ಸಾಲಿಗ್ರಾಮ ಪೂಜೆ ಹೆಂಗಸರಿಗೆ ನಿಷಿದ್ಧ.
ನಿಷಿದ್ಧ ಎಂದರೆ ಭಗವಂತನಿಗೆ ಅಪ್ರಿಯ ಎಂದೇ ಅರ್ಥ.
ರಾಜ್ಯವನ್ನಾಳುವದು ಬ್ರಾಹ್ಮಣನ ಧರ್ಮವಲ್ಲ, ತತ್ವೋಪದೇಶ ಮಾಡುವದು ಮತ್ತೊಬ್ಬರ ಧರ್ಮವಲ್ಲ. ಅವರವರ ಧರ್ಮವನ್ನು ಅವರು ಮಾಡುವದೇ ಧರ್ಮ.
ತುಂಬ ಅನಿವಾರ್ಯವಾದ ಸಂದರ್ಭದಲ್ಲಿ (ಬೇರೆಯವರು ಬಂದು ತೆಗೆಯಲು ಸಾಧ್ಯವೇ ಇಲ್ಲ ಎನ್ನುವಾಗ) ಮಂಟಪ ಮತ್ತು ದೇವರ ಪೆಟ್ಟಿಗೆಯ ಮೇಲಿನ ನಿರ್ಮಾಲ್ಯವನ್ನು ಸ್ತ್ರೀಯರು ತೆಗೆಯಬಹುದು. ಆದರೆ, ಸಾಲಿಗ್ರಾಮಗಳ ಮೇಲಿರುವ ನಿರ್ಮಾಲ್ಯ ತೆಗೆಯತಕ್ಕದ್ದಲ್ಲ.
ಹೆಂಗಸರಿಗೂ ಯಾವ ಪೂಜೆ ವಿಹಿತವೋ (ಅನಂತ, ವರಮಹಾಲಕ್ಷ್ಮೀ, ಗೌರೀ, ಗಣಪತಿ ಮುಂತಾದವು) ಅವನ್ನು ಅವಶ್ಯವಾಗಿ ಮಾಡಬಹುದು. ಸಾಲಿಗ್ರಾಮ ಪೂಜೆ ನಿಷಿದ್ಧ.
ಭಾರದ್ವಾಜ್,ಬೆಂಗಳೂರು
10:41 AM, 26/05/2017
ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು🙏
ಗರುಡ, ಶೇಷ ರುದ್ರಾದಿ ದೇವತೆಗಳಿಗೆ ಅಭಿಷೇಕ ಮಾಡುವಾಗ ಯಾವ ಮಂತ್ರಗಳನ್ನು ಪಠಿಸಬೇಕು. ದಯವಿಟ್ಟು ತಿಳಿಸಿ ಕೊಡಿ 🙏
Vishnudasa Nagendracharya
ಮುಂದಿನ ಲೇಖನಗಳಲ್ಲಿ ತಿಳಿಸುತ್ತೇನೆ.
Dr.Guruprasad,Mussoorie
5:36 PM , 26/05/2017
Gurubhyo namaha
Nimma lekhanadinda naavu maaduva sanna sanna tappugalannu tiddikollalu bahala anukoolavaaguttide.
One doubt.
In ourside(udupi) it is told that salagrama shouldnot be kept without TULASIDALA. Then how can we take out all tulasi out from salagrama if we cant do nirmalya visarjana next day.
If any jata/mruta ashoucha comes then how to remove previous day nirmalya?
In pooja book published from udupi it is written that after salagrama abhisheka we hav to do rama abhisheka & prana abhisheka from the thirtha of salagrama(abhisheka).
Which one is correct?

ಸಾಲಿಗ್ರಾಮವನ್ನು ತುಳಸಿಯೊಂದಿಗೆ ಇಡುವದು ಸರ್ವಶ್ರೇಷ್ಠಪದ್ಧತಿ.
ಆದರೆ, ಸೂರ್ಯೋದಯದ ಒಳಗೆ ನಿರ್ಮಾಲ್ಯವನ್ನು ವಿಸರ್ಜಿಸಲೇ ಬೇಕು. ತೌಳವಮಂಡಲಭೂಷಣರಾದ ಶ್ರೀ ಮಧ್ವಾನುಜಾಚಾರ್ಯರೂ ಅರುಣೋದಯಕಾಲದ ನಿರ್ಮಾಲ್ಯವಿಸರ್ಜನೆಯನ್ನೇ ವಿಧಿಸಿದ್ದಾರೆ. ಹೀಗಾಗಿ ಅವಶ್ಯವಾಗಿ ಸಾಲಿಗ್ರಾಮಗಳೊಂದಿಗೆ ತುಳಸಿಯನ್ನಿಟ್ಟು ಮಾರನೆಯ ದಿವಸ ಸೂರ್ಯೋದಯದ ಒಳಗೆ ವಿಸರ್ಜನೆಯನ್ನು ಮಾಡಲೇಬೇಕು.
ಜಾತಾಶೌಚ-ಮೃತಾಶೌಚಗಳು ಬಂದಾಗ ಬೇರೆಯ ಬ್ರಾಹ್ಮಣರನ್ನು ಕರೆಯಿಸಿ, ಅಥವಾ ಮನೆಯಲ್ಲಿಯೇ ಮೈಲಿಗೆಯಿಲ್ಲದ ಪುರುಷರಿಂದ ನಿರ್ಮಾಲ್ಯವಿಸರ್ಜನೆಯನ್ನು ಮಾಡಿಸಬೇಕು.
ಉಡುಪಿಯಲ್ಲಷ್ಟೇ ಅಲ್ಲ, ಘಟ್ಟದ ಮೇಲೂ ಸಹಿತ ಕೆಲವರಲ್ಲಿ ನಿರ್ಮಾಲ್ಯದ ಅಭಿಷೇಕದಿಂದ ಗರುಡಾದಿಗಳಿಗೆ ಅಭಿಷೇಕ ಮಾಡುವ ಪದ್ಧತಿಯಿದೆ. ಶಾಸ್ತ್ರಕ್ಕೆ ಪೂರ್ಣ ವಿರುದ್ಧವೇನೂ ಅಲ್ಲ. ಆದರೆ, ಆಗ ಪೂರ್ಣವಾಗಿ ಅವರೋಹಣ ಕ್ರಮದಲ್ಲಿ, ದೇವರಿಗೆ ನಿರ್ಮಾಲ್ಯ ಅಭಿಷೇಕ, ಆ ತೀರ್ಥದಿಂದ ಶಂಖ-ಪ್ರಾಣ-ದೇವತೆ-ಗುರುಗಳಿಗೆ ಮಾಡತಕ್ಕದ್ದು.
ಇದಕ್ಕೆ ಶಾಸ್ತ್ರದ ವಚನಗಳ ಆಧಾರ ನನಗೆ ದೊರೆತಿಲ್ಲವಾದ್ದರಿಂದ ನಾನು ಲೇಖನ ಉಪನ್ಯಾಸಗಳಲ್ಲಿ ತಿಳಿಸಿಲ್ಲ. ಆದರೆ, ಈ ರೀತಿಯ ಆಚರಣೆಯಿದೆ. ಶಾಸ್ತ್ರಕ್ಕೆ ವಿರುದ್ಧವೂ ಅಲ್ಲ. ಆದ್ದರಿಂದ ಆಚರಿಸಿದರೆ ತಪ್ಪಿಲ್ಲ.