Upanyasa - VNU012

07/09 ಕ್ರಿಮಿಯಿಂದ ರಾಜ್ಯವಾಳಿಸಿದೆ

13/05/2016

ಗ್ರಂಥಗಳನ್ನು ರಚಿಸಿದ ನಂತರ ವೇದವ್ಯಾಸದೇವರು ಲೋಕಸಂಚಾರವನ್ನು ಆರಂಭಿಸುತ್ತಾರೆ. ಸಂಚರಿಸುವಾಗ ಒಮ್ಮೆ, ಬಂಡಿಗಳ ಶಬ್ದದಿಂದ ಸಂತ್ರಸ್ತವಾಗಿದ್ದ ಕೀಟವೊಂದನ್ನು ವೇದವ್ಯಾಸದೇವರು ಮಾತನಾಡಿಸುತ್ತಾರೆ. ಆ ಕೀಟ ತನ್ನ ಪೂರ್ವಜನ್ಮದ ಕಥೆಯನ್ನು ವೇದವ್ಯಾಸದೇವರ ಮುಂದೆ ನಿವೇದಿಸಿಕೊಳ್ಳುತ್ತದೆ. ವೇದವ್ಯಾಸದೇವರು ‘ನಿನಗೆ ರಾಜಪದವಿಯನ್ನು ನೀಡುತ್ತೇನೆ, ಕೀಟಜನ್ಮ ಬಿಡು’ ಎಂದರೂ ಕೀಟ ಸಾಯಲು ಸಿದ್ಧವಾಗುವದಿಲ್ಲ. ಭಗವಂತ ಆ ಕೀಟವನ್ನೇ ರಾಜನನ್ನಾಗಿ ಮಾಡಿ ಅದರಿಂದ ರಾಜ್ಯಭಾರ ಮಾಡಿಸುವ ದಿವ್ಯಘಟನೆಯ ವಿವರ ಇಲ್ಲಿದೆ. ಆ ಕೀಟಜನ್ಮದ ನಂತರ ಬ್ರಾಹ್ಮಣನಾಗಿ ಹುಟ್ಟುವ ಆ ಜೀವ ಮುಕ್ತಿಯನ್ನು ಪಡೆದುಕೊಳ್ಳುತ್ತಾನೆ. 

ಕೀಟಗಳ ಭಾಷೆ ಎಂದರೇನು, ಅವುಗಳ ಆಹಾರ ಹೇಗೆ, ಅವು ತಮ್ಮ ಜೀವನವನ್ನು ಯಾವ ರೀತಿ ಕಾಣುತ್ತವೆ, ಪ್ರತಿಯೊಂದು ಪ್ರಾಣಿಗೂ ತನ್ನ ಬದುಕಿನ ಮೇಲೆ ಎಷ್ಟು ಪ್ರೀತಿಯಿರುತ್ತದೆ ಎಂಬ ಮಹತ್ತ್ವದ ವಿಷಯಗಳ ಕುರಿತು ತಿಳಿಸುವ ಅನುಶಾಸನಪರ್ವದ ಶ್ರೀವೇದವ್ಯಾಸದೇವರ ಪವಿತ್ರವಚನಗಳ ಅನುವಾದ ಇಲ್ಲಿ ದೊರೆಯುತ್ತದೆ. 

Play Time: 45 Minuts 15 Seconds

Size: 7.87 MB


Download Upanyasa Share to facebook View Comments
8438 Views

Comments

(You can only view comments here. If you want to write a comment please download the app.)
 • Srikar K,Bengaluru

  1:44 PM , 06/05/2020

  ಗುರುಗಳೇ, 
  
  ಒಂದು ಪ್ರಶ್ನೆ, ವೇದವ್ಯಾಸರು ಸಾಕ್ಷಾತ್ ದೇವರು. ಅದರಿಂದ ಕ್ರಿಮಿಯ ಭಾಷೆಯಲ್ಲಿ ಮಾತನ್ನು ಆಡಿದರು. ಆದರೆ ಕ್ರಿಮಿಯು ರಾಜ್ಯವನ್ನು ಆಳುವಾಗ ಅದರ Communication ಬೇರೆ ಮನುಷ್ಯರ ಜೊತೆಗೆ ಹೇಗಿತ್ತು? ಹೇಗೆ ವ್ಯವಹಾರ ನಡೆಯುತ್ತಿತ್ತು?

