Upanyasa - VNU048

GK-10 ಸಿದ್ಧಿಗಳಿಸಿದ ಪಾರ್ವತಿ

21/07/2016

ಶಾಸ್ತ್ರೋಕ್ತ ಕ್ರಮದಲ್ಲಿ ಮದುವೆಯಾಗುವಂತೆ ಪಾರ್ವತಿಯ ಪ್ರಾರ್ಥನೆ

ತಾನು ಸತೀದೇವಿ ಎನ್ನುವದನ್ನು ರುದ್ರದೇವರ ಮುಂದೆ ನಿವೇದನೆ ಮಾಡಿಕೊಂಡ ಪಾರ್ವತೀದೇವಿ ಹಿಂದೆ ಸತೀವಿವಾಹದ ಸಂದರ್ಭದಲ್ಲಿ ಗ್ರಹಪೂಜೆ ಮುಂತಾದ ವಿಧಿಗಳು ನಡೆದಿರಲಿಲ್ಲವೆಂದು ಅದಕ್ಕಾಗಿಯೇ ಆ ಮದುವೆ ಸಾವಿನಲ್ಲಿ ಪರ್ಯಾಪ್ತವಾಯಿತೆಂದು ತಿಳಿಸಿ ಈ ಬಾರಿ ಶಾಸ್ತ್ರಕವಾದ ಕ್ರಮದಲ್ಲಿ ಎಲ್ಲ ವಿಧಿಗಳನ್ನು ಅನುಸರಿಸಿ ಮದುವೆಯಾಗುವಂತೆ ಪ್ರಾರ್ಥಿಸುತ್ತಾಳೆ. ಮದುವೆಯ ಸಂದರ್ಭದಲ್ಲಿ ಗ್ರಹ, ಮುಹೂರ್ತ ಮುಂತಾದವಳಿಗೆ ನೀಡಬೇಕಾದ ಮಹತ್ತ್ವದ ಕುರಿತ ಚಿಂತನೆ ಈ ಪ್ರಸಂಗದಲ್ಲಿ ನಿಮಗೆ ದೊರೆಯುತ್ತದೆ. 

ಮಗಳನ್ನು ಮನೆಗೆ ಕರೆತಂದ ಹಿಮ-ಮೇನೆಯರು

ಸಪ್ತರ್ಷಿಗಳು ಬಂದು ಪಾರ್ವತೀದೇವಿಯ ತಪಸ್ಸು ಸಫಲವಾದದ್ದನ್ನು ಹಿಮವಂತ ಮೇನೆಯರಿಗೆ ತಿಳಿಸಿತ್ತಾರೆ. ಹಿಮವಂತ ಸಂಭ್ರಮದಿಂದ ಎಲ್ಲ ಪರ್ವತಾಭಿಮಾನಿದೇವತೆಗಳ ಸಮೇತನಾಗಿ ಪಾರ್ವತಿಯಿದ್ದಲ್ಲಿಗೆ ಬರುತ್ತಾನೆ. ಪಾರ್ವತಿಯ ಮುಖದಿಂದಲೇ ಎಲ್ಲವನ್ನೂ ಕೇಳುತ್ತಾರೆ. ಒಂದು ಸಾವಿರ ವರ್ಷಗಳ ಕಾಲದ ದೀರ್ಘತಪಸ್ಸನ್ನು ಮಾಡಿ ಸಿದ್ಧಿಯನ್ನು ಗಳಿಸಿದ ಮಗಳನ್ನು ಮೆರವಣಿಗೆ ಮಾಡಿಕೊಂಡು ಮನೆಗೆ ಕರೆತರುವ ಪ್ರಸಂಗದ ವಿವರಣೆಯೊಂದಿಗೆ ಈ ಉಪನ್ಯಾಸವನ್ನು ಗುರ್ವಂತರ್ಯಾಮಿಗೆ ಸಮರ್ಪಿಸಲಾಗಿದೆ. 

Play Time: 46 Minuts 05 Seconds

Size: 8.06 MB


Download Upanyasa Share to facebook View Comments
3017 Views

Comments

(You can only view comments here. If you want to write a comment please download the app.)
  • Santosh Patil,Gulbarga

    10:54 AM, 24/03/2020

    Thanks Gurugale 🙏🙏🙏