Upanyasa - VNU049

GK-11 ಸಪ್ತರ್ಷಿಗಳಿಗೆ ಆಜ್ಞೆ

21/07/2016

ರುದ್ರದೇವರ ಬಳಿಗೆ ಸಪ್ತರ್ಷಿಗಳ ಆಗಮನ

ಲೋಕದಲ್ಲಿ ಹೇಗೆ ಮದುವೆ ನಡೆಯುತ್ತದೆಯೋ ಹಾಗೆಯೇ ಮದುವೆ ನಡೆಯಬೇಕು ಎಂದು ಪಾರ್ವತೀದೇವಿ ರುದ್ರದೇವರನ್ನು ಬೇಡಿಕೊಂಡಿದ್ದಳು. ವರನ ಪಕ್ಷದವರು ವಧುವಿನ ಮನೆಗೆ ಬಂದು ನಮ್ಮ ವರನಿಗೆ ನಿಮ್ಮ ಕನ್ಯೆಯನ್ನು ನೀಡಿ ಎಂದು ಕೇಳಬೇಕು. ಈ ಸಂದರ್ಭದಲ್ಲಿ ಆ ಕಾರ್ಯವನ್ನು ನಿಭಾಯಿಸುವದು ಸಪ್ತರ್ಷಿಗಳು. ಮೊದಲಿಗೆ, ಆ ಸಪ್ತರ್ಷಿಗಳು ಗಂಗಾನದಿಯಲ್ಲಿ ಸ್ನಾನ ಮಾಡಿ, ರುದ್ರದೇವರಿಗೆ ಸಮರ್ಪಿಸಲು ದೇವಲೋಕದ ಪುಷ್ಪಗಳನ್ನು ತೆಗೆದುಕೊಂಡು ಮಂದಾಕಿನಿಯ ತೀರದಲ್ಲಿದ್ದ ರುದ್ರದೇವರ ಬಳಿಗೆ ಬರುತ್ತಾರೆ. 

ವಸಿಷ್ಠಾದಿ ಋಷಿಗಳು ಗಂಗಾನದಿಯ ಯೋಗ್ಯತೆಗಿಂತ ಹಿರಿಯರಾದವರು. ಆದರೂ ಭಕ್ತಿಯಿಂದ ಗಂಗಾಸ್ನಾನವನ್ನು ಮಾಡುತ್ತಾರೆ. ಶ್ರೀಮದಾಚಾರ್ಯರಿಂದಾರಂಭಿಸಿ ಎಲ್ಲ ದೇವತೆಗಳೂ ಋಷಿಗಳೂ ತಮಗಿಂತ ಯೋಗ್ಯತೆಯಲ್ಲಿ ಕಿರಿಯರಾದ ನದಿಗಳಿಗೆ ಯಾಕಿಷ್ಟು ಮಹತ್ತ್ವವನ್ನು ನೀಡುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರವನ್ನು ಇಲ್ಲಿ ಪಡೆಯುತ್ತೇವೆ. 

ಸಪ್ತರ್ಷಿಗಳಿಗೆ ರುದ್ರದೇವರ ಆಜ್ಞೆ

ಸಪ್ತರ್ಷಿಗಳು ರುದ್ರದೇವರ ದರ್ಶನಕ್ಕಾಗಿ ಬಂದಾಗ ರುದ್ರದೇವರು ಸಾಯಂಸ್ನಾನ, ಸಾಯಂಸಂಧ್ಯೆಗಾಗಿ ತೆರಳಿರುತ್ತಾರೆ. ಆ ಸಂದರ್ಭದಲ್ಲಿ ಸಪ್ತರ್ಷಿಗಳು ರುದ್ರದೇವರ ಭೃತ್ಯನಾದ ವೀರಕನ ಬಳಿಯಲ್ಲಿ ಮಾತನಾಡುವ ರೀತಿ ನಮಗೆ ಒಂದು ಶ್ರೇಷ್ಠ ಪಾಠವನ್ನು ಕಲಿಸುತ್ತದೆ. 

ಮದುವೆಯ ಕಾರ್ಯದಲ್ಲಿ ಪ್ರಧಾನ ಪಾತ್ರವನ್ನು ವಹಿಸುವ ಜನರು ಹೇಗೆ ವರ್ತಿಸಬೇಕು, ಯಾವ ರೀತಿ ಮದುವೆಯನ್ನು ಘಟಿಸಬೇಕು ಎನ್ನುವದನ್ನು ವಸಿಷ್ಠಾದಿ ಸಪ್ತರ್ಷಿಗಳು ಈ ಸಂದರ್ಭದಲ್ಲಿ ನಮಗೆ ಆಚರಿಸಿ ತೋರಿಸುತ್ತಾರೆ. 

ಅಷ್ಟೇಅಲ್ಲ, ರುದ್ರದೇವರ ಬಳಿಯಲ್ಲಿ ವಸಿಷ್ಠಾದಿ ಋಷಿಗಳು ಮಾತನಾಡುವ ರೀತಿ ಸಹಿತ ನಮಗೆ ಅದ್ಭುತ ಪಾಠವನ್ನು ಕಲಿಸುತ್ತದೆ. ಜ್ಞಾನಿಗಳನ್ನು ಹಿರಿಯರನ್ನು ಭೇಟಿ ಮಾಡಿದಾಗ ಹೇಗೆ ವರ್ತಿಸಬೇಕು ಎನ್ನುವದನ್ನು ಇಲ್ಲಿ ಕಲಿಯುತ್ತೇವೆ. 

ಹಿಮವಂತನ ಮನೆಗೆ ಸಪ್ತರ್ಷಿಗಳು
ರುದ್ರದೇವರು ಮದುವೆಯ ಎಲ್ಲ ಕಾರ್ಯವನ್ನು ಮಾಡಿ ಎಂದು ಸಪ್ತರ್ಷಿಗಳಿಗೆ ಆಜ್ಞೆ ಮಾಡುತ್ತಾರೆ, ಕನ್ಯಾದರ್ಶನ, ಕನ್ಯಾನಿಶ್ಚಯ, ವಧೂಪರೀಕ್ಷೆಗಾಗಿ ಸಪ್ತರ್ಷಿಗಳು ಹಿಮಾಲಯನ ಮನೆಗೆ ಬಂದರು ಎಂಬ  ಪರಮಮಂಗಳ ಘಟನೆಯ ವಿವರಣೆ ಮಾಡಿ ಉಪನ್ಯಾಸವನ್ನು ಗುರ್ವಂತರ್ಯಾಮಿಗೆ ಸಮರ್ಪಿಸಲಾಗಿದೆ. 

Play Time: 35 Minuts 09 Seconds

Size: 6.17 MB


Download Upanyasa Share to facebook View Comments
1332 Views

Comments

(You can only view comments here. If you want to write a comment please download the app.)
  • Ushasri,Chennai

    5:14 PM , 29/09/2018

    