Upanyasa - VNU042

GK04 ಕಾಮದಹನ

17/07/2016


ಗಿರಿಜಾಕಲ್ಯಾಣದಲ್ಲಿ ನಾಲ್ಕನೆಯ ಉಪನ್ಯಾಸ 

GK04 ಕಾಮದಹನ

ಮನ್ಮಥನ ನಾಶಕ್ಕೆ ಕಾರಣ

ರುದ್ರದೇವರು ತಪಸ್ಸಿನಲ್ಲಿ ಆಸಕ್ತರಾಗಿದ್ದಾರೆ. ಪಾರ್ವತೀದೇವಿ ಆ ತಪಸ್ಸಿಗೆ ಸಹಕಾರಿಣಿಯಾಗಿದ್ದಾಳೆ. ದೇವತೆಗಳಿಗೆ ಚಿಂತೆ. ಇವರಿಬ್ಬರೂ ಮದುವೆಯಾಗಿ ಮಗುವನ್ನು ಪಡೆಯಲಿ ಎಂದರೆ ಇಬ್ಬರೂ ತಪಸ್ಸಿನಲ್ಲಿ ಆಸಕ್ತರಾಗಿದ್ದಾರೆ. ಹೀಗಾಗಿ ದೇವತೆಗಳು, ಮುಖ್ಯವಾಗಿ ಇಂದ್ರ, ಕಾಮನನ್ನು ಕರೆಯಿಸಿ ರುದ್ರದೇವರ ಮನಸ್ಸಿನಲ್ಲಿ ಕಾಮೋತ್ಪತ್ತಿ ಮಾಡುವಂತೆ ತಿಳಿಸುತ್ತಾರೆ. ಆದರೆ, ರುದ್ರದೇವರು ಕಾಮನ ದೇಹವನ್ನೇ ಸುಟ್ಟು ಹಾಕಿಬಿಡುತ್ತಾರೆ. 

ವಸ್ತುಸ್ಥಿತಿಯಲ್ಲಿ ಮನ್ಮಥನಿಗೆ ರುದ್ರದೇವರನ್ನು ಪ್ರೇರಿಸುವ ಸಾಮರ್ಥ್ಯವಿಲ್ಲ. ಮನ್ಮಥ ಹುಟ್ಟುವದಕ್ಕಿಂತ ಮುಂಚೆ ರುದ್ರದೇವರು ಹುಟ್ಟಿದ್ದಾರೆ. ಅವನ ಜನ್ಮಕ್ಕಿಂತ ಮುಂಚೆಯೇ ಅವರಿಗೆ ಪಾರ್ವತಿಯ ಕುರಿತು ಕಾಮ, ಪ್ರೇಮಗಳಿವೆ. ಮನ್ಮಥನಿಗೆ ತನಗಿಂತ ಕೆಳಗಿನವರ ಮನಸ್ಸಿನಲ್ಲಿ ವಿಕಾರ ಉಂಟು ಮಾಡುವ ಸಾಮರ್ಥ್ಯವಿದೆಯೇ ಹೊರತು ತನಗಿಂತ ಹಿರಿಯ ದೇವತೆಗಳನ್ನು ಪ್ರೇರಿಸುವ ಶಕ್ತಿೀಯಿಲ್ಲ. ತನಗೆ ಸಲ್ಲದ ಕಾರ್ಯವನ್ನು ಮಾಡಲಿಕ್ಕೆ ಉದ್ಯುಕ್ತನಾದ ಕಾರಣಕ್ಕೆ ಕಾಮನ ವಿನಾಶವಾಯಿತು ಎಂಬ ತತ್ವದ ವಿವರಣೆ ಇಲ್ಲಿದೆ. 

ಬ್ರಹ್ಮದೇವರನ್ನು, ರುದ್ರದೇವರನ್ನು, ಜಗದೀಶ್ವರರು, ಸರಸ್ವತೀ, ಪಾರ್ವತಿಯರನ್ನು ಜಗದಂಬಿಕೆಯೆಂದು ಶಾಸ್ತ್ರಗಳು ಕರೆಯುವದರ ಹಿಂದಿನ ಅರ್ಥವನ್ನೂ ಸಹ ಈ ಸಂದರ್ಭದಲ್ಲಿ ತಿಳಿಸಲಾಗಿದೆ. 

