Prashnottara - VNP091

ದೇವರಿಗೆ ಮಾಡಿರುವ ನೈವೇದ್ಯ ತುಲಸಿಗೆ ಮತ್ತೆ ಮಾಡಬಹುದೇ?


					  	

ಹರೇ ಶ್ರೀನಿವಾಸ. ದೇವರಿಗೆ ಮಾಡಿರುವ ನೈವೇದ್ಯ ತುಲಸಿಗೆ ಮತ್ತೆ ಮಾಡಬಹುದೇ, ಗುರುಗಳೇ? — ವಿಜಯಾ. ಲಕ್ಷ್ಮಿಯಿಂದ ಆರಂಭಿಸಿ ಯಾವುದೇ ದೇವತೆಗೆ ನೈವೇದ್ಯವನ್ನು ಮಾಡಬೇಕಾದರೂ ಶ್ರೀಹರಿಗೆ ನಿವೇದಿತವಾಗಿರುವ ಪದಾರ್ಥವನ್ನೇ ನೈವೇದ್ಯ ಮಾಡಬೇಕು. ವಿಶೇಷಗಳು ಹೀಗಿವೆ — ಮಹಾಲಕ್ಷ್ಮಿಗೆ ನೈವೇದ್ಯ ಮಾಡಬೇಕಾದರೆ ಆ ಪದಾರ್ಥ ಶ್ರೀಹರಿಗೆ ಮಾತ್ರ ನಿವೇದಿತವಾಗಿರಬೇಕು. ಮುಖ್ಯಪ್ರಾಣದೇವರಿಗೆ ನೈವೇದ್ಯ ಮಾಡಬೇಕಾದರೆ ಆ ಪದಾರ್ಥ ಶ್ರೀಹರಿ ಮತ್ತು ಲಕ್ಷ್ಮೀದೇವಿ ಇಬ್ಬರಿಗೂ ನಿವೇದಿತವಾಗಿರಬೇಕು. ಭಾರತೀದೇವಿಗೆ ನೈವೇದ್ಯ ಮಾಡಬೇಕಾದರೆ ಆ ಪದಾರ್ಥ ಶ್ರೀಹರಿ, ಲಕ್ಷ್ಮೀದೇವಿ ಮತ್ತು ಮುಖ್ಯಪ್ರಾಣದೇವರಿಗೆ ನಿವೇದಿತವಾಗಿರಬೇಕು. ರುದ್ರಾದಿ ಸಮಸ್ತ ದೇವತೆಗಳಿಗೆ ನೈವೇದ್ಯ ಮಾಡಬೇಕಾದರೆ, ಗುರುಗಳಿಗೆ ಹಸ್ತೋದಕ ಮಾಡಬೇಕಾದರೆ ಮತ್ತು ನಾವು ಉಣ್ಣಬೇಕಾದರೆ ಶ್ರೀಹರಿ, ಲಕ್ಷ್ಮೀ, ಮುಖ್ಯಪ್ರಾಣ, ಭಾರತಿಯರಿಗೆ ಮಾತ್ರ ನಿವೇದಿತವಾಗಿರಬೇಕು. ಅಂದರೆ, ಗಣಪತಿಗೆ ನೈವೇದ್ಯ ಮಾಡಬೇಕಾದರೆ ರುದ್ರದೇವರಿಗೆ ನೈವೇದ್ಯ ಮಾಡಿದ್ದನ್ನು ನೈವೇದ್ಯ ಮಾಡಬಾರದು. ರುದ್ರದೇವರಿಗೆ ಬೇರೆ ನೈವೇದ್ಯ, ಗಣಪತಿಗೆ ಬೇರೆ ನೈವೇದ್ಯ, ಹೀಗೆ ಎಲ್ಲ ದೇವತೆಗಳಿಗೂ ಪ್ರತ್ಯೇಕ ನೈವೇದ್ಯ. ಮೊದಲು ಹಿರಿಯ ದೇವತೆಗಳಿಗೆ ನೈವೇದ್ಯ ಮಾಡಿ ನಂತರ ಕಿರಿಯ ದೇವತೆಗಳಿಗೆ ಮಾಡಬೇಕು, ಹೊರತು ಹಿರಿಯ ದೇವತೆಗಳಿಗೆ ಮಾಡಿದ್ದನ್ನೇ ಕಿರಿಯ ದೇವತೆಗಳಿಗೆ ಮಾಡಬಾರದು. ಆಯಾ ದೇವತೆಯ ಪತ್ನಿಗೆ ಮಾತ್ರ ಆ ದೇವತೆಗೆ ಸಮರ್ಪಿಸಿದ್ದನ್ನೇ ಸಮರ್ಪಿಸಬಹುದು. ಉದಾಹರಣೆಗೆ ಒಂದು ಬಾಳೆಹಣ್ಣನ್ನು ರುದ್ರದೇವರಿಗೆ ನೈವೇದ್ಯ ಮಾಡಿದ ಬಳಿಕ ಅದನ್ನು ಗಣಪತಿಗೆ ನೈವೇದ್ಯ ಮಾಡಬಾರದು. ಗಣಪತಿಗೆ ಬೇರೆಯ ಬಾಳೆ ಹಣ್ಣನ್ನು ನೈವೇದ್ಯ ಮಾಡಬೇಕು. ಇಬ್ಬರಿಗೂ ಸಮರ್ಪಿಸುವ ಬಾಳೆಹಣ್ಣು ಶ್ರೀಹರಿ, ಲಕ್ಷ್ಮಿ, ಪ್ರಾಣ, ಭಾರತಿಯರಿಗೆ ನೈವೇದ್ಯವಾಗಿರಲೇಬೇಕು. ನೀವು ಪ್ರತೀನಿತ್ಯ ಮನೆಯಲ್ಲಿ ರುದ್ರದೇವರಿಗೆ, ತುಳಸಿಗೆ, ಪಾರ್ವತಿಗೆ, ಗಣಪತಿಗೆ ಹೀಗೆ ನಾಲ್ಕು ದೇವತೆಗಳಿಗೆ ಬೆಲ್ಲದ ನೈವೇದ್ಯ ಮಾಡುತ್ತಿದ್ದೀರಿ ಎಂದಿಟ್ಟುಕೊಳ್ಳೋಣ. ಆಗ ಮೂರು ಬೆಲ್ಲದ ತುಂಡುಗಳನ್ನು ಇಡಬೇಕು. ಮೊದಲನೆಯದನ್ನು ರುದ್ರದೇವರಿಗೆ ಸಮರ್ಪಿಸಬೇಕು. ಎರಡನೆಯದನ್ನು ತುಳಸಿಗೆ ಸಮರ್ಪಿಸಬೇಕು. ಮತ್ತೆ ಮೊದಲನೆಯದನ್ನು ಪಾರ್ವತಿಗೆ ಸಮರ್ಪಿಸಬೇಕು. (ಪಾರ್ವತೀದೇವಿಯರು ರುದ್ರದೇವರ ಪತ್ನಿಯಾದ್ದರಿಂದ ರುದ್ರದೇವರಿಗೆ ಸಮರ್ಪಿಸಿದ್ದನ್ನೇ ಪಾರ್ವತಿಗೆ ಸಮರ್ಪಿಸಬೇಕು. ಪಾರ್ವತೀದೇವಿ ತುಳಸಿಗಿಂತ ಕಿರಿಯ ದೇವತೆಯಾದ್ದರಿಂದ ತುಳಸಿಗೆ ಸಮರ್ಪಿಸಿ ಪಾರ್ವತಿಗೆ ಸಮರ್ಪಿಸಬೇಕು.) ಮೂರನೆಯದನ್ನು ಗಣಪತಿಗೆ ಸಮರ್ಪಿಸಬೇಕು. ಹೀಗೆ ತಾರತಮ್ಯ ಮತ್ತು ಪತಿ-ಪತ್ನಿಯ ಕ್ರಮದಲ್ಲಿ ನೈವೇದ್ಯ ಮಾಡಬೇಕು. — ವಿಷ್ಣುದಾಸ ನಾಗೇಂದ್ರಾಚಾರ್ಯ


