Upanyasa - VNU016

02/07 ಪ್ರಹ್ಲಾದನ ವರ್ಣನೆ ಮತ್ತು ಉಪದೇಶಗಳು

15/05/2016

ಪ್ರಹ್ಲಾದರಾಜರ ಅದ್ಭುತವ್ಯಕ್ತಿತ್ವವೆಂದರೆ ಅವರ ಗುರುಗಳಿಂದಲೇ ಶ್ಲಾಘಿತರಾದದ್ದು. ನಾರದರು ಪಾಂಡವರ ಸಭೆಯಲ್ಲಿ ಕುಳಿತು ಪ್ರಹ್ಲಾದನ ಮಾಹಾತ್ಮ್ಯವನ್ನು ತಿಳಿಸಿ ಹೇಳುತ್ತಾರೆ. ಪರಮಾತ್ಮನನ್ನು ತಿಳಿದ ಮಹಾನುಭಾವರು ಹೇಗಿರುತ್ತಾರೆ ಎನ್ನುವದಕ್ಕೆ ಪ್ರಹ್ಲಾದರಾಜರು ನಿದರ್ಶನ. ಭಗವದ್ಗೀತೆ ತಿಳಿಸುವ ಜ್ಞಾನಿಗಳ ಲಕ್ಷಣಗಳಿಂದ ತುಂಬಿದ್ದವರು ಶ್ರೀ ಪ್ರಹ್ಲಾದರಾಜರು. ಅವರ ಗುರುಗಳೇ ಶ್ಲಾಘಿಸಿದ ಅವರ ಗುಣವರ್ಣನೆಯ ಅನುವಾದವನ್ನು ನಾವಿಲ್ಲಿ ಕೇಳುತ್ತೇವೆ. 

ಶುಕ್ರಾಚಾರ್ಯರ ಮಕ್ಕಳಾದ ಶಂಡ ಮತ್ತು ಮರ್ಕರನ್ನು ಮಗನಿಗೆ ಪಾಠ ಹೇಳಲು ಹಿರಣ್ಯಕಶಿಪು ನಿಯಮಿಸಿರುತ್ತಾನೆ. ಒಂದು ಸಂದರ್ಭದಲ್ಲಿ ಮಗ ಏನು ಓದುತ್ತಿದ್ದಾನೆ ಎಂದು ತಿಳಿಯಬಯಸಿದ ರಾಕ್ಷಸರಾಜ ತನ್ನ ತೊಡೆಯ ಮೇಲೆ ಮಗನನ್ನು ಕೂಡಿಸಿಕೊಂಡು ನೀನೇನು ತಿಳಿದಿದ್ದಿ ಅದನ್ನು ಹೇಳು ಎನ್ನುತ್ತಾನೆ. 

ಆಗ ಪ್ರಹ್ಲಾದ ನೀಡುವ ಉತ್ತರ ಹಿರಣ್ಯಕಶಿಪುವಿನಲ್ಲಿ ಮಗನ ಬಗ್ಗೆಯೇ ದ್ವೇಷವನ್ನುಂಟುಮಾಡಲು ಆರಂಭಿಸುತ್ತದೆ. ಆ ನಂತರ ಗುರುಕುಲದಲ್ಲಿ ಪ್ರಹ್ಲಾದ ರಾಕ್ಷಸಪುತ್ರರಿಗೆ ಮಾಡಿದ ಉಪದೇಶಗಳ ವಿವರ ಸಹಿತ ಈ ಭಾಗದಲ್ಲಿ ನಿಮಗೆ ದೊರೆಯುತ್ತದೆ. 

Play Time: 39 Minuts 25 Seconds

Size: 6.88 MB


Download Upanyasa Share to facebook View Comments
3171 Views

Comments

(You can only view comments here. If you want to write a comment please download the app.)
  • Santosh Patil,Gulbarga

    9:21 PM , 16/10/2019

    Tnx Gurugale 🙏