Prashnottara - VNP065

ಮಕ್ಕಳಾಗದ ಹೆಣ್ಣು ಮಡಿಗೆ ಬರುವದಿಲ್ಲವೇ?


					 	

ಗುರುಗಳಿಗೆ ನಮಸ್ಕಾರ. ಮಕ್ಕಳು ಆಗದೆ ಇದ್ದವರು ಮಡಿಯಿಂದ ಅಡಿಗೆ ಮಾಡಬಹುದಾ? — ಹೆಸರು ಬೇಡ. ಅವಶ್ಯವಾಗಿ ಮಾಡಬಹುದು. ನೋಡಿ, ನಮ್ಮ ಮಾಧ್ವರಲ್ಲಿ ಕೆಲವರಲ್ಲಿ ಈ ವಿಚಿತ್ರ ಆಚರಣೆಯಿದೆ. ಮದುವೆಯಾದ ಬಳಿಕ ಹೆಣ್ಣಿಗೆ ಮಕ್ಕಳಾಗುವವರೆಗೆ ಅವರನ್ನು ಮಡಿಯ ಅಡಿಗೆಗೆ ಕರೆದುಕೊಳ್ಳುವದಿಲ್ಲ. ಅವರು ಮಡಿಯ ಕೆಲಸಕ್ಕೇ ಬರುವದಿಲ್ಲ ಎಂದು. ಶಾಸ್ತ್ರಕ್ಕೆ ವಿರುದ್ಧವಾದ ಆಚರಣೆಯಿದು. ಮದುವೆಯಾದ ದಿವಸದಿಂದ ಗಂಡಸಿಗೆ ಹೋಮದ ಅಧಿಕಾರ ಬರುತ್ತದೆ. ಪೂರ್ಣಾಹುತಿಯನ್ನು ಹಾಕುವವಳು ಪತ್ನಿಯೇ. ಅಗ್ನಿಹೋತ್ರಾದಿ ಎಲ್ಲದರಲ್ಲಿಯೂ ಅಧಿಕಾರ ಪತ್ನಿಗೆ ಇರುತ್ತದೆ. ಇವೆಲ್ಲವೂ ಪರಿಶುದ್ಧ ಮಡಿಯಲ್ಲಿಯೇ ಆಗಬೇಕಾದ ಕಾರ್ಯಗಳೇ.. ಮಕ್ಕಳಾಗುವವರೆಗೆ ಮಡಿಗೆ ಬರುವದಿಲ್ಲ ಎಂತಾದರೆ ಈ ಯಾವ ಕಾರ್ಯಗಳನ್ನೂ ಗಂಡಸು ಮಾಡುವಂತಿಲ್ಲ. ಕಾರಣ, ಹೆಂಡತಿಯಿಲ್ಲದೇ ಹೋಮಾದಿಗಳನ್ನು ಮಾಡುವಂತೆಯೇ ಇಲ್ಲ. ಹೀಗಾಗಿ ಮಡಿಯ ಕಾರ್ಯದಲ್ಲಿ ಅಧಿಕಾರ ಮದುವೆಯಾದ ದಿವಸದಿಂದಲೇ ಹೆಣ್ಣಿಗೆ ಬರುತ್ತದೆ. ಮತ್ತು, ಶ್ರೀಮದಾಚಾರ್ಯರೂ ಸಹ ವಿವಾಹವೇ ಸ್ತ್ರೀಯರಿಗೆ ಉಪನಯನದಂತಹ ಸಂಸ್ಕಾರ ಎಂದು ತಿಳಿಸಿದ್ದಾರೆ. “स्त्रीणां प्रदानकर्मैव यथोपनयनं तथा” ನಮ್ಮಲ್ಲಿ ಉಪನಯನವಾಗದ ಗಂಡುಮಕ್ಕಳು ಮಡಿಗೆ ಬರುವದಿಲ್ಲ. ಉಪನಯನವಾದ ನಂತರವೇ ಅವರು ಮಡಿಗೆ ಬರುವುದು. ಹೆಣ್ಣಿಗೂ ಸಹ ವಿವಾಹವೇ ಉಪನಯನವಾದ್ದರಿಂದ, ವಿವಾಹವಾದ ದಿವಸದ ನಂತರ ಅವರು ಮಡಿಗೆ ಬರುತ್ತಾರೆ. ಮಡಿಗೆ ಬರುವದಿಲ್ಲ ಎಂತಾದಲ್ಲಿ ಮಕ್ಕಳಾಗುವವರೆಗೆ ಅಗ್ನಿಹೋತ್ರ, ಶ್ರಾದ್ಧ ಯಾವುದನ್ನು ಮಾಡಬಾರದು. ಕಾರಣ, ಶ್ರಾದ್ಧಾದಿಗಳಲ್ಲಿ ಹೆಂಡತಿ ಮಾಡಿದ ಅಡಿಗೆಯಿಂದಲೇ ಕಾರ್ಯವಾಗುವದು. ಹೀಗಾಗಿ ಮಡಿಯ ಕೆಲಸಕ್ಕೂ ಮಕ್ಕಳಾಗುವದಕ್ಕೂ ಸಂಬಂಧವಿಲ್ಲ. ಮದುವೆಯಾದ ತಕ್ಷಣ ಹೆಣ್ಣು ಮಡಿಯ ಕಾರ್ಯಗಳನ್ನು ಮಾಡಬಹುದು. ಮನೆಯಲ್ಲಿ ಸೊಸೆಯರು ಆರಾಮಾಗಿ ಇರಲಿ ಆನಂತರ ಮಡಿಯ ಕೆಲಸ ಮಾಡಲಿ ಎಂದು ಅವರಿಗೆ ಕೆಲಸಗಳನ್ನು ನಿಧಾನವಾಗಿ ಕಲಿಸುವದು ಬೇರೆ. ತಪ್ಪಿಲ್ಲ. ಆದರೆ ಮಕ್ಕಳಾಗುವವರೆಗೆ ಹೆಣ್ಣು ಮಡಿಗೇ ಬರುವದಿಲ್ಲ ಎನ್ನುವ ಮಾತು ಶಾಸ್ತ್ರಕ್ಕೆ ವಿರುದ್ಧವಾದದ್ದು. — ವಿಷ್ಣುದಾಸ ನಾಗೇಂದ್ರಾಚಾರ್ಯ


