Upanyasa - VNU015

01/07 ಹಿರಣ್ಯಕಶಿಪುವಿನ ತಪಸ್ಸು

13/05/2016

ಶ್ರೀ ನರಸಿಂಹಾವತಾರದ ವೈಶಿಷ್ಟ್ಯವನ್ನು ನಿರೂಪಿಸುವದರೊಂದಿಗೆ ಆರಂಭವಾಗುವ ಈ ಉಪನ್ಯಾಸ ಶ್ರೀಮದ್ ಭಾಗವತದ ಸಪ್ತಮಸ್ಕಂಧದಲ್ಲಿನ ನಾರದ ಯುಧಿಷ್ಠರರ ಸಂವಾದ ವನ್ನು ನಿರೂಪಿಸುತ್ತದೆ. 

ಹಿರಣ್ಯಾಕ್ಷನನ್ನು ವರಾಹರೂಪದ ಭಗವಂತ ಸಂಹಾರ ಮಾಡಿರುತ್ತಾನೆ. ಸತ್ತ ಹಿರಣ್ಯಾಕ್ಷನನ್ನು ನೆನೆಸಿಕೊಂಡು ಅವನ ಪತ್ನಿಯರು, ತಾಯಿ ದಿತಿ ಅಳುತ್ತಿರುವಾಗ ಹಿರಣ್ಯಕಶಿಪು ಅವರೆಲ್ಲರಿಗೂ ಸಾಂತ್ವನವನ್ನು ಹೇಳುತ್ತಾನೆ. ಅಳುವದು ತಪ್ಪು ಎಂದು ಮನವರಿಕೆ ಮಾಡಿಕೊಡಲು ಸುಯಜ್ಞನ ಕಥೆಯನ್ನು ಹೇಳುತ್ತಾನೆ. 

ಹಿರಣ್ಯಕಶಿಪುವಿನ ಈ ಉಪದೇಶದಲ್ಲಿ ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ತತ್ವಗಳಿವೆ. ಒಬ್ಬ ದೈತ್ಯನಾಗಿ ಹಿರಣ್ಯಕಶಿಪು ಹೇಗೆ ಈ ರೀತಿ ಸಾತ್ವಿಕವಾಗಿ ಮಾತನಾಡಲು ಸಾಧ್ಯ ಎಂಬ ಪ್ರಶ್ನೆಗೆ ಶ್ರೀಮದಾಚಾರ್ಯರು ನೀಡಿರುವ ಉತ್ತರವನ್ನು ಈ ಸಂದರ್ಭದಲ್ಲಿ ವಿವರಿಸಲಾಗಿದೆ. 

ಉಳಿದವರಿಗೆ ಉಪದೇಶ ಮಾಡಿದ ಹಿರಣ್ಯಕಶಿಪು ತಾನು ಮಾತ್ರ ಸಿಟ್ಟಿಗೊಳಗಾಗಿ ದೇವರ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ತಪಸ್ಸಿಗೆ ತೆರಳುತ್ತಾನೆ. ತಪಸ್ಸಿನ ಸಿದ್ಧಿಯನ್ನು ಗಳಿಸಿ ಸಮಗ್ರ ಲೋಕಕ್ಕೆ ಹಿಂಸೆಯನ್ನು ನೀಡಲು ಆರಂಭಿಸುತ್ತಾನೆ. ಇಷ್ಟು ಘಟನೆಗಳ ವಿವರ ಈ ಭಾಗದಲ್ಲಿದೆ. 

Play Time: 45 Minuts 14 Seconds

Size: 7.88 MB


Download Upanyasa Share to facebook View Comments
3994 Views

Comments

(You can only view comments here. If you want to write a comment please download the app.)
  • ರಂಗನಾಯಕಮ್ಮ,ಬೆಂಗಳೂರು

    6:04 PM , 03/10/2018

    ಆಚಾರ್ಯರ ಪಾದಾರವಿಂದಗಳಿಗೆ ಅನಂತ ಸಾಷ್ಟಾಂಗ ಪ್ರಣಾಮಗಳು _/\_