Upanyasa - VNU045

GK07 ಪಾರ್ವತಿಯ ತಪಸ್ಸು

19/07/2016


ಪಾರ್ವತೀದೇವಿಯ ತಪಸ್ಸಿನ ನಿರ್ಧಾರ

ಮನ್ಮಥನನ್ನು ಭಸ್ಮ ಮಾಡಿ, ರತೀದೇವಿಗೆ ವರವನ್ನು ನೀಡಿ, ದೇವತೆಗಳ ಮೇಲೆ ಕುಪಿತರಾದ ರುದ್ರದೇವರು ಹಿಮಾಲಯವನ್ನು ತೊರೆದು ಅಂತರ್ಹಿತರಾಗಿಬಿಡುತ್ತಾರೆ. 

ಕಾದಾಟ ಬಡಿದಾಟಗಳಿಲ್ಲದೆ, ಜಗತ್ತಿನ ಅತೀ ಬಲಿಷ್ಠನಾದ ಮನ್ಮಥನನ್ನು ಕೇವಲ ಕಣ್ಣೋಟದಿಂದ ಸುಟ್ಟು ಹಾಕಿದ ರುದ್ರದೇವರ ಮಹಾಸಾಮರ್ಥ್ಯವನ್ನು ಪಾರ್ವತಿ ಮನಗಾಣುತ್ತಾಳೆ. ಅಲ್ಲಿಯೇ ಇದ್ದು ತಪಸ್ಸು ಮಾಡುವ ನಿರ್ಧಾರವನ್ನು ಕೈಗೊಳ್ಳುತ್ತಾಳೆ. ಹಿಮವಂತ ಮೇನೆಯರು ಅವಳನ್ನು ತಡೆಯಲು ಪ್ರಯತ್ನಿಸಿ ವಿಫಲರಾಗುತ್ತಾರೆ. ಆದರೆ ದೃಢನಿಶ್ಚಯ ಮಾಡಿದ್ದ ಪಾರ್ವತೀದೇವಿ ಯಾವ ಸ್ಥಳದಲ್ಲಿ ರುದ್ರದೇವರು ಅಂತರ್ಹಿತರಾಗಿದ್ದಾರೆಯೋ ಅದೇ ಸ್ಥಳದಲ್ಲಿ ಅವರನ್ನು ಕರೆತರೆಸುತ್ತೇನೆ, ನನ್ನ ಭಕ್ತಿಯಿಂದ ತಪಸ್ಸಿನಿಂದ ಇಲ್ಲಿಗೆ ಕರೆಸಿ ಮದುವೆಗೆ ಒಪ್ಪಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿ ತಪಸ್ಸಿನ ನಿರ್ಧಾರ ಮಾಡಿದ ಘಟನೆಯನ್ನು ಇಲ್ಲಿ ಕೇಳುತ್ತೇವೆ. ಉಮಾ ಎಂಬ ಹೆಸರು ಅವಳಿಗೆ ಬಂದ ರೀತಿಯ ಚಿಂತನೆಯೊಂದಿಗೆ. 

ಪಾರ್ವತೀದೇವಿಯ ತಪಸ್ಸು

ಪಾರ್ವತೀದೇವಿಯ ತಪಸ್ಸಿನ ರೀತಿ ಅನ್ಯಾದೃಶವಾದದ್ದು. ರುದ್ರದೇವರು ಕುಳಿತಿದ್ದ ವೇದಿಕೆಯ ಮೇಲೆ ಕೂಡದೆ, ಆ ವೇದಿಕೆಯನ್ನು ಪೂಜಿಸುತ್ತ, ಮನ್ಮಥನ ಭಸ್ಮದ ಮೇಲೆಯೇ ವೇದಿಕೆಯನ್ನು ನಿರ್ಮಿಸಿ ಅದ್ಭುತವಾದ ತಪಸ್ಸನ್ನು ಆರಂಭಿಸುತ್ತಾಳೆ. ಅನ್ನಾಹಾರಗಳನ್ನು ತ್ಯಾಗ ಮಾಡಿ, ಎಲೆಗಳನ್ನು ತಿನ್ನುತ್ತ, ಅವನ್ನೂ ತ್ಯಾಗ ಮಾಡಿ ದಿವಸಕ್ಕೆ ಒಂದೇ ಎಲೆಯನ್ನು ತಿನ್ನುತ್ತ, ಅದನ್ನೂ ತ್ಯಾಗ ಮಾಡಿ ಕೇವಲ ಗಾಳಿಯ ಸೇವನೆ ಮಾಡುತ್ತ, ತನ್ನ ಬಲಗಾಲಿನ ಹೆಬ್ಬೆಟ್ಟಿನ ಮೇಲೆ ಇಡಿಯ ಶರೀರದ ಭಾರವನ್ನು ಹಾಕಿ ಶಿವಪಂಚಾಕ್ಷರಿಯ ಜಪ ಮಾಡುತ್ತ ಘೋರತಪಸ್ಸನ್ನು ಮಾಡುವ ಬಗೆಯನ್ನು ಯಥಾಮತಿ ವಿವರಿಸುವ ಪ್ರಯತ್ನ ಮಾಡಲಾಗಿದೆ. 

ಇದೇ ಸಂದರ್ಭದಲ್ಲಿ ನಮಗೆ ಯೋಗ್ಯರಾದ, ನಮ್ಮ ಜೊತೆಯಲ್ಲಿ ಸಾಧನೆ ಮಾಡುವ ಗಂಡ/ಹೆಂಡತಿ ಹೇಗೆ ದೊರೆಯಲು ಸಾಧ್ಯ ಎಂಬ ಪ್ರಶ್ನೆಗೆ ಉತ್ತರವನ್ನು ನೀಡುವದರೊಂದಿಗೆ ಈ ಭಾಗದ ಉಪನ್ಯಾಸವನ್ನು ಗುರ್ವಂತರ್ಯಾಮಿಗೆ ಸಮರ್ಪಿಸಲಾಗಿದೆ. 

Play Time: 38 Minuts 14 Seconds

Size: 6.71 MB


Download Upanyasa Share to facebook View Comments
4133 Views

Comments

(You can only view comments here. If you want to write a comment please download the app.)
 • Narayan Murthy,Nashik

  10:00 PM, 25/02/2020

  ಮುಂದಿನ ಭಾಗ ಯಾವಾಗ ಪ್ರಕಟಿಲಾಗುವುದು
 • Santosh Patil,Gulbarga

  11:47 PM, 30/09/2019

  Tnx Gurugale
 • Jayashree karunakar,Bangalore

  4:24 PM , 08/06/2017

  ಅಂತಹಿ೯ತ ಎಂದರೇನು ಗುರುಗಳೆ

  Vishnudasa Nagendracharya

  ಅಂತರ್ಹಿತ ಎಂದರೆ ಅಂತರ್ಧಾನ ಹೊಂದಿದವನು ಎಂದರ್ಥ. ಮಾಯವಾದರು ಎಂದು ಕನ್ನಡದಲ್ಲಿ ಅರ್ಥ.
 • ಸುದರ್ಶನ ಶ್ರೀ. ಲ.,ಬೆಂಗಳೂರು

  11:18 PM, 08/06/2017

  ಅಂತರ್ಹಿತ ಎಂದರೆ hidden ಎನಿಸುತ್ತೆ