Share to facebook View Comments
2001 Views

Comments

(You can only view comments here. If you want to write a comment please download the app.)
 • J.P.Adiga,Udupi

  3:30 PM , 03/07/2017

  Gurubhyo namah .makaklilladavarige baagina kodabaaradu.kottaru prayojanavilla antaare.yidu sariye?krupeyittu tilisi.

  Vishnudasa Nagendracharya

  ಬಾಗಿನ ನೀಡಲು ಮತ್ತು ಪಡೆಯಲು ಇರಬೇಕಾದ ಅರ್ಹತೆ - ಮುತ್ತೈದೆಯಾಗಿರಬೇಕು. ಅಷ್ಟೆ. ಮಕ್ಕಳಾಗಿರಲೇಬೇಕು ಎಂಬ ನಿಯಮವಿಲ್ಲ. 
  
  ಮಕ್ಕಳಾಗದವರಿಗೆ ನೀಡಬಾರದು ಎಂಬ ನಿಯಮವಿದ್ದರೆ, ಮದುವೆಯಾದ ತಕ್ಷಣ ಬಾಗಿನವನ್ನು ನೀಡಿಸುವ ಸಂಪ್ರದಾಯ ಮತ್ತು ಪಡೆಯುವ ಸಂಪ್ರದಾಯ ಇರುತ್ತಿರಲಿಲ್ಲ. ಯಾವುದೇ ಮುತ್ತೈದೆ ಮತ್ತೊಬ್ಬ ಮುತ್ತೈದೆಗೆ ಅವಶ್ಯವಾಗಿ ಬಾಗಿನ ನೀಡಬಹುದು. 
  
  ಮತ್ತು ಬಾಗಿನ ನೀಡುವದೇ ವಂಶದ ಅಭಿವೃದ್ಧಿಯಾಗಲಿ ಎಂದು. ಕೊಡುವವರ ಮತ್ತು ತೆಗೆದುಕೊಳ್ಳುವವರ ಎರಡೂ ವಂಶಗಳೂ ಇದರಿಂದ ಬೆಳೆಯುತ್ತವೆ. 
  
 • mangala gowri,Bangalore

  4:42 PM , 25/06/2017

  Acharyarige pranamagalu yesto janara novanu pariharisidiri e moolaka thammanthavara parichaya vagiruvudhe namma punya
 • N V Krishna Murthy,Bangalore

