Prashnottara - VNP038

ಪೂಜೆ, ಉಪಾಸನೆ, ಸಾಧನೆ ಎಂದರೇನು?


					  	

ಆಚಾರ್ಯರಿಗೆ ಭಕ್ತಿ ಪೂರ್ವಕ ನಮಸ್ಕಾರಗಳು. ಆಚಾರ್ಯರೆ ಪೂಜೆ, ಉಪಾಸನೆ,ಮತ್ತು ಸಾಧನೆ ಇವುಗಳಲ್ಲಿನ ವ್ಯತ್ಯಾಸ ಏನು? — ಮಂಜುನಾಥ್ ಸಾಧನೆ ಎಂದರೆ ಒಂದು ವಸ್ತುವನ್ನು ಪಡೆಯಲು ಮಾಡುವ ಪ್ರಯತ್ನ. ಮೋಕ್ಷವನ್ನು ಪಡೆಯಲು, ದೇವರ ಸಾಕ್ಷಾತ್ಕಾರವನ್ನು ಪಡೆಯಲು ಮಾಡುವ ಪ್ರಯತ್ನಕ್ಕೆ ನಾವು ಸಾಧನೆ ಎನ್ನುತ್ತೇವೆ. ಪೂಜೆಯೂ ಸಾಧನೆ, ಉಪಾಸನೆಯೂ ಸಾಧನೆ. ಪೂಜೆ ಎಂದರೆ ದೇವರಿಗೆ ಸಲ್ಲಿಸುವ ಗೌರವ. ಅದು ಎರಡು ರೀತಿ. ಒಂದು — ನಮ್ಮ ವರ್ಣಾಶ್ರಮಧರ್ಮಗಳ ಆಚರಣೆ. ಇದರಲ್ಲಿ ನಾವು ಮಾಡುವ ಸ್ನಾನದಿಂದ ಆರಂಭಿಸಿ ಸಕಲ ವಿಹಿತ ಕರ್ಮಗಳೂ ಪೂಜೆಯೇ. (ಯಾವುದು ದೇವರ ಪೂಜೆ, ಪ್ರಶ್ನೋತ್ತರ — 12 ರಲ್ಲಿ ವಿವರಿಸಿದ್ದೇನೆ. ಎರಡು — ದೇವರಿಗೆ, ದೇವತೆಗಳಿಗೆ ನಾವು ಸಲ್ಲಿಸುವ ಷೋಡಶೋಪಚಾರ ಪೂಜೆ. ನಮಗಿಂತ ಹಿರಿಯರಿಗೆ ಸಲ್ಲಿಸುವ ಯಾವುದೇ ರೀತಿಯ ಗೌರವವೂ ಪೂಜೆ ಎಂದು ಕರೆಸಿಕೊಳ್ಳುತ್ತದೆ. ಉಪಾಸನೆ ಎಂದರೆ ಒಂದು ತತ್ವದ ನಿರಂತರ ಚಿಂತನೆ. ದೇವರು ನಮ್ಮ ಸ್ವಾಮಿ. ದೇವರು ಸರ್ವಸ್ವಾಮಿ. ದೇವರು ಗುಣಪೂರ್ಣ. ದೇವರು ದೋಷದೂರ. ದೇವರು ಜ್ಞಾನ-ಅನಂದಮಯ ಇತ್ಯಾದಿಯಾಗಿ ಭಗವಂತನ ಗುಣಗಳನ್ನು ಶಾಸ್ತ್ರಗಳಿಂದ ತಿಳಿದು, ಅದರ ಕುರಿತು ಇರುವ ಎಲ್ಲ ಆಕ್ಷೇಪಗಳನ್ನು ಪರಿಹರಿಸಿಕೊಂಡಾಗ ನಮ್ಮ ಗುರುಗಳಿಂದ ನಮಗೆ ಆ ಗುಣಗಳ ಕುರಿತ ಉಪದೇಶ ದೊರೆಯುತ್ತದೆ. ಆದನ್ನು ನಾವು ಸದಾ ಮನಸ್ಸಿನಲ್ಲಿ ಚಿಂತನೆ ಮಾಡುವದು ಉಪಾಸನೆ ಎಂದು ಕರೆಸಿಕೊಳ್ಳುತ್ತದೆ. ಪೂಜೆ ಎಂಬ ಸಾಮಾನ್ಯ ಅರ್ಥವೂ ಉಪಾಸನೆ ಶಬ್ದಕ್ಕಿದೆ. — ವಿಷ್ಣುದಾಸ ನಾಗೇಂದ್ರಾಚಾರ್ಯ


Share to facebook View Comments
893 Views

Comments

(You can only view comments here. If you want to write a comment please download the app.)
  • R sharada,Davanagere

    3:17 PM , 26/10/2017

    Thatvakku cedhanthakku  eruva yethyasavenu acharyare  dayavittu tilisuveera
  • Manjunath,Bangalore

    12:58 PM, 09/05/2017

    ಧನ್ಯವಾದಗಳು ಆಚಾರ್ಯರೆ🙏🙏🙏