Upanyasa - VNU039

GK-01 ರುದ್ರದೇವರ ತಪಸ್ಸು

07/07/2016

ಶ್ರೀ ಗಿರಿಜಾಕಲ್ಯಾಣ

ಗಿರಿಜಾಕಲ್ಯಾಣಶ್ರವಣದ ಫಲಗಳು 

ಶ್ರೀ ಪಾರ್ವತೀಪರಮೇಶ್ವರರ ವಿವಾಹದ ಪರಮಮಂಗಳ ಘಟನೆಯನ್ನು ಶ್ರವಣ ಮಾಡುವದರಿಂದ ಭಕ್ತರಿಗೆ ಸರ್ವಾರ್ಥಗಳೂ ಈಡೇರುತ್ತವೆ. ವಿಶೇಷವಾಗಿ ಮದುವೆಯಾಗದವರಿಗೆ ಉತ್ತಮ ಸಂಗಾತಿಯೊಂದಿಗೆ ಮದುವೆಯನ್ನು ಕರುಣಿಸುವ, ಮದುವೆಯಾದವರಿಗೆ ಪರಿಶುದ್ಧ ದಾಂಪತ್ಯವನ್ನು ಕರುಣಿಸುವ, ಸತ್ಸಂತಾನವನ್ನು ಅನುಗ್ರಹಿಸುವ ದಾಂಪತ್ಯದಲ್ಲಿರುವ ಬಿರುಕುಗಳನ್ನು ಪರಿಹರಿಸಿ ಮನೆಯಲ್ಲಿ ಸುಖ ನೆಮ್ಮದಿಗಳನ್ನು ಕರುಣಿಸುವ ಪ್ರಸಂಗ ಮಹಾರುದ್ರದೇವರು ಗಿರಿಜಾದೇವಿಯ ಪಾಣಿಗ್ರಹಣ ಮಾಡಿದ ಮಂಗಳಪ್ರಸಂಗ. ಭಕ್ತಿಯಿಂದ ನಿಷ್ಮಾಮರಾಗಿ ಶ್ರವಣ ಕೀರ್ತನ ಮಾಡುವವರಿಗೆ ಭಕ್ತಿ ಜ್ಞಾನ ವೈರಾಗ್ಯಗಳನ್ನು ಕರುಣಿಸಿ ಪಾಪಕೂಪದಿಂದ ಉದ್ಧರಿಸುವ ದಿವ್ಯಚರಿತ್ರೆ ಜಗದೀಶ್ವರರ ವಿವಾಹಪ್ರಸಂಗದ ಈ ಚರಿತ್ರೆ

“ಮುತ್ತೈದೆ ಹೇಳಿದರೆ ಇಟ್ಟೋಲೆ ಸ್ಥಿರವಾಗಿ
ಅಕ್ಷಿಲ್ಲದವರು ಹೇಳಿದರೆ I 
ಅಕ್ಷಿಯು ಬರುವದು ಬಡವರು ಹೇಳಿದರೆ 
ಹೆಚ್ಚಿನ ಪದವಿ ಸೇರುವರು 

ಬರಡು ಹೇಳಿದರೆ ಕಂದನ್ನೆತ್ತಿಕೊಂಬುವಳು
ಹೆಳವ ಹೇಳಿದರೆ ನಡೆಯುವನು I 
ಮದುವೆಯಿಲ್ಲದವರು ಹೇಳಿದರೆ 
ವಿವಾಹ ಒದಗುತ್ತ ಕಂಕಣ ಬಹುದು” 

— ಶ್ರೀ ಪುರಂದರದಾಸರ ಪಾರ್ವತೀಕಲ್ಯಾಣ ಕೃತಿಯ 69, 70ನೆಯ ಶ್ಲೋಕಗಳು. 