Share to facebook View Comments
2686 Views

Comments

(You can only view comments here. If you want to write a comment please download the app.)
  • Srinidhi Govind Joshi,

    7:30 PM , 14/10/2017

    Gurugalige namaskaragalu... Ee tatvagala prakaara prasada sweekarisuva vishayakke matrave athava abhisheka panchamrutagalannu sweekarisuva vishayakku anvaya aaguttadeye. Dayavittu tilisikodi. Ekendare panchamrutagalannu sweekarisuvuddanu nodiddene. Tappiddalli kshamisi
  • Anand purohit,

    1:22 PM , 14/10/2017

    Tara tammya veda kaladali ealla

    Vishnudasa Nagendracharya

    ತಾರತಮ್ಯ ಎನ್ನುವದು ವೇದಗಳದೇ ಸಿದ್ಧಾಂತ. 
  • Srinidhi Govind Joshi,Hyderabad

    6:48 PM , 23/07/2017

    Gurugalige namaskaragalu. Prati mangalavara ganapathige ondu tengina kayi ittu adannu mundina mangalavara odedu naivedya madabahude. Ee paddati madabahude. Dayavittu tilisikodi
  • Rammurthy Kulkarni,

    8:10 PM , 20/07/2017

    ಗುರುಗಳೆ, ನೀವು ಹೇಳಿದ ಭೋಜನ ನಿಯಮಗಳೇನೋ ಸರಿ, ಆದರೆ ಮಾಧ್ವ ಸಂಪ್ರಾಯವಿರುವ ಅನೇಕ ಕ್ಷೇತ್ರಗಳಲ್ಲಿ ( ಕುಕ್ಕೆ ಸುಬ್ರಹ್ಮಣ್ಯ, ಕಟೀಲು ಮುಂತಾದಲ್ಲಿ ) ಆಯಾ ಕ್ಷೇತ್ರದ ದೇವರಿಗೂ ನೈವೇದ್ಯ ಸಮರ್ಪಣೆಯಾಗುತ್ತದೆ. ಅಲ್ಲವೇ? ಅದೇ ಪ್ರಸಾದವನ್ನು ತಾನೇ ನಾವು ಭೋಜನವಾಗಿ ಸೇವಿಸುವುದು..ಹಾಗಾದರೆ ಇಲ್ಲಿ ಹರಿ,ಸಿರಿ,ವಾಯು, ಭಾರತಿಯರಿಗಲ್ಲದೆ, ಆ ಕ್ಷೇತ್ರದ ದೇವತೆಗೂ ಸಮರ್ಪಿಸಿದ ಅನ್ನವನ್ನೇ ಅಲ್ಲವೇ ನಮಗೆ‌ ಬಡಿಸುವದು? ಅಂದ ಮೇಲೆ ಈ ಕ್ಷೇತ್ರಗಳಲ್ಲಿ ನಾವು ಭೋಜನ ಮಾಡಬಾರದೇ?
  • Manjunath,Bangalore

    8:02 PM , 20/07/2017

    ಧನ್ಯವಾದಗಳು ಆಚಾರ್ಯರೆ
  • Manjunath,Bangalore

    8:02 PM , 20/07/2017

    ಧನ್ಯವಾದಗಳು ಆಚಾರ್ಯರೆ
  • Manjunath,

    6:26 PM , 20/07/2017

    ಆಚಾರ್ಯರೆ ಕ್ಷೇತ್ರಗಳಲ್ಲಿ ಭೋಜಜವನ್ನು ಅವರು ಪರಮಾತ್ಮನಿಗೆ ಸಮರ್ಪಣೆ ಮಾಡದೇ ಇರುವ ಸಂದರ್ಭದಲ್ಲಿ ನಾವು ಭೋಜನಕ್ಕೆ ಕುಳಿತಾಗ ಪರಮಾತ್ಮನಿಗೆ ಸಮರ್ಪಣೆ ಮಾಡಿ ತಿನ್ನಬಹುದೇ
    ಏಕೆಂದರೆ ಭೋಜನ ಮಾಡುವುದು ಸಹ ಯಜ್ಞ ಎಂದು ತಿಳಿಸಿದ್ದೀರಿ 
    ಈ ರೀತಿ ಮಾಡಬಹುದೇ ತಿಳಿಸಿಕೊಡಿ🙏🙏

    Vishnudasa Nagendracharya

    ಭೋಜನ ಯಜ್ಞ ಹೌದು. ಸಂಶಯವಿಲ್ಲ. ಆದರೆ ನಮ್ಮ ಮನಸ್ಸಿಗೆ ತೋಚಿದಂತೆ ಮಾಡುವದಲ್ಲ. 
    
