(You can only view comments here. If you want to write a comment please download the app.)
Ritthy G Vasudevachar,Bengaluru
4:28 PM , 26/07/2018
ಗ್ರಹಣ ಕಾಲದಲ್ಲಿ ಸಾವಿರ ಗಾಯತ್ರಿ ಮಾಡಿದರೆ ಅದಕ್ಕೆ ಮೂರು ಪಟ್ಟು ಅಷ್ಟಾಕ್ಷರ ಜಪ ಮಾಡಬೇಕೆ? ಯಾಕೆಂದರೆ ಈ ಬಾರಿ ದೀರ್ಘಾವಧಿ ಇದೆ ಸರಿ ಆದರೆ ಸಮಯ ಕಮ್ಮಿ ಇದ್ದಾಗ ಹೇಗೆ? ನಿರ್ಮಾಲ್ಯಾಭಿಷೇಕ, ಜಪ, ಪಾರಾಯಣ, ದಾನ, ತರ್ಪಣ ಎಲ್ಲವೂ ಆಗಬೇಕು
ಆಚಾರ್ಯ ರಿಗೆ ಸಾಷ್ಟಾಂಗ ಪ್ರಣಾಮ ಗ್ರಹಣದ ಕುರಿತ ವಿಷಯ ಪ್ರಸ್ತಾಪನೆ ಅತ್ಯದ್ಭುತ ಉಪಯೋಗಕರ ನನ್ನ ಪ್ರಶ್ನೆ ಇಂದು ಬಹಳಷ್ಟು ವಿಷಯಗಳು ಮೊಬೈಲ್ ನಲ್ಲಿ ಇರುತ್ತವೆ ಮೊಬೈಲ್ ಮಡಿಯಲ್ಲಿ ಇದ್ದಾಗ ಮುಟ್ಟಬಹುದೆ
Vishnudasa Nagendracharya
ಮೊಬೈಲು ಪ್ಲಾಸ್ಟಿಕ್ಕಿನಿಂದ ಮಾಡಲ್ಪಟ್ಟಿರುತ್ತದೆ. ಹೀಗಾಗಿ ಮಡಿಯಲ್ಲಿ ಮುಟ್ಟಲು ಬರುವದಿಲ್ಲ.
ಸಾಲಿಗ್ರಾಮದ ಪೂಜೆಯನ್ನು ಮಾಡುವ ಮಡಿಯಲ್ಲಿ ಸರ್ವಥಾ ಮುಟ್ಟಬಾರದು.
ಪಾರಾಯಣಾದಿಗಳನ್ನು ಮಾಡುವ ಮಡಿಯಲ್ಲಿ ಮುಟ್ಟಬಹುದು.
ಗ್ರಹಣ ಮುಗಿದ ನಂತರ ಅದರ ಮೇಲೆ ತುಳಸೀ ಮೃತ್ತಿಕೆಯನ್ನು ಹಾಕಿ ತೆಗೆದುಕೊಳ್ಳಬೇಕು.
Pranesh ಪ್ರಾಣೇಶ,Bangalore
11:42 AM, 26/07/2018
ಆಚಾರ್ಯ ಸವಿನಯ ನಮಸ್ಕಾರ
1. 28 ಜುಲೈ 2018 ರಂದು ದೀರ್ಘಾವಧಿ ಚಂದ್ರ ಗ್ರಹಣವಿರುವುದರಿಂದ ಭಾಗವತಾದಿ ಸ್ಚಶಾಸ್ತ್ರ ಶ್ರವಣ ಮಾಡಬಹುದ
2. ಸಂಧ್ಯಾವಂದನೆ ಅಲ್ಲದೆ ಬೇರೆ ಸಮಯದಲ್ಲಿ ನ್ಯಾಸ ಪೂರ್ವಕ ಗಾಯತ್ರಿ ಜಪ ಮಾಡಬಹುದಾ?