(You can only view comments here. If you want to write a comment please download the app.)
Sheshagiri,Bangalore
9:39 AM , 14/09/2020
ನಮಸ್ತೆ ಗುರುಗಳೇ, ಮೇಲಿನ ಲೇಖನದಲ್ಲಿ ೧೦ನೆಯ ಪುಟದಲ್ಲಿ ಏಕಾದಶಿ ದಿವಸ ಗಂಧ, ಅಂಗಾರ ಮತ್ತು ಅಕ್ಷತೆ ಇರುವುದಿಲ್ಲ ಅಂತ ಓದಿದೆ.. ದೇವರಿಗೆ ಸಮರ್ಪಿಸಿದ ಗಂಧ ಮತ್ತು ಅಂಗರವನ್ನು ಧರಿಸಬಹುದು ಅಂತ ಕೇಳಿದ್ದೀನಿ.. ದಯವಿಟ್ಟು ತಿಳಿಸಿಕೊಡಿ ಯಾವುದು ಸರಿಯಾದ ಪದ್ದತಿಯೆಂದು
Vishnudasa Nagendracharya
ಏಕಾದಶಿಯ ದಿವಸ ಅಂಗಾರವನ್ನು ಮಾತ್ರ ಧರಿಸಬೇಕು. ಗಂಧವನ್ನು ಸರ್ವಥಾ ಧರಿಸಬಾರದು.
Rama,Bangalore
11:36 AM, 08/06/2018
*ಜಿಜ್ಞಾಸೆ*
೩೩ದೇವತೆಗಳಿಗೂ ಈ ಭಗವದ್ರೂಪಗಳಿಗೂ ಸಂಬಂಧ ಯಾವ ಪ್ರಮಾಣದಲ್ಲಿ ಇದೆ?
ಅಪೂಪದಲ್ಲಿ ೩೩ ದೇವತೆಗಳ ಚಿಂತನೆ ಮಾಡಬೇಕು ಎಂದು ಎಲ್ಲಿ ಹೇಳಿದ್ದಾರೆ?
ದಯವಿಟ್ಟು ತಿಳಿಸಿ ಗುರುಗಳೇ!!
Vishnudasa Nagendracharya
“ವಿಷ್ಣುಂ ಜಿಷ್ಣುಂ” ಎಂಬಲ್ಲಿನ ಕಡೆಯ ಭಾಗದಲ್ಲಿ “ಮಂತ್ರೈರೇತೇಶ್ಚ ಯೋ ದದ್ಯಾತ್ ತ್ರಯಸ್ತ್ರಿಂಶದಪೂಪಕಾನ್” ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
33 ಮಾಸಗಳಿಗೊಮ್ಮೆ ಬರುವ ಈ ಅಧಿಕಮಾಸದಲ್ಲಿ 33 ದೇವತೆಗಳನ್ನು ಚಿಂತನೆ ಮಾಡುವದು ಅತ್ಯಂತ ಯುಕ್ತ.
ಸಾಮಾನ್ಯವಾದ ಲೆಕ್ಕದಲ್ಲಿ 33 ದೇವತೆಗಳು — ಅಷ್ಟವಸುಗಳು, ಏಕಾದಶ ರುದ್ರರು ಮತ್ತು ದ್ವಾದಶಾದಿತ್ಯರು.
[ ಬೃಹದಾರಣ್ಯಕೋಪನಿಷತ್ತಿನ ಭಾಷ್ಯದಲ್ಲಿ ಬೇರೆಯ ಕ್ರಮದಲ್ಲಿಯೂ ಆಚಾರ್ಯರು 33 ದೇವತೆಗಳನ್ನು ಉಲ್ಲೇಖಿಸಿದ್ದಾರೆ. ]
ಹೀಗೆ ಶಾಸ್ತ್ರದ ವಚನ ಮತ್ತು ಯುಕ್ತಿಗಳ ಆಧಾರದ ಮೇಲೆ ನಮ್ಮ ಪ್ರಾಚೀನರು ಸಂಪ್ರದಾಯದಲ್ಲಿ ತಿಳಿಸಿರುವದನ್ನು ನಾವು ಆಚರಿಸುತ್ತಿದ್ದೇವೆ.
