Upanyasa - VNU007

02/09 ವಸಿಷ್ಠಮಹರ್ಷಿಗಳ ಕಥೆ

10/05/2016

ಶ್ರೀ ವೇದವ್ಯಾಸಾವತಾರದ ಎರಡನೆಯ ಉಪನ್ಯಾಸ

ವೇದವ್ಯಾಸದೇವರು ಅವತರಿಸಿದ್ದು ವಸಿಷ್ಠರ ಮರಿಮಗನಾಗಿ. ಅದಕ್ಕಾಗಿಯೇ ವಸಿಷ್ಠರನ್ನು ವಾಸಿಷ್ಠಕೃಷ್ಣ ಎನ್ನುತ್ತಾರೆ. 

ವಸಿಷ್ಠಋಷಿಗಳ ಮಗ ಶಕ್ತಿಋಷಿಗಳು, ಕೌಶಿಕನ ಕುತಂತ್ರಕ್ಕೆ ಬಲಿಯಾಗಿ ರಾಕ್ಷಸನಿಗೆ ಆಹಾರವಾಗಿಬಿಡುತ್ತಾರೆ. ಸದ್ಗುಣಗಳ ಖನಿಯಾದ ಮಗನ ವಿಯೋಗವನ್ನು ತಾಳಲಾಗದೆ ವಸಿಷ್ಠರು ಆತ್ಮಹತ್ಯೆಯ ನಿರ್ಧಾರವನ್ನು ಮಾಡಿ ಅದಕ್ಕಾಗಿ ಪರಿಪರಿ ಪ್ರಯತ್ನ ಪಡುತ್ತಾರೆ. ಆದರೆ, ಕೊಲ್ಲುವ ಭಗವಂತನೇ ಕಾಯುವ ನಿರ್ಧಾರ ಮಾಡಿದ್ದಾಗ ಹೇಗೆ ತಾನೆ ಜೀವ ಸಾಯಲು ಸಾಧ್ಯ? ಅವರ ಆತ್ಮಹತ್ಯೆಯ ವಿಫಲ ಪ್ರಯತ್ನಗಳು, ಆಗ ನಡೆದ ಘಟನೆಗಳನ್ನು ನಾವಿಲ್ಲಿ ಕೇಳುತ್ತೇವೆ. 

ಸಾಯಲೂ ಸಾಧ್ಯವಾಗದೇ ವಸಿಷ್ಠರು ದುಃಖಿತರಾಗಿ ಕುಳಿತಿದ್ದಾಗ, ಶಕ್ತಿಯ ಪತ್ನಿ ಗರ್ಭಿಣಿಯಾಗಿದ್ದ ಸುದ್ದಿ ತಿಳಿಯುತ್ತದೆ. ಮಗ ಸತ್ತರೂ ಮೊಮ್ಮಗನ ರೂಪದಲ್ಲಿಯೇ ಇದ್ದಾನೆ ಎಂದು ಹರ್ಷಿತರಾದ ವಸಿಷ್ಠರು ಸೊಸೆಯೊಂದಿಗೆ ಆಶ್ರಮಕ್ಕೆ ಹಿಂತಿರುಗುತ್ತಾರೆ.

Play Time: 32 Minutes 09 Seconds

Size: 5.64 MB


Download Upanyasa Share to facebook View Comments
5481 Views

Comments

(You can only view comments here. If you want to write a comment please download the app.)
  • No Comment