Prashnottara - VNP013

ಈ ನಿರ್ಮಾಲ್ಯದ ಕ್ರಮ ತಪ್ಪಾ?


					 	

ಆಚಾರ್ಯರೇ ಸಾಷ್ಟಾಂಗ ನಮಸ್ಕಾರಗಳು. ದೇವರ ಪೂಜೆಯಲ್ಲಿ ಇನ್ನೊಂದು ಕ್ರಮವನ್ನು ಕೇಳಿದ್ದೇನೆ. 1. ನಿರ್ಮಾಲ್ಯ ವಿಸರ್ಜನೆ ಮಾಡಿ 2. ನಿರ್ಮಾಲ್ಯ ಅಭಿಷೇಕ ಮಾಡಿ 3. ಶಂಖ ಮತ್ತು ಪ್ರಾಣದೇವರ ಅಭಿಷೇಕ ಮಾಡಿ 4. ಶಂಖ ಮತ್ತು ಪ್ರಾಣದೇವರಿಗೆ ನಿರ್ಮಾಲ್ಯ ತೀರ್ಥವನ್ನು ಕೊಟ್ಟು 5. ನಾವು ನಿರ್ಮಾಲ್ಯ ಸ್ವೀಕಾರ ಮಾಡಿ 6. ನಿರ್ಮಾಲ್ಯ ತೀರ್ಥದಿಂದ ಗೋಪೀಚಂದನ ಧಾರಣೆ ಮಾಡಿ ಆಮೇಲೆ ಸಂಧ್ಯಾವಂದನೆ ಮಾಡುವದು. ಈ ಕ್ರಮ ತಪ್ಪಾದದ್ದಾ. ದಯಮಾಡಿ ಕಾರಣಗಳನ್ನು ತಿಳಿಸಿಕೊಡಿ. — ಆದಿತ್ಯ ಸಿ. ಎಸ್.


Play Time: 02:30, Size: 1.24 MB


Download Article Download Upanyasa Share to facebook View Comments
2412 Views

Comments

(You can only view comments here. If you want to write a comment please download the app.)
 • HANUMANTHACHARYA,

  6:37 PM , 29/04/2017

  ಆಚಾರ್ಯರಿಗೆ ನಮಸ್ಕಾರಗಳು. ದಯಮಾಡಿ ಸ್ಥಾನದ ಪದ್ದತಿಯನ್ನು ತಿಳಿಸಿರಿ

  Vishnudasa Nagendracharya

  ಸದಾಚಾರಸ್ಮೃತಿಯ ಮುಂದಿನ ಉಪನ್ಯಾಸಗಳು ಸ್ನಾನದ ಕುರಿತೇ ಇವೆ. 
 • suraj sudheendra,bengaluru

  2:59 PM , 21/04/2017

  bahala dhanyavaadagalu gurugale. . tappagi keliddare dayamaadi kshamisi. .
 • suraj sudheendra,bengaluru

  8:48 AM , 21/04/2017

  gurugale... shankha vannu toleda meleye devarige abhisheka maadabeku sari. . aadare gurugalige, praana devarige abhisheka vannu, bhagavanthanige abhisheka maaduva modale yaake maaduvudu? aamele nirmaalya teerthadindale gurugalige , praana devarige abhisheka maadutevalla!?

  Vishnudasa Nagendracharya

  ಶಂಖಕ್ಕೆ ಬೇಡ, ಪ್ರಾಣದೇವರಿಗೆ ಗುರುಗಳಿಗೆ ನಿರ್ಮಾಲ್ಯದ ನಂತರ ಅಭಿಷೇಕ ಮಾಡಬಹುದಲ್ಲ ಎಂದು ಕೇಳಿದ್ದೀರಿ. 
  
  ನಾವು ರಾಯರ ಸ್ತೋತ್ರ ಮುಂತಾದ ಸ್ತೋತ್ರಗಳಿಂದ ಗುರುಗಳಿಗೆ, ಮಂತ್ರಗಳಿಂದ ಗರುಡಾದಿ ಪರಿವಾರ ದೇವತೆಗಳಿಗೆ, ಹಾಗೂ ವಾಯುಸ್ತುತಿಯಿಂದ ವಾಯುದೇವರಿಗೆ ಅಭಿಷೇಕ ಮಾಡುತ್ತೇವೆ. 
  
