Upanyasa - VNU040

GK-02 ಗಿರಿಜಾಪ್ರಾದುರ್ಭಾವ

08/07/2016

ತಾರಕಾಸುರ ಎಂದು ಬ್ರಹ್ಮದೇವರಿಂದ ವರ ಪಡೆದಿದ್ದನೋ ಅಂದೇ ಅವನ ಮರಣವೂ ನಿಶ್ಚಿತವಾಗಿತ್ತು. ಆದರೆ, ಅವನ ಮರಣ ನಿಶ್ಚಿತ ಎಂದು ದೇವತೆಗಳು ಸುಮ್ಮನೆ ಕೂಡುವ ಹಾಗಿಲ್ಲ. ಅದಕ್ಕಾಗಿ ಅವರು ಮಹಾಪ್ರಯತ್ನವನ್ನು ಮಾಡಲೇಬೇಕಾಯಿತು. ಪರಮಾತ್ಮ ಸಹ ಹಾಗೆಯೇ ಆಜ್ಞೆ ಮಾಡಿದ — ಕ್ರಿಯತಾಂ ಚ ಪರೋ ಯತ್ನಃ ಎಂದು. 

ನಮ್ಮ ಅಪರೋಕ್ಷಜ್ಞಾನ, ಮೋಕ್ಷಗಳೂ ಸಹ ನಿಶ್ಚಿತ. ಹಾಗಂತ ನಾವು ಸುಮ್ಮನಿದ್ದರೆ ಅವು ದೊರೆಯುವದೇ ಇಲ್ಲ. ಹೀಗಾಗಿ ಮಹಾಪ್ರಯತ್ನವನ್ನು ಮಾಡಲೇಬೇಕು ಎನ್ನುವ ಪಾಠವನ್ನು ಭಗವಂತ, ರುದ್ರದೇವರು, ಪಾರ್ವತೀದೇವಿ, ದೇವತೆಗಳು ಈ ಮುಖಾಂತರ ನಮಗೆ ಕಲಿಸುತ್ತಿದ್ದಾರೆ ಎಂದು ತಿಳಿಸಿ ಮನುಷ್ಯಪ್ರಯತ್ನದ ಅನಿವಾರ್ಯತೆಯನ್ನು ಇಲ್ಲಿ ವಿವರಿಸಲಾಗಿದೆ. 

ಹಿಮವಂತನಲ್ಲಿ ದೇವತೆಗಳ ಪ್ರಾರ್ಥನೆ

ಗಿರಿಜಾ ಶಂಕರ ಪರಿಣಯಕ್ಕಾಗಿ ಮಹಾಪ್ರಯತ್ನವನ್ನು ಮಾಡಿ ಎಂಬ ಭಗವಂತನ ಆದೇಶವನ್ನು ಪಾಲಿಸಲು ಆರಂಭಿಸಿದ ದೇವತೆಗಳು ಮೊದಲಿಗೆ ಹಿಮವಂತನಲ್ಲಿ ಬಂದು ತಪಸ್ಸು ಮಾಡಿ ಪಾರ್ವತೀದೇವಿಯನ್ನು ಮಗಳನ್ನಾಗಿ ಪಡೆಯುವಂತೆ ಪ್ರಾರ್ಥಿಸುತ್ತಾರೆ. ಹಿಂದೆ ಇಂದ್ರ ಲೋಕರಕ್ಷಣೆಗಾಗಿ ಪರ್ವತಗಳ ರೆಕ್ಕೆಯನ್ನು ಕತ್ತರಿಸಿದ್ದರಿಂದ ಅವನಿಗೂ ಹಿಮವಂತನಿಗೂ ವೈಮನಸ್ಯ ಉಂಟಾಗಿರುತ್ತದೆ. ಆದರೆ, ಮಹತ್ತರ ಲೋಕೋಪಕಾರ ಮಾಡುವದಕ್ಕಾಗಿ, ದೇವಕಾರ್ಯಕ್ಕಾಗಿ ಹಿಮವಂತ ವೈಮನಸ್ಯವನ್ನು ಬಿಟ್ಟು ಗಿರಿಜಾದೇವಿಯನ್ನು ಮಗಳನ್ನಾಗಿ ಪಡೆಯಲು ಸಿದ್ಧನಾಗುತ್ತಾನೆ. ಶ್ರೀಮದಾಚಾರ್ಯರು ಶ್ರೀ ಭಾಗವತತಾತ್ಪರ್ಯದಲ್ಲಿ ತಿಳಿಸಿರುವ ಸಜ್ಜನರ ಸಂಪರ್ಕದ ಮಹತ್ತ್ವವನ್ನು ಈ ಸಂದರ್ಭದಲ್ಲಿ ಚಿಂತಿಸಿ ಕಥೆಯನ್ನು ವಿವರಿಸಲಾಗಿದೆ. 


