Prashnottara - VNP133

ವಿಲಂಬಿವತ್ಸರದ [2018] ಕೃಷ್ಣಾಷ್ಟಮೀ


					 	

ವಿಲಂಬಿವತ್ಸರದಲ್ಲಿ ಕೃಷ್ಣಾಷ್ಟಮಿಯನ್ನು ಎಂದು ಆಚರಿಸಬೇಕು ಎನ್ನುವದನ್ನು ಇಲ್ಲಿ ಪ್ರಮಾಣಪುರಸ್ಸರವಾಗಿ ಪ್ರತಿಪಾದಿಸಲಾಗಿದೆ.


Play Time: 22:35, Size: 5.17 MB


Download Article Download Upanyasa Share to facebook View Comments
6529 Views

Comments

(You can only view comments here. If you want to write a comment please download the app.)
 • Ravishankar,Bangalore

  2:20 PM , 10/08/2020

  We z3
 • Raghuttama R Bhadri,Hubballi

  9:17 PM , 02/09/2018

  ಕೃಷ್ಣ ಬಲರಾಮರ ಪೂಜೆಯಲಿ ಜನಿವಾರ ಒಂಟಿಯೋ ಅಥವಾ ಜೊತೆಯೋ?

  Vishnudasa Nagendracharya

  ಜೋಡಿ ಸಮರ್ಪಿಸಬೇಕಾದರೆ ಮದುವೆಯಾಗಿರಬೇಕು, ಮಡದಿ ಇರಬೇಕು. ಆದರೆ ನಾವು ಬಾಲಕೃಷ್ಣ-ರಾಮರನ್ನು ಪೂಜಿಸುತ್ತಿದ್ದೇವೆ ಆದ್ದರಿಂದ ಒಂಟಿ ಜನಿವಾರ ಎಂದರೆ, ನಾವು ಪೂಜಿಸುತ್ತಿರುವ ಕೃಷ್ಣ-ರಾಮರ ರೂಪ ಶಿಶುರೂಪ. ಹೀಗಾಗಿ ಮುಂಜಿಯೇ ಆಗಿಲ್ಲದ ರೂಪವಾದ್ದರಿಂದ ಜನಿವಾರವನ್ನೇ ಸಮರ್ಪಿಸಬಾರದು ಎಂದಾಗಿಬಿಡುತ್ತದೆ. 
  
  ಜನಿವಾರದ ಸಮರ್ಪಣೆ ಪೂಜೆಯ ಒಂದು ಭಾಗ. ಹೀಗಾಗಿ ಸಮರ್ಪಿಸಲೇಬೇಕು. 
  
  ಜೋಡಿಯನ್ನೇ ಸಮರ್ಪಿಸಬೇಕು. ಕಾರಣ, ಭಗವಂತ ಶಿಶುರೂಪದಲ್ಲಿಯೂ ಲಕ್ಷ್ಣೀರಮಣ. ಮತ್ತು ಬಲರಾಮದೇವರು ಮೂಲರೂಪವನ್ನು ಅರ್ಥಾತ್ ವಾರುಣೀಪತಿರೂಪವನ್ನು ಚಿಂತಿಸಿ ಸಮರ್ಪಿಸಿದರೆ ಫಲಾಧಿಕ್ಯ. 
  
  ಹೀಗಾಗಿ ಜೋಡಿ ಜನಿವಾರವನ್ನೇ ಸಮರ್ಪಿಸಬೇಕು. 
 • Vatsalya,

  8:32 AM , 03/09/2018

  ಪೂಜ್ಯ ಆಚಾರ್ಯರೆ,
  
  ನನ್ನ ಮನೆಯವರದು ರಾಯರ ಮಠ, ಸೋಮವಾರ ಸಂಜೆ ಪಾರಣೆ...ಆದರೆ ಸದ್ಯ ನಾನು ತವರುಮನೆಯಲ್ಲಿದ್ದೀನಿ ಅಲ್ಲಿ ಉತ್ಸವಾಂತ್ಯ ಪಾರಣೆ... ಯಾವುದನ್ನು ಪಾಲಿಸುವುದು ಶಾಸ್ತ್ರ ವಿಹಿತ? ದಯವಿಟ್ಟು ಉತ್ತರಿಸಿ
  
  ನಮಸ್ಕಾರಗಳು

  Vishnudasa Nagendracharya

  ನೀವು ಎಲ್ಲಿದ್ದೀರೋ ಅಲ್ಲಿಯ ಕ್ರಮವನ್ನು ಅನುಸರಿಸಬೇಕು. ಪ್ರಾತಃಪಾರಣೆಯನ್ನು ಮಾಡಿ. 
  
