Upanyasa - VNU043

GK-05 ರತೀದೇವಿ ಮಾಡಿದ ದಾಂಪತ್ಯಪ್ರದಾಯಕ ಸ್ತೋತ್ರ

18/07/2016

ದೇವತೆಗಳ ಮರಣದ ಕುರಿತು

ದೇವತೆಗಳನ್ನು ಅಮರರು ಮರಣವಿಲ್ಲದವರು ಎಂದು ಕರೆಯುತ್ತಾರೆ. ಅದಕ್ಕಾಗಿಯೇ ಅವರು ಅಮೃತಪಾನವನ್ನೂ ಸಹ ಮಾಡಿದ್ದಾರೆ. ಅಂದಮೇಲೆ ಮನ್ಮಥನ ದೇಹವನ್ನು ರುದ್ರದೇವರು ಹೇಗೆ ಸುಟ್ಟು ಹಾಕಿದರು ಎಂಬ ಪ್ರಶ್ನೆಗೆ ಶ್ರೀಮದಾಚಾರ್ಯರ ಸಿದ್ಧಾಂತ ನೀಡಿರುವ ಉತ್ತರವನ್ನು ಇಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ. 

ಮನ್ಮಥನನ್ನು ಬದುಕಿಸಲು ಪ್ರಾರ್ಥನೆ

ಮನ್ಮಥನನ್ನು ನಾಶ ಮಾಡಿದ ರುದ್ರದೇವರ ಬಳಿ ಬಂದ ದೇವತೆಗಳು ಕೈಜೋಡಿಸಿ ಪ್ರಾರ್ಥಿಸುತ್ತಾರೆ. ಋಷಿಗಳೂ ಪ್ರಾರ್ಥನೆ ಮಾಡುತ್ತಾರೆ. ಆದರೆ ಅವರು ಮಾಡಿದ ತಪ್ಪಿಗೆ ಶಿಕ್ಷೆ ನೀಡಬಯಸಿದ ರುದ್ರದೇವರು ಸಿಟ್ಟಿನಿಂದ ಉತ್ತರ ನೀಡುತ್ತಾರೆ. ಆಗ ಮಹರ್ಷಿಗಳೆಲ್ಲರೂ ಭಕ್ತಿಯಿಂದ ಕೈಜೋಡಿಸಿ ಜಗತ್ತಿನಲ್ಲಿ ಕಾಮದ ಆವಶ್ಯಕತೆಯನ್ನು ರುದ್ರದೇವರ ಮುಂದೆ ಬಿನ್ನವಿಸಿಕೊಳ್ಳುತ್ತಾರೆ. ಕಾಮದ ಕುರಿತಾಗಿ ತಿಳಿಯಬೇಕಾದ ಮಹತ್ತ್ವದ ಪ್ರಮೇಯಗಳ ಕುರಿತು ಇಲ್ಲಿ ವಿವರಣೆಯಿದೆ. 

ರತೀದೇವಿ ಮಾಡಿದ ಸ್ತೋತ್ರ

ದೇವತೆಗಳ, ಋಷಿಗಳ ಪ್ರಾರ್ಥನೆಗೆ ರುದ್ರದೇವರು ಶಾಂತರಾಗುವದಿಲ್ಲ. ಆಗ ಮನ್ಮಥನ ಪತ್ನಿಯಾದ ರತೀದೇವಿ ಬಂದು ಭಕ್ತಿಯಿಂದ ಸ್ತೋತ್ರ ಮಾಡಿ ಪ್ರಾರ್ಥನೆ ಸಲ್ಲಿಸುತ್ತಾಳೆ. ಆ ಸ್ತೋತ್ರದಿಂದ ಪ್ರಸನ್ನರಾದ ರುದ್ರದೇವರು ರತೀದೇವಿಗೆ ಮನ್ಮಥನನ್ನು ಪಡೆಯುವ ಅನುಗ್ರಹವನ್ನು ಮಾಡುತ್ತಾರೆ. 

