Prashnottara - VNP155

ಧನುರ್ಮಾಸದ ಶ್ರಾದ್ಧ


					 	

ಧನುರ್ಮಾಸದಲ್ಲಿ ಶ್ರಾದ್ಧ ಬಂದಾಗ ಸೂರ್ಯೋದಯಕ್ಕಿಂತ ಮುಂಚೆಯೇ ಮಾಡಬೇಕೇ ಅಥವಾ ಕುತಪಕಾಲದಲ್ಲಿ ಮಾಡಬೇಕೇ?


Play Time: 02:33, Size: 1.87 MB


Download Upanyasa Share to facebook View Comments
2077 Views

Comments

(You can only view comments here. If you want to write a comment please download the app.)
 • Pranesh,Bangalore

  12:19 PM, 21/12/2019

  ಆಚಾರ್ಯ ತಮ್ಮ ಉಪದೇಶ ಶುಧ್ಧ ಕರ್ಮ ಮಾಡಿಸುತ್ತಿದ್ದೀರಿ ಉಪನ್ಯಾಸಗಳಿಂದ ಶುಧ್ಧ ಜ್ಞಾನ ಕೊಡುತ್ತಿದ್ದೀರಿ ಇವುಗಳನ್ನು ಪಡೆದು ಧನ್ಯತೆಯ ಭಾವ ಹೊಂದುತ್ತಿದ್ದೇವೆ.
  ಇಂತಹ ಮಾಹಾ ಕಾರ್ಯ ಮಾಡಿಸುತ್ತಿರುವ ತಮ್ಮ ಸಮಸ್ತ ಗುರುಗಳಿಗೆ ಸಮಸ್ತ ತತ್ವಾಭಿಮಾನಿ ದೇವತೆಗಳಿಗೆ ವಾಯುದೇವರಿಗೆ ಸರ್ವೋತ್ತಮನಾದ ಅನಂತ ರೂಪಾತ್ಮಕ ನಾದ ಶ್ರೀ ವಿಷ್ಣುನಾಮಕ ಪರಮಾತ್ಮನಿಗೆ ಅನಂತ ಪ್ರಣಾಮಗಳು.
 • Pranesh,Bangalore

  10:02 AM, 17/12/2019

  ಶ್ರಾದ್ಧ ಧನುರ್ಮಾಸದಲ್ಲೂ ಕುಪತ ಕಾಲದಲ್ಲಿ ಮಾಡಬೇಕು ಇದಕ್ಕೆ ವಿರುದ್ದವಚನವಿಲ್ಲ ಆದರೆ
  ಶ್ರಾದ್ಧಕ್ಕೆ ದೇವರ ನೈವೇದ್ಯ ವೈಶ್ವ ದೇವ ಆದ ಅನ್ನವನ್ನು ಬಳಸಬೇಕು ಸೂರ್ಯೋದಯಕ್ಕೆ ಮುನ್ನ ಮಾಡಿದ ಅನ್ನ ಕೂಪತಕಾಲಕ್ಕೆ ತಂಗಳ ಸಮಾನವಾಗುತ್ತದೆ ಅದಕ್ಕೇನು ಮಾಡಬೇಕು?

  Vishnudasa Nagendracharya

  ತುಂಬ ಸರಳವಾದ ಮಾರ್ಗವಿದೆ. 
  
  ಬೆಳಗಿನ ಜಾವದ ಪೂಜೆಯಲ್ಲಿ ಮುದ್ಗಾನ್ನದ ಜೊತೆಯಲ್ಲಿ ಅನ್ನ ಮಾಡಿ ದೇವರಿಗೆ ದೇವತೆಗಳಿಗೆ ನೈವೇದ್ಯ ಮಾಡುವದು. ಆಗ ವೈಶ್ವದೇವ ಮಾಡಬಾರದು. 
  
  ಮಧ್ಯಾಹ್ನ ಶ್ರಾದ್ಧಕ್ಕಾಗಿ ಪ್ರತ್ಯೇಕ ಅನ್ನಾದಿಗಳನ್ನು ಮಾಡಿ, ನೈವೇದ್ಯ ಮಾಡಿ, ವೈಶ್ವದೇವ ಮಾಡಿ ಆ ಅನ್ನದಿಂದ ಶ್ರಾದ್ಧವನ್ನು ಮಾಡುವದು. 
  
  ಶ್ರಾದ್ದ ಮಾಡಿದ ಬಳಿಕ ಸಮಾರಾಧನೆಗಾಗಿ ಮಾಡಿದ ಅನ್ನವನ್ನು ನೈವೇದ್ಯ ಮಾಡಿ, ಮತ್ತೆ ವೈಶ್ವದೇವ ಮಾಡಿ ಹಸ್ತೋದಕವನ್ನೂ ಮಾಡಿ ಪಿತೃಶೇಷ, ಮುದ್ಗಾನ್ನ ಮತ್ತು ಸಮಾರಾಧನೆಯ ಅಡಿಗೆಯನ್ನು ಊಟ ಮಾಡುವದು. 
  
  ಹೀಗೆ ಎರಡು ಬಾರಿ ಮಾತ್ರ ವೈಶ್ವದೇವವಾಗುತ್ತದೆ.