(You can only view comments here. If you want to write a comment please download the app.)
Aparna,Bangalore
10:27 PM, 27/08/2018
ನಿರ್ಮಾಲ್ಯ ಅಭಿಷೇಕದ ತೀರ್ಥವನ್ನು ಪ್ರಾಣ ದೇವರಿಗೆ ಮಾಡಬಹುದೇ?
Vishnudasa Nagendracharya
ಮಾಡಬಹುದು.
ಮಾಡಲೇಬೇಕು ಎಂಬ ನಿಯಮವಿಲ್ಲ. ಆದರೆ ಮಾಡುವದು ಉತ್ತಮ.
ಅಷ್ಟೇ ಅಲ್ಲ, ದೇವರ ನಿರ್ಮಾಲ್ಯವನ್ನು ಹಿಂದಿನ ದಿವಸವೇ ಎತ್ತಿಟ್ಟುಕೊಂಡು ಮಾರನೆಯ ದಿವಸ ಸ್ನಾನ ಮಾಡಬೇಕಾದರೆ ಅದನ್ನು ತಲೆಯ ಮೇಲೆ ಹಾಕಿಕೊಂಡು ನಾವು ಸ್ನಾನ ಮಾಡಬೇಕು ಎಂಬ ವಿಶೇಷವನ್ನು ಶ್ರೀ ನಾರಾಯಣಪಂಡಿತಾಚಾರ್ಯರು ಯೋಗದೀಪಿಕಾದಲ್ಲಿ ತಿಳಿಸುತ್ತಾರೆ.
ಆಚಾರ್ಯರೇ ಶಾಸ್ತ್ರೀಯ ರೀತಿಯಲ್ಲಿ ಪೂಜೆ ಮಾಡುವುದಾದರೆ ಮಧ್ಯಾಹ್ನದ ತನಕ ನಿರ್ಜಲ ನಿರಾಹಾರ ಇರಬೇಕೇ??
Vishnudasa Nagendracharya
ಹೌದು. ಸಂಶಯವೇ ಇಲ್ಲ.
ತಿಂದು ಕುಡಿದು ಪೂಜೆ ಮಾಡುವದು ಮಹಾಪರಾಧ.
Dr. Narahari M H,Mysuru
10:23 PM, 20/04/2017
ಸರಳ, ಸ್ಫುಟ, ಉತ್ಸಾಹಾತ್ಮಕ, ಪ್ರಯೋಗಕ್ಕೆ ಅತಿ ಪ್ರಯೋಜನಕಾರೀ ಉಪನ್ಯಾಸಗಳು. ಆಚಾರ್ಯರಿಗೆ ಅನಂತ ಕೃತಜ್ಞತೆಗಳು.
ಪ್ರಭಾಕರ,ಬೆಂಗಳೂರು
6:59 PM , 21/04/2017
ಈ ಹೊಸ ಚೆನ್ನಾಗಿದೆ. ಆದರೆ ಲೇಖನಗಳನ್ನು download ಮಾಡುವುದರ ಬದಲು ಪೂರ್ತಿ ಇಲ್ಲಿಯೇ ಓದುವ ಅವಕಾಶವಿರಲಿ.
Vishnudasa Nagendracharya
Download ಮಾಡಿದ ತಕ್ಷಣ ಇಲ್ಲಿಯೇ ಓದುವ ಅವಕಾಶ ಈಗ ಇದ್ದೇ ಇದೆ.
ಎಲ್ಲವನ್ನೂ ಮೊದಲು Download ಮಾಡಿಟ್ಟುಬಿಟ್ಟರೆ SD Card ಸಾಕಾಗುವದಿಲ್ಲ. ಹೀಗಾಗಿ ಯಾವುದನ್ನು ಬೇಕೋ ಅದನ್ನು Download ಮಾಡಿಕೊಳ್ಳುವ ಅವಕಾಶವನ್ನು ಕೊಟ್ಟಿದ್ದೇವೆ.
ರಮಾದೇವಿಯರು ಮುಂತಾದ ದೇವತೋತ್ತಮರಿಗೆ ಮಾಡಬೇಕಾದ ನೈವೇದ್ಯ ಮಂಗಳಾರತಿಗಳಿಗಿಂತ ಮನೆಯವರಿಗೆ ಕೊಡಬೇಕಾದ ಮಂಗಳಾರತಿ ಪ್ರಧಾನವಾಗಬಾರದು ಅಲ್ಲವೇ.?
ರಮಾದಿಗಳಿಗೆ ಆಗುವವರೆಗೂ ಕಾಯಬೇಕಾದ್ದು ನಮ್ಮೆಲ್ಲರ ಕರ್ತವ್ಯವೂ ಅಲ್ಲವೇ?
ರಮಾ-ದೇವತಾ-ಗುರುಗಳಿಗೆ ಸಮರ್ಪಿತವಾಗದ ಮಂಗಳಾರತಿಯನ್ನು ಸ್ವೀಕರಿಸುವದರಿಂದ ಯಾವ ಫಲವೂ ಇಲ್ಲ ಅಲ್ಲವೇ?
suraj sudheendra,bengaluru
10:15 PM, 28/04/2017
thank you gurugale!! aadare mangalaarathiyannu aaradante nodikollutiddaroo ondomme aarihodare mattondu mangalarathi yannu maadabeka atawa yenu maadabeku yendu dayamadi tilisutira?
Vishnudasa Nagendracharya
ಎರಡು ಕ್ರಮಗಳಿವೆ.
ಒಂದನ್ನು ತಿಳಿಸುತ್ತೇನೆ.
ಮಂಗಳಾರತಿಗೆ ಸ್ವಲ್ಪ ಹೆಚ್ಚಿಗೆ ತುಪ್ಪ ಅಥವಾ ಎಣ್ಣೆ ಹಾಕಿದರೆ ಸಾಕಷ್ಟು ಹೊತ್ತು ಉರಿಯುತ್ತಿರುತ್ತದೆ. ಹೀಗಾಗಿ ಸಮಸ್ಯೆ ಆಗುವದಿಲ್ಲ. ಮತ್ತು ದೀಪದಂತಹ ಮಂಗಳಾರತಿಗಳೂ ಬರುತ್ತವೆ. (ಪಂಚಾರತಿ ಇರುತ್ತದೆ ನೋಡಿ) ಅದರಲ್ಲಿ ಸಾಕಷ್ಟು ತೈಲ ಅಥವಾ ಘೃತ ಹಾಕಿದ್ದಾಗ ಹೆಚ್ಚು ಹೊತ್ತು ಉರಿಯುತ್ತದೆ.