Upanyasa - VNU021

07/07 ಶ್ರೀ ನರಸಿಂಹದೇವರ ಅನುಗ್ರಹ

16/05/2016

ಶ್ರೀ ಪ್ರಹ್ಲಾದರಾಜರು ಮಾಡಿರುವ ಶ್ರೀ ನರಸಿಂಹಸ್ತೋತ್ರದಲ್ಲಿನ 43 ಶ್ಲೋಕಗಳಲ್ಲಿ “ನೈವೋದ್ವಿಜೇ” ಎಂಬ ಶ್ಲೋಕದಿಂದ ಆರಂಭಿಸಿ “ತತ್ವೇ ಮನೋ ದರ್ಶನೇ” ಎಂಬ ಶ್ಲೋಕದವರೆಗಿನ ಎಂಟು ಶ್ಲೋಕಗಳ ಅನುವಾದ ಈ ಭಾಗದಲ್ಲಿದೆ. 

ಶಾಸ್ತ್ರಾಧ್ಯಯನಶೀಲನಾದವನಿಗೆ ಸಂಸಾರದ ಭಯವಿರುವದಿಲ್ಲ ಎಂಬ ತತ್ವ, “ನಾನು ನನ್ನ ಭಕ್ತರನ್ನು ಬಿಟ್ಟು ಒಬ್ಬನೇ ಮುಕ್ತಿಗೆ ಬರುವದಿಲ್ಲ” ಎಂಬ ಪ್ರಹ್ಲಾದರಾಜರ ಕಾರುಣ್ಯದ ನುಡಿ, ನಮಗೆ ಅವರು ಮಾಡಿದ ಆದೇಶ, ದೇವರ ಅನಂತ ಮಾಹಾತ್ಮ್ಯ ಮತ್ತು ಅವರು ಭಗವಂತನಲ್ಲಿ ಮಾಡಿದ ದಿವ್ಯ ಪ್ರಾರ್ಥನೆ ಇವುಗಳ ಅನುವಾದ ಈ ಭಾಗದಲ್ಲಿ ದೊರೆಯುತ್ತದೆ. 

ಪ್ರಹ್ಲಾದರಾಜರ ಸ್ತೋತ್ರದಿಂದ ಸಂತುಷ್ಟನಾದ ಭಗವಂತ ಅವರ ಮೇಲೆ ಮಾಡಿದ ಅನುಗ್ರಹದ ಪರಿ, ಪ್ರಹ್ಲಾದರಾಜರ ಮಾಹಾತ್ಮ್ಯ ಮತ್ತು ನಿಃಸ್ಪೃಹತೆ, ಸಂಸಾರವನ್ನು ದಾಟುವ ಉಪಾಯಗಳನ್ನು ತಿಳಿಸುವದರೊಂದಿಗೆ ನರಸಿಂಹಾವತಾರದ ಚರಿತ್ರೆಯ ಕಥನವನ್ನು ಶ್ರೀ ನಾರದರು ಮುಗಿಸುತ್ತಾರೆ. ಪ್ರಹ್ಲಾದನ ಮೇಲೆ ನರಸಿಂಹ ಮಾಡಿದ ಅನುಗ್ರಹಕ್ಕಿಂತಲೂ ಪಾಂಡವರ ಮೇಲೆ ಶ್ರೀ ಕೃಷ್ಣ ಮಾಡಿರುವ ಮಾಡುತ್ತಿರುವ ಅನುಗ್ರಹ ಹಿರಿದಾದದ್ದು ಎಂಬ ನಾರದರ ಶ್ರೇಷ್ಠ ವಚನದ ಅನುವಾದದೊಂದಿಗೆ ಈ ಉಪನ್ಯಾಸವನ್ನು ಗುರ್ವಂತರ್ಯಾಮಿಗೆ ಸಮರ್ಪಿಸಲಾಗಿದೆ. 

Play Time: 39 Minuts 11 Seconds

Size: 6.84 MB


Download Upanyasa Share to facebook View Comments
5379 Views

Comments

(You can only view comments here. If you want to write a comment please download the app.)
 • Prasad,Mangalore

  8:19 PM , 06/05/2020

  ಆಚಾರ್ಯರ ಪಾದಕ್ಕೆ ನಮಸ್ಕಾರ. ಆಚಾರ್ಯರೆ ನರಸಿಂಹ ದೇವರನ್ನು ನರಹರಿ ಎಂದು ಏಕೆ ಕರೆಯುತ್ತಾರೆ. ದಯಮಾಡಿ ತಿಳಿಸಿ ಕೊಡಿ. 
  

  Vishnudasa Nagendracharya

  ಸಂಸ್ಕೃತದಲ್ಲಿ ಹರಿ ಎಂದರೆ ಸಿಂಹ ಎಂದು ಅರ್ಥವಿದೆ. ಕನ್ನಡದಲ್ಲಿಯೂ ಪ್ರಯೋಗವಿದೆ. ಶ್ರೀ ಶ್ರೀಪಾದರಾಜ ಗುರುಸಾರ್ವಭೌಮರು ಭೀಮಸೇನದೇವರ ಲೀಲೆಗಳನ್ನು ತಿಳಿಸಬೇಕಾದರೆ “ಕರಿಗಳಾ ಕರಿಗಳಿಂ ಹರಿಗಳಾ ಹರಿಗಳಿಂ ಅರೆವ ವೀರನಿಗೆ ಸುರ ನರರು ಸರಿಯೇ” ಎಂದು ಶ್ರೀ ಮಧ್ವನಾಮದಲ್ಲಿ ತಿಳಿಸುತ್ತಾರೆ. ಒಂದು ಆನೆಯನ್ನೆತ್ತಿ ಮತ್ತೊಂದು ಆನೆಯ ಮೇಲೆಸೆದು, ಒಂದು ಸಿಂಹವನ್ನೆತ್ತಿ ಮತ್ತೊಂದು ಸಿಂಹವನ್ನೆಸೆದು ದುಷ್ಟ ಪ್ರಾಣಿಗಳ ರೂಪದಲ್ಲಿ ಬಂದಿದ್ದ ಅಸುರರನ್ನು ಭೀಮಸೇನದೇವರು ಸಂಹಾರ ಮಾಡುತ್ತಿದ್ದರು. ಎಂದು. ಅಲ್ಲಿ ಹರಿಗಳಾ ಹರಿಗಳಿಂ ಎಂದರೆ ಸಿಂಹಗಳಿಂದ ಸಿಂಹಗಳನ್ನು ಎಂದರ್ಥ.. 
  
  ಹೀಗಾಗಿ ನರಹರಿ ಎಂದರೆ ನರಸಿಂಹ ಎಂದೇ ಅರ್ಥ. 
 • Ushasri,Chennai

  1:12 PM , 11/04/2020

  Dhanyavadagalu Achare
 • Santosh Patil,Gulbarga

  9:23 PM , 16/10/2019

  Tnx Gurugale 🙏
 • Usha,Kampli

  8:47 PM , 10/05/2018

  Sound pleade
 • Krishnaa,Bangalore

  12:41 PM, 29/04/2018

  Acharyare, 
  Namaskaaragalu.
  Narasimha avatarada upanyasa stands like a colossal amongst your upanyasas. For those of us who are following your upanyasas for years, this is an all time favorite. Blessed are we to be listening to this gem. 
  Namaskaaragalu.

  Vishnudasa Nagendracharya

  ಶ್ರೀಹರಿ ವಾಯು ದೇವತಾಗುರುಗಳು ಪರಮಾನುಗ್ರಹ ಮಾಡಿ ಅವರೇ ನಿಂತು ನುಡಿಸುತ್ತಿರುವ ಪ್ರವಚನಗಳಿವು. ಸಜ್ಜನರಿಗೆ ಮುಟ್ಟುತ್ತಿರುವದು ನನ್ನ ಶ್ರಮವನ್ನು ಸಾರ್ಥಕಗೊಳಿಸುತ್ತಿದೆ. 
  
  ನರಸಿಂಹಾವತಾರ ನಾನು studio ದಲ್ಲಿ ಮಾಡಿದ ಮೊಟ್ಟ ಮೊದಲ ಉಪನ್ಯಾಸ.