Upanyasa - VNU044

GK06 ರತೀದೇವಿಯ ಕರ್ಮ

19/07/2016

ರತೀದೇವಿಯ ಪತಿವಿಯೋಗಕ್ಕೆ ಕಾರಣ

ರುದ್ರದೇವರನ್ನು ಪ್ರಾರ್ಥಿಸಿ ಮದುವೆಗೆ ಒಲಿಸಬೇಕಾಗಿದ್ದ ದೇವತೆಗಳು ವಕ್ರಮಾರ್ಗವನ್ನು ಅನುಸರಿಸಿದ ಅಪರಾಧವನ್ನು ಮಾಡಿದರು, ಹೀಗಾಗಿ ತಾರಕಾಸುರನ ವಧೆ ದೇವತೆಗಳ ಆಯುಷ್ಯದಲ್ಲಿ ಒಂದು ಸಾವಿರ ವರ್ಷ ಮುಂದಕ್ಕೆ ಹೋಯಿತು. ತಮ್ಮ ಅಪರಾಧಕ್ಕೆ ಅಷ್ಟು ಪರಿತಾಪವನ್ನು ಅವರು ಅನುಭವಿಸಬೇಕಾಯಿತು. 

ನಾನು ರುದ್ರದೇವರ ಮನಸ್ಸನ್ನು ನಿಯಮಿಸಬಲ್ಲೆ  ಎಂಬ ಅಹಂಕಾರದಿಂದ, ತನಗೆ ಯೋಗ್ಯವಲ್ಲದ ಕಾರ್ಯವನ್ನು ಮನ್ಮಥ ಮಾಡಹೊರಟ, ಹೀಗಾಗಿ ಅವನ ದೇಹವೇ ಭಸ್ಮವಾಯಿತು. ಕಂದರ್ಪ ಎಂದರೆ ಕಾಮದಿಂದ ದರ್ಪ ಉಳ್ಳವನು ಎಂದರ್ಥ. ಕಾಮಕ್ಕೆ ಆಶ್ರಯವಾದದ್ದು ದೇಹ, ಆ ದೇಹದ ರೂಪ. ಅಂತಹ ದೇಹವನ್ನೇ ಶ್ರೀ ರುದ್ರದೇವರು ಭಸ್ಮ ಮಾಡಿಬಿಡುತ್ತಾರೆ. 

ಆದರೆ, ಇಷ್ಟು ಪ್ರಸಂಗದಲ್ಲಿ ರತೀದೇವಿ ಯಾವ ತಪ್ಪು ಮಾಡಿದ್ದಳು? ಅವಳಿಗೇಕೆ ಪತಿವಿಯೋಗವುಂಟಾಯಿತು? ಕಾಮ ಪ್ರದ್ಯುಮ್ನನಾಗಿ ಹುಟ್ಟುವವರೆಗೆ ಅವಳ ಅವಸ್ಥೆ ಏನಿತ್ತು ಎಂಬೆಲ್ಲ ಪ್ರಶ್ನೆಗಳಿಗೆ ಶ್ರೀಮದಾಚಾರ್ಯರು ಮಹಾಭಾರತತಾತ್ಪರ್ಯನಿರ್ಣಯದಲ್ಲಿ ಉತ್ತರಗಳನ್ನು ನೀಡಿದ್ದಾರೆ. ಆ ಕಥೆಗಳ ನಿರೂಪಣೆ ಇಲ್ಲಿದೆ 

Play Time: 34 Minuts 12 Seconds

Size: 6.01 MB


Download Upanyasa Share to facebook View Comments
2054 Views

Comments

(You can only view comments here. If you want to write a comment please download the app.)
  • No Comment