ದಾಂಪತ್ಯದ ಅಭಿಮಾನಿದೇವತೆಯಾದ ಶ್ರೀಶಂಕರನನ್ನು ವೈಧವ್ಯಪರಿಹಾರಕ್ಕಾಗಿ ರತೀದೇವಿ ಮಾಡಿದ ಈ ಸ್ತೋತ್ರದ ಪಠಣದಿಂದ ಜನರಿಗೆ ಸಕಲ ಅಭೀಷ್ಟಗಳೂ ದೊರೆಯುತ್ತವೆ, ಮುಖ್ಯವಾಗಿ ಹೆಣ್ಣುಮಕ್ಕಳಿಗೆ ವೈಧವ್ಯಕ್ಕೆ ಕಾರಣವಾದ ಪಾಪ ಪರಿಹಾರವಾಗುತ್ತದೆ, ಗಂಡಸರು ಪಾರಾಯಣ ಮಾಡಿದರೆ ವಿಧುರರಾಗುವ ಪಾಪವನ್ನು ಕಳೆದುಕೊಳ್ಳುತ್ತಾರೆ, ಗಂಡಹೆಂಡತಿಯರು ಕೂಡಿ ಪಾರಾಯಣ ಮಾಡಿದರೆ ಅವರಿಗೆ ವಿಯೋಗ ಉಂಟಾಗುವದಿಲ್ಲ. 

ಪ್ರತೀನಿತ್ಯ ಪಠಣೆ ಮಾಡುವದಕ್ಕಾಗಿ ಸ್ತೋತ್ರವನ್ನು ಇಲ್ಲಿ ನೀಡಿದ್ದೇನೆ. ಅರ್ಥವನ್ನು ಉಪನ್ಯಾಸದಲ್ಲಿ ವಿವರಿಸಿದ್ದೇನೆ. ಕಲಿಯಲಿಕ್ಕೆ ಅನುಕೂ ಲವಾಗಲಿ ಎಂದು ಪಠಣವನ್ನೂ ಸಹ ಮಾಡಿದ್ದೇನೆ. ಕಲಿತು, ಅರ್ಥಾನುಸಂಧಾನಪೂರ್ವಕವಾಗಿ ಪಾರಾಯಣ ಮಾಡಿ. 


ಶ್ರೀಪದ್ಮಪುರಾಣೇ ರತೀದೇವಿಕೃತಂ ಶ್ರೀಶಂಕರಸ್ತೋತ್ರಮ್ 

ನಮಃ ಶಿವಾಯಾಸ್ತು ಮನೋಮಯಾಯ 
ಜಗನ್ಮಯಾಯಾದ್ಭುತವರ್ತ್ಮನೇ ನಮಃ I 
ನಮಃ ಶಿವಾಯಾಸ್ತು ಸುರಾರ್ಚಿತಾಯ 
ತುಭ್ಯಂ ಸದಾ ಭಕ್ತಕೃಪಾಪರಾಯ II

ನಮೋ ಭವಾಯಾಸ್ತು ಭವೋದ್ಭಯಾಯ
ನಮೋsಸ್ತು ತೇ ಧ್ವಸ್ತಮನೋಭವಾಯ I
ನಮೋಸ್ತು ಮಾಯಾಮದನಾಶ್ರಯಾಯ 
ನಮೋ ನಿಸರ್ಗಾಮಲಭೂಷಿತಾಯ II 

ನಮೋsಸ್ತ್ವಮೇಯಾಯ ಗುಣಾಯನಾಯ 
ನಮೋsಸ್ತು ಸಿದ್ಧಾಯ ಪುರಾತನಾಯ I
ನಮಃ ಶರಣ್ಯಾಯ ನಮೋ ಗುಣಾಯ 
ನಮೋsಸ್ತು ತೇ ಭೀಮಗಣಾನುಗಾಯ II 

ನಮೋsಸ್ತು ನಾನಾಭುವನರ್ಧಿಕರ್ತ್ರೇ 
ನಮೋsಸ್ತು ಭಕ್ತಾಭಿಮತಪ್ರದಾಯ I
ನಮೋsಥ ಕರ್ಮಪ್ರಸವೇ ನಮಃ ಸದಾ 
ಅನಂತರೂಪಾಯ ಸದೈವ ತುಭ್ಯಮ್ II 