  ಮಾಧ್ವರಲ್ಲಿ ಈ ನಿಯಮ ತಪ್ಪದೇ ಅನುಸರಿಸಲ್ಪಡುತ್ತದೆ. ಪರಿವಾರ ದೇವತೆಗಳಿಗೆ ಅಭಿಷೇಕ ಅಲಂಕಾರ ನೈವೇದ್ಯಗಳೇ ನಮ್ಮಲ್ಲಿ ಪ್ರಧಾನ. 
  
  ಆದರೆ, ದೇವರ ಪೂಜೆಯಲ್ಲಿ ಒಂದು ಮಹಾನಿಯಮವಿದೆ, ಏನೆಂದರೆ ದೇವರ ಪೂಜೆಯನ್ನು ಆರಂಭಿಸಿದ ಬಳಿಕ ಉಳಿದ ದೇವತೆಗಳಿಗೆ ಪೂಜೆಯಿಲ್ಲ. ಲಕ್ಷ್ಮೀನಾರಾಯಣರ ಪೂಜಾ ಸಮಯದಲ್ಲಿ ಕೇವಲ ಭಾರತೀ ವಾಯುದೇವರಿಗೆ ಪೂಜೆ ಸಲ್ಲಿಸಬಹುದು. ಭಗವದಾಜ್ಞಯಾ ಭಗವತ್ಸನ್ನಿಧೌ ಪೂಜ್ಯಾನಾಂ ಎಂದು ಶ್ರೀ ಮಂತ್ರಾಲಯಪ್ರಭುಗಳು ತಿಳಿಸಿದ್ದಾರೆ. 
  
  ನಿರ್ಮಾಲ್ಯ ಅಭಿಷೇಕವೇ ಪೂಜೆಯ ಆರಂಭ. ಹೀಗಾಗಿ ನಿರ್ಮಾಲ್ಯ ಅಭಿಷೇಕ ಮಾಡಿದ ನಂತರ ಉಳಿದ ದೇವತೆಗಳಿಗೆ ಪೂಜೆಯಿಲ್ಲ. ಅದ್ದರಿಂದ ನಿರ್ಮಾಲ್ಯಕ್ಕಿಂತ ಮುಂಚೆಯೇ ಶಂಖ-ಪ್ರಾಣಾದಿಗಳ ಅಭಿಷೇಕಾದಿಗಳನ್ನು ಮುಗಿಸುವದು ಶಾಸ್ತ್ರಸಮ್ಮತ. 
  
  ದೇವರ ನಿರ್ಮಾಲ್ಯ ಅಭಿಷೇಕದ ನಂತರ ವಾಯುಸ್ತುತಿಯಿಂದ ಅಭಿಷೇಕ ಮಾಡಲು ಸಾಕಷ್ಟು ಸಮಯ ಬೇಕು. ಮತ್ತೆ ವಿಳಂಬವಾಗುತ್ತದೆ. 
  
  ಹೀಗಾಗಿ ಅವರೋಹಣ ಕ್ರಮದಲ್ಲಿ ನಿರ್ಮಾಲ್ಯ ವಿಸರ್ಜನೆ. ಅಂದರೆ ದೇವರು, ವಾಯುದೇವರು, ದೇವತೆಗಳು, ಗುರುಗಳು ಈ ಕ್ರಮದಲ್ಲಿ ನಿರ್ಮಾಲ್ಯ ವಿಸರ್ಜನೆಯನ್ನು ಮಾಡಬೇಕು.
  
  ಆರೋಹಣ ಕ್ರಮದಲ್ಲಿ ನಿರ್ಮಾಲ್ಯ ಅಭಿಷೇಕ. ಅಂದರೆ ಗುರುಗಳು, ದೇವತೆಗಳು, ವಾಯುದೇವರು, ಶಂಖ, ದೇವರು ಹೀಗೆ ನಿರ್ಮಾಲ್ಯ ಅಭಿಷೇಕ ಮಾಡಬೇಕು. 
  
  ಪೂಜಾ ನಿರ್ಣಯದಲ್ಲಿ ಮುಂದಿನ ಉಪನ್ಯಾಸ ನಿರ್ಮಾಲ್ಯದ ಕುರಿತಾಗಿಯೇ ಇದೆ. ಸುಸ್ಪಷ್ಟವಾಗಿ ವಿವರಿಸುತ್ತೇನೆ. 
 • Aditya C S,

  10:44 PM, 20/04/2017

  Uttarakaagi tumba dhanyavadagalu acharyare. Tumba divasada samshaya bage hariyitu