  Vishnudasa Nagendracharya

  ಕ್ರಿಮಿಯ ಭಾಷೆ ತಿಳಿಯಲಿಕ್ಕೆ ದೇವರೇ ಆಗಬೇಕೆಂಬ ನಿಯಮವಿಲ್ಲ. ಆ ಭಾಷೆಯನ್ನು ಕಲಿಯುವ ಸಾಧನೆ ಮಾಡಿದ ಋಷಿ ಮುನಿಗಳೂ ಬಲ್ಲರು. ಮತ್ತು ಸಾಮಾನ್ಯ ಮನುಷ್ಯರೂ ಸಹ ಪ್ರಯತ್ನ ಪಟ್ಟಿದ್ದರೆ (ಆಗಿನ ಕಾಲದಲ್ಲಿ, ಈಗಲ್ಲ) ಕಲಿಯುತ್ತಿದ್ದರು. 
  
  ಕೈಕಯಿಯ ತಂದೆಗೆ ಇರುವೆಗಳ ಭಾಷೆ ಅರ್ಥವಾಗುತ್ತಿತ್ತು ಎಂದು ನಾವು ರಾಮಾಯಣದಲ್ಲಿ ಕೇಳುತ್ತೇವೆ. 
  
  ಇನ್ನು, ವೇದವ್ಯಾಸದೇವರು ಆ ಕ್ರಿಮಿಗೆ ರಾಜ್ಯವನ್ನೇ ನೀಡಿದ್ದಾರೆ, ಹೀಗಾಗಿ ಅವನ ಭೃತ್ಯರಾಗಿದ್ದ ಜನರಿಗೆ ಆ ಕ್ರಿಮಿಯ ಭಾಷೆಯನ್ನು ಅರ್ಥ ಮಾಡಿಕೊಳ್ಳುವ ಶಕ್ತಿಯನ್ನೂ ದಯಪಾಲಿಸಿದ್ದರು. ಸಂಜಯರಿಗೆ ಮಹಾಭಾರತದ ಯುದ್ಧ ಗೋಚರವಾಗುಂತೆ ಅನುಗ್ರಹ ಮಾಡಿದರಲ್ಲ, ಹಾಗೆ. 
  
  ಹೇಗೆ ಎರಡು ವಿಭಿನ್ನ ಭಾಷೆಯ ರಾಜರು, ದುಭಾಷಿಗಳನ್ನು (ಎರಡೂ ಭಾಷೆ ಬಲ್ಲವರನ್ನು) ಇಟ್ಟುಕೊಂಡು ವ್ಯವಹಾರ ಮಾಡುತ್ತಾರೆಯೋ ಹಾಗೆ ಈ ಕ್ರಿಮಿಯ ಜೊತೆ ಮಾತನಾಡಿ, ಉಳಿದ ರಾಜರ ಜೊತೆಯೂ ಮಾತನಾಡಬಲ್ಲ ಶಕ್ತಿಯನ್ನೂ ವೇದವ್ಯಾಸದೇವರು ಆ ಕ್ರಿಮಿಯ ಭೃತ್ಯರಿಗೆ ಅನುಗ್ರಹಿಸಿದರು. 
 • Vijaykumarmanvi,Hosapete

  6:23 PM , 13/04/2020

  ಧನ್ಯವಾದಗಳು ಗುರುಗಳೆ
 • Vikram Shenoy,Doha

  5:21 PM , 20/05/2019

  ಅಹೋ ಭಾಗ್ಯ. ಧನ್ಯವಾದಾಗಳು ಆಚಾರ್ಯರಿಗೆ...
 • mohan,Ramanagara

  3:21 PM , 18/05/2019

  ಗುರುಗಳೆ ಜೀವಿಗಳು ಯಾವ ಸ್ವರೂಪ ದೇಹದಲ್ಲಿ ಇರುತ್ತಾರೋ,ಅವರ ಕೊನೆಯ ಜನ್ಮವಾದ ಚರಮದೇಹವು ಸ್ವರೂಪ ದೇಹ ಆಗಿರುತ್ತದ.
 • Aprameya,Bangalore

  9:57 AM , 09/07/2017

  Sri Gurubhyo Namaha. Namaskara Gurugale. Adbhutavagi vivarsidira. Charma deha andre enu? Adru bagge helidiralva adru bagge inna vistaravagi tilisi Gurugala. 
  -Aprameya

  Vishnudasa Nagendracharya

  VNP078 ಅನಿರುದ್ಧ ದೇಹ, (ತತ್ವಸುರಭಿಯಲ್ಲಿದೆ) ಎಂಬ ಪ್ರಶ್ನೋತ್ತರ ಮತ್ತು ಅದರ ಕಾಮೆಂಟುಗಳಲ್ಲಿ ಇದರ ಚರಮದೇಹದ ಕುರಿತ ವಿವರಣೆಯಿದೆ.