ಮುದ್ಗಲರಿಗೆ ಅಂಧತಮಸ್ಸಾಗಲಿ ಎಂಬ ಉದ್ದೇಶ ಬ್ರಹ್ಮದೇವರಿಗೆ ಇಲ್ಲ. ಇದ್ದಿದ್ದರೆ ಹಾಗೆಯೇ ಶಾಪ ನೀಡುತ್ತಿದ್ದರು. ಮುದ್ಗಲರಿಗೆ ಪಾಠ ಕಲಿಸುವ ಉದ್ದೇಶ ಮಾತ್ರ ಇತ್ತು. ಹೀಗಾಗಿ ತತ್ವ ತಿಳಿಯದೇ ತಮ್ಮನ್ನು ಅಪಹಾಸ ಮಾಡಿದ ಅವರಿಗೆ ಈ ರೀತಿಯ ಶಾಪ ನೀಡಿದರು. ಹಿರಿಯ ಸ್ತ್ರೀಯರನ್ನು ಕಾಮದಿಂದ ಕಂಡರೆ ಅಂಧಂತಮಸ್ಸಾಗುತ್ತದೆ ಎಂದು ತಿಳಿದಿದ್ದ ಮುದ್ಗಲರು, ತಮಗೆ ಬಂದ ಶಾಪದ ಗಂಭೀರತೆಯನ್ನು ಮನಗಂಡು ಅದನ್ನು ಪರಿಹಾರ ಮಾಡಿಕೊಳ್ಳಲು ತಪಸ್ಸು ಮಾಡಿ ಬ್ರಹ್ಮದೇವರನ್ನು ಒಲಿಸಿಕೊಂಡರು. ಬ್ರಹ್ಮದೇವರ ಉದ್ದೇಶವೂ ಅದೇ ಆಗಿದ್ದರಿಂದ ಅವರನ್ನು ಅನುಗ್ರಹಿಸಿದರು.
ಮುದ್ಗಲರರು ಉತ್ತಮಜೀವರಾದ್ದರಿಂದ ಅವರಿಗೆ ಅಂಧಂತಮಸ್ಸಾಗುವದಿಲ್ಲ.
ಮನಸ್ಸಿನಲ್ಲಿನ ದುಷ್ಟಕಾಮವನ್ನು ಏಕಾದಶಿ, ಚಾತುರ್ಮಾಸ್ಯ, ಶಾಸ್ತ್ರದ ಜ್ಞಾನ, ಗುರುಗಳ ಸೇವೆಯಿಂದ ಪರಿಹಾರ ಮಾಡಿಕೊಳ್ಳಬೇಕು.
Mudgalarige andhatamassāgali emba uddēśa brahmadēvarige illa. Iddiddare hāgeyē śāpa nīḍuttiddaru. Mudgalarige pāṭha kalisuva uddēśa mātra ittu. Hīgāgi tatva tiḷiyadē tammannu apahāsa māḍida avarige ī rītiya śāpa nīḍidaru. Hiriya strīyarannu kāmadinda kaṇḍare andhantamassāguttade endu tiḷididda mudgalaru, tamage banda śāpada gambhīrateyannu managaṇḍu adannu parihāra māḍikoḷḷalu tapassu māḍi brahmadēvarannu olisikoṇḍaru. Brahmadēvara uddēśavū adē āgiddarinda avarannu anugrahisidaru.
Mudgalararu uttamajīvarāddarinda avarige andhantamassāguvadilla.
Manassinallina duṣṭakāmavannu ēkādaśi, cāturmāsya, śāstrada jñāna, gurugaḷa sēveyinda parihāra māḍikoḷḷabēku.