ಅಸಹ್ಯಕೋಪಾಯ ಸದೈವ ತುಭ್ಯಂ 
ಶಶಾಂಕಚಿಹ್ನಾಯ ನಮೋsಸ್ತು ತುಭ್ಯಮ್ I
ಅಸೀಮಲೀಲಾಪರಮಸ್ತುತಾಯ 
ವೃಷೇಂದ್ರಯಾನಾಯ ಪುರಾಂತಕಾಯ II

ನಮಃ ಪ್ರಸಿದ್ಧಾಯ ಮಹೌಷಧಾಯ 
ನಮೋsಸ್ತು ನಾನಾವಿಧರೂಪಕಾಯ I 
ನಮೋsಸ್ತು ಕಾಲಾಯ ನಮಃ ಕಲಾಯ 
ನಮೋsಸ್ತು ತೇ ಕಾಲಕಲಾತಿಗಾಯ II 

ಚರಾಚಾರಾಚಾರ್ಯವಿಚಾರ್ಯವರ್ಯಂ
ಆಚಾರ್ಯಮುತ್ಪ್ರೇಕ್ಷಿತಭೂತಸರ್ಗಮ್ I
ತ್ವಾಮಿಂದುಮೌಲಿಂ ಶರಣಂ ಪ್ರಪನ್ನಾ 
ಪ್ರಿಯಾಪ್ತಯೇsಹಂ ಸಹಸಾ ಮಹೇಶಮ್ II

ಪ್ರಯಚ್ಛ ಮೇ ಕಾಮಯಶಃಸಮೃದ್ಧಿಂ 
ಪತಿಂ ವಿನಾ ತಂ ಭಗವನ್ ನ ಜೀವೇ I 
ಪ್ರಿಯಃ ಪ್ರಿಯಾಯಾಃ ಪುರುಷೇಶ ನಿತ್ಯಃ
ತತೋsಪರಃ ಕೋ ಭುವನೇಷ್ವಿಹಾಸ್ತಿ II 

ಪ್ರಭುಃ ಪ್ರಭಾವೀ ಪ್ರಭವಃ ಪ್ರಿಯಾಣಾಂ 
ಪ್ರವೀಣಪರ್ಯಾಯಪರಾಪರಂತಪಃ I 
ತ್ವಮೇವ ನಾಥೋ ಭುವನಸ್ಯ ಗೋಪ್ತಾ 
ದಯಾಲುರುನ್ಮೂಲಿತಭಕ್ತಭೀತಿಃ II

ಇತಿ ರತೀದೇವಿಕೃತಂ ಶ್ರೀಶಂಕರಸ್ತೋತ್ರಮ್ 


ತತ್ವನಿರ್ಣಯ 

ರತೀದೇವಿಯ ಸ್ತೋತ್ರದಿಂದ ಪ್ರೀತರಾದ ರುದ್ರದೇವರು ಮನ್ಮಥನಿಗೆ ದೇಹವಿಲ್ಲದೆಯೂ ಬದುಕುವ ಸಾಮರ್ಥ್ಯವನ್ನು, ತನ್ನ ಕಾರ್ಯವನ್ನು ನಿರ್ವಹಿಸುವ ಶಕ್ತಿಯನ್ನು ಅನುಗ್ರಹಿಸುತ್ತಾರೆ. ಅಂದಿನಿಂದ ಅವನಿಗೆ ಅನಂಗ ಎಂದು ಹೆಸರಾಗುತ್ತದೆ. ಸಶರೀರನಾದ ಗಂಡನೇ ಬೇಕು ಎಂಬ ರತೀದೇವಿಯ ಪ್ರಾರ್ಥನೆಯಂತೆ ಮುಂದೆ ಶ್ರೀಕೃಷ್ಣನ ಮಗನಾಗಿ ಇದೇ ಕಾಮ ಪ್ರದ್ಯುಮ್ನನಾಗಿ ಹುಟ್ಟಿ ಬರುತ್ತಾನೆ, ಆಗ ಅವನನ್ನು ಗಂಡನನ್ನಾಗಿ ಪಡೆಯುತ್ತೀಯ ಎಂದು ತಿಳಿಸಿ ತಮ್ಮ ಧ್ಯಾನಕ್ಕೆ ಭಂಗವುಂಟಾದ ಆ ಸ್ಥಳವನ್ನು ತ್ಯಜಿಸಿ ಅಲ್ಲಿಯೇ ಅಂತರ್ಹಿತರಾಗಿಬಿಡುತ್ತಾರೆ. 

