Prashnottara - VNP140

ತೀರ್ಥ, ಪಕ್ಷ ಶ್ರಾದ್ಧದಲ್ಲಿ ಯಾರು ಯಾರಿಗೆ ಪಿಂಡಪ್ರದಾನ ಮಾಡಬೇಕು?


					 	

ಆಚಾರ್ಯರಿಗೆ ಸಾಷ್ಟಾಂಗ ಪ್ರಣಾಮಗಳು ನನ್ನದು ಒಂದು ಪ್ರಶ್ನೆ. ತಂದೆ ತಾಯಿ ಇಬ್ಬರೂ ಮೃತರಾಗಿದ್ದಾರೆ. ಗಯಾದಲ್ಲಿ ಶ್ರಾದ್ಧ ಮಾಡುವ ಆಲೋಚನೆ ಬಂದಿದೆ. ಅಲ್ಲಿ ತಾಯಿ ಶ್ರಾದ್ಧ ಮಾತ್ರ ಮಾಡುವದೇ ಅಥವಾ ತಂದೆ ಅವರ ಶ್ರಾದ್ಧದ ಜೊತೆಗೆ ಮಾಡಬೇಕೋ. ದಯವಿಟ್ಟು ತಿಳಿಸಿ. — ವಿಶ್ವ ಶ್ರೀನಿವಾಸಮೂರ್ತಿ ಗಯಾ, ಬದರೀ ಮುಂತಾದ ಯಾವುದೇ ಕ್ಷೇತ್ರದಲ್ಲಿ ಮಾಡುವ ಶ್ರಾದ್ಧಕ್ಕೆ ತೀರ್ಥಶ್ರಾದ್ಧ ಎಂದು ಹೆಸರು. ಈ ತೀರ್ಥಶ್ರಾದ್ಧವನ್ನು ಮತ್ತು ಮಹಾಲಯಶ್ರಾದ್ಧವನ್ನು (ಪಕ್ಷ) ಕೇವಲ ತಂದೆ ಅಥವಾ ಕೇವಲ ತಾಯಿ ಹೀಗೆ ಒಬ್ಬರಿಗೆ ಮಾತ್ರ ಮಾಡುವದಲ್ಲ. ಸರ್ವಪಿತೃಗಳಿಗೂ ಮಾಡಬೇಕು. ತಾಯಿ ಮೃತರಾಗಿ ತಂದೆ ಬದುಕಿದ್ದರೆ ತೀರ್ಥಶ್ರಾದ್ಧ ಮಾಡಲು ಬರುವದಿಲ್ಲ. ತಂದೆ ಮೃತರಾಗಿ ತಾಯಿ ಬದುಕಿದ್ದರೆ ತೀರ್ಥಶ್ರಾದ್ಧ ಮಾಡಬಹುದು. ಮಾತೃವರ್ಗಕ್ಕೆ ಪಿಂಡಪ್ರದಾನವಿಲ್ಲ. ಮೊದಲಿಗೆ, ತೀರ್ಥ ಶ್ರಾದ್ಧ ಮಾಡುವ ಅಧಿಕಾರ ಬರಬೇಕಾದರೆ ತಂದೆಯವರು ಮೃತರಾಗಿ ವರ್ಷಾಬ್ದೀಕವಾಗಿರಲೇಬೇಕು. ಅಲ್ಲಿಯವರೆಗೆ ತೀರ್ಥಶ್ರಾದ್ಧ ಮಾಡಲು ಬರುವದಿಲ್ಲ. ತೀರ್ಥಶ್ರಾದ್ಧ ಮಾಡುವಾಗ, ತಂದೆ ಮೊದಲಾಗಿ ಮೃತರಾದ ಎಲ್ಲ ಬಾಂಧವರಿಗೂ ಶ್ರಾದ್ಧವನ್ನು ಮಾಡಬೇಕು. ಪಿತೃವರ್ಗ, ಮಾತೃವರ್ಗ ಮಾತಾಮಹವರ್ಗ ಮಾತಾಮಹಿವರ್ಗ ಕರ್ತೃವಿನ ಹೆಂಡತಿ ಕರ್ತೃವಿನ ಮಗ ಸೊಸೆ ಕರ್ತೃವಿನ ಮಗಳು ಅಳಿಯ ಕರ್ತೃವಿನ ಅಣ್ಣ ತಮ್ಮಂದಿರು, ಅವರ ಪತ್ನಿಯರು, ಪುತ್ರರು ಕರ್ತೃವಿನ ಅಕ್ಕ ತಂಗಿಯರು ಅವರ ಪತಿಯರು, ಪುತ್ರರು ತಂದೆಯ ಅಣ್ಣ ತಮ್ಮಂದಿರು ಅವರ ಪತ್ನಿ, ಅವರ ಗಂಡುಮಕ್ಕಳು ತಂದೆಯ ಅಕ್ಕ ತಂಗಿಯರು ಅವರ ಪತಿ, ಅವರ ಗಂಡುಮಕ್ಕಳು ತಾಯಿಯ ಅಣ್ಣ ತಮ್ಮಂದಿರು ಅವರ ಪತ್ನಿ, ಅವರ ಗಂಡುಮಕ್ಕಳು ತಾಯಿಯ ಅಕ್ಕ ತಂಗಿಯರು ಅವರ ಪತಿ, ಅವರ ಗಂಡುಮಕ್ಕಳು ತನಗೆ ಹೆಣ್ಣು ಕೊಟ್ಟ ಅತ್ತೆ ಮಾವ ತನ್ನ ಹೆಂಡತಿಯ ಅಣ್ಣ ತಮ್ಮಂದಿರು ಅವರ ಪತ್ನಿಯರು ಅವರ ಗಂಡುಮಕ್ಕಳು ಗುರುಗಳು ಆಚಾರ್ಯರು ಪರಮೋಪಕಾರಿಗಳು ಗೆಳೆಯರು ಇಷ್ಟುಜನರಲ್ಲಿ ಯಾರು ಮೃತರಾಗಿದ್ದಾರೆಯೋ ಅವರೆಲ್ಲರಿಗೂ ಪಿಂಡಪ್ರದಾನ ಮಾಡಬೇಕು. ಇವರಲ್ಲಿ — ವಿಷ್ಣುದಾಸ ನಾಗೇಂದ್ರಾಚಾರ್ಯ