    ಮೊದಲಿಗೆ ಅವರು ನೈವೇದ್ಯ ಮಾಡಿಲ್ಲ ಎನ್ನುವದು ಖಾತ್ರಿಯಾಗಬೇಕು. 
    
    ಎರಡನೆಯದು ನಮ್ಮ ಎಲೆಗೆ ಬಡಿಸಿದ್ದನ್ನು ಮಾತ್ರ ನೈವೇದ್ಯ ಮಾಡುವ ಕ್ರಮವನ್ನು ಯಾರೂ ತಿಳಿಸಿಲ್ಲ. ಮಾಡುವದು ಸಾಧುವೂ ಅಲ್ಲ. 
    
    ಇನ್ನು ನೈವೇದ್ಯ ಮಾಡಿದರೂ ಯಾರಿಗೆ ನೈವೇದ್ಯ ಮಾಡುತ್ತೀರಿ. ನಮ್ಮ ಅಂತರ್ಯಾಮಿಗೆ ಮಾಡಲು ಬರುವದಿಲ್ಲ. ಪ್ರತಿಮೆ, ಸಾಲಿಗ್ರಾಮಗಳಲ್ಲಿರುವ ದೇವರಿಗೇ ಮಾಡಬೇಕು. ದೇವಸ್ಥಾನದ ಪ್ರತಿಮೆಗೆ ಮಾಡುವ ಅಧಿಕಾರ ಎಲ್ಲರಿಗೂ ಇರುವದಿಲ್ಲ. ಇದ್ದರೂ ಎಲೆಯ ಮುಂದೆ ಕುಳಿತು ಮಾಡುವದು ಪದ್ಧತಿಯಲ್ಲ. 
    
    ಒಂದುವೇಳೆ ಈಗಾಗಲೇ ನೈವೇದ್ಯವಾಗಿದ್ದರೆ ಅದನ್ನು ಮತ್ತೆ ಸಮರ್ಪಣೆ ಮಾಡಿದ ದೋಷ. 
    
    ಹೀಗಾಗಿ, ನೈವೇದ್ಯವಾಗಿಲ್ಲದಿರುವದು ಖಾತ್ರಿಯಾದರೆ ಅಲ್ಲಿನ ಊಟವನ್ನು ಮಾಡಬಾರದು ಅಷ್ಟೆ. 
    
    
  • Rammurthy Kulkarni,

    5:11 PM , 20/07/2017

    ಹಾಗಾದರೆ,, ನಾವು ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಮೂಕಾಂಬಿಕಾ, ಕಟೀಲು ದುರ್ಗಾಪರಮೇಶ್ವರಿ ಮುಂತಾದ ಕ್ಷೇತ್ರಗಳಲ್ಲಿ ಅನ್ನ ಸಂತರ್ಪಣೆ ಯಲ್ಲಿ ಭೋಜನ ಮಾಡಬಾರದೇ?

    Vishnudasa Nagendracharya

    ನಾವು ಭೋಜನ ಮಾಡಬೇಕಾದರೆ ಅಡಿಗೆಯಲ್ಲಿ ಇಷ್ಟು ಗುಣಗಳಿರಬೇಕು. 
    
    ೧. ಶುದ್ಧವಾದ ಕ್ರಮದಲ್ಲಿ ಶುದ್ಧರಾದ ಜನರಿಂದ ತಯಾರಾಗಿರಬೇಕು. (ಹೆಂಡ ಕುಡಿಯುವ, ಸಂಧ್ಯಾವಂದನೆ ಮಾಡದ, ಹೋಟೆಲ್ಲುಗಳಲ್ಲಿ ತಿನ್ನುವ, ಕನಿಷ್ಠಬ್ರಾಹ್ಮಣಧರ್ಮಗಳನ್ನೂ ಪಾಲಿಸದ ಜನರು ಸಿದ್ಧ ಮಾಡಿದ ಅಡಿಗೆ ಸರ್ವಥಾ ಉಣ್ಣಬಾರದು )
    
    ೨. ದೇವರಿಗೆ, ಲಕ್ಷ್ಮೀ-ಪ್ರಾಣ-ಭಾರತಿಯರಿಗೆ ಮಾತ್ರ ನಿವೇದಿತವಾಗಿರಬೇಕು. 
    
    ೩. ವೈಶ್ವದೇವವಾಗಿರಬೇಕು. 
    
    ೪.  ಶುದ್ಧವಾದ ಕ್ರಮದಲ್ಲಿ ಬಡಿಸಬೇಕು.
    
    ಕ್ಷೇತ್ರಗಳಲ್ಲಿಯೂ ಈ ಕ್ರಮಗಳನ್ನು ಪಾಲಿಸುತ್ತಿದ್ದಲ್ಲಿ ಅವಶ್ಯವಾಗಿ ಊಟ ಮಾಡಬಹುದು. ಇಲ್ಲದಿದ್ದಲ್ಲಿ ಇಲ್ಲ. 
    
    
    
  • Varuni Deshpande,

    2:46 PM , 14/07/2017

    Namaskaragalu acharyare. 
    Rudradi devategala naivaidya graahya alla hagadare hastodaka hege graahya dayavittu tilisi.(namma maneyalli hastodaka graahya).

    Vishnudasa Nagendracharya

    ತತ್ವಾಭಿಮಾನಿ ದೇವತೆಗಳಿಗೆ ಅನ್ನಾದಿಗಳನ್ನು ಸಮರ್ಪಿಸಿದಾಗ ಆ ಪದಾರ್ಥಗಳಲ್ಲಿರುವ ತಮ್ಮತಮ್ಮ ಭಾಗವನ್ನು ಅವರು ಸ್ವೀಕರಿಸುತ್ತಾರೆ. ಅದಕ್ಕಾಗಿ ಅದು ನಮಗೆ ಸ್ವೀಕಾರಾರ್ಹವಲ್ಲ. 
    