 • Vijay,Bangalore

  8:35 PM , 02/09/2018

  Krishnastami acharane vidhanadha bagge pdf bekithu ... adhakke sambandha patta Sthothragalu Mathe acharane vidhanadha
 • B Sudarshan Acharya,Udupi

  5:00 AM , 01/09/2018

  Pruthvi ಯವರೆ 
  ತಿಥಿನಕ್ಷತ್ರಯೋಗೇ ವಾ ಕೇವಲಂ ಋಕ್ಷಕೇಪಿ ವಾ |
  ತಿಥಿಯ ಅಭಾವ ಬಂದರೆ ನಕ್ಷತ್ರವನ್ನು ಇಟ್ಟುಕೊಂಡು ಮಾಡುವುದು. ವಸಿಷ್ಠಸಂಹಿ‌ತೆಯ ವಚನದಂತೆ ಮಧ್ಯರಾತ್ರಿಯಲ್ಲಿ ಇದ್ದಂದು ಮುಖ್ಯವಾಗಿ ಪರಿಗ್ರಹಿಸಬೇಕೆಂದಿದ್ದಾರೆ.ಇಲ್ಲವಾದರೆ ಯಾವತ್ತು ತಿಥಿ ನಕ್ಷತ್ರ ಗಳು ಒಂದೇ ದಿನ ಬರುತ್ತದೋ ಅವತ್ತು ಮಾಡಬೇಕಂದಿದ್ದಾರೆ.

  Vishnudasa Nagendracharya

  ಸಪ್ತಮೇವೇಧವಿದ್ದಾಗಲೂ ಅಷ್ಟಮೀ ಆಚರಣೆಯನ್ನು ಕೃತಾದಿಯುಗಗಳಲ್ಲಿ ಮಾಡುತ್ತಿದ್ದರು ಎಂದು ಮತ್ತೊಂದು ಕಾಮೆಂಟಿನಲ್ಲಿ ನೀವೇ ಹೇಳಿದ್ದೀರಿ. 
  
  ಇಲ್ಲಿ ಅರ್ಧರಾತ್ರಿಯಲ್ಲಿ ಇದ್ದಂದು ಮುಖ್ಯವಾಗಿ ಪರಿಗ್ರಹಿಸಬೇಕು ಎಂದು ಹೇಳುತ್ತಿದ್ದೀರಿ. 
  
  ಈ ಎರಡೂ ಸಹ ಈ ಬಾರಿ ಭಾನುವಾರವೇ ಕೂಡಿ ಬರುತ್ತಿದೆ. 
  
  ಅಂದಮೇಲೆ ಸೋಮವಾರ ಜಯಂತಿಯ ಆಚರಣೆ ಮಾಡುತ್ತಿರುವದು ತಪ್ಪಲ್ಲವೇ? 
 • Rakesh,Bangaluru

  11:50 AM, 01/09/2018

  Onde maneli tande maga, bere bere muttadu sampradaya acharisuttidalli yava reeti madbeku?

  Vishnudasa Nagendracharya

  ಹಾಗೆಲ್ಲ ಸರ್ವಥಾ ಮಾಡಬಾರದು. 
  
  ತಂದೆಯವರು ಮಾಡುತ್ತಿರುವದನ್ನೇ ಅನುಷ್ಠಾನ ಮಾಡಿ. 
 • Pruthvi,Bangalore

  10:27 PM, 01/09/2018

  ಆಚಾರ್ಯರೇ ಸೂರ್ಯೋದದಿಂದ ಸೂರ್ಯೋದಯದ ವರೆಗೆ ತಿಧಿಯನ್ನು ತೆಗೆದುಕೋಳ್ಳುವುದಕ್ಕೆ ಪ್ರಮಾಣ ಕೇಳಿದಿರಲ್ಲ.. ಕೃಷ್ಣಾಮೃತ ಮಾಹಾರ್ಣವದಲ್ಲಿ .. ಪ್ರತಿಪತ್ ಪ್ರಭೃತಯಃ ಸರ್ವಾ ಉದಯಾದುದಯಾದ್ರವೇ ಸಂಪೂರ್ಣ ಇತಿ ವಿಜ್ಞೇಯಾ ಎನ್ನುವ ಶ್ರೀಮದಾಚಾರ್ಯರ ಮಾತಿಗೆ ಏನು ಅರ್ಧೈಸಬೇಕು

  Vishnudasa Nagendracharya

  ಹೊಸದಾಗಿ ಏನೂ ಅರ್ಥೈಸಬೇಕಾಗಿಲ್ಲ. 
  
