Upanyasa - VNU046

GK08 ಪಾರ್ವತೀದೇವಿ ಕಲಿಸುವ ಪಾಠ

21/07/2016

GK-08 ಪಾರ್ವತಿ ಕಲಿಸುವ ಪಾಠ 

ಪಾರ್ವತೀದೇವಿ ಕಲಿಸುವ ಶ್ರೇಷ್ಠ ಪಾಠ 

ರುದ್ರದೇವರನ್ನು ಪತಿಯನ್ನಾಗಿ ಪಡೆಯಬೇಕು ಎನ್ನುವ ಉದ್ದೇಶದಿಂದ ಪಾರ್ವತೀದೇವಿ ದೇವತೆಗಳ ಆಯುಷ್ಯದಲ್ಲಿ ಒಂದು ಸಾವಿರ ವರ್ಷಗಳ ಕಾಲ ತಪಸ್ಸು ಮಾಡುತ್ತಾಳೆ. ಮಗಳ ಶ್ರಮವನ್ನು ಸಹಿಸದ ಪರ್ವತರಾಜ ಮೇನೆಯರು ತಮ್ಮೆಲ್ಲ ಬಾಂಧವರ ಜೊತೆಯಲ್ಲಿ ಬಂದು ‘ತಪಸ್ಸು ಸಾಕು, ಹಿಂತಿರುಗಿ ಬಾ’ ಎಂದು ಹೇಳುತ್ತಾರೆ. 

ಆದರೆ, ಪಾರ್ವತೀದೇವಿ ಹಿಂತಿರುಗುವದಿಲ್ಲ. ಬದಲಿಗೆ ನಾನು ನನ್ನ ತಪಸ್ಸಿನ ಫಲವನ್ನು ಪಡೆದೇ ಸಿದ್ಧಳು ಎನ್ನುವ ಮಾತನ್ನು ತಿಳಿಸುತ್ತಾಳೆ. ನಾವು ಯಾವುದೇ ಕಾರ್ಯದಲ್ಲಿ ಯಶಸ್ಸನ್ನು ಪಡೆಯಬೇಕಾದರೆ ನಮಗಿರಬೇಕಾದ ಎಚ್ಚರವನ್ನು, ಬರುವ ವಿಘ್ನಗಳನ್ನು ಕಳೆದುಕೊಳ್ಳುವ ರೀತಿಯನ್ನು ಇಲ್ಲಿ ಪಾರ್ವತೀದೇವಿ ಕಲಿಸುತ್ತಾಳೆ. ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರ ಪರಮಮಂಗಳ ವಾಕ್ಯಗಳ ಅನುಸಂಧಾನದೊಂದಿಗೆ ಇಲ್ಲಿ ಈ ತತ್ವವನ್ನು ಇಲ್ಲಿ ವಿವರಿಸಲಾಗಿದೆ. 

ದೇವತೆಗಳು ಪರಮಾತ್ಮನಲ್ಲಿ ಮಾಡಿದ ಪ್ರಾರ್ಥನೆ

ಪಾರ್ವತೀದೇವಿಯ ತಪಸ್ಸಿಗೆ ಫಲವನ್ನು ನೀಡಿಸಬೇಕು ಎಂದು ದೇವತೆಗಳೆಲ್ಲ ಕ್ಷೀರಸಾಗರಶಾಯಿಯಾದ ಪರಮಾತ್ಮನನ್ನು ಪ್ರಾರ್ಥಿಸುತ್ತಾರೆ. ಪರಮಾತ್ಮನ ಕುರಿತಾಗಿ ಮಹತ್ತ್ವದ ಪ್ರಮೇಯಗಳನ್ನು ಸ್ಕಂದಪುರಾಣ ಈ ಸಂದರ್ಭದಲ್ಲಿ ತಿಳಿಸುತ್ತದೆ. ಪರಮಾತ್ಮ ಎಲ್ಲ ದೇವತೆಗಳಿಗೂ ರುದ್ರದೇವರ ಬಳಿ ಹೋಗಿ ಪ್ರಾರ್ಥನೆ ಮಾಡಲು ಆದೇಶಿಸುತ್ತಾನೆ. ಅವರ ಪ್ರಾರ್ಥನೆಯಂತೆ ತಾನೂ ಅವರ ಜೊತೆಯಲ್ಲಿ ಹೊರಡುತ್ತಾನೆ. 

ದೇವತೆಗಳು ರುದ್ರದೇವರಲ್ಲಿ ಮಾಡಿದ ಪ್ರಾರ್ಥನೆ
 
ಪರಮಾತ್ಮ ಎಲ್ಲ ದೇವತೆಗಳನ್ನು ರುದ್ರದೇವರು ಇರುವ ಸ್ಥಳಕ್ಕೆ ಕರೆದುಕೊಂಡು ಬರುತ್ತಾನೆ. ಆ ಸಂದರ್ಭದಲ್ಲಿ ದೇವತೆಗಳು ಮಾಡಿದ ಸ್ತೋತ್ರ, ರುದ್ರದೇವರು ದೇವತೆಗಳಿಗೆ ನೀಡಿದ ಉತ್ತರವನ್ನು ನಾವಿಲ್ಲಿ ಕೇಳುತ್ತೇವೆ. ರುದ್ರದೇವರ ದೇಹದಲ್ಲಿ ಯಾವ ಹಾವುಗಳಿವೆ, ಆ ಹಾವುಗಳ ಹೆಸರು ಎಲ್ಲವನ್ನೂ ಸಹ ಈ ಸಂದರ್ಭದಲ್ಲಿ ಶ್ರೀ ವೇದವ್ಯಾಸದೇವರು ತಿಳಿಸುತ್ತಾರೆ. 

ಮದುವೆಯ ವಿಷಯದಲ್ಲಿ ಇರಬೇಕಾದ ಎಚ್ಚರಗಳು

ದೇವತೆಗಳು ಪ್ರಾರ್ಥನೆ ಮಾಡಿದರೂ ರುದ್ರದೇವರು ಮದುವೆಗೆ ಒಪ್ಪುವದಿಲ್ಲ. ಕಾರಣ, ಮದುವೆ ಎನ್ನುವದು ಭಗವದಾರಾಧನೆಗಾಗಿ ಹೆಣ್ಣು ಗಂಡಿನ ಪ್ರೇಮದಿಂದ ಆಗಬೇಕೇ ಹೊರತು, ಯಾವುದೋ ಒಂದು ಕಾರ್ಯಸಿದ್ಧಿಗಾಗಿ ಅಲ್ಲ. 
 
ಆ ಬಳಿಕ ರುದ್ರದೇವರು ಗಿರಿಜೆಯ ತಪಸ್ಸಿಗೆ ಮೆಚ್ಚಿ ಅವಳಿಗೆ ವರಪ್ರದರಾಗಲು ಹೊರಟು ನಿಂತರು ಎಂಬ ಮಂಗಳಮಯ ಘಟನೆಯ ಚಿಂತನೆಯೊಂದಿಗೆ ಉಪನ್ಯಾಸವನ್ನು ಗುರ್ವಂತರ್ಯಾಮಿಗೆ ಸಮರ್ಪಿಸಲಾಗಿದೆ.

Play Time: 50 Minuts 32 Seconds

Size: 8.79 MB


Download Upanyasa Share to facebook View Comments
3512 Views

Comments

(You can only view comments here. If you want to write a comment please download the app.)
 • Santosh Patil,Gulbarga

  11:47 PM, 30/09/2019

  Tnx Gurugale
 • Saraswathy,Bangalore

  3:43 PM , 02/03/2018

  C]