    ಶ್ರೀಮದಾಚಾರ್ಯರ ಪರಂಪರೆಯಲ್ಲಿ ಬಂದ ಯತಿಗಳಿಗೆ ನಾವು ಸಮರ್ಪಿಸಿದಾದ ಅವರು ತೇಜೋರೂಪದಿಂದ ಅದನ್ನು ಕೇವಲ ನೋಡುತ್ತಾರೆ. ಉಣ್ಣುವದಿಲ್ಲ. ಅವರ ಕಣ್ಣಿನಿಂದ ಅನಿರುದ್ಧಾದಿ ಐದು ರೂಪಗಳು ಈ ಅನ್ನವನ್ನು ಪ್ರವೇಶಿಸುತ್ತವೆ. ಹೀಗಾಗಿ, ಹಸ್ತೋದಕ ಮಾಡಲ್ಪಟ್ಟ ಅನ್ನ ಯಜ್ಞಶೇಷವಾದ ಹವಿಷ್ಯಾನ್ನಕ್ಕಿಂತಲೂ ಶ್ರೇಷ್ಠವಾಗುತ್ತದೆ. ಅದನ್ನು ತಿನ್ನುವದರಿಂದ ಜ್ಞಾನವೃದ್ಧಿ, ದೇಹದ ದೋಷಗಳ ನಾಶ ಮತ್ತು ಪಾಪನಾಶಗಳುಂಟಾಗುತ್ತವೆ. 
    
    ತಿಂದು ಉಳಿದದ್ದಲ್ಲವಾದ್ದರಿಂದ ಹಸ್ತೋದಕ ಅನುಚ್ಛಿಷ್ಟ. ಸಮರ್ಪಿಸಲ್ಪಟ್ಟಿದೆಯಾದ್ದರಿಂದ ನಿವೇದಿತ. ಆದ್ದರಿಂದ ಸ್ವೀಕರಿಸಬೇಕು. 
  • Pavan,

    11:03 AM, 20/07/2017

    Acharyare, Rudradi devategalige maadida naivedyavannu naavu sweekarisabaradu , aadare gurugalige maadida hastodakavannu sweekarisabahudu yendu heluttiddiri , arthavaguttilla, athava nanu tilidukolluttiruvadu tappe, dayavittu tilisi

    Vishnudasa Nagendracharya

    ತತ್ವಾಭಿಮಾನಿ ದೇವತೆಗಳಿಗೆ ಅನ್ನಾದಿಗಳನ್ನು ಸಮರ್ಪಿಸಿದಾಗ ಆ ಪದಾರ್ಥಗಳಲ್ಲಿರುವ ತಮ್ಮತಮ್ಮ ಭಾಗವನ್ನು ಅವರು ಸ್ವೀಕರಿಸುತ್ತಾರೆ. ಅದಕ್ಕಾಗಿ ಅದು ನಮಗೆ ಸ್ವೀಕಾರಾರ್ಹವಲ್ಲ. 
    
    ಶ್ರೀಮದಾಚಾರ್ಯರ ಪರಂಪರೆಯಲ್ಲಿ ಬಂದ ಯತಿಗಳಿಗೆ ನಾವು ಸಮರ್ಪಿಸಿದಾದ ಅವರು ತೇಜೋರೂಪದಿಂದ ಅದನ್ನು ಕೇವಲ ನೋಡುತ್ತಾರೆ. ಉಣ್ಣುವದಿಲ್ಲ. ಅವರ ಕಣ್ಣಿನಿಂದ ಅನಿರುದ್ಧಾದಿ ಐದು ರೂಪಗಳು ಈ ಅನ್ನವನ್ನು ಪ್ರವೇಶಿಸುತ್ತವೆ. ಹೀಗಾಗಿ, ಹಸ್ತೋದಕ ಮಾಡಲ್ಪಟ್ಟ ಅನ್ನ ಯಜ್ಞಶೇಷವಾದ ಹವಿಷ್ಯಾನ್ನಕ್ಕಿಂತಲೂ ಶ್ರೇಷ್ಠವಾಗುತ್ತದೆ. ಅದನ್ನು ತಿನ್ನುವದರಿಂದ ಜ್ಞಾನವೃದ್ಧಿ, ದೇಹದ ದೋಷಗಳ ನಾಶ ಮತ್ತು ಪಾಪನಾಶಗಳುಂಟಾಗುತ್ತವೆ. 
    
    ತಿಂದು ಉಳಿದದ್ದಲ್ಲವಾದ್ದರಿಂದ ಹಸ್ತೋದಕ ಅನುಚ್ಛಿಷ್ಟ. ಸಮರ್ಪಿಸಲ್ಪಟ್ಟಿದೆಯಾದ್ದರಿಂದ ನಿವೇದಿತ. ಆದ್ದರಿಂದ ಸ್ವೀಕರಿಸಬೇಕು. 
  • Sathyanarayana R B,

    11:28 AM, 20/07/2017

    Excellent acharyare .......nannadondu prashne....tappidalli kshamisi..namma madhwa shastradalli yavyava roga rujanegalige yava yava owshadi...hagu parihara...mattu adakke

    Vishnudasa Nagendracharya

    ಶ್ರೀಮದಾಚಾರ್ಯರ ಗ್ರಂಥಗಳಲ್ಲಿ ಮತ್ತು ಅದರ ವ್ಯಾಖ್ಯಾನ ಗ್ರಂಥಗಳಲ್ಲಿ ನೇರವಾಗಿ ರೋಗ ಮತ್ತು ಅದರ ಔಷಧಿಗಳ ವಿವರಣೆಯಿಲ್ಲ. 
    
    ಆದರೆ, ಗರುಡಪುರಾಣ ಮುಂತಾದ ಪುರಾಣಗಳಲ್ಲಿ ಹಾಗೂ ಆಯುರ್ವೇದದ ಗ್ರಂಥಗಳಲ್ಲಿ ಇವುಗಳ ಕುರಿತು ವಿಸ್ತೃತ ಚಿತ್ರಣ ದೊರೆಯುತ್ತದೆ. 
  • Madhusudhana das,

    11:52 AM, 20/07/2017

    Hagadare, rayarige maadida hastodaka banni, naavu sweekara madabahude ???