  ಹಿಂದಿನ ಸೂರ್ಯೋದಯದಿಂದ ಮುಂದಿನ ಸೂರ್ಯೋದಯದ ಒಳಗೆ ಬರುವ ತಿಥಿಗಳು ಸಂಪೂರ್ಣ. ಏಕಾದಶಿ ಮಾತ್ರ ಅರುಣೋದಯದಿಂದ ಇದ್ದಾಗ ಮಾತ್ರ ಸಂಪೂರ್ಣ ಎಂದು ಹೇಳಲು ಹೊರಟಿರುವ ವಚನವಿದು. 
  
  ಇದು ನಿತ್ಯಾಹ್ನಿಕಗಳಿಗೆ ತಿಳಿಸಿದ್ದು. ಯಾವ ಕರ್ಮವನ್ನು ಯಾವ ತಿಥಿಯಲ್ಲಿ ಯಾವ ಕಾಲದಲ್ಲಿ ಮಾಡಬೇಕು ಎಂದು ಹೇಳಿದ್ದಾರೆಯೋ ಆ ಕಾಲದಲ್ಲಿ ಆ ತಿಥಿ ಇರಬೇಕು ಎನ್ನುವದಕ್ಕೆ ಯಾವ ವಿರೋಧವೂ ಇಲ್ಲ. ಸ್ವಯಂ ಆಚಾರ್ಯರೇ ಪಾರಣೇ ಮರಣೇ ಚೈವ ತಿಥಿಃ ತಾತ್ಕಾಲಿಕೀ ಎಂದು ಸ್ಪಷ್ಟವಾಗಿ ಮತ್ತೊಂದು ಅಪವಾದವನ್ನು ಹೇಳಿದ್ದಾರೆ. 
  
 • B Sudarshan Acharya,Udupi

  11:21 PM, 01/09/2018

  Pruthvi ರವರೇ ರೋಹಿಣ್ಯಾಂ ಅರ್ಧರಾತ್ರೇತು ಯದಾ ಕಾಲಾಷ್ಟಮೀ ಭವೇತ್ ಎಂಬಲ್ಲಿ ಶ್ರೀಮದಾಚಾರ್ಯರು ಅರ್ಧರಾತ್ರಿಯಲ್ಲಿನ ರೋಹಿಣಿ ಮತ್ತು ಅಷ್ಟಮೀಯೋಗಕ್ಕೆ ಪ್ರಾಶಸ್ತ್ಯ ಕೊಟ್ಟಿದ್ದಾರೆ. 
  ತ್ರೇತಾಯಾಂ ದ್ವಾಪರೇ ಚೈವ ರಾಜನ್ ಕೃತಯುಗೇ ಪುರಾ |
  ರೋಹಿಣೀಸಹಿತಾ ಚೇಯಂ ವಿದ್ವದ್ಭಿಃ ಸಮುಪೋಷಿತಾ ||
  ಎಂದು ವಸಿಷ್ಠರು ತ್ರೇತಾದಿ ಮೂರು ಯುಗಗಳಲ್ಲೂ ಜಯಂತಿಯನ್ನು ಸಪ್ತಮಿ ವಿದ್ಧಾಗಿಯೇ ಆಚರಿಸಿದ್ದೇವೆ ಎಂದಿದ್ದಾರೆ.
 • Raghavendra,Bangalore

  11:04 PM, 31/08/2018

  ಕೃಷ್ಣಜಯಂತಿಯಂದು ಭಾನುವಾರ ಬೆಳಿಗ್ಗೆ ಶ್ರೀ ಹರಿ ಮಹಾಲಕ್ಷ್ಮಿ ಆದಿ ದೇವತೆಗಳು ಮತ್ತು ಗುರುಗಳ ಅಲಂಕಾರ ನೈವೇದ್ಯ ಇಲ್ಲವಾ ತಿಳಿಸಿ

  Vishnudasa Nagendracharya

  ಕೃಷ್ಣಜಯಂತಿಯಂದು ಬೆಳಿಗ್ಗೆ ದೇವರಿಗೆ ದೇವತೆಗಳಿಗೆ ಮತ್ತು ಗುರುಗಳಿಗೆ ನಿರ್ಮಾಲ್ಯ ಮಾತ್ರ. 
  