ಕಾಮದಹನ

ದೇವತೆಗಳ ಪ್ರಾರ್ಥನೆಯಂತೆ, ರುದ್ರದೇವರ ಮನಸ್ಸಿನಲ್ಲಿ ಕಾಮೋತ್ಪತ್ತಿ ಮಾಡುತ್ತೇನೆ ಎಂಬ ಗರ್ವದಿಂದ ಬರುವ ಕಾಮ ರುದ್ರದೇವರ ಮೇಲೆ ಬಾಣಪ್ರಯೋಗ ಮಾಡುತ್ತಾನೆ. ಇಡಿಯ ಜಗತ್ತನ್ನೇ ಗೆದ್ದಿರುವ ಮಹಾಬಲಿಷ್ಠನಾದ ಕಾಮನನ್ನು ಕೇವಲ ತನ್ನ ಕಣ್ಣೋಟದಿಂದ ಸುಟ್ಟುಹಾಕುತ್ತಾರೆ, ಜಗದೀಶ್ವರರಾದ ರುದ್ರದೇವರು. ಆ ಸಮಗ್ರ ಘಟನೆಯನ್ನು ಕಣ್ಣಿಗೆ ಕಟ್ಟುವಂತೆ ಶ್ರೀ ವೇದವ್ಯಾಸದೇವರು ಚಿತ್ರಿಸಿದ್ದಾರೆ. ಆ ಭಾಗದ ಅನುವಾದ ಮತ್ತು ಈ ಪ್ರಸಂಗದಿಂದ ನಾವು ಕಲಿಯಬೇಕಾದ ಪಾಠದ ಚಿಂತನೆ ಇಲ್ಲಿದೆ. 

Play Time: 42 Minuts 44 Seconds

Size: 7.48 MB


Download Upanyasa Share to facebook View Comments
5232 Views

Comments

(You can only view comments here. If you want to write a comment please download the app.)
 • Jayashree Karunakar,Bangalore

  12:21 PM, 25/02/2020

  ಗುರುಗಳೆ ನಿಮ್ಮ ಭಕ್ತಿಭರಿತ ಉಪನ್ಯಾಸವನ್ನು ಶ್ರವಣಮಾಡಿದಾಗ, ಮನದಲಿ ಮೂಡಿತು ಹೀಗೊಂದು ಸನ್ನಿವೇಶ....
  
  ಮಾವನ ಪುರದಲಿ ಹರನು ಏಕಾಂಗಿಯಾಗಿ,ಹರಿಯ ಧ್ಯಾನದೊಳಿರಲೂಂದು ದಿನ...
  
  ಕುಸುಮಗಳೆಲ್ಲ ಘಮಘಮಿಸುತ್ತಿರಲು...
  
  ಧುಂಬಿಯ ಝಂಕಾರದಲಿ,
  ಮನ್ಮಥನ ಧ್ವನಿಯು ಸೇರಿರಲು...
  
   ಮನೋನಿಯಾಮಕನ ಮನದೊಳು ಜಗದಂಬಿಕೆಯು 
  ಮೆಲ್ಲನೆ ಮೆಲ್ಲನೆ ಬರುತಿರಲು....
  
   ಮನ್ಮಥನ ಮತ್ತೊಂದು ಬಾಣಕ್ಕೆ ಮುಕ್ಕಣ್ಣನ ತಪೋಭಂಗವಾಗಲು..
  
   ಪೂಜಿಸಲು ಬಂದ ತನ್ನರಸಿಯ ಪ್ರೇಮದಿ ಎದುರಿಗೆಕಾಣಲು...
  
  ಓಡನೆಯೇ ಮುಕ್ಕಣ್ಣನ್ನೊಮ್ಮೆ ಜ್ವಲಿಸುವ ಕೋಪದಿ ಮನ್ಮಥನ ನೋಡಲು...
  