    Vishnudasa Nagendracharya

    ಅವಶ್ಯವಾಗಿ. 
  • Dr.Guruprasad,

    8:24 PM , 16/07/2017

    Shri Gurubhyo Namaha
    Dhanyavadagalu idakkagi tumba dinadinda kayuttidde.
    Illo ondu sanna doubt.
    Durga devi ge yavaga samarpane maafudu?
    Shri hari ,lakshmi,then durga,pranadevaru, gurugalige.

    Vishnudasa Nagendracharya

    ದುರ್ಗಾದೇವಿ ಎಂದರೆ ಲಕ್ಷ್ಮೀದೇವಿಯೇ ಸಂಶಯವಿಲ್ಲ. 
    
    ಶ್ರೀ - ಭೂ - ದುರ್ಗಾ ಎನ್ನುವದು ಲಕ್ಷ್ಮೀದೇವಿಯರ ಮೂರು ರೂಪಗಳು. 
    
    ಭಗವಂತನಿಗೆ ಸಮರ್ಪಿಸಿದ ನಂತರ ದುರ್ಗಾದಿರೂಪದ ಲಕ್ಷ್ಮೀದೇವಿಗೆ ಸಮರ್ಪಿಸಿ ಪ್ರಾಣದೇವರಿಗೆ ಸಮರ್ಪಿಸಬೇಕು. 
    
    ಪಾರ್ವತೀದೇವಿಗೂ ದುರ್ಗಾ ಎಂಬ ಹೆಸರಿದೆ. 
    
    VNA147, ಕುಮಾರಿ ಪೂಜಾವಿಧಾನ ಎಂಬ ನವರಾತ್ರಿಯ ಲೇಖನದಲ್ಲಿ ಇದರ ಕುರಿತ ವಿವರಣೆಯನ್ನು ನೀಡಿದ್ದೇನೆ. 
  • Rammurthy Kulkarni,

    8:54 PM , 16/07/2017

    ಗುರುಗಳೆ, ನೀವೇ ಹಿಂದೊಮ್ಮೆ ನಾನು ಗುರುಗಳ ಪಾದೋದಕದ ಬಗ್ಗೆ ಕೇಳಿದಾಗ , ನೀವು ಗುರುಗಳ( ರಾಯರು ಇತ್ಯಾದಿ ಯತಿಗಳ), ರುದ್ರ ದೇವರ ತೀರ್ಥ ಸೇವಿಸಬಾರದು, ಕೇವಲ ತಲೆತಲೆಯಮೇಲೆ ಹಾಕಿಕೊಳ್ಳಬೇಕು ಎಂದಿದ್ದಿರಿ..ಈಗ ಸ್ವೀಕರಿಸಬೇಕು ಎನ್ನುತ್ತಿದ್ದೀರಿ.

    Vishnudasa Nagendracharya

    ನಿಜ. 
    
    ಈ ಹಿಂದೆ ನಾನೂ ಸಹ ಉತ್ತರಾದಿಮಠದ  ಪ್ರಭಾವಕ್ಕೆ ಒಳಗಾಗಿದ್ದವನು. ಆದರೆ ಪ್ರಾಂಜಲವಾಗಿ ವಿಚಾರ ಮಾಡಲು ಆರಂಭ ಮಾಡಿದಾಗ ಮತ್ತು ಉತ್ತರಾದಿಮಠದ ಪರಂಪರೆಯಲ್ಲಿ ಬಂದ ಶ್ರೀ ಸತ್ಯಪರಾಕ್ರಮರ ವಚನವೇ ಇರುವಾಗ ಆ ಮಠದವರ ಆಚರಣೆಯ ಕುರಿತು ಸಂಶಯ ತಲೆದೋರಲು ಆರಂಭವಾಯಿತು. ಆ ಬಳಿಕ ಶ್ರೀ ವಿದ್ಯಾವಾರಿಧಿತೀರ್ಥಗುರುಸಾರ್ವಭೌಮರ ಗುರುಮಾಹಾತ್ಮ್ಯಮಂಜರಿಯಲ್ಲಿನ ಹಸ್ತೋದಕ ಸ್ವೀಕಾರದ ಎಲ್ಲ ಪ್ರಶ್ನೆಗಳಿಗೂ ನಿಖರವಾದ ಉತ್ತರಗಳನ್ನು ಓದಿದ ಬಳಿಕ ಸ್ವೀಕರಿಸಲೇಬೇಕು ಎನ್ನುವ ನಿಶ್ಚಯವಾಯಿತು. 
    
    ಇವತ್ತಿನ ಅನೇಕ ಉತ್ತರಾದಿಮಠದ ಆಚರಣೆಗಳು ಉತ್ತರಾದಿಮಠದ ಯತಿ-ಜ್ಞಾನಿಗಳ ವಚನಗಳಿಗೆ ವಿರುದ್ಧವಾಗಿವೆ. ಉದಾರಹಣೆಗೆ, ಶಾಕವ್ರತದಲ್ಲಿ ಮಾವಿನಹಣ್ಣು, ತೆಂಗಿನಕಾಯಿ ಬರುತ್ತದೆ ಎಂದು ಶ್ರೀ ಛಲಾರೀ ನರಸಿಂಹಾಚಾರ್ಯರೇ ಬರೆದಿದ್ದಾರೆ. ಆದರೆ ಉತ್ತರಾದಿ ಮಠದವರೇ ಅದನ್ನು ಒಪ್ಪುವದಿಲ್ಲ. ಹಸ್ತೋದಕವನ್ನು , ಪಾದೋದಕವನ್ನು ಸ್ವೀಕರಿಸಬೇಕು ಎಂದು ಶ್ರೀ ಸತ್ಯಪರಾಕ್ರಮರೇ ಬರೆದಿದ್ದಾರೆ ಆದರೆ ಉತ್ತರಾದಿಮಠದವರು ಅನುಸರಿಸುವದಿಲ್ಲ. ಅಷ್ಟೇಕೆ, ಮೊನ್ನೆ ಅಧಿಕ ಆಷಾಢದಲ್ಲಿ ಮಳಖೇಡದಲ್ಲಿ ಸತ್ಯಾತ್ಮರು ದ್ರಾಕ್ಷಿ, ಗೋಡಂಬಿ, ಬಾದಾಮಿಗಳ ಅಭಿಷೇಕವನ್ನು ವೃಂದಾವನಗಳಿಗೆ ಮಾಡಿದರು. ಅದನ್ನೇ ವಿಪುಲವಾಗಿ ಪ್ರಸಾದವಾಗಿ ಹಂಚಲಾಯಿತು. ನನಗೂ ನೀಡಿದರು. ತಿರುಕೊಯಿಲೂರಿನಲ್ಲಿ ರಘೂತ್ತಮರ ವೃಂದಾವನದ ಪಂಚಾಮೃತವನ್ನೂ ಹೀಗೆಯೇ ಹಂಚುತ್ತಾರೆ. ಪಾದೋದಕವನ್ನು ಸ್ವೀಕರಿಸಬಾರದು, ಪಂಚಾಮೃತವನ್ನು ಸ್ವೀಕರಿಸಬಹುದು ಎನ್ನುವದು ಯಾತರ ನ್ಯಾಯ? ಹೀಗೆ ಅವರ ಆಚರಣೆಗಳು ಪರಸ್ಪರ ವಿರುದ್ಧ. 
    