  ರಾತ್ರಿ ದೇವರ ಪೂಜೆಯಾಗುತ್ತಿದ್ದಂತೆ ದೇವತೆಗಳಿಗೂ ತೀರ್ಥ ಅಲಂಕಾರಗಳುಂಟು. 
 • Pruthvi,Bangalore

  10:04 PM, 31/08/2018

  ರೋಹಿಣಿ ಸಂಭದ ಇರದೇ ಇದ್ದರು ಪರವಾಗಿಲ್ಲ ಎನ್ನುವುದಕ್ಕೆ ಪ್ರಮಾಣ ವಿದಯೇ ? ನಾವು ರೋಹಿಣಿ ಸಹಿತವಾದ ಅಷ್ಠಮಿಯನ್ನು ಆಚರಿಸಬೇಕಲ್ಲವೇ ? ರೋಹಿಣಿ ಇರದ ಕೃಷ್ಣ ಪಕ್ಷದ ಅಷ್ಠಮಿ ನಮಗೆ ಪ್ರತಿ ಮಾಸದಲ್ಲೂ ಸಿಗುತ್ತದೆ. ವಸಿಷ್ಠ ಸಂಹಿತೆ ರೋಹಿಣಿ ಸಹಿತ ಅಷ್ಠಮಿ ಉಲ್ಲೇಖ ಮಾಡುತ್ತದೆ ಅಲ್ಲವೇ ?

  Vishnudasa Nagendracharya

  ನಮಗೆ ಗೊಂದಲವಿಲ್ಲ. 
  
  ನಾವು ಆಚರಿಸುವದು ಶ್ರಾವಣ ಕೃಷ್ಣ ಅಷ್ಟಮೀ. 
  
  ರೋಹಿಣಿ ಇದ್ದರೆ ಜಯಂತಿ. 
  
  ರೋಹಿಣಿ ಇಲ್ಲದಿದ್ದರೆ ಕೃಷ್ಣಾಷ್ಟಮಿ. 
  
  ಇನ್ನು ಪ್ರಮಾಣ ಕೇಳಿದ್ದೀರಿ. ಹೀಗಿದೆ — 
  
  ಅಲಾಭೇ ರೋಹಿಣೀಭಸ್ಯ ಕಾರ್ಯಾಷ್ಟಮ್ಯಸ್ತಗಾಮಿನೀ ಎಂದು. ವಿಷ್ಣುರಹಸ್ಯದ ವಚನವಿದು. 
  
  ನಾವು ಆಚರಿಸುವದು ಶ್ರಾವಣ ಕೃಷ್ಣ ಅಷ್ಟಮೀ. 
  
  ರೋಹಿಣಿ ಇದ್ದರೆ ಜಯಂತಿ. 
  
  ರೋಹಿಣಿ ಇಲ್ಲದಿದ್ದರೆ ಕೃಷ್ಣಾಷ್ಟಮಿ. 
  
  ಇನ್ನು ಪ್ರಮಾಣ ಕೇಳಿದ್ದೀರಿ. ಹೀಗಿದೆ — 
  
  ಅಲಾಭೇ ರೋಹಿಣೀಭಸ್ಯ ಕಾರ್ಯಾಷ್ಟಮ್ಯಸ್ತಗಾಮಿನೀ ಎಂದು. ವಿಷ್ಣುರಹಸ್ಯದ ವಚನವಿದು. 
 • B Sudarshan Acharya,Udupi

  9:27 PM , 31/08/2018

  ತಿಥ್ಯಂತೇ ಅಥವಾ ತಿಥಿಭಾಂತೇ ಪಾರಣಮ್ ಇದರ ಅನುಸಾರ ನಾಡಿದ್ದು ಸಾಯಂಕಾಲಪಾರಣೆ ಆಗುತ್ತದೆ ಆದರೆ ಪ್ರಾತಃ ಕಾಲದಲ್ಲೇ ಪಾರಣೆಯನ್ನು ಮಾಡಬೇಕೆಂದು ವಿಧಿಸಿರುವುದರಿಂದ ಶ್ರೀಮದಾಚಾರ್ಯರ ಮಾತು ಅದಕ್ಕೆ ಪೂರಕವಾಗಿರುವುದರಿಂದ ಬೆಳಿಗ್ಗೆಯೇ ಪಾರಣ ಸಮ್ಮತ ಎಂದಷ್ಟೇ ನನ್ನ ಅಭಿಪ್ರಾಯ.
 • B Sudarshan Acharya,Udupi

