Upanyasa - VNU041

GK-03 ಗಿರಿಜಾ-ಶಂಕರಸಂವಾದ

10/07/2016

ಗಿರಿಜಾದೇವಿ ಹಿಮವಂತನ ಮನೆಯಲ್ಲಿ ಪೂರ್ಣಚಂದ್ರನಂತೆ ಬೆಳೆಯುತ್ತ, ಮದುವೆಯ ವಯಸನ್ನು ತಲುಪಿದಾಗ ಇಂದ್ರನ ಅಣತಿಯಂತೆ ನಾರದರು ಹಿಮವಂತನ ಮನೆಗೆ ಬಂದು ರುದ್ರದೇವರು ರಾಮಧ್ಯಾನಾಸಕ್ತರಾಗಿ ಹಿಮಾಲಯದ ಗುಹೆಯಲ್ಲಿ ವಾಸವಾಗಿರುವದನ್ನು ತಿಳಿಸುತ್ತಾರೆ. ಗಿರಿಜಾದೇವಿಯ ದೇಹದ ಶ್ರೇಷ್ಠ ಲಕ್ಷಣಗಳ ಮುಖಾಂತರ ಅವಳು ಜಗದೊಡೆಯನ ಪತ್ನಿಯಾಗುತ್ತಾಳೆ ಎನ್ನುವದನ್ನು ತಿಳಿಸಿ, ಗಿರಿಜೆಯನ್ನು ಶಂಕರನಿಗೆ ಕೊಟ್ಟು ಮದುವೆ ಮಾಡಲು ಸೂಚಿಸುತ್ತಾರೆ. 

ಈ ಪ್ರಸಂಗದಲ್ಲಿ ನಾರದರು ಮಾಡುವ ಭಗವಂತನ ಸೇವೆ ಯಾವ ರೀತಿಯದ್ದು ಎನ್ನುವ ಮಹತ್ತ್ವದ ಪ್ರಮೇಯವನ್ನು ಪ್ರಾಸಂಗಿಕವಾಗಿ ತಿಳಿಯುತ್ತೇವೆ. 

ಹಿಮಾಲಯ-ಶಂಕರಸಂವಾದ

ರುದ್ರದೇವರು ಹಿಮಾಲಯದ ಕಂದರದಲ್ಲಿ ತಪಸ್ಸು ಮಾಡುತ್ತಿರುವ ಸುದ್ದಿಯನ್ನು ಶ್ರೀ ನಾರದರಿಂದ ತಿಳಿದ ಹಿಮವಂತ ರುದ್ರದೇವರ ದರ್ಶನವನ್ನು ಪಡೆಯಲು ತನ್ನ ಮಗಳನ್ನೂ ಕರೆದುಕೊಂಡು ಬರುತ್ತಾನೆ. ರುದ್ರದೇವರ ದರ್ಶನ ಪಡೆದು, ಪ್ರತೀನಿತ್ಯ ತಾವಿಬ್ಬರೂ ದರ್ಶನಕ್ಕೆ ಬರುತ್ತೇವೆ, ಅನುಜ್ಞೆಯನ್ನು ನೀಡು ಎಂದು ರುದ್ರದೇವರನ್ನು ಪ್ರಾರ್ಥಿಸುತ್ತಾನೆ. ಆದರೆ ರುದ್ರದೇವರು ಪಾರ್ವತಿಯನ್ನು ಕರೆದುಕೊಂಡು ಬರಬಾರದು ಎಂದು ಹೇಳುತ್ತಾರೆ. ಆ ಮಾತಿನ ಹಿಂದಿನ ಕಾರಣದ ಚಿಂತನೆ ಇಲ್ಲಿದೆ. 

