ವಿದೇಶಪ್ರವಾಸ ಬ್ರಾಹ್ಮಣರ ಅಭಿವೃದ್ಧಿಗೆ ಪೂರಕವಲ್ಲವೇ?
ಇವತ್ತು ಪಂಡಿತರು, ಪುರೋಹಿತರು ಹೆಚ್ಚುಹೆಚ್ಚು ದಕ್ಷಿಣೆಗಳನ್ನು ಕೇಳುತ್ತಿದ್ದಾರೆ. ನಾವು ಹೊರಗೆ ಹೋಗಿ ದುಡಿಯದಿದ್ದಲ್ಲಿ, ಇವರಿಗೆಲ್ಲ ನೀಡುವದು ಹೇಗೆ. ನಾವು ನೀಡದಿದ್ದರೆ ಅವರ ಜೀವನ ಹೇಗೆ. ಎಂಬ ಪ್ರಶ್ನೆಯಲ್ಲಿ ಕುಚೋದ್ಯವೂ ಇರಬಹುದು. ಕಳಕಳಿಯೂ ಇರಬಹುದು. ಕುಚೋದ್ಯದ ಪ್ರಶ್ನೆಗೆ 71ನೆ ಪ್ರಶ್ನೋತ್ತರದಲ್ಲಿ ಉತ್ತರ ನೀಡಿದ್ದೇನೆ. ಕಳಕಳಿಯ ಭಾವದಲ್ಲಿ ಪ್ರಶ್ನೆ ಹೀಗಿರುತ್ತದೆ — ಬ್ರಾಹ್ಮಣಸಮಾಜವನ್ನು ಇವತ್ತು ಪೋಷಿಸುವವರು ಕಡಿಮೆ. ನಮ್ಮಲ್ಲಿಯೇ ಕೆಲವರು ಹೊರಗೆ ಹೋಗಿ ಹೆಚ್ಚು ದುಡಿದಾಗ, ಬ್ರಾಹ್ಮಣಸಮಾಜವನ್ನು ಪೋಷಿಸಲು ಸಾಧ್ಯ. ಬೆಳೆಸಲು ಸಾಧ್ಯ. ಹೀಗಾಗಿ ಯಾಕಾಗಿ ಇದಕ್ಕೆ ಅವಕಾಶವನ್ನು ಮಾಡಿಕೊಡ-ಬಾರದು ಎಂದು. ಕಳಕಳಿ ತುಂಬಿದ ಪ್ರಶ್ನೆ. ಈ ಪ್ರಶ್ನೆಗೆ ಇಲ್ಲಿ ಉತ್ತರ ನೀಡಲಾಗಿದೆ.