Koushik,Raichur
10:44 PM, 14/05/2018
ಗುರುಗಳೆ 33ಪ್ರದಕ್ಷಿಣೆ ನಮಸ್ಕಾರ
ಮತ್ತು 33ದೀಪ( ಅದು ಹಿತ್ತಾಳೆಯ ಸಣ್ಣ
ತಟ್ಟೆಯಲ್ಲಿ ಸಣ್ಣ ರಂದ್ರಗಳಲ್ಲಿ ಹೂ
ಬತ್ತಿಯನ್ನು ಎಳ್ಳೆಣೆಯಲ್ಲಿ ನೆನೆಸಿ
ಹಚ್ಚುವುದು) ಹಚ್ಚುವುದು
ಅಧಿಕಮಾಸದ ವ್ರತದಲ್ಲಿ ಇಲ್ಲವೇ ????
Vishnudasa Nagendracharya
ಅವಶ್ಯವಾಗಿ ಇದೆ.
ಅಧಿಕಮಾಸದ ಮಹಾ ಸತ್ಕರ್ಮಗಳು ಎಂಬ VNA263 ಲೇಖನದಲ್ಲಿ ವಿವರಿಸಲಾಗಿದೆ.
Raghoottam Rao,Bangalore
9:33 PM , 14/05/2018
ಪೂಜ್ಯ ಗುರುಗಳ ಪಾದಕ್ಕೆ ಶಿರಬಾಗಿ ನಮಸ್ಕರಿಸುತ್ತಿದ್ದೇವೆ. ತಮ್ಮ ಉಪಕಾರವನ್ನು ಎಷ್ಟು ಜನ್ಮಗಳಲ್ಲಿಯೂ ತೀರಿಸಲು ಸಾಧ್ಯವಿಲ್ಲ. ಕುಳಿತ ಕಡೆಯಲ್ಲಿ ಎಲ್ಲ ವಿಷಯಗಳು ದೊರೆಯುವಂತೆ ಮಾಡುತ್ತಿದ್ದೀರಿ. ಪ್ರತಿಯೊಂದನ್ನೂ ಸರಳವಾಗಿ ಅರ್ಥ ಮಾಡಿಸುತ್ತಿದ್ದೀರಿ. ಧರ್ಮದಲ್ಲಿ ಆಸಕ್ತಿ ಇಲ್ಲದವರೂ ಶ್ರದ್ಧೆಯಿಂದ ಧರ್ಮಾಚರಣೆ ಮಾಡುವಂತೆ ಮಾಡುತ್ತಿದ್ದೀರಿ. ನಿಮ್ಮ ಲೇಖನ ಪ್ರವಚನಗಳಿಲ್ಲದೆ ನಮ್ಮ ಜೀವನವನ್ನೂ ಈಗ ಕಲ್ಪಿಸಿಕೊಳ್ಳಲು ಅಸಾಧ್ಯವಾಗಿದೆ. ಜ್ಞಾನಪ್ರಸಾರದ ನಿಮ್ಮ ದೀಕ್ಷೆಗೆ ನಮೋ ನಮಃ.
ವಯಸ್ಸಿನಲ್ಲಿ ನಿಮಗಿಂತ ದೊಡ್ಡವನಾದ್ದರಿಂದ ಹೇಳುತ್ತಿದ್ದೇನೆ. ದೇವರು ನಿಮಗೆ ಸಾವಿರ ವರ್ಷ ಆಯುಷ್ಯ ಕೊಡಲಿ. ನಮ್ಮ ಮಕ್ಕಳು ಮೊಮ್ಮಕ್ಕಳಿಗೂ ಹೀಗೆಯೇ ಮಧ್ವತತ್ವದ ಅಮೃತವನ್ನು ನೀವು ಅನುಗ್ರಹಿಸಬೇಕು.
ನಿಮ್ಮ ದೀಕ್ಷೆ ನಮಗೆಲ್ಲರಿಗೂ ಆದರ್ಶ.
ರಘೂತ್ತಮರಾವ್ ಮತ್ತು ಕುಟುಂಬದವರು.
Vishnudasa Nagendracharya
ನಿಮ್ಮ ಅಭಿಮಾನಕ್ಕೆ ಕೃತಜ್ಞ. ದೇವರು ಗುರುಗಳು ನಿಂತು ಮಾಡಿಸುತ್ತಿರುವ ಕಾರ್ಯವಿದು. ಇರುವ ಆಯುಷ್ಯವೆಲ್ಲ ಅವನ ಸೇವೆಗೆ ಸಂದರೆ ಅದೇ ಸೌಭಾಗ್ಯ.