ಪಾರ್ವತೀದೇವಿಯನ್ನು ಮಗಳನ್ನಾಗಿ ಪಡೆಯುತ್ತೇನೆ ಎಂದು ದೇವತೆಗಳಿಗೆ ಅಭಯವಿತ್ತ ಹಿಮವಂತ ತನ್ನ ಹೆಂಡತೆ ಮೇನಾದೇವಿಯ ಬಳಿ ಬಂದು ತನ್ನ ನಿರ್ಧಾರವನ್ನು ತಿಳಿಸುತ್ತಾನೆ. ಈ ಸಂದರ್ಭದಲ್ಲಿ ಪರೋಪಕಾರದ ಮಹತ್ತ್ವ ಅದರಿಂದುಂಟಾಗುವ ಮಹತ್ತರಫಲಗಳ ಬಗ್ಗೆ ಚಿಂತನೆಯಿದೆ. ಪ್ರತಿಯೊಬ್ಬರೂ ಕೇಳಿ, ತಿಳಿದು ಆಚರಿಸಬೇಕಾದ ಭಾಗವನ್ನು ಶ್ರೀ ವೇದವ್ಯಾಸದೇವರು ಈ ಭಾಗದಲ್ಲಿ ತಿಳಿಸಿದ್ದಾರೆ 


ಸತೀದೇವಿ ತಮ್ಮ ಮಗಳಾಗಿ ಹುಟ್ಟಿ ಬರಲಿ ಎಂದು ಮೇನಾ ಹಿಮವಂತರು ತಪಸ್ಸು ಮಾಡುತ್ತಾರೆ. ಆ ಜಗದಂಬಿಕೆಯಾದ ಪಾರ್ವತೀದೇವಿ ಅವತಾರ ಮಾಡುವ ಸಂದರ್ಭದಲ್ಲಿ ಇಡಿಯ ಹದಿನಾಲ್ಕುಲೋಕಗಳಲ್ಲಿ ಅದೆಂಥ ಅದ್ಭುತ ವಾತಾವರಣ ಸೃಷ್ಟಿಯಾಯಿತು ಎಂಬ ಮಾತನ್ನು ಶ್ರೀ ಸೂತಾಚಾರ್ಯರು ಮೈಯುಬ್ಬಿ ವರ್ಣನೆ ಮಾಡಿದ್ದಾರೆ. ಕೇಳಿಯೇ ಅನಂದಿಸಬೇಕಾದ ಪವಿತ್ರ ಭಾಗ. 

— ವಿಷ್ಣುದಾಸ ನಾಗೇಂದ್ರಾಚಾರ್ಯ

Play Time: 52 Minuts 01 Seconds

Size: 9.09 MB


Download Upanyasa Share to facebook View Comments
5740 Views

Comments

(You can only view comments here. If you want to write a comment please download the app.)
 • Vikram Shenoy,Doha

  5:52 PM , 27/02/2020

  🙏🙏🙏
 • Mythreyi Rao,Bengaluru

  2:56 PM , 19/02/2020

  🙏
 • Balaramanaik c,Israel

  1:55 PM , 18/02/2020

  ಧನ್ಯೋಸ್ಮಿ... ಗುರುವರ್ಯರ ಚರಣಕಾಮಲಗಳಿಗೆ ಶಿರಸಾಸ್ಟ್ಯಾಂಗ ಪ್ರಣಾಮಗಳು💐🙏🙇.
 • Santosh Patil,Gulbarga

  9:32 PM , 28/09/2019

  Thanks Gurugale