  7:14 PM , 31/08/2018

  ಪ್ರಾತರೇವ ಪೂಜಯೇತ್ ಎಂಬಲ್ಲಿ ಪ್ರಾತಃ ಕಾಲದ ಪಾರಣೆಯು ಶ್ರೀಮದಾಚಾರ್ಯರಿಗೆ ಸಮ್ಮತವಲ್ಲವೇ. ಸರ್ವೇಷ್ವೇವೋಪವಾಸೇಷು ಪೂರ್ವಾಹ್ಣೇ ಪಾರಣಂ ಭವೇತ್ |
  ಅನ್ಯಯಾ ತು ಫಲಸ್ಯಾರ್ಧಂ ಧರ್ಮಮೇವೋಪಸರ್ಪತಿ || ಎಂದೂ ವಚನವಿರುವುದರಿಂದ ಪ್ರಾತಃ ಕಾಲದಲ್ಲೇ ತಿಥಿ ನಕ್ಷತ್ರಗಳು ಮುಗಿಯುವಹಾಗಿದ್ದರೆ ಕಾದು ಪಾರಣೆ ಇಲ್ಲವಾದರೆ ಶ್ರೀಮದಾಚಾರ್ಯರ ನಿತ್ಯಾಹ್ನಿಕಾದೂರ್ಧ್ವಪಾರಣೆಯೇ ಪ್ರಶಸ್ತವಾಗುತ್ತದೆ

  Vishnudasa Nagendracharya

  ಪ್ರಾತಃ ಪಾರಣೆಯನ್ನು ಆಚಾರ್ಯರು ನಿಷೇಧಿಸಿದ್ದಾರೆ, ಅಥವಾ ಆಚಾರ್ಯರಿಗೆ ಅಭಿಪ್ರೇತವಲ್ಲ ಎನ್ನುವದು ನನ್ನ ಅಭಿಪ್ರಾಯವಲ್ಲ. 
  
  ಆಚಾರ್ಯರ ವಾಕ್ಯವನ್ನು ಎರಡೂ ರೀತಿಯಲ್ಲಿಯೂ ಹೊಂದಿಸಲು ಬರುತ್ತದೆ. 
  
  ತಿಥ್ಯಂತೇ ಪಾರಣವೂ ಶಾಸ್ತ್ರದ ಸಂಪ್ರದಾಯ. ಸಮರ್ಥರು ಅನುಸರಿಸಬೇಕಾದ್ದು. ಹೆಚ್ಚಿನ ಫಲಪ್ರದ. 
  
  ಉತ್ಸವಾಂತೇ ಪಾರಣವೂ ಶಾಸ್ತ್ರದ ಮತ್ತೊಂದು ಸಂಪ್ರದಾಯ. ಅಶಕ್ತರೂ ಅನುಸರಿಸಬಹುದಾದದ್ದು. 
  
  ಆಚಾರ್ಯರ ವಾಕ್ಯ ಎರಡಕ್ಕೂ ಅನುಸಾರಿಯಾಗಿದೆ. ಅದು ಕೇವಲ ಪ್ರಾತಃಪಾರಣೆಯನ್ನೂ ಹೇಳುವದಿಲ್ಲ. ಅಥವಾ ತಿಥ್ಯಂತೇ ಪಾರಣೆಯನ್ನೂ ಹೇಳುವದಿಲ್ಲ. ಎರಡನ್ನೂ ತಿಳಿಸುತ್ತದೆ. ಒಂದನ್ನೇ ತಿಳಿಸುತ್ತದೆ ಎನ್ನುವದಕ್ಕೆ ಸ್ಪಷ್ಟ ಆಧಾರವಿಲ್ಲ ಮತ್ತು ಶಾಸ್ತ್ರದ ಇತರ ವಚನಗಳ ವಿರೋಧವಿದೆ. 
  
  ಯಾರ ಮನೆಯಲ್ಲಿ ಯಾವ ಆಚರಣೆಯಿದೆಯೋ ಅದನ್ನು ಅನುಸರಿಸತಕ್ಕದ್ದು. 
  
  ಇನ್ನು ಎಲ್ಲ ನಿಯಮಗಳಿಗೂ ಅಪವಾದವಿರುತ್ತದೆ. ಎಲ್ಲ ಉಪವಾಸಗಳಲ್ಲಿ ಪ್ರಾತಃಪಾರಣೆಯೇ ವಿಹಿತ ನಿಜ. ಆದರೆ ಧಾರಣಪಾರಣವ್ರತದಲ್ಲಿ ಪ್ರಾತಃ ಪಾರಣೆ ಇಲ್ಲ. ಶ್ರೀ ಕೃಷ್ಣಾಚಾರ್ಯರು ಉದಾಹರಿಸಿರುವ ಬ್ರಹ್ಮವೈವರ್ತದ ವಚನವಿದೆ ನೋಡಿ — सर्वेष्वेवोपवासेषु दिवा पारणमिष्यते। अन्यथा पुण्यहानिःस्यादृते धारणपारणम्"
 • Mythreyi Rao,Bengaluru

  6:00 PM , 31/08/2018

  🙏🙏🙏
 • Pruthvi,Bangalore

  5:17 PM , 31/08/2018

  ಹಾಗಾದರೆ ಕಳೆದ ಬಾರಿಯ ಕೃಷ್ಣಾಷ್ಠಮಿಗೆ ರೋಹಿಣಿ ಸ್ಪರ್ಶ ಇರಲೇ ಇಲ್ಲವಲ್ಲ.

