ಲಿ ಮಧ್ವಮತದ ಸೇವೆಯನ್ನು ಮಾಡುತ್ತಿದ್ದಾರೆ. ಆದರೆ, ಅಷ್ಟು ಮಾತ್ರಕ್ಕೆ ಮಾಧ್ವಪರಂಪರೆಗೆ ಭದ್ರಕೋಟೆಯನ್ನು ನಿರ್ಮಿಸಿದ ಮಹಾನುಭಾವರ ಕುರಿತು ಅವಹೇಳನದ ಮಾತನ್ನು ನಾವು ಸಹಿಸಬೇಕೇ? 
    
    ಸಾವಧಾನವಾಗಿ ಕುಳಿತು ಆಲೋಚಿಸಿ. 
    
    ಮತ್ತು ಪರಮವೈಷ್ಣವರಾದ ರುದ್ರದೇವರು ಪರಮಾತ್ಮನ ವಿರೋಧ ಮಾಡಿದಾಗ, ಇದು ರುದ್ರದೇವರು ಮಾಡಿದ ತಪ್ಪು ಎಂದು ತಿಳಿದೇ ಅವರಲ್ಲಿ ಮಹಾಭಕ್ತಿ ಮಾಡುವ ವೀರವೈಷ್ಣವರು ನಾವು. 
    
    ರುದ್ರದೇವರಲ್ಲಿರುವ ದೋಷಗಳನ್ನು ಪ್ರತಿಪಾದಿಸಿ, ಹೀಗಾಗಿ ಅವರು ದೇವರಾಗಲು ಸಾಧ್ಯವಿಲ್ಲ ಎಂದು ನಿರ್ಣಯಸಿ ಇದು ರುದ್ರದೇವರಿಗೆ ಅತ್ಯಂತ ಪ್ರಿಯಕರವಾದ ಸತ್ಕರ್ಮ ಎಂದು ದಾಖಲಿಸಿದ ಶ್ರೀಮದ್ವಾದಿರಾಜಗುರುಸಾರ್ವಭೌಮರ ಪರಂಪರೆಯವರು ನಾವು. 
    
    ತಪ್ಪನ್ನು ತಪ್ಪು ಎಂದು ಹೇಳುವ ಮಾಧ್ವರು ನಾವು. 
    
    ಮಾಡಿದ್ದು ತಪ್ಪು ಎಂದು ತಿಳಿದಾಗ ಒಪ್ಪಿ ನಡೆಯಬೇಕಾದ ಮಾಧ್ವರು ನಾವು.