ಈ ಪ್ರಸಂಗವನ್ನು ಶ್ರೀಮದಾಚಾರ್ಯರು ತಾತ್ಪರ್ಯನಿರ್ಣಯದಲ್ಲಿ ನಿರ್ಣಯಿಸಿದ್ದಾರೆ. ಆ ವಾಕ್ಯಗಳ ಚಿಂತನೆಯೊಂದಿಗೆ ಈ ಉಪನ್ಯಾಸವನ್ನು ಗುರ್ವಂತರ್ಯಾಮಿಗೆ ಸಮರ್ಪಿಸಲಾಗಿದೆ. 

Play Time: 54 Minuts 09 Seconds

Size: 9.46 MB


Download Upanyasa Share to facebook View Comments
7959 Views

Comments

(You can only view comments here. If you want to write a comment please download the app.)
 • Jayashree karunakar,Bangalore

  5:40 PM , 06/06/2017

  Ketta kamanegalannu bhaghavatha yathakkagi srustimadida. Manushyanalli papa karma, ketta yochanegalannu, asura vruthi, yathakkagi, mathe adakkagi karma phala yake? Thumba gondala guruji. Dayavittu vistaravagi thilisikodi gurugale. Nanna gondalavanne thammali allade, bere yaru tane pariharisalu sadya gurugale

  Vishnudasa Nagendracharya

  ದೇವರು ನಮಗೇಕೆ ಕಷ್ಟಗಳನ್ನು ಕೊಡುತ್ತಾನೆ ಎಂಬ ಲೇಖನದಲ್ಲಿ, ಹರಿಭಕ್ತಿಸಾರದ ಉಪನ್ಯಾಸಗಳಲ್ಲಿ ಈಗಾಗಲೇ ಉತ್ತರಿಸಿದ್ದೇನೆ. 
 • Jayashree karunakar,Bangalore

  5:32 PM , 06/06/2017

  Adare gurugale Shiva manoniyamakanallave? Devathegalige avare olleya salahe kodabhahudithallave? 
  Adu koda devatheyara hindina papa karmada phalavadare, mottamodala papa karmavu yara prerane? Thumbha gondala vagide guruji. Nannanu yavagalu kaduthiruva prashne. Dayavittu kshame irali guruji

  Vishnudasa Nagendracharya

  ಈ ಪ್ರಶ್ನೆಗೆ ಈಗಾಗಲೇ ಅನೇಕ ಬಾರಿ ಉತ್ತರಿಸಿದ್ದೇನೆ. ಹರಿಭಕ್ತಿಸಾರದ ಉಪನ್ಯಾಸದಲ್ಲಿಯೂ ಉತ್ತರಿಸಿದ್ದೇನೆ. ದಯವಿಟ್ಟು ಕೇಳಿ. 
 • Jayashree karunakar,Bangalore

  4:04 PM , 06/06/2017

  But guruji I have two doubt please clear. 
  1.we all know that, god will always See the intention behind each karma, but in this case, why Shiva did not considered, demigods even though their intention behind was good? 
  2. Shiva could have destroyed only bad Kama in the world ,for saint prayers .

  Vishnudasa Nagendracharya

  1. The question is already answered in the upanaysa itself. The way chosen by gods was wrong, though their intention was good. So Rudradevaru punsihed them. 
  
  2. The existence of both bad and good is very much needed. 
 • Jayashree karunakar,Bangalore

  4:06 PM , 06/06/2017

  Please forgive me guruji if their is any mistakes in my question