    ಪ್ರಾಂಜಲವಾಗಿ ವಿಚಾರ ಮಾಡುತ್ತ ಹೋದಾಗ ಒಂದೊಂದೇ ಆಭಾಸಗಳು ತೋರಲು ಆರಂಭವಾದವು. ಪ್ರಮಾಣವಿರುದ್ಧ ಎಂದು ಅರ್ಥವಾಯಿತು. 
    
    ಟೀಕಾಕೃತ್ಪಾದರ ವಚನವಿದೆ - ಅಂಗೀಕುರ್ಮಃ ಶಶವಿಷಾಣಮಪಿ ಯದಿ ಪ್ರಾಮಾಣಿಕಂ ಸ್ಯಾತ್ ಎಂದು. 
    
    ಅಂದರೆ, ಮೊಲದ ಕೋಡು ಇವತ್ತು ಅಸತ್ಯವಾಗಿರಬಹುದು. ಆದರೆ ನಾಳೆ ವಿಜ್ಞಾನ ಏನೋ ಸಂಶೋಧನೆ ಮಾಡಿ ಮೊಲಕ್ಕೆ ಕೋಡು ಮೂಡಿಸಿದರೆ ಅವಶ್ಯವಾಗಿ ನಾವು ಮೊಲದ ಕೋಡನ್ನು ಸತ್ಯ ಎಂದು ಒಪ್ಪುತ್ತೇವೆ. ಒಂದು ವಿಷಯವನ್ನು ಸತ್ಯ ಎಂದು ಒಪ್ಪಲು, ಅಸತ್ಯ ಎಂದು ಒಪ್ಪಲು,  ಪ್ರಮಾಣ, ಪ್ರಮಾಣಾಭಾವಗಳೇ ಕಾರಣವಾಗಬೇಕು. ಆಗ್ರಹವಲ್ಲ. ಇದೇ ಮಧ್ವಸಿದ್ಧಾಂತ. 
    
    ಶ್ರೀ ತ್ರಿವಿಕ್ರಮಪಂಡಿತಾಚಾರ್ಯರಾದಿ ಮಹಾನುಭಾವರು ತಾವು ಹಿಂದೆ ತಿಳಿದ, ಪ್ರತಿಪಾದಿಸುತ್ತಿದ್ದ ಅದ್ವೈತ ಸಿದ್ಧಾಂತವನ್ನು ಬಿಟ್ಟು ಶ್ರೀಮಧ್ವಸಿದ್ಧಾಂತವನ್ನು ಸ್ವೀಕರಿಸಲಿಲ್ಲವೇ, ಹಾಗೆ. 
    
    ಹಸ್ತೋದಕದ ವಿಷಯದಲ್ಲಿ, ಶ್ರೀಮದ್ವಾದಿರಾಜಗುರುಸಾರ್ವಭೌಮರ ಋಜುತ್ವದ ವಿಷಯದಲ್ಲಿ ಇಲ್ಲಸಲ್ಲದ ಅಪಪ್ರಚಾರಗಳು ನಡೆದಿವೆ. ಯಾವ ಮಠಕ್ಕೂ, ಯಾರ ಮಾತಿಗೂ ಜೋಲು ಬೀಳದೆ ನಿಷ್ಪಕ್ಷಪಾತ ಸಂಶೋಧನೆಯನ್ನು ನಡೆಸಿ ಪ್ರಮಾಣಗಳ ಅನುಸಾರಿಯಾಗಿ ತತ್ವಗಳನ್ನು ತಿಳಿಯ ಹೊರಟರೆ ಎಲ್ಲವೂ ತಿಳಿಯಾಗುತ್ತದೆ. ಇದು ನನ್ನ ದಾರಿ. 
    
    ನಾನು ನನ್ನ ಬನ್ನಂಜೆ ವಿಮರ್ಶದ ಪುಸ್ತಕದಲ್ಲಿಯೂ ಬರೆದಿದ್ದೇನೆ. ನಾನು ಬರೆದ ವಿಷಯವನ್ನು ತಪ್ಪು ಎಂದು ಪ್ರತಿಪಾದಿಸಿದಲ್ಲಿ ಅವಶ್ಯವಾಗಿ ಒಪ್ಪಿ ಸರಿಯಾದುದನ್ನು ಸ್ವೀಕರಿಸುತ್ತೇನೆ ಎಂದು. ಅದು ಬಾಯಿಮಾತಲ್ಲ, ನಾನು ಅನುಸರಿಸುವ ಮಾರ್ಗ. 
    
    ಹಸ್ತೋದಕದ ವಿಷಯವನ್ನು ಸದಾಚಾರಸ್ಮೃತಿಯ ಲೇಖನ-ಉಪನ್ಯಾಸಮಾಲಿಕೆಯಲ್ಲಿ ಭೋಜನದ ಪ್ರಕರಣ ಬಂದಾಗ ವಿಸ್ತೃತವಾಗಿ ಚರ್ಚಿಸಿ ನಿಮ್ಮ ಮುಂದಿಡುತ್ತೇನೆ. ಪ್ರಮಾಣಗಳಿಗೆ ಅನುಕೂಲವಾಗಿದೆ ಮತ್ತು ಯುಕ್ತಿಬದ್ಧವಾಗಿದೆ, ಮನಸ್ಸಿಗೆ ಸರಿತೋರುತ್ತದೆ ಎಂದಲ್ಲಿ ನೀವು ಅದನ್ನು ಸ್ವೀಕರಿಸಬಹುದು. 
    