  Vishnudasa Nagendracharya

  ಈಗಾಗಲೇ ಅನೇಕಬಾರಿ ವಿವರಿಸಲ್ಪಟ್ಟ ವಿಷಯವಿದು. 
  
  ಮಧ್ಯರಾತ್ರಿಯಲ್ಲಿ ಅಷ್ಟಮೀ ರೋಹಿಣೀ ಎರಡೂ ಇದ್ದರೆ ಕೃಷ್ಣ ಜಯಂತಿ. 
  
  ಕೇವಲ ಅಷ್ಟಮಿ ಇದ್ದರೆ ಕೃಷ್ಣಾಷ್ಟಮಿ. 
  
  ರೋಹಿಣಿಯ ಸಂಪರ್ಕ ಇರುವ ಅಷ್ಟಮಿಯಂದು ಮಾತ್ರ ಉಪವಾಸ ಎನ್ನುವದು, ನಾನು ಬನ್ನಂಜೆ ವಿಮರ್ಶ ಪುಸ್ತಕ ಬರೆದ ಮೇಲೆ ಬನ್ನಂಜೆ ಹೇಳುತ್ತಿರುವ ಮಾತು. ಅಲ್ಲಿಯವರೆಗೇ ಅವರೂ ಈ ಮಾತಾಡಿರಲಿಲ್ಲ. 
  
  ಶಾಸ್ತ್ರದಲ್ಲೆಲ್ಲಿಯೂ ರೋಹಿಣಿಯ ಸಂಬಂಧವಿರುವ ಅಷ್ಟಮಿಯಂದೇ ಆಚರಿಸಬೇಕು ಎಂದು ವಚನವಿಲ್ಲ. 
  
  ರೋಹಿಣೀ ಅಷ್ಟಮೀ ಎರಡೂ ಮಧ್ಯರಾತ್ರಿಯಿದ್ದರೆ ಜಯಂತಿ ಆಚರಿಸುತ್ತೇವೆ. ಇಲ್ಲದಿದ್ದರೆ ಕೃಷ್ಣಾಷ್ಟಮಿ ಆಚರಿಸುತ್ತೇವೆ. 
 • B Sudarshan Acharya,Udupi

  3:20 PM , 31/08/2018

  ತತೋ ನಿತ್ಯಾಹ್ನಿಕಂ ಕೃತ್ವಾ ಶಕ್ತಿತೋ ದೀಯತಾಂ ಧನಮ್ |
  ಸರ್ವಾಯೇತಿ ಚ ಮಂತ್ರೇಣ ತತಃ ಪಾರಣಮಾಚರೇತ್ |
  ಧರ್ಮಾಯೇತಿ ತತಃ ಸ್ವಸ್ಥೋ ಮುಚ್ಯತೇ ಸರ್ವಕಿಲ್ಭಿಷೈಃ |
  ಇದು ಶ್ರೀಮದಾಚಾರ್ಯರ ನಿರ್ಣಯ ಇರುವುದರಿಂದ ಶ್ರೀವ್ಯಾಸರಾಜರ ಮಠದಲ್ಲಿ ಪ್ರಾತಃಕಾಲ ನಿತ್ಯಾಹ್ನಿಕ ಮುಗಿದ ಮೇಲೆ ಪಾರಣ ಮಾಡುವುದು ಶ್ರೀಮದಾಚಾರ್ಯರ ನಿರ್ಣಯಕ್ಕೆ ಅನುಗುಣವಾಗಿಯೇ ಇದೆ.

  Vishnudasa Nagendracharya

  ತಿಥ್ಯಂತೇ ಪಾರಣಂ ಯದ್ವತ್ ಶುಷ್ಕಾದಾಚಾರಾತ್ ತದ್ವದಸ್ತ್ವಿದಮ್ ಎಂದು ಶ್ರೀಮದ್ವಾದಿರಾಜಗುರುಸಾರ್ವಭೌಮರು ತಿಳಿಸಿದ್ದಾರೆ. 
  
  ಜಯಂತೀನಿರ್ಣಯದಲ್ಲಿನ “ತತಃ ಪಾರಣಮಾಚರೇತ್” ಎನ್ನುವಲ್ಲಿನ ತತಃ ಶಬ್ದ, ಸಂನ್ಯಾಸಪದ್ಧತಿಯಲ್ಲಿ “ಪ್ರಾತರೇವಾಥ ಪೂಜಯೇತ್” ಎನ್ನುವಲ್ಲಿನ ಅಥ ಎನ್ನುವ ಶಬ್ದಗಳನ್ನು ನಾವು ಅವಶ್ಯವಾಗಿ ಗಮನಿಸಬೇಕು. 
  
