ಗೌರಿ ಗಣಪತಿಯನ್ನು ಹೇಗೆ ಮತ್ತು ಏಕೆ ಆಚರಿಸಬೇಕು?
ಪೂಜ್ಯಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು. ತಮ್ಮ ವಿಶ್ವನಂದಿನಿ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಪ್ರತಿಯೊಂದು ಕರ್ಮವನ್ನೂ ಏಕೆ ಮತ್ತು ಹೇಗೆ ಆಚರಿಸಬೇಕು ಎನ್ನುವದನ್ನು ತಾವು ತುಂಬ ಪರಿಣಾಮಕಾರಿಯಾಗಿ ತಿಳಿಸುತ್ತಿದ್ದೀರಿ. ನಿಮ್ಮ ದೆಸೆಯಿಂದ ನಮ್ಮ ಮಕ್ಕಳಿಗೆ ನಾವು ಉತ್ತರ ನೀಡಲು ಸಾಧ್ಯವಾಗಿದೆ. ಧನ್ಯವಾದಗಳು. ಹೀಗೆಯೇ ಗೌರೀ ಗಣಪತಿ ವ್ರತಗಳನ್ನು ಏಕೆ ಆಚರಿಸಬೇಕು ಮತ್ತು ಹೇಗೆ ಆಚರಿಸಬೇಕು ಎನ್ನುವದನ್ನು ತಿಳಿಸಬೇಕಾಗಿ ವಿನಂತಿಸುತ್ತೇನೆ. — ರಘೂತ್ತಮರಾವ್, ಬೆಂಗಳೂರು.