    ಋಜುತ್ವದ ವಿಷಯದ ಕುರಿತು ಇರುವ ಎಲ್ಲ ಆಕ್ಷೇಪಗಳಿಗೆ ಇನ್ನೊಂದೆರಡು ವರ್ಷಗಳಲ್ಲಿ ಉತ್ತರಿಸುತ್ತೇನೆ. ಈಗಾಗಲೇ ಹಿಡಿದ ಕಾರ್ಯಗಳು ಮುಗಿದ ನಂತರ ಆ ದೊಡ್ಡ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕಾಗಿದೆ. 
  • ಸುದರ್ಶನ ಶ್ರೀ. ಲ.,

    12:38 AM, 17/07/2017

    ದೇವತೆಗಳಿಗೆ ಸಮರ್ಪಿಸಿದ ನೈವೇದ್ಯ ಮಾಡಿದ ಪದಾರ್ವಥನ್ನು  ಗೋವುಗಳಿಗೆ ನೀಡಿದರೆ ಅವರಿಗೆ ಕಲಿಪ್ರವೇಶವಾಗುವುದಿಲ್ಲವೆ ಗುರುಗಳೆ🙏

    Vishnudasa Nagendracharya

    ಕಲಿಯ ಪ್ರಭಾವ ಮುಖ್ಯವಾಗಿ ಉಂಟಾಗುವದು ನಮ್ಮ ಮನಸ್ಸಿನ ಮೇಲೆ. ದುಷ್ಟವಿಚಾರಗಳೇ ಕಲಿಯ ಪ್ರಭಾವದ ನಿಶಾನೆಗಳು. 
    
    ಪ್ರಾಣಿಗಳಲ್ಲಿ ಈ ಮನೋವ್ಯಾಪಾರ ಅಧಿಕವಾಗಿರುವದಿಲ್ಲವಾದ್ದರಿಂದ ಚಿಂತೆಯಿಲ್ಲ. 
    
    ಮತ್ತು, ಗೋವುಗಳಿಗೆ ಇದನ್ನು ನೀಡಬಾರದು, ನೀಡಬೇಕು ಎಂಬ ನಿಷೇಧವಿಲ್ಲದ ಕಾರಣ ಅವುಗಳ ದೇಹಕ್ಕೆ ಯೋಗ್ಯವಾದ ಸಕಲ ಪದಾರ್ಥಗಳನ್ನೂ ನೀಡಬಹುದು. ವಿಧಿ ನಿಷೇಧಗಳು ಮನುಷ್ಯರಿಗೆ ಮಾತ್ರ. 
  • Dr.Guruprasad,

    1:47 PM , 17/07/2017

    ಶ್ರೀ ಗುರುಭ್ಯೋ ನಮಃ
    
    ಇನ್ನೂ ಒಂದು ಪ್ರಶ್ನೆ
    ನಾಗನ ಬನದಲ್ಲಿ ಮಾಡಿದ ಪಂಚಾಮೃತ ಕುಡಿಯಬಹುದೇ??
    ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಕೊಟ್ಟ ಪಂಚಾಮೃತ ಕುಡಿಯಬಹುದೇ???

    Vishnudasa Nagendracharya

    ಕುಡಿಯಬಾರದು. 
  • Lokesha Moolya,

    11:29 PM, 18/07/2017

    Olleya information... Danyavadha Guruji
  • Varuni Deshpande,

    2:46 PM , 14/07/2017

    Namaskaragalu acharyare. 
    Rudradi devategala naivaidya graahya alla hagadare hastodaka hege graahya dayavittu tilisi.(namma maneyalli hastodaka graahya).
  • Veena Rao,

    11:21 AM, 14/07/2017

    ತುಂಬಾ ಚೆನ್ನಾಗಿ , ವಿವರವಾಗಿ ತಿಳಿಸಿದ್ದೀರಿ ಆಚಾರ್ಯರೆ. ತುಂಬಾಧನ್ಯವಾದಗಳು.
  • Jayashree Karunakar,

    9:30 AM , 14/07/2017

    ಕಲಿಭಾದೆ ಹೇಗೆ ಬರುತ್ತದೆ
    
     ದೇವತೆಯರಿಗೆ ಮಾಡಿದ ನ್ಯೇವೇದಲ್ಲಿ ಇರುತ್ತದೆಯೆ
     ಗೋವುಗಳಿಗೆ ಅದರ ಭಾದೆ ಬರುವುದಿಲ್ಲವೆ
  • B. Suresh Kumar,Chennai

    5:15 AM , 14/07/2017

    Thumba Dhanyavadagalu acharyare
  • B. Suresh Kumar,Chennai

    11:33 PM, 13/07/2017

    Gurugale artha agalla daya madi berra language alli tilisbeku. Dhanyavadagalu

    Vishnudasa Nagendracharya

    Śrīhari-lakṣmi-prāṇa-bhāratiyarige ondē pātreyalliruvadannu samarpisabēku, ā nantara adannu nāvu svīkarisabēku. 
    
    Garuḍādi samasta dēvategaḷigū ondondu pratyēka pātreyalli samarpisabēku.
  • B. Suresh Kumar,

    5:09 PM , 13/07/2017

    3 platenalli avilikke hanny Mattu thamboola ittu Srihari ge ondu plate innondu laksmi Devi,prana devuru Garuda sesha Rudra Parvathi Devi ganapathy genu innondu plate nalli iradhu gurugalige madthathane ee krama sariya? Gurugale dhaya madi tikisibeku

    Vishnudasa Nagendracharya

    ಶ್ರೀಹರಿ-ಲಕ್ಷ್ಮಿ-ಪ್ರಾಣ-ಭಾರತಿಯರಿಗೆ ಒಂದೇ ಪಾತ್ರೆಯಲ್ಲಿರುವದನ್ನು ಸಮರ್ಪಿಸಬೇಕು, ಆ ನಂತರ ಅದನ್ನು ನಾವು ಸ್ವೀಕರಿಸಬೇಕು. 
    