ಗಿರಿಜಾ-ಶಂಕರಸಂವಾದ

ಕಾಮಕ್ರೋಧಗಳಿಗೆ ಕಾರಣವಾದ ಬಂಧಕಪ್ರಕೃತಿಯನ್ನು ನಾಶ ಮಾಡಲು ತಪಸ್ಸು ಮಾಡುತ್ತಿದ್ದೇನೆ ಎಂದು ರುದ್ರದೇವರು ಹೇಳಿದರೆ, ಹೆಣ್ಣನ್ನು ಬಿಡುವದು ಮಾತ್ರ ಪ್ರಕೃತಿಯ ತ್ಯಾಗವಲ್ಲ ಎನ್ನುವದನ್ನು ಪಾರ್ವತೀದೇವಿ ಅದ್ಭುತವಾಗಿ ವಿವರಿಸುತ್ತಾಳೆ. ನಾವು ಸಂಸಾರದಿಂದ ಮುಕ್ತರಾಗಬೇಕಾದರೆ ಇರಬೇಕಾದ ಹತ್ತಾರು ಎಚ್ಚರಗಳ ಕುರಿತು, ತಿಳಿಯಬೇಕಾದ ಮಹತ್ತ್ವದ ಪ್ರಮೇಯಗಳ ಕುರಿತು ಈ ಗಿರಿಜಾ ಶಂಕರ ಸಂವಾದದಲ್ಲಿ ಚರ್ಚೆಯಿದೆ. ರುದ್ರದೇವರು ಮಾಡಿದ ವಧೂಪರೀಕ್ಷೆಯ ಈ ವಿಡಂಬನೆ ಶ್ರವಣಾನಂದಕರವಾದದ್ದು. ಸ್ತ್ರೀಯರು ಆಚರಿಸಬೇಕಾದ ಒಂದು ಶ್ರೇಷ್ಠ ಪ್ರಮೇಯವನ್ನು ಗಿರಿಜಾದೇವಿ ಇಲ್ಲಿ ಆಚರಿಸಿ ತೋರಿಸುತ್ತಾಳೆ. ಆಚಾರ್ಯರ ನಿರ್ಣಯದ ಚಿಂತನೆಯೊಂದಿಗೆ ಆ ಭಾಗದ ವಿವರಣೆ ಇಲ್ಲಿದೆ. 

ರುದ್ರದೇವರು ಆಚರಿಸಿ ತೋರಿಸಿದ ಒಂದು ಮಹತ್ತ್ವದ ಧರ್ಮ

ನಾವು ಮತ್ತೊಬ್ಬರಿಗೆ ಸೇರಿದ ಪ್ರದೇಶದಲ್ಲಿ ಶ್ರಾದ್ಧ, ದೇವರಪೂಜೆ, ತಪಸ್ಸು ಮುಂತಾದ ಧರ್ಮಾಚರಣೆಯನ್ನು ಮಾಡಬೇಕಾದರೇ ಆ ಪ್ರದೇಶದ ಒಡೆಯರಿಂದ ಅನುಮತಿಯನ್ನು ಪಡೆದು ಆಚರಿಸಬೇಕು ಎನ್ನುವದು ಧರ್ಮಶಾಸ್ತ್ರಗಳ ವಿಧಿ. ಸಮಗ್ರ ಬ್ರಹ್ಮಾಂಡದ ನಾಥರಾದ ರುದ್ರದೇವರು ಈ ಧರ್ಮದ ಮಹತ್ತ್ವವನ್ನು ಸಜ್ಜನರಿಗೆ ತಿಳಿಸಲೋಸುಗ ತಾವು ತಪಸ್ಸು ಮಾಡಲು ಹಿಮವಂತನನ್ನು ಅನುಜ್ಞೆ ಕೇಳುತ್ತಾರೆ. ಆ ಪವಿತ್ರ ಪ್ರಸಂಗದ ವಿವರಣೆಯೊಂದಿಗೆ ಈ ಉಪನ್ಯಾಸವನ್ನು ಗುರ್ವಂತರ್ಯಾಮಿಗೆ ಸಮರ್ಪಿಸಲಾಗಿದೆ. 

Play Time: 53 Minuts 23 Seconds

Size: 9.32 MB


Download Upanyasa Share to facebook View Comments
4274 Views

Comments

(You can only view comments here. If you want to write a comment please download the app.)
 • Santosh Patil,Gulbarga

  9:34 PM , 28/09/2019

  Thanks Gurugale
 • Santosh Patil,Gulbarga

  9:34 PM , 28/09/2019

  Thanks Gurugale
 • Santosh Patil,Gulbarga

  9:34 PM , 28/09/2019

  Thanks Gurugale