  ಶ್ರೀಮದಾಚಾರ್ಯರ ವಾಕ್ಯಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ ಅಭಿಯುಕ್ತರಾದ ಶ್ರೀಮಟ್ಟೀಕಾಕೃತ್ಪಾದರು, ಶ್ರೀ ತ್ರಿವಿಕ್ರಮಪಂಡಿತಾಚಾರ್ಯರು, ಶ್ರೀಮಚ್ಚಂದ್ರಿಕಾಚಾರ್ಯರು, ಶ್ರೀ ವಾದಿರಾಜತೀರ್ಥಗುರುಸಾರ್ವಭೌಮರು, ಶ್ರೀ ರಾಘವೇಂದ್ರತೀರ್ಥಗುರುಸಾರ್ವಭೌಮರು ಮುಂತಾದ ಮಹಾನುಭಾವರ ವಚನಗಳ ಆಧಾರದ ಮೇಲೆ ಅರ್ಥೈಸಿಕೊಳ್ಳುವ ಪದ್ಧತಿಯವರು ನಾವು. ಎಲ್ಲ ಕಡೆಯಲ್ಲಿ ಏಕವಾಕ್ಯತೆಯನ್ನು ಕಾಣುವ ಜನ. 
  
  “ವ್ಯಾಸರಾಜಮಠದಲ್ಲಿ ಪ್ರಾತಃಪಾರಣೆಯ ಪದ್ಧತಿಯಿಲ್ಲ, ತಿಥಿ-ಭಾಂತ ಪಾರಣದ ಪದ್ಧತಿ ಇದೆ” ಎಂದು ರಾಯರ ಶಿಷ್ಯರಾದ ಶ್ರೀ ಕೃಷ್ಣಾಚಾರ್ಯರು ಹೇಳಿದ್ದಾರೆ ಎಂದಮೇಲೆ ಈಗಿರುವ ಪದ್ಧತಿ ನಂತರ ಕಾಲದ್ದು ಎನ್ನುವದು ನಿರ್ಣಯವಾಗುತ್ತದೆ. ಯಾರ ಕಾಲದಲ್ಲಿ ಈ ಪ್ರಾತಃಪಾರಣೆಯ ಪದ್ಧತಿ ಆರಂಭವಾಯಿತು ಎನ್ನುವದನ್ನು ಸಂಶೋಧಿಸಿ ಮುಂದಿನ ಚರ್ಚೆಗಿಳಿಯಬೇಕು. 
  
  ತಿಥ್ಯಂತೇ ಪಾರಣ ಮತ್ತು ಉತ್ಸವಾಂತೇ ಪಾರಣ ಎನ್ನುವದು ಶಾಸ್ತ್ರವೇ ತಿಳಿಸಿರುವ ಎರಡು ಪ್ರತ್ಯೇಕ ಪದ್ಧತಿಗಳು. ಸೂರ್ಯೋದಯಕ್ಕಿಂತ ಮುಂಚೆ ಹೋಮ, ಸೂರ್ಯೋದಯದ ನಂತರ ಹೋಮದ (ಉದಿತೇ ಜುಹೋತಿ, ಅನುದಿತೇ ಜುಹೋತಿ) ಪದ್ಧತಿಗಳಂತೆ.
  
  ಇದರಲ್ಲಿ ತಿಥ್ಯಂತೇ ಪಾರಣ ಹೆಚ್ಚು ಫಲದಾಯಕ. 
  
  ಯಾರ ಮನೆಯಲ್ಲಿ ಉತ್ಸವಾಂತೇ ಪಾರಣದ ಪದ್ಧತಿಯಿದೆಯೋ
  
  ಮತ್ತು 
  
  ಯಾರಿಗೆ ಸಂಜೆಯವರೆಗೆ ಉಪವಾಸವಿರಲು ಶಕ್ತಿಯಿಲ್ಲವೋ 
  
  ಅಂತಹ 
  
  ಎರಡೂ ವರ್ಗದ ಜನರು ಪ್ರಾತಃ ಪಾರಣೆಯನ್ನು ಅವಶ್ಯವಾಗಿ ಮಾಡಬಹುದು. 
 • Pruthvi,Bangalore

  2:36 PM , 31/08/2018

  ಆಚಾರ್ಯರಿಗೆ ನಮಸ್ಕಾರಗಳು. ಆಚಾರ್ಯ ಮಧ್ವರ ಪ್ರಕಾರ ತಿಥಿಯನ್ನು ಸೂರ್ಯೋದಯದಿಂದ ಸೂರ್ಯೋದಯಕ್ಕೆ ನೋಡಬೇಕಲ್ಲವೇ ?

