Upanyasa - VNU010

05/09 ಶ್ರೀ ವೇದವ್ಯಾಸದೇವರ ಪ್ರಾದುರ್ಭಾವ

10/05/2016

ಶ್ರೀ ವೇದವ್ಯಾಸಪ್ರಾದುರ್ಭಾವ

ಪರಾಶರ ಸತ್ಯವತಿಯರ ಮಗನಾಗಿ, ಯಮುನೆಯ ದ್ವೀಪದಲ್ಲಿ ಅವತರಿಸಿದ ವೇದವ್ಯಾಸದೇವರ ಪ್ರಾದುರ್ಭಾವದ ವರ್ಣನೆಯನ್ನು ನಾವಿಲ್ಲಿ ಕೇಳುತ್ತೇವೆ. ಪರಮವೈಷ್ಣವರಾದ ಶ್ರೀಮದಾಚಾರ್ಯರು ತಮ್ಮ ಗುರುಗಳ ಪ್ರಾದುರ್ಭಾವದ ಪ್ರಸಂಗವನ್ನು ಮೈಯುಬ್ಬಿ ವರ್ಣಿಸಿದ್ದಾರೆ. ಆ ಪರಮಪವಿತ್ರ ವಚನಗಳ ಯಥಾಮತಿ ಅನುವಾದ ಈ ಭಾಗದಲ್ಲಿದೆ. 

ಸತ್ಯವತಿಯ ಮೇಲೆ ಪರಮಾತ್ಮ ಮಾಡಿದ ಅನುಗ್ರಹ, ಆ ತಾಯಿಯ ಮಹಾಸೌಭಾಗ್ಯ, ವೇದವ್ಯಾಸದೇವರ ಹೆಸರುಗಳ ಅರ್ಥ, ಪರಾಶರರ ಮೇಲೆ ಮಾಡಿದ ಅನುಗ್ರಹದ ಕುರಿತ ವಿವರಣೆ ಈ ಭಾಗದಲ್ಲಿದೆ. 

Play Time: 34 Minuts 42 Seconds

Size: 6.08 MB


Download Upanyasa Share to facebook View Comments
6215 Views

Comments

(You can only view comments here. If you want to write a comment please download the app.)
 • Preethi R,Bangalore

  10:05 PM, 11/07/2018

  ಆಚಾರ್ಯರೇ ನಮಸ್ಕಾರ. ಪರಾಶರರು ಮತ್ತು ಸತ್ಯವತಿ ಶಾಸ್ತ್ರೋಕ್ತಯಾಗಿ ಮದುವೆಯಾದ ನಂತರ ವೇದವ್ಯಾಸ ದೇವರು ಅವತಾರ ಮಾಡಿದ್ದು ಹಾಗಾಗಿ ಕಾನೀನ ಎನ್ನಬಾರದು ಎಂದು ಕೇಳಿದ್ದೆ. ಈ ಪ್ರವಚನದಲ್ಲಿ ತಾವು ಕಾನೀನ ಎಂದು ಹೇಳಿದ್ದೀರಿ. ಈ ವ್ಯತ್ಯಾಸವನ್ನು ನಾವು ಹೇಗೆ ಅರ್ಥೈಸಿಕೊಳ್ಳಬೇಕು.

  Vishnudasa Nagendracharya

  ಇದರ ಕುರಿತು ವಿವಾದವಿದೆ. ಮುಂದೆ ಸಮಯವಾದಾಗ ಇದರ ಕುರಿತ ಚರ್ಚೆಯನ್ನು ಪ್ರಸ್ತುತ ಪಡಿಸುತ್ತೇನೆ. 
 • Preethi R,Bangalore

  10:08 PM, 11/07/2018

  ಆಚಾರ್ಯರೇ, ವೇದವ್ಯಾಸ ದೇವರಿಗೆ ಸ್ವಯಂಪ್ರೀತಿ ಮತ್ತು ಸ್ವಯಂಪ್ರಭಾ ಎಂಬ ಇಬ್ಬರು ಪತ್ನಿಯರು ಎಂದು ಕೇಳಿದ್ದೇನೆ. ಇದಕ್ಕೆ ಪ್ರಮಾಣ ಎಲ್ಲಿ ಸಿಗಬಹುದು.

  Vishnudasa Nagendracharya

  ನಾನು ಎಲ್ಲಿಯೂ ಕೇಳಿಲ್ಲ. ಪ್ರಮಾಣಗಳು ನಿಮಗೆ ದೊರತರೆ ನನಗೂ ನೀಡಿ. ಪರಿಶೀಲಿಸುತ್ತೇನೆ.