ರುದ್ರದೇವರ ತಪಸ್ಸು

ಸ್ಕಂದಪುರಾಣ ಮತ್ತು ಪದ್ಮಪುರಾಣಗಳಲ್ಲಿ ವರ್ಣಿತವಾಗಿರುವ ಶ್ರೀ ಗಿರಿಜಾಕಲ್ಯಾಣದ ಪ್ರಸಂಗವನ್ನು ನಾವಿಲ್ಲಿ ಕೇಳುತ್ತೇವೆ. ದಕ್ಷನ ಮಗಳಾದ ಸತೀದೇವಿಯು ಯೋಗಾಗ್ನಿಯಿಂದ ದೇಹತ್ಯಾಗವನ್ನು ಮಾಡಿದ ಬಳಿಕ ದಕ್ಷನ ಯಜ್ಞವನ್ನು ಧ್ವಂಸ ಮಾಡಿದ ರುದ್ರದೇವರು ತಮ್ಮ ಸಮಸ್ತಭೃತ್ಯರೊಡನೆ ಕೈಲಾಸವನ್ನು ಬಿಟ್ಟು ಹಿಮಾಲಯದಲ್ಲಿ ರಾಮಧ್ಯಾನಾಸಕ್ತರಾಗಿ ತಪಸ್ಸು ಆರಂಭಿಸುತ್ತಾರೆ ಎಂದು ಪದ್ಮಪುರಾಣ ದಾಖಲಿಸುತ್ತದೆ. 

“ಅಹೋ ಧನ್ಯೋಸಿ ಶೈಲೇಂದ್ರ ಯಸ್ಯ ತೇ ಕಂದರಂ ಹರಃ I 
ಅಧ್ಯಾಸ್ತೇ ಲೋಕನಾಥೋ ಹಿ ರಾಮಧ್ಯಾನಪರಾಯಣಃ” 
— ಪದ್ಮಪುರಾಣ ಸೃಷ್ಟಿಖಂಡ 43-25

ವಿರೋಧಪರಿಹಾರ 

ಗಿರಿಜಾಕಲ್ಯಾಣ ನಡೆದದ್ದು ವಾಮನಾವತಾರ ಮತ್ತು ಪರಶುರಾಮಾವತಾರಗಳ ಮಧ್ಯದಲ್ಲಿ, ಮುಚುಕುಂದ ರಾಜನ ಆಳ್ವಿಕೆಯ ಸಂದರ್ಭದಲ್ಲಿ. ರಾಮಚಂದ್ರನ ಅವತಾರವಾಗುವದು ಆ ನಂತರ. ಅಂದಮೇಲೆ ಶ್ರೀರಾಮಚಂದ್ರನ ಧ್ಯಾನವನ್ನು ಮಹಾರುದ್ರದೇವರು ಹೇಗೆ ಮಾಡಲು ಸಾಧ್ಯ ಎನ್ನುವದಕ್ಕೆ ಉತ್ತರವನ್ನು ಈ ಪ್ರಸಂಗದಲ್ಲಿ ಪಡೆಯುತ್ತೇವೆ. ಅನೇಕ ಮಹತ್ತ್ವದ ಪ್ರಮೇಯಗಳ ಚಿಂತನೆಯೊಂದಿಗೆ. 

ದೇವತೆಗಳಿಗೆ ತಾರಕಾಸುರನ ಪೀಡೆ

ತಾರಕಾಸುರ ತಪಸ್ಸನ್ನು ಮಾಡಿ, ನನಗೆ ಮೃತ್ಯು ಬರುವದಾದರೆ ಪರಶಿವನ ಮಗನಿಂದಲೇ ನನಗೆ ಮೃತ್ಯು ಬರಬೇಕು, ನನ್ನನ್ನು ಕೊಲ್ಲುವಾಗ ಅವನು ಹುಟ್ಟಿ ಏಳೇ ದಿವಸಗಳಾಗಿರಬೇಕು ಎಂದು ಬ್ರಹ್ಮದೇವರನ್ನು ಪ್ರಾರ್ಥಿಸಿ ವರ ಪಡೆದಿರುತ್ತಾನೆ. ಹಾಗೇ ಆಗಲಿ ಎಂದು ನಸುನಕ್ಕು ಬ್ರಹ್ಮದೇವರು ವರವನ್ನು ಪ್ರದಾನ ಮಾಡಿರುತ್ತಾರೆ. 