  Vishnudasa Nagendracharya

  ಶ್ರೀಯುತ ಪೃಥ್ವಿಯವರಿಗೆ,
  
  ಶ್ರೀಮದಾಚಾರ್ಯರನ್ನು ಆಚಾರ್ಯಮಧ್ವರು ಎಂದು ಕರೆದಲ್ಲಿ ಮುಂದಿನ ಪ್ರಶ್ನೆಗೆ ಉತ್ತರಿಸುವದಿಲ್ಲ. ತ್ರೈಲೋಕ್ಯಗುರುಗಳ ಹೆಸರನ್ನು ಶ್ರೀಮದಾಚಾರ್ಯರು, ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು ಮುಂತಾಗಿ ಗೌರವದಿಂದ ಉಲ್ಲೇಖಿಸಬೇಕು. 
  
  ಸೂರ್ಯೋದಯದ ತಿಥಿಯನ್ನು ಗ್ರಹಿಸುವದು ಸಂಕಲ್ಪಾದಿಗಳಿಗೆ. “ಪಾರಣೇ ಮರಣೇ ಚೈವ ತಿಥಿಸ್ತಾತ್ಕಾಲಿಕೀ ಸ್ಮೃತಾ” ಎಂದು ಆಚಾರ್ಯರು ಪಾರಣ ಮತ್ತು ಮರಣದಲ್ಲಿ ಸೂರ್ಯೋದಯದ ತಿಥಿಯನ್ನು ಗ್ರಹಿಸಬಾರದು ಎಂದು ಸ್ಪಷ್ಟವಾಗಿ ಶ್ರೀಕೃಷ್ಣಾಮೃತಮಹಾರ್ಣವದಲ್ಲಿ ಹೇಳಿದ್ದಾರೆ. ಹಾಗೆಯೇ ಅಭ್ಯಂಗ, ಮೈಥುನ, ಸಮುದ್ರಸ್ನಾನ ಮುಂತಾದವುಗಳಿಗೆ ಸೂರ್ಯೋದಯದ ತಿಥಿ ಆವಶ್ಯಕವಲ್ಲ, ಆ ಕರ್ಮ ಮಾಡುವಾಗ ಇರುವ ತಿಥಿಯೇ ಮುಖ್ಯ ಎಂದು ಶಾಸ್ತ್ರಗಳು ತಿಳಿಸುತ್ತವೆ. 
  
  ಎಲ್ಲದಕ್ಕಿಂತ ಮುಖ್ಯವಾಗಿ “ರೋಹಿಣ್ಯಾಮರ್ಧರಾತ್ರೇ ತು ಯದಾ ಕಾಳಾಷ್ಟಮೀ ಭವೇತ್” ಎಂದು ಆಚಾರ್ಯರೇ ಸ್ಪಷ್ಟವಾಗಿ ಅರ್ಧರಾತ್ರಿಯಲ್ಲಿ ಅಷ್ಟಮೀ ರೋಹಿಣಿಗಳಿದ್ದಾಗ ಜಯಂತಿ ಎಂದು ಹೇಳಿದ್ದಾರೆ. 
  
  ಇನ್ನು, ಕೃಷ್ಣಾಷ್ಟಮೀ ಜಯಂತೀಗಳಿಗೆ ಸೂರ್ಯೋದಯದ ತಿಥಿ ಬೇಕು ಎಂದು ಆಚಾರ್ಯರು ಎಲ್ಲಿ ಹೇಳಿದ್ದಾರೆ ಎಂದು ಉಲ್ಲೇಖಿಸಿ. 
  
  ಸೂರ್ಯೋದಯದ ತಿಥಿ ಸಂಧ್ಯಾವಂದನಾದಿ ಕೆಲವು ಕರ್ಮಗಳಿಗೆ ಮಾತ್ರ. 
 • H. Suvarna Kulkarni,Bangalore

  3:08 PM , 31/08/2018

  ಗುರುಗಳಿಗೆ ಪ್ರಣಾಮಗಳು ಗೋಕುಲಾಷ್ಟಮಿ ಆಚರಣೆ ಯನ್ನು ವಿವರವಾಗಿ ತಿಳಿಸಿದ್ದೀರಿ ಧನ್ಯವಾದಗಳು ನಮಸ್ಕಾರ
 • mudigal sreenath,Benguluru

  12:35 PM, 31/08/2018

  🙏🙏🙏