Upanyasa - VNU008

03/09 ಪರಾಶರಮಹರ್ಷಿಗಳ ಕಥೆ

10/05/2016

ಶ್ರೀ ವೇದವ್ಯಾಸಾವತಾರದಲ್ಲಿ  ಮೂರನೆಯ ಉಪನ್ಯಾಸ

ಶಕ್ತಿಯ ಮಗನಾಗಿ ಶ್ರೀ ಪರಾಶರ ಮಹರ್ಷಿಗಳು ಹುಟ್ಟಿಬರುತ್ತಾರೆ. ಅಗಾಧ ತೇಜಸ್ಸಿನ ಆ ಮಹರ್ಷಿ ತನ್ನ ತಂದೆಯ ಸಾವಿಗೆ ಕಾರಣರಾದ ಸಮಸ್ತ ರಾಕ್ಷಸರವಿನಾಶಕ್ಕಾಗಿ ಮಾರಣಹೋಮವನ್ನು ಆರಂಭಿಸುತ್ತಾರೆ. ತಮ್ಮ ತಪಃಸಾಮರ್ಥ್ಯದಿಂದ ರಾಕ್ಷಸರನ್ನು ಎಳೆತಂದು ಅಗ್ನಿಕುಂಡದಲ್ಲಿ ಬೀಳಿಸಿ ಕೊಲ್ಲುತ್ತಿರುತ್ತಾರೆ. ಸಮಸ್ತ ರಾಕ್ಷಸರ ವಿನಾಶವಾಗುತ್ತಿದ್ದುದನ್ನು ಕಂಡ, ರಾಕ್ಷಸರ ನಿಯಾಮಕರಾದ ಪುಲಸ್ತ್ಯರು ಔರ್ವಋಷಿಯ ವೃತ್ತಾಂತವನ್ನು ತಿಳಿಸಿ ಪರಾಶರರನ್ನು ತಡೆಯುತ್ತಾರೆ. ಪರಾಶರರಿಗೆ ಶ್ರೇಷ್ಠ ವರಗಳನ್ನು ನೀಡಿ ಅನುಗ್ರಹಿಸುತ್ತಾರೆ. 

ಆ ನಂತರ ವಸಿಷ್ಠಾದಿ ಋಷಿಗಳ ಅನುಮತಿಯನ್ನು ಪಡೆದು ಪರಾಶರರು ಘೋರ ತಪಸ್ಸಿಗೆ ಮುಂದಾಗುತ್ತಾರೆ. ಪರಮಾತ್ಮನನ್ನೇ ಮಗನನ್ನಾಗಿ ಪಡೆಯಬೇಕು ಎಂದು ಅದ್ಭುತ ತಪಸ್ಸನ್ನು ಮಾಡಿ ಪರಮಾತ್ಮನಿಂದ ವರವನ್ನು ಪಡೆದು ಸತ್ಯವತಿ ಇದ್ದೆಡೆಗೆ ಬರುವವರೆಗಿನ ಪ್ರಸಂಗಗಳ ವಿವರಣೆ ಈ ಭಾಗದಲ್ಲಿದೆ. 

Play Time: 35 Minuts 22 Seconds

Size: 6.20 MB


Download Upanyasa Share to facebook View Comments
5793 Views

Comments

(You can only view comments here. If you want to write a comment please download the app.)
  • No Comment