Share to facebook View Comments
1415 Views

Comments

(You can only view comments here. If you want to write a comment please download the app.)
 • Sudeendra hebbani,Bangalore

  6:34 PM , 28/09/2019

  ಕರ್ತೃ ವಿ ನ ಸಹೋದರರು ಮೃತ ರಾ ಗಿ ದ್ದರೆ, ಅವರಿಗೂ ಪಿಂಡ ಪ್ರಧಾನ ಆಥವಾ ತಿ ಲ ತರ್ಪಣ ಕೊ ಡ ಬೇ ಕಲ್ಲ ವೇ.
  
  ತಾ ಯೀ ಬದುಕಿದ್ದರೆ, ತಾಯಿ ಯ ಅಪ್ಪ........ಹಾ ಗೂ ಅ ಮ್ಮ ನ ವರ್ಗ ದವರಿಗೆ ಪಿಂಡ ಪ್ರಧಾ ನ ಅಥ ವಾ ತಿ ಲ ತರ್ಪಣ ಕೊ ಡ ಬೇ ಕೆ. 
  ದಯವಿಟ್ಟು ತಿಳಿ ಸಿ.

  Vishnudasa Nagendracharya

  ಕರ್ತೃವಿನ ಸಹೋದರರು ಅವರ ಪತ್ನಿ ಪುತ್ರರು ಮೃತರಾಗಿದ್ದರೆ ಹಾಗೂ ಸಹೋದರಿಯರು ಅವರ ಪತಿ,ಪುತ್ರರು ಮೃತಾರಗಿದ್ದರೆ ಅವರಿಗೂ ತರ್ಪಣ ನೀಡಬೇಕು. ಮಹಾಲಯ, ತೀರ್ಥಶ್ರಾದ್ಧದಲ್ಲಿ ಪಿಂಡಪ್ರದಾನ ಮಾಡಬೇಕು. 
  
  ತಾಯಿ ಬದುಕಿದ್ದರೂ, ಮಾತಾಮಹವರ್ಗ ಮತ್ತು ಮಾತಾಮಹಿವರ್ಗಕ್ಕೆ ಅವಶ್ಯವಾಗಿ ತರ್ಪಣ ಪಿಂಡಪ್ರದಾನ ಉಂಟು. ಆದರೆ, ಮಾತಾಮಹ ಬದುಕಿದ್ದರೆ ಅವರ ವರ್ಗ ಬರುವದಿಲ್ಲ, ಮಾತಾಮಹಿ ಬದುಕಿದ್ದರೆ ಅವರ ವರ್ಗ ಬರುವದಿಲ್ಲ. 
  
  ತಾಯಿ ಮಾತೃವರ್ಗಕ್ಕೆ ಆದಿ. ಹೀಗಾಗಿ ತಾಯಿ ಬದುಕಿದ್ದಾಗ ಮಾತೃವರ್ಗ (ತಾಯಿ, ಅಜ್ಜಿ, ಮುತ್ತಜ್ಜಿ) ಇವರು ಮಾತ್ರ ಬರುವದಿಲ್ಲ. 
  
  ತಾಯಿ ಬದುಕಿದ್ದರೂ, ಮಾತಾಮಹ ವರ್ಗ, ಮಾತಾಮಹಿ ವರ್ಗ, ತಾಯಿಯ ಅಣ್ಣ ತಮ್ಮ ಅಕ್ಕ ತಂಗಿಯರಿಗೆ ತರ್ಪಣ ಪಿಂಡಗಳುಂಟು