ವರದಿಂದ ದೃಪ್ತನಾದ ತಾರಕ ಮೇಲಿಂದ ಮೇಲೆ ದೇವತೆಗಳ ಮೇಲೆ ಯುದ್ಧವನ್ನು ಸಾರುತ್ತಿರುತ್ತಾನೆ. ಬ್ರಹ್ಮವರವಿದ್ದ ಕಾರಣಕ್ಕೆ ಅವನನ್ನು ಕೊಲ್ಲಲು ದೇವತೆಗಳಿಗೆ ಸಾಧ್ಯವಾಗುತ್ತಿರುವದಿಲ್ಲ. ನಿರಂತರ ಯುದ್ಧದಿಂದ ಬೇಸತ್ತ ದೇವತೆಗಳು ಬ್ರಹ್ಮದೇವರ ಬಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಾರೆ. ಆಗ ಅಶರೀರವಾಣಿಯ ಮುಖಾಂತರ ಪಾರ್ವತೀಪರಮೇಶ್ವರರ ಪುತ್ರನಿಂದಲೇ ತಾರಕನ ಸಂಹಾರ, ಪಾರ್ವತೀದೇವಿ ಪರಶಿವನನ್ನು ಮದುವೆಯಾಗುವಂತೆ ನೀವು ಮಹಾಪ್ರಯತ್ನವನ್ನು ಮಾಡಿ ಎಂದು ದೇವತೆಗಳಿಗೆ ಆದೇಶ ದೊರೆಯುತ್ತದೆ. ಆ ಮಾತಿನಂತೆ ದೇವತೆಗಳು ಗಿರಿಜಾಕಲ್ಯಾಣಕ್ಕಾಗಿ ಮಹಾಪ್ರಯತ್ನವನ್ನು ಆರಂಭಿಸಿದರು ಎನ್ನುವ ವಿಷಯವನ್ನು ತಿಳಿಸಿ ಈ ಉಪನ್ಯಾಸವನ್ನು ಗುರ್ವಂತರ್ಯಾಮಿಗೆ ಸಮರ್ಪಿಸಲಾಗಿದೆ

— ವಿಷ್ಣುದಾಸ ನಾಗೇಂದ್ರಾಚಾರ್ಯ

Play Time: 31 Minuts 42 Seconds

Size: 5.58 MB


Download Upanyasa Share to facebook View Comments
7362 Views

Comments

(You can only view comments here. If you want to write a comment please download the app.)
 • Santosh Patil,Gulbarga

  9:32 PM , 28/09/2019

  Thanks Gurugale
 • Santosh Patil,Gulbarga

  9:30 PM , 28/09/2019

  Thanks Gurugale
 • Santosh Patil,Gulbarga

  9:30 PM , 28/09/2019

  Thanks Gurugale
 • Shrinivas Madhwacharya joshi,Dharwad

  7:59 PM , 04/02/2018

  Dhanyosmi
 • Prakasha,Bangalore

  7:29 PM , 04/02/2018

  Lnhda
 • B Sudarshan Acharya,Udupi

  6:28 PM , 04/02/2018

  ಪಾರ್ವತೀಸದಾಶಿವ
 • B Sudarshan Acharya,Udupi

  6:28 PM , 04/02/2018

  ಪಾರ್ವತೀಸದಾಶಿವ
 • Anjana,Bangalore

  5:20 AM , 10/07/2017

  Hare Srinivasa, please send the link for mahabharata discouse. Thank you.