  11:34 AM, 14/06/2017

  ಅತ್ಯಂತ ಉಪಯುಕ್ತ ಮಾಹಿತಿ ನೀಡಿದ್ದೀರಿ ವಂದನೆಗಳು
 • Sangeetha prasanna,Bangalore

  8:00 PM , 26/05/2017

  ಹರೇ ಶ್ರೀನಿವಾಸ .ಗುರುಗಳಿಗೆ ನಮಸ್ಕಾರಗಳು .ಮಂತ್ರಾಲಯದಲ್ಲಿ ಗುರುಗಳ ಸೇವೆ ಮಾಡಬೇಕು ಅನ್ನುವುದು ದೈವಾನುಗ್ರಹದಿಂದ ಮನಸ್ಸಿಗೆ ಬಂದಿದೆ .ಮೂರು ದಿನಗಳ ಕಾಲ ರಾಯರ ಸೇವೆ ಮಾಡುವ ಹಾಗು ಅನುಸರಿಸಬೇಕಾದ ನಿಯಮಗಳನ್ನು ದಯವಿಟ್ಟು ಅನುಗ್ರಹಿಸಿ .ಹಾಗು ಕ್ಷೇತ್ರಕ್ಕೆ ಸೇವೆಗೆ ಎಂದು ಹೊರಡುವ ಮೊದಲು ಮನೆಯಲ್ಲಿ ಮಾಡುವ ವ್ರತ ತಯಾರಿಯ ಬಗ್ಗೆ ತಿಳಿಸಿಕೊಡಿ ಎಂದು ಗುರುಗಳಲ್ಲಿ ಅತ್ಯಂತ ನಮ್ರ ಪ್ರಾರ್ಥನೆ ಮಾಡಿಕೊಳ್ಳುತ್ತೇವೆ .ದಾರಿ ತೋರಿ .🙏🙏👏

  Vishnudasa Nagendracharya

  ಸಮಯ ದೊರೆತ ತಕ್ಷಣ ಬರೆಯುತ್ತೇನೆ. ಸದ್ಯಕ್ಕೆ ಸಮಯದ ಅಭಾವವಿದೆ. 
  
  ಹೋಗಿಬನ್ನಿ, ಶುಭವಾಗಲಿ. 
 • Arnav,

  9:06 AM , 27/05/2017

  Guruji nanna maduve yavaaga aaguthe, dayavittu thilisi
  
  Arnav

  Vishnudasa Nagendracharya

  ನಿಮ್ಮ ಜಾತಕವನ್ನು ಉತ್ತಮ ಜ್ಯೋತಿಷಿಗಳಿಗೆ ತೋರಿಸಿ ಕೇಳಬೇಕಾದ ಪ್ರಶ್ನೆಯಿದು. 
 • Sangeetha prasanna,

  9:25 AM , 27/05/2017

  ರಾಯರ ಸೇವೆ ಹೇಗೆ ಮಾಡಬೇಕು ತಿಳಿಸಿ .ಮತ್ತು ಸೇವೆಯ ಕಾಲದಲ್ಲಿ ಅಕ್ಕಪಕ್ಕದ ಕ್ಷೇತ್ರಗಳಿಗೆ ಹೋಗಿ ಬರಬಹುದೆ ?ದಯವಿಟ್ಟು ತಿಳಿಸಿ .ನಮಸ್ಕಾರಗಳು .👏👏

  Vishnudasa Nagendracharya

  ಸೇವೆ ಮಾಡುವಾಗ ಬೆಳಿಗ್ಗೆ ಸಂಜೆ ಎರಡೂ ಹೊತ್ತು ನಮಸ್ಕಾರಗಳಿರುತ್ತವೆ. ಆ ಮಧ್ಯದಲ್ಲಿ ಹತ್ತಿರದಲ್ಲಿನ ಪವಿತ್ರಕ್ಷೇತ್ರಗಳಿಗೆ ಮಾತ್ರ ಹೋಗಿಬರಬಹುದು. ಆದರೆ, ಮನೋರಂಜನೆಯ ಸ್ಥಳ ಮುಂತಾದವುಗಳಿಗೆ ಹೋಗಿ ಕಾಲಹರಣ ಮಾಡಬಾರದು. 
 • Manjula,Mysore

  11:01 PM, 25/05/2017

  ಮಕ್ಕಳಾಗದ ನನ್ನನ್ನು ಅಸ್ಪೃಶ್ಯಳಂತೆ ಕಂಡು ಹಿಂಸಿಸಿದ್ದರು. ಆ ನೋವು ಇವತ್ತು ಪರಿಹಾರವಾಗಿದೆ. ನಮ್ಮ ಮಧ್ವರಾಯರ ವಚನದಿಂದ ನನ್ನ ಮನಸ್ಸಿಗೆ ತಂಪು ನೀಡಿದ ನೀವು ನೂರು ವರ್ಷ ಚನ್ನಾಗಿರಿ. ನಿಮ್ಮನ್ನು ಮಗನನ್ನಾಗಿ ಪಡೆದವರು ಧನ್ಯರು. 🙏🏻🙏🏻🙏🏻
 • Kiran J,NANJANGUD

  3:37 PM , 26/05/2017

  Haage makaladmele gruhasthaanannu makalaguvathanka alankara