ಮಹಾ ಆಪತ್ತನ್ನು ಪರಿಹರಿಸುವ ಉಗ್ರನರಸಿಂಹ ಸ್ತುತಿ
ಪರಿಹರಿಸಲಿಕ್ಕೆ ಸಾಧ್ಯವಿಲ್ಲದ ಖಾಯಿಲೆಯಾಗಿರಲಿ ದಾಟಲಿಕ್ಕೆ ಸಾಧ್ಯವಿಲ್ಲದ ಘೋರ ಕಷ್ಟವಿರಲಿ ಶತ್ರುಗಳಿಂದ ಅಪಾರ ದೈಹಿಕ ನೋವಾಗಿರಲಿ ನಮ್ಮವರೇ ನೀಡುವ ಅಪಾರ ಮಾನಸಿಕ ಹಿಂಸೆಯಾಗಿರಲಿ ಒಟ್ಟಾರೆ ಸಕಲ ವಿಧ ಆಪತ್ತುಗಳಿಂದ ನಮ್ಮನ್ನು ಪಾರು ಮಾಡುವ ಉಗ್ರನರಸಿಂಹನ ಅಪೂರ್ವ ರಹಸ್ಯ ಚಿಂತನೆಯನ್ನು ಶ್ರೀ ತ್ರಿವಿಕ್ರಮಪಂಡಿತಾಚಾರ್ಯರ ಶ್ರೀ ನರಸಿಂಹ ಸ್ತುತಿಗೆ ವ್ಯಾಖ್ಯಾನ ಮಾಡುತ್ತ ಶ್ರೀಸುಮತೀಂದ್ರತೀರ್ಥ ಗುರುಸಾರ್ವಭೌಮರು ತಿಳಿಸಿದ್ದಾರೆ. ಈ ಪರಮಶಕ್ತಿಶಾಲಿ ಶ್ಲೋಕ ಮತ್ತು ಶ್ರೀ ತ್ರಿವಿಕ್ರಮಪಂಡಿತಾಚಾರ್ಯರು ತಿಳಿಸಿರುವ ಪ್ರಾರ್ಥನೆಯ ವಿವರಣೆ ಇಲ್ಲಿದೆ. ಪ್ರತೀನಿತ್ಯ ಇದನ್ನು ಕನಿಷ್ಠ ಹನ್ನೊಂದು ಬಾರಿಯಂತೆ (ಸಮಯವಿದ್ದಾಗ ಹೆಚ್ಚೆಚ್ಚು ಬಾರಿ) ಪಠಿಸಿ. ನಿಮ್ಮ ಕಷ್ಟ ನಿವಾರಣೆಯಾಗುವವರೆಗೆ ಪಠಿಸಿ. ರಜಸ್ವಲಾ ನಿಯಮವನ್ನು ಪಾಲಿಸುವ ಪತಿವ್ರತೆಯರು ಅವಶ್ಯವಾಗಿ ಈ ಶ್ಲೋಕಗಳನ್ನು ಪಠಿಸಬಹುದು. ನೆನಪಿರಲಿ, ಬರಿಯ ಶ್ಲೋಕ ಪಠಿಸಿದರೆ ಫಲ ದೊರೆಯುವದಿಲ್ಲ. ಅರ್ಥಚಿಂತನದೊಂದಿಗೆ ಪೂರ್ಣ ಭಕ್ತಿ ಶ್ರದ್ಧೆಗಳಿಂದ ಪಠಿಸಬೇಕು. ಅರಿದರಮಸಿಖೇಟೌ ಬಾಣಚಾಪೇ ಗದಾಂ ಸ- ನ್ಮುಸಲಮಪಿ ದಧಾನಃ ಪಾಶವರ್ಯಾಂಕುಶೌ ಚ । ಕರಯುಗಲಧೃತಾಂತ್ರಸ್ರಗ್ವಿಭಿನ್ನಾರಿವಕ್ಷೋ ದಹ ದಹ ನರಸಿಂಹಾಸಹ್ಯವೀರ್ಯಾಹಿತಂ ಮೇ ॥ ಊರ್ಧ್ವಾಭ್ಯಾಮಾಂತ್ರಮಾಲೇ ತದನು ದರಮರಿಂ ಖಡ್ಗಖೇಟೌ ವಹಂತಂ ಬಾಣಂ ಚಾಪಂ ದಧಾನಂ ಮುಸಲಮಪಿ ಗದಾಂ ಪಾಶಮಪ್ಯಂಕುಶಂ ಚ । ಊರ್ವೋರ್ನಿಕ್ಷಿಪ್ಯ ದೈತ್ಯಂ ತದುದರಕುಹರಂ ದಾರಯಂತಂ ಚ ದೋರ್ಭ್ಯಾಂ ರಕ್ತಜ್ವಾಲಾಮಯಂ ತಂ ಜ್ವರಸಮರಭಯೇ ಚಿಂತಯೇದುಗ್ರಸಿಂಹಮ್ ॥ ವಿಶ್ವನಂದಿನಿಯ ಆತ್ಮೀಯ ಬಾಂಧವರಾದ ರಜತ್ ರವರು ಭಕ್ತಿ ಶ್ರದ್ದೆಗಳಿಂದ ಈ ಶ್ಲೋಕಗಳನ್ನುಪಠಿಸಬೇಕಾದರೆ ಮಾಡಬೇಕಾದ ಉಗ್ರನರಸಿಂಹ ರೂಪದ ಚಿತ್ರವನ್ನು ಬರೆದು ನೀಡಿದ್ದಾರೆ. ವಿಡಿಯೋದಲ್ಲಿ ನೀಡಿದ್ದೇನೆ. ಅದನ್ನು ನೋಡುತ್ತ, ಅರ್ಥ ಚಿಂತನೆ ಮಾಡುತ್ತ ಪಠಣ ಮಾಡಿ.
Play Time: 9:26, Size: 9 MB