Prashnottara - VNP041

ತಂಬಾಕು ಸೇವಿಸಬಹುದೇ?


					 	

ಶ್ರೀ ಗಣೇಶಾಯ ನಮಃ. ಆಚಾರ್ಯರೆ ಬ್ರಾಹ್ಮಣರಿಗೆ ತಂಬಾಕು ಸೇವಿಸಲು ಶಾಸ್ರ್ತದಲ್ಲಿ ಅನುಮತಿ ಇದೆಯೇ? — ಮಂಜುನಾಥ ಯಾದವಾಡೆ ಸರ್ವಥಾ ಇಲ್ಲ. ತಂಬಾಕು ನಿಷಿದ್ಧ ಪದಾರ್ಥ. ಹೆಂಡ ಕುಡಿಯುವದು ಎಷ್ಟು ನಿಷಿದ್ಧವೋ, ಅಷ್ಟೇ ನಿಷಿದ್ಧ ತಂಬಾಕು ಸೇವಿಸುವದು. ತಂಬಾಕು ದೂರ ಉಳಿಯಿತು, ಎಲೆ ಸುಣ್ಣ ಗಳಿಲ್ಲದೇ ಕೇವಲ ಅಡಿಕೆಯನ್ನೂ ಸಹ ತಿನ್ನಬಾರದು. (ಕೇವಲ ಪ್ಯಾಕೇಟಿನ ಅಡಿಕೆಯಲ್ಲ. ಸಮಾರಂಭಗಳಲ್ಲಿ ತಾಂಬೂಲ ಕೊಡಬೇಕಾದರೆ, ರುಚಿಯಾಗಿರುತ್ತದೆ ಎನ್ನುವ ಕಾರಣಕ್ಕೆ ಕೇವಲ ಅಡಿಕೆಯನ್ನು ತಿನ್ನುತ್ತಾರಲ್ಲ, ಅದೂ ಸಹ ತಪ್ಪು) ಎಲೆ ಸುಣ್ಣಗಳಿಲ್ಲದೆ ಬರಿಯ ಅಡಿಕೆಯನ್ನು ತಿಂದರೆ ಅಂತ್ಯಕಾಲಕ್ಕೆ ಹರಿಯ ಸ್ಮರಣೆ ಉಂಟಾಗುವದಿಲ್ಲ ಎಂದು ಶಾಸ್ತ್ರ ಹೇಳುತ್ತದೆ. ಅನಿಧಾಯ ಮುಖೇ ಪರ್ಣಂ ಪೂಗಂ ಖಾದಯತೇ ಪರಮ್ ಮತಿಭ್ರಂಶಾತ್ತು ದರಿದ್ರಃ ಸ್ಯಾತ್ ಅಂತೇ ನ ಸ್ಮರತೇ ಹರಿಮ್ ಮುಖೇ ಪರ್ಣಂ ಅನಿಧಾಯ ಎಲೆಯನ್ನು ನೀಡದೇ) ಪರಂ ಬೇರೆಯವರಿಗೆ ಪೂಗಂ ಖಾದಯತೇ ಅಡಿಕಿ ತಿನ್ನಿಸಿದರೆ ಮತಿಭ್ರಂಶವುಂಟಾಗಿ ದರಿದ್ರನಾಗುತ್ತಾನೆ ಮತ್ತು ಅಂತ್ಯಕಾಲದಲ್ಲಿ ವಿಷ್ಣುಸ್ಮರಣೆ ಒದಗುವದಿಲ್ಲ. ಹೀಗಾಗಿ ತಿನ್ನಲು ಕೇವಲ ಅಡಿಕೆಯನ್ನು ನೀಡಬಾರದು. ತಾಂಬೂಲವನ್ನೇ ನೀಡಬೇಕು. ಮತ್ತು, ತಾನೂ ಸಹ ಎಂದಿಗೂ ಕೇವಲ ಅಡಿಕೆಯನ್ನು ತಿನ್ನಬಾರದು. ಭಗವಂತನಿಗೆ ಸಮರ್ಪಿಸಿ ನಾವು ಸ್ವೀಕರಸಿಬಹುದಾದ ಅಡಿಕೆಗೇ ಇಷ್ಟು ನಿಯಮವಿದೆ. ತಂಬಾಕಂತೂ ಸರ್ವಥಾ ನಿಷಿದ್ಧ. — ವಿಷ್ಣುದಾಸ ನಾಗೇಂದ್ರಾಚಾರ್ಯ


Share to facebook View Comments
1717 Views

Comments

(You can only view comments here. If you want to write a comment please download the app.)
 • Pallavi,

  2:36 PM , 13/08/2018

  ಆಚಾರ್ಯರೇ sheeta Kemmu gunavagalendu aushadhiya roopadalli hendavannu kudiyabekendu prerepisuvudu sariya?
  ದಯವಿಟ್ಟು ತಿಳಿಸಿ

  Vishnudasa Nagendracharya

  ತಪ್ಪು
 • Shridhar K Patil,

  12:25 PM, 09/05/2017

  ಶ್ರೀಹರಿ, ಈ ಶರೀರ ಭಗವಂತ ಕರುಣಿಸಿದ ಅತ್ಯದ್ಭುತವಾದ ಬೆಲೆ ಕಟ್ಟಲಾಗದ ಆಸ್ತಿ ಹಾಗು ಭಗವಂತನ ಸ್ವತ್ತು ಇದನ್ನು ಹಾಳು ಮಾಡದೆ ಚನ್ನಾಗಿ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು
 • K.Revathi sreenivas,

  11:09 AM, 09/05/2017

  ಹರೇ ಶ್ರೀನಿವಾಸ ಗುರುಗಳೇ ... ತಾಂಬೂಲದಲ್ಲಿ ಎಷ್ಟು ಎಲೆ ಇಡಬೇಕು ಎಂದೂ ನಿಯಮವಿದೆಯಾ?

  Vishnudasa Nagendracharya

  ಸಮಸಂಖ್ಯೆಯ ಎಲೆಗಳು. 
  
  ಬೆಸಸಂಖ್ಯೆಯ ಎಲೆಗಳಲ್ಲಿ ತಾಂಬೂಲ ಸ್ವೀಕರಿಸಬಾರದು. 
 • Vishwanandini User,

  9:37 PM , 09/05/2017

  ನಾವೂ ಸಹ ನಾಳೆಯಿಂದಲೇ ತಂಬಾಕು ತ್ಯಜಿಸಿ ಎಲೆ ಅಡಿಕೆ ಸುಣ್ಣವನ್ನೊಳಗೊಂಡ ತಾಂಬೂಲ ಬಳಸುತ್ತೇವೆ
 • Vishwanandini User,

  9:37 PM , 09/05/2017

  ನಾವೂ ಸಹ ನಾಳೆಯಿಂದಲೇ ತಂಬಾಕು ತ್ಯಜಿಸಿ ಎಲೆ ಅಡಿಕೆ ಸುಣ್ಣವನ್ನೊಳಗೊಂಡ ತಾಂಬೂಲ ಬಳಸುತ್ತೇವೆ