Upanyasa - VNU005

02/02 ಪರಶುರಾಮವೈಭವ

10/05/2016

ರೇಣುಕಾ ಜಮದಗ್ನಿಯರ ದಾಂಪತ್ಯ, ರೇಣುಕೆಯ ಶಿರಶ್ಛೈದದ ಹಿಂದಿರುವ ಕಾರಣಗಳು, ನಾವು ತಿಳಿಯಬೇಕಾದ ಮಹತ್ತ್ವದ ವಿಷಯಗಳು, ಕಾರ್ತವೀರ್ಯಾರ್ಜುನನ ಅಪರಾಧ, ಪರಶುರಾಮ ಅವನನ್ನು ಸಂಹಾರ ಮಾಡಿದ ಬಗೆ, ಜಮದಗ್ನಿಯ ವಧೆ, ಕ್ಷತ್ರಿಯವಂಶಗಳ ವಿನಾಶ, ಪರಶುರಾಮದೇವರ ಯುದ್ಧವೈಭವ ಹಾಗೂ ಯಜ್ಞವೈಭವ, ಪರಶುರಾಮದೇವರ ಅನುಗ್ರಹವನ್ನು ಪಡೆಯಬೇಕಾದರೆ ನಮ್ಮಲ್ಲಿರಬೇಕಾದ ಸದ್ಗುಣ ಯಾವುದು ಎಂದು ಶ್ರೀಮದಾಚಾರ್ಯರು ತಿಳಿಸಿರುವ ತತ್ವ ಮುಂತಾದ ವಿಷಯಗಳನ್ನು ವಿವರಿಸಿ ಈ ಉಪನ್ಯಾಸವನ್ನು ಗುರ್ವಂತರ್ಯಾಮಿಗೆ ಸಮರ್ಪಿಸಲಾಗಿದೆ. 

Play Time: 45 Mins 34 Seconds

Size: 8.11 MB


Download Upanyasa Share to facebook View Comments
4524 Views

Comments

(You can only view comments here. If you want to write a comment please download the app.)
 • Deshmukh seshagiri rao,Banglore

  7:01 PM , 18/04/2018

  ಶ್ರೀ ಗುರುಗಳಿಗೆ ನನ್ನ ಅನಂತ ಅನಂತ ವಂದನೆಗಳು
 • K S Gayathri,Bengaluru

  3:53 PM , 18/04/2018

  Super Pravachana Sir. Dhanyavadagalu
 • Padma Rajagopal,Mysuru

  11:49 AM, 18/04/2018

  PArashura charithre
 • Ashok Prabhanjana,Bangalore

  7:23 PM , 28/04/2017

  ಗುರುಗಳೇ, ಕಾರ್ತಿವೀರ್ಯರ್ಜುನನು ಸ್ವರೂಪತಹ ಮುಕ್ತಿ ಯೋಗ್ಯ ಜೀವನೆ? ಅದು ಸತ್ಯ ಎಂದಾದರೆ ಅವನೇಕೆ ಅಂಥಹ ಘ್ಹೊರ ಪಾಪಗಳನ್ನು ಮಾಡಿದ? ದಯವಿಟ್ಟು ತಿಳಿಸಿ ಗುರುಗಳೇ

  Vishnudasa Nagendracharya

  ಕಾರ್ತವೀರ್ಯಾರ್ಜುನ ಮಹಾರಾಜರು ಮಹಾವಿಷ್ಣುಭಕ್ತರು. ಗಂಗಾದೇವಿಗಿಂತಲೂ ಉತ್ತಮ ಯೋಗ್ಯತೆಯ, ಪ್ರಹ್ಲಾದರಾಜರು, ಧ್ರುವರಾಜರಿಗೆ ಸಮಾನರಾದ ಚೇತನೋತ್ತಮರು. (ದೇವತಾಗಣಪ್ರವಿಷ್ಟರಾದ ಚಕ್ರವರ್ತಿಗಳು) 
  
  ತಾವು ಶ್ರೀ ದತ್ತಾತ್ರೇಯರೂಪದ ಭಗವಂತನ ಉಪಾಸನೆಯನ್ನು ಮಾಡಿ ಮಹಾಸಾಮರ್ಥ್ಯವನ್ನು ಗಳಿಸಿರುತ್ತಾರೆ. ತನ್ನ ಸಾವು ಭಗವಂತನ ಮತ್ತೊಂದು ರೂಪದಿಂದಲೇ ಆಗಬೇಕು ಎಂದು ಪ್ರಾರ್ಥಿಸಿರುತ್ತಾರೆ. 
  
  ಅಸುರಾವೇಶದಿಂದ ತಪ್ಪು ಮಾಡಿರುತ್ತಾರೆ. ಭಗವಂತ ಆ ತಪ್ಪಿಗೆ ಶಿಕ್ಷೆಯನ್ನು ನೀಡಿ ಆ ನಂತರ ಅನುಗ್ರಹಿಸುತ್ತಾನೆ. 
  
  ಮುಕ್ತಿಯೋಗ್ಯ ಜೀವರು ತಪ್ಪು ಮಾಡಬಾರದು ಎಂದೇನಿಲ್ಲ. ಅಸುರಾವೇಶಕ್ಕೊಳಗಾಗಿ, ಕೆಲವು ಬಾರಿ ಗಳಿಸಿದ ಪುಣ್ಯ ಅಧಿಕವಾಗಿ ಅದನ್ನು ಕಳೆದುಕೊಳ್ಳಲು ಅವರಿಂದ ತಪ್ಪುಗಳು ಘಟಿಸುತ್ತವೆ. ಅಪರೋಕ್ಷ ಜ್ಞಾನಿಗಳಾದರೂ, ದೇವತೋತ್ತಮರಾದರೂ ಕಲಿ ಕೆಲವು ಬಾರಿ ಪ್ರಭಾವ ಬೀರುತ್ತಾನೆ. 
  
  ಆದರೆ ಮಾಡಿದ ತಪ್ಪಿಗೆ ಪಶ್ಚಾತ್ತಾಪದಿಂದ ಪ್ರಾಯಶ್ಚಿತ್ತ ಮಾಡಿಕೊಂಡು ಅಥವಾ ಶಿಕ್ಷೆಯನ್ನು ಅನುಭವಿಸಿ ಪಾಪವನ್ನು ಕಳೆದುಕೊಂಡು ಪುಟಕ್ಕೆ ಬಿದ್ದ ಚಿನ್ನದಂತಾಗಿ ಶ್ರೀಹರಿಯ ಲೋಕವನ್ನು ಸೇರುತ್ತಾರೆ.