  ಕ್ಷಣಮಾತ್ರದಿ ಅನಂಗನಾದ.....
  
  ನಿಮಗೆ ಭಕ್ತಿಯ ನಮಸ್ಕಾರಗಳು.
 • Santosh Patil,Gulbarga

  9:35 PM , 28/09/2019

  Thanks Gurugale
 • Ushasri,Chennai

  8:54 AM , 07/09/2018

  Namaskara achare. Dhanyavadagalu
 • ಸುದರ್ಶನ ಶ್ರೀ. ಲ.,ಬೆಂಗಳೂರು

  5:59 PM , 23/08/2017

  ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು🙏😊
  
  ಎರಡು ಪ್ರಶ್ನೆಗಳನ್ನು ಕೇಳುವೆ ಗುರುಗಳೆ🙏
  
  ೧) ಗಿರಿಜಾ ದೇವಿ ಹುಟ್ಟುತ್ತಾಳೆ ಎನ್ನುವುದು ರುದ್ರದೇವರಿಗೆ ತಿಳಿದಿರುವುದಿಲ್ಲವೆ? ತಿಳಿದಿದ್ದಲ್ಲಿ ಯಾಕೆ ಸಮಾಧಿಯಿಂದ ಬಂದ ಕ್ಷಣ ಸೇವೆ ಮಾಡುತ್ತಿರುವ ಗಿರಿಜಾ ದೇವಿಯಲ್ಲಿ ದಾಕ್ಷಾಯಿಣಿಯನ್ನು ರುದ್ರ ದೇವರು ಕಂಡರು ಎಂದು ಏಕೆ ಹೇಳಿದ್ದೀರಿ ?

  Vishnudasa Nagendracharya

  ಉತ್ತಮಪ್ರಶ್ನೆ. 
  
  ಎರಡು ಉತ್ತರಗಳಿವೆ. 
  
  ರುದ್ರಾದಿದೇವತೆಗಳು ಸರ್ವಜ್ಞರಾದರೂ, ಯಾವ ವಿಷಯವನ್ನು ತಿಳಿಯಬೇಕೋ ಆ ವಿಷಯದ ಕುರಿತು ಆಲೋಚನೆ ಮಾಡಿದಾಗ ಮಾತ್ರ ಅವರಿಗೆ ಆ ವಿಷಯದ ಕುರಿತ ಜ್ಞಾನ ಉಂಟಾಗುತ್ತದೆ. ರಾಮಚಂದ್ರನನ್ನು ಧ್ಯಾನ ಮಾಡುತ್ತ ಕುಳಿತಿದ್ದ ರುದ್ರದೇವರು ಪಾರ್ವತಿಯ ಮರುಜನ್ಮದ ಕುರಿತು ಯೋಚಿಸಿರಲಿಲ್ಲವಾದ್ದರಿಂದ ಅದನ್ನು ಆಗ ತಿಳಿದಿರಲಿಲ್ಲ ಎಂದು ತಿಳಿಯಬಹುದು. ಧ್ಯಾನ ಎಂದರೇ ಎಲ್ಲವನ್ನೂ ಮರೆತು ಹರಿಯನ್ನು ನೆನೆಯುವದಲ್ಲವೇ? 
  
