Upanyasa - VNU047

GK-09 ಗಿರಿಜೆಗೊಲಿದ ಶಂಕರ

21/07/2016

ಗಿರಿಜೆಯ ಪರೀಕ್ಷೆ

ಗಿರಿಜಾದೇವಿಯ ತಪಸ್ಸಿಗೆ ಮೆಚ್ಚಿದ ರುದ್ರದೇವರು ವರವನ್ನು ನೀಡಲು ಪಾರ್ವತಿ ತಪಸ್ಸು ಮಾಡುತ್ತಿದ್ದ ಸ್ಥಳಕ್ಕೆ ಬರುತ್ತಾರೆ. ವರವನ್ನು ನೀಡುವ ಮೊದಲು ಒಬ್ಬ ಬ್ರಹ್ಮಚಾರಿಯ ರೂಪವನ್ನು ಧಾರಣೆ ಮಾಡಿ, ರುದ್ರದೇವರು ಪಾರ್ವತಿಯ ಮುಂದೆ ಶಿವನಿಂದೆಯನ್ನು ಮಾಡುತ್ತಾರೆ, ಪಾರ್ವತಿಯ ಶಿವಭಕ್ತಿಯನ್ನು ಜಗತ್ತಿಗೆ ಪ್ರಕಟ ಮಾಡಿ ತೋರಿಸಲು. ಶಿವನಿಂದೆಯನ್ನು ಕೇಳಿದ ಕುಪಿತಳಾದ ಪಾರ್ವತಿ ಆ ವಟುವಿಗೆ ಹೊರಟು ಹೋಗುವಂತೆ ತಿಳಿಸುತ್ತಾಳೆ. 

ಸಿಟ್ಟಿಗೆ ಬಂದ ಪಾರ್ವತಿಯನ್ನು ನೀನು ತಪಸ್ವಿನಿಯೇ ಅಲ್ಲ ಎಂದು ವಟು ಅಪಹಾಸ ಮಾಡುತ್ತಾನೆ. ಗುರುನಿಂದೆ, ದೇವತಾನಿಂದೆ, ಶಾಸ್ತ್ರನಿಂದೆಯನ್ನು ಕೇಳಿಯೂ ಸುಮ್ಮನಿರುವದು ಶಾಸ್ತ್ರಸಮ್ಮತವಲ್ಲ, ಆ ರೀತಿಯ ನಿಂದಕರ ಮೇಲೆ ಸಿಟ್ಟಿಗೆ ಬರುವದು ಭೂಷಣವಷ್ಟೇ ಅಲ್ಲ ಕರ್ತವ್ಯ ಸಹಿತ ಎನ್ನುವ ಮಹತ್ತ್ವದ ತತ್ವದ ಪ್ರತಿಪಾದನೆಯೊಂದಿಗೆ ಈ ಪ್ರಸಂಗದ ವಿವರಣೆ ಇಲ್ಲಿದೆ. 

ತಪಸ್ಸಿನ ಫಲ

ಪಾರ್ವತೀದೇವಿಯ ಒಂದು ಸಾವಿರ ವರ್ಷದ ತಪಸ್ಸಿನ ಫಲದ ಪರಿಪಾಕವಾಗಿ ಅವಳಿಗೆ ಒಲಿದು  ರುದ್ರದೇವರು ಪಾರ್ವತಿಯ ಮುಂದೆ ಪ್ರತ್ಯಕ್ಷರಾಗಿ ನಿಲ್ಲುತ್ತಾರೆ. ಪಾರ್ವತೀದೇವಿಗೆ ವರವನ್ನು ನೀಡುತ್ತಾರೆ. ಕೇಳಿಯೇ ಆನಂದಿಸಬೇಕಾದ ರೋಮಹರ್ಷಣಕರವಾದ ಭಾಗ. 

ಈ ಸಂದರ್ಭದಲ್ಲಿ ನಾವು ಪಾರ್ವತೀದೇವಿಯಲ್ಲಿ ಮಾಡಬೇಕಾದ ಪ್ರಾರ್ಥನೆಯನ್ನು ತಿಳಿಸಿ ಉಪನ್ಯಾಸವನ್ನು ಗುರ್ವಂತರ್ಯಾಮಿಗೆ ಸಮರ್ಪಿಸಲಾಗಿದೆ. 

Play Time: 57 Minuts 50 Seconds

Size: 10.05 MB


Download Upanyasa Share to facebook View Comments
3687 Views

Comments

(You can only view comments here. If you want to write a comment please download the app.)
 • Santosh Patil,Gulbarga

  10:52 AM, 24/03/2020

  Thanks Gurugale 🙏🙏🙏
 • Jayashree karunakar,Bangalore

  4:57 PM , 09/06/2017

  ಪಾವ೯ತಿ ಪರಮೇಶ್ವರರನ್ನು ಮನಸಿನ ಓಳಗೆ ದರುಶನ ಮಾಡಿಸಿದ ನನ್ನ ಗುರುಗಳಿಗೆ ಹೃದಯ ತುಂಬಿದ ನಮನಗಳು.