    ಗರುಡಾದಿ ಸಮಸ್ತ ದೇವತೆಗಳಿಗೂ ಒಂದೊಂದು ಪ್ರತ್ಯೇಕ ಪಾತ್ರೆಯಲ್ಲಿ ಸಮರ್ಪಿಸಬೇಕು.
    
    Śrīhari-lakṣmi-prāṇa-bhāratiyarige ondē pātreyalliruvadannu samarpisabēku, ā nantara adannu nāvu svīkarisabēku. 
    
    Garuḍādi samasta dēvategaḷigū ondondu pratyēka pātreyalli samarpisabēku.
  • Aniruddha,

    8:51 PM , 13/07/2017

    Gurugala hastodaka swikarisabhuda dayamadi tilise

    Vishnudasa Nagendracharya

    ಗುರುಗಳ ಪಾದೋದಕ ಮತ್ತು ಹಸ್ತೋದಕಗಳನ್ನು ಅವಶ್ಯವಾಗಿ ಸ್ವೀಕರಿಸಲೇಬೇಕು. 
    
    ಇದರ ಕುರಿತು ಇರುವ ಆಕ್ಷೇಪಗಳಿಗೆ ಉತ್ತರವನ್ನು  ಸದಾಚಾರಸ್ಮೃತಿಯ ಭೋಜನಪ್ರಕರಣದ ಲೇಖನ ಉಪನ್ಯಾಸಗಳಲ್ಲಿ  ವಿಸ್ತೃತ ಚರ್ಚೆಯೊಂದಿಗೆ ನೀಡುತ್ತೇನೆ. 
  • K Anil,

    4:43 PM , 13/07/2017

    Thumba visheshavada mathu visishta margadarshanakke dhanyavadagalu
  • Rammurthy Kulkarni,

    1:58 PM , 13/07/2017

    ಸ್ವಲ್ಪ confusing ಆಗಿದೆ..ಹರಿಗೆ ಸಮರ್ಪಿತವಾದದ್ದು ಪ್ರಾಣದೇವರಿಗೆ ಸಮರ್ಪಿಸುವುದಾದರೆ,.ರುದ್ರದೇವರ ಪ್ರಸಾದ ಯಾಕೆ ಗಣಪತಿಗೆ ಸಮರ್ಪಿಸುವಂತಿಲ್ಲ..ಗಣಪತಿ ರುದ್ರಸುತನಲ್ಲವೇ?

    Vishnudasa Nagendracharya

    ಅದಕ್ಕೆ ಕಾರಣವಿದೆ. 
    
    ದೇವತೆಗಳು ಉಣ್ಣುವದನ್ನು ನೈವೇದ್ಯ ಎನ್ನುತ್ತೇವೆ. ಯಾರೇ ತಿನ್ನಬೇಕಾದರೂ ಅದು ಭಗವಂತ, ಲಕ್ಷ್ಮಿ, ಪ್ರಾಣ, ಭಾರತಿಯರಿಗೆ ಮಾತ್ರ ಸಮರ್ಪಿತವಾಗಿರಬೇಕು. ಕಾರಣ ಆ ನಾಲ್ಕು ಜನರಿಗೆ ಸರ್ವಥಾ ಕಲಿಬಾಧೆಯಿಲ್ಲ. 
    
    ಉಳಿದ ದೇವತೆಗಳಿಗೆ ಮಾಡಿದ ನೈವೇದ್ಯವನ್ನು ನಾವು ಉಣ್ಣಬಾರದು. ಅದನ್ನು ಗೋಗ್ರಾಸವನ್ನಾಗಿ ಸಮರ್ಪಿಸಬೇಕು. 
    
    ಈ ನಿಯಮ ದೇವತೆಗಳಿಗೂ ಅನ್ವಿಯಿಸುತ್ತದೆ. ರುದ್ರದೇವರ ನೈವೇದ್ಯವನ್ನು ಇಂದ್ರಾದಿ ದೇವತೆಗಳು ಸ್ವೀಕರಿಸುವಂತಿಲ್ಲ. ಆದರೆ ಹಿರಿಯರಾದ ರುದ್ರದೇವರಿಗೆ ಸಮರ್ಪಿಸಿದ ನಂತರವೇ ಇಂದ್ರಾದಿಗಳು ಸ್ವೀಕರಿಸುತ್ತಾರೆ. 
    
    ಸರಳವಾದ ವಿಷಯ - ನಮ್ಮ ಮನೆಯಲ್ಲಿ ಹಿರಿಯರಿದ್ದಾರೆ. ಅವರು ಊಟಕ್ಕೆ ಕುಳಿತ ಬಳಿಕ ನಾವು ಕೂಡುತ್ತೇವೆ. ಆದರೆ ಅವರು ಉಂಡ ಎಂಜಲನ್ನು ಉಣ್ಣುವದಿಲ್ಲ. 
    
    ಹರಿ, ಹರಿಣೀ, ವಾಯು, ಭಾರತಿಯರ ಎಂಜಲನ್ನು ಉಣ್ಣುವದರಿಂದ ಕಲಿಬಾಧೆ ನಾಶವಾಗುತ್ತದೆಯಾದ್ದರಿಂದ ಅವರಿಗೆ ನೈವೇದ್ಯ ಮಾಡಿದ್ದನ್ನು ಉಣ್ಣುತ್ತೇವೆ, ದೇವತೆಗಳಿಗೆ ನೈವೇದ್ಯ ಮಾಡಿದ್ದನ್ನು ಗೋಗ್ರಾಸವನ್ನಾಗಿ ನೀಡುತ್ತೇವೆ. ಗೋವಿಲ್ಲದಿದ್ದರೆ, ಯಾರೂ ತುಳಿಯದ ಪ್ರದೇಶದಲ್ಲಿ ಅದನ್ನು ಹಾಕಬೇಕು. ಅಥವಾ ಭೂಗತ ಮಾಡಬೇಕು. 
  • Nagaraj v dhulked,

    1:57 PM , 13/07/2017

    Hare Srinivas Dannosmi
  • mudigal sreenath,

    1:49 PM , 13/07/2017

    gurugale nyvedya samarpana vidhana vannu sakshipthavagi sandeha rahithavagi channage thilisidderi.dhanyavadagalu nimage.