  ಎರಡನೆಯ ಉತ್ತರ - ಸಾಮಾನ್ಯವಾಗಿ ಮುಂದಿನದರ ಜ್ಞಾನವಿದ್ದರೂ, ಅದು ಪ್ರತ್ಯಕ್ಷವಾಗಿ ಎದುರು ಕಂಡಾಗ ನಾವು ಸಂಭ್ರಮಿಸುತ್ತೇವೆ. ಉದಾಹರಣೆಗೆ ನಮ್ಮ ಪ್ರೀತಿಯ ವ್ಯಕ್ತಿ ದೂರದ ಊರಿನಿಂದ ಬಂದಿದ್ದಾರೆ, ಬರುತ್ತಾರೆ ಎಂದು ತಿಳಿದಿರುತ್ತದೆ. ಅದರಿಂದಲೇ ಸಂತೋಷವಾಗಿರುತ್ತದೆ. ಅವರನ್ನು ಮೊದಲ ಬಾರಿಗೆ ನೋಡಿದ ತಕ್ಷಣ ಆ ಸಂತೋಷ ಅಭಿವ್ಯಕ್ತವಾಗುತ್ತದೆ, ಜ್ಞಾನವೂ ಸ್ಪಷ್ಟವಾಗುತ್ತದೆ. ಹಾಗೆ ರುದ್ರದೇವರು ಸಾಮಾನ್ಯವಾಗಿ ಸತೀದೇವಿ ಮತ್ತೆ ಹುಟ್ಟಿ ಬರುತ್ತಾರೆ ಎಂದು ತಿಳಿದಿದ್ದರು. ಪಾರ್ವತಿದೇವಿಯರನ್ನು ಕಂಡಾಗ ಆ ಜ್ಞಾನ ಸ್ಪಷ್ಟವಾಯಿತು. 
  
  ಹೀಗೆ ಎರಡು ರೀತಿಯಲ್ಲಿ ತಿಳಿಯಬಹುದು. 
 • ಸುದರ್ಶನ ಶ್ರೀ. ಲ.,ಬೆಂಗಳೂರು

  6:03 PM , 23/08/2017

  ಇನ್ನು ಎರಡನೇಯ ಪ್ರಶ್ನೆ ಗುರುಗಳೆ🙏
  
  ೨) ಕಾಮನ ಅಸ್ತ್ರ ರುದ್ರದೇವರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ನಿರ್ಣಯ ಎಂದು ತಿಳಿಸಿದ್ದೀರಿ. ಹೀಗಿದ್ದರೆ ರುದ್ರದೇವರಿಗೆ ಸಮಾಧಿಭಂಗ ಹೇಗಾಯಿತು?
 • Balaji karanam,Anantapur

  1:19 PM , 03/06/2017

  Acharyare, manmathana deha jadava? Jadavalladiddare dahana hege aguttade?

  Vishnudasa Nagendracharya

  ಭಗವಂತ, ಮಹಾಲಕ್ಷ್ಮೀದೇವಿಯರು ಮತ್ತು ಮುಕ್ತರಾದ ಸಮಸ್ತ ಜೀವರು, ಇವರನ್ನು ಹೊರತು ಪಡಿಸಿ ಸಂಸಾರದಲ್ಲಿರುವ ಎಲ್ಲ ಜೀವರಿಗೂ ಜಡವಾದ ದೇಹವೇ ಇರುವದು. 
  
  ಅಂದರೆ ಈ ಬ್ರಹ್ಮಾಂಡವನ್ನು ಸೃಷ್ಟಿ ಮಾಡಿರುವ ಬ್ರಹ್ಮದೇವರಿಂದ ಆರಂಭಿಸಿ ಈ ಸೃಷ್ಟಿಯಲ್ಲಿರುವ ಸಮಸ್ತರಿಗೂ ಜಡವಾದ ದೇಹವೇ. ಮನ್ಮಥನದೂ ಜಡವಾದ ದೇಹವೇ. 
  
  ಇಷ್ಟೇ, ಕಲ್ಲು, ವಜ್ರ, ಎರಡೂ ಕಲ್ಲೇ ಆದರೂ ಎರಡರ ಗುಣ ಧರ್ಮಗಳಲ್ಲಿ ಅಜಗಜಾಂತರ ವ್ಯತ್ಯಾಸ ಇರುವಂತೆ ನಮ್ಮ ಮಾನುಷ ದೇಹಕ್ಕೂ ದೇವತೆಗಳ ದಿವ್ಯದೇಹಕ್ಕೂ ಅಪಾರ ವ್ಯತ್ಯಾಸ ಇರುತ್ತದೆ. ಆದರೆ ಎರಡೂ ದೇಹಗಳು ಜಡವೇ.