Upanyasa - VNU025

ಶ್ರೀನಿವಾಸತೀರ್ಥರ ಮಾಹಾತ್ಮ್ಯ

24/05/2016

ಶ್ರೀಮಚ್ಚಂದ್ರಿಕಾಚಾರ್ಯರ ಪರಮಾನುಗ್ರಹ ಪಡೆದ ಶ್ರೀ ಶ್ರೀನಿವಾಸತೀರ್ಥಶ್ರೀಪಾದಂಗಳವರು ವಿಜಯನಗರಸಾಮ್ರಾಜ್ಯಕ್ಕೆ ಮುಂದೊದಗಲಿರುವ ಆಪತ್ತನ್ನು ಕಂಡು ತಮ್ಮ ಶಿಷ್ಯರಾದ ಶ್ರೀರಾಮತೀರ್ಥಶ್ರೀಪಾದಂಗಳವರಿಗೆ ರಕ್ತಾಕ್ಷಿಸಂವತ್ಸರದ ಚೈತ್ರಶುದ್ಧ ದ್ವಿತೀಯಾದಂದು ನರಸಿಂಹಮಂತ್ರೋಪದೇಶ ಮಾಡಿದ ರೋಮಾಂಚಕಾರಿ ಘಟನೆಯ ವಿವರ ಈ ಉಪನ್ಯಾಸದಲ್ಲಿದೆ. 

Play Time: 33 Minuts 28 Seconds

Size: 5.89 MB


Download Upanyasa Share to facebook View Comments
2676 Views

Comments

(You can only view comments here. If you want to write a comment please download the app.)
 • Ushasri,Chennai

  12:01 AM, 13/05/2018

  Achare dhanyavadagalu
 • Shamala R,Bangalore

  4:32 PM , 16/05/2017

  ಗುರುಗಳೇ.. ಶ್ರೀನಿವಾಸತೀರ್ಥರ ಗುಣಚಿತ್ರಣ ಕೇಳಿದೆವು.. ಅವರ ರೇಖಾಚಿತ್ರವಿದ್ದರೆ ಕಳುಹಿಸಿ. ದಯಮಾಡಿ.

  Vishnudasa Nagendracharya

  ಇದುವರೆಗೂ ಯಾರೂ ಬರೆದಂತೆ ತೋರುವದಿಲ್ಲ. 
  
  ಉತ್ತಮ ಚಿತ್ರಕಾರರಿಂದ ಬರೆಸಬೇಕು. 
 • Shamala R,Bangalore

  6:43 AM , 17/05/2017

  ಗುಣ ಚಿತ್ರಕ್ಕೂ ರೇಖಾಚಿತ್ರಕ್ಕೂ ವ್ಯತ್ಯಾಸವೇನು? ಸೇವಾಸೂತ್ರಾದಿಗಳನ್ನು ಮಾಡಬೇಕಾದರೆ ನಾವು ಪ್ರಧಾನವಾಗಿ ಯಾವುದನ್ನು ಚಿಂತಿಸಬೇಕು????

  Vishnudasa Nagendracharya

  ನಮ್ಮ ಮನಸ್ಸಿನಲ್ಲಿ ಚಿತ್ರಿಸಿಕೊಳ್ಳುವ ರೂಪವೇ ಪ್ರಧಾನವಾದದ್ದು. ಅದಕ್ಕೆ ಸಹಕಾರಿ ಹೊರಗಿನ ಚಿತ್ರಗಳಷ್ಟೇ. 
  
  ನಾವು ದೇವರ ಸಾಕ್ಷಾತ್ಕಾರ ಪಡೆಯಬೇಕಾದರೂ ಮೊದಲಿಗೆ ನಮ್ಮ ಮನಸ್ಸಿನಲ್ಲಿ ಆ ಸ್ವಾಮಿಯ ರೂಪವನ್ನು ಶಾಸ್ತ್ರೋಕ್ತವಾದ ಕ್ರಮದಲ್ಲಿ ಕಲ್ಪಿಸಿಕೊಂಡು ಉಪಾಸನೆ ಮಾಡಬೇಕು. ಆ ರೂಪವನ್ನು ವಾಸನಾಮಯ ರೂಪ ಎನ್ನುತ್ತಾರೆ. ಆ ನಂತರವೇ ದೇವರ ಸಾಕ್ಷಾತ್ಕಾರವಾಗುವದು. 
  
  ಹೀಗಾಗಿ ನಾವು ತಿಳಿದ ಗುಣಗಳಿಂದ ಯುಕ್ತವಾದ ರೂಪವನ್ನು ಮನಸ್ಸಿನಲ್ಲಿ ಧ್ಯಾನ ಮಾಡಬೇಕು. 
  
  ಗುರುಗಳನ್ನು ಚಿಂತಿಸಬೇಕಾದರೆ ಅವರ ವೃಂದಾವನದ ರೂಪವನ್ನು ಚಿಂತನೆ ಮಾಡುವದು ಮತ್ತಷ್ಟು ಶ್ರೇಯಸ್ಕರ.