Prashnottara - VNP011

ಸ್ತ್ರೀಯರು ವಿಷ್ಣುಸಹಸ್ರನಾಮವನ್ನು ಪಠಿಸಬಹುದೇ?


					  	

ಹರೇ ಶ್ರೀನಿವಾಸಾ, ಆಚಾರ್ಯರಿಗೆ ನಮಸ್ಕಾರ. ಪ್ರಶ್ನೆ: ವಿಷ್ಣು ಸಹಸ್ರನಾಮವನ್ನು ಹೆಣ್ಣು ಮಕ್ಕಳು ಹೇಳಬಹುದೇ? ಅಥವಾ ಹೇಳಲೇ ಬಾರದೇ? — ಜಯರಾಮಾಚಾರ್ಯ ಬೆಣಕಲ್. ಜಾತಾಶೌಚ, ಮೃತಾಶೌಚ, ರಜಸ್ವಲಾಧರ್ಮ, ವರ್ಣಾಶ್ರಮಧರ್ಮ ಮುಂತಾದ ನಿಯಮಗಳನ್ನು ಪಾಲಿಸುತ್ತಿರುವ ಪುರುಷರು ಮತ್ತು ಸ್ತ್ರೀಯರು ಅವಶ್ಯವಾಗಿ ವಿಷ್ಣುಸಹಸ್ರನಾಮವನ್ನು ಪಠಿಸಬಹುದು. ಇದರ ಕುರಿತು ವಿಸ್ತಾರ ಚರ್ಚೆಯಿಂದ ಕೂಡಿದ ಲೇಖನ ಉಪನ್ಯಾಸಗಳ ಅಗತ್ಯವಿದೆ. ಸದಾಚಾರಸ್ಮೃತಿ ಮತ್ತು ದೇವರ ಪೂಜೆಯ ಲೇಖನ ಉಪನ್ಯಾಸಗಳು ಮುಗಿದ ನಂತರ ಮಾಡಿ ನೀಡುತ್ತೇನೆ. — ವಿಷ್ಣುದಾಸ ನಾಗೇಂದ್ರಾಚಾರ್ಯ


Share to facebook View Comments
2552 Views

Comments

(You can only view comments here. If you want to write a comment please download the app.)
  • Geethanjali Hegde,Mangalore

    5:43 PM , 16/12/2017

    Dhanyavadagalu Gurugale
  • Geethanjali Hegde,Mangalore

    4:37 PM , 10/12/2017

    Hare Krishna Gurugale. Streeyaru rajaswale aadaga Vishnu sahasra nama voda bahude?

    Vishnudasa Nagendracharya

    ಸರ್ವಥಾ ಇಲ್ಲ. 
    
    ರಜಸ್ವಲೆಯರಾದಾಗ ದೇವರ ನಾಮಸ್ಮರಣೆ (ಹೆಸರುಗಳನ್ನು ಉಚ್ಚರಿಸುವದು, ಸ್ತೋತ್ರಗಳನ್ನಲ್ಲ) ಏಕಾದಶಿ ಉಪವಾಸಗಳನ್ನು ಹೊರತು ಪಡಿಸಿ ಇನ್ನು ಯಾವ ಧರ್ಮಾಚರಣೆಯನ್ನು ಮಾಡತಕ್ಕದ್ದಲ್ಲ. 
    
    ಯಾವುದೇ ಸ್ತೋತ್ರಗಳ ಪಠಣ, 
    ಉಪನ್ಯಾಸಗಳ ಶ್ರವಣ
    ಪೂಜೆಗಳಿಗೆ ಸಹಾಯ ಮಾಡುವದು, 
    ಅಡಿಗೆಗೆ ಸಹಾಯ ಮಾಡುವದು (ತರಕಾರಿ ಹೆಚ್ಚುವದು ಮುಂತಾದದ್ದು) ಈ ರೀತಿಯ ಯಾವ ಕಾರ್ಯಗಳನ್ನೂ ಮಾಡತಕ್ಕದ್ದಲ್ಲ. 
  • NAGARAJA. M.S,BANGALORE

    8:28 PM , 21/04/2017

    ಧನ್ಯವಾದಗಳು.
  • ಜಯರಾಮಾಚಾರ್ಯ ಬೆಣಕಲ್,

    3:13 PM , 18/04/2017

    ಧನ್ಯವಾದಗಳು
  • Jayashree karunakar,Bangalore

    3:44 PM , 19/05/2017

    Gurugale vishnusahasra namavannu prayanakaladalli patisabahude dayavittu thilisi

    Vishnudasa Nagendracharya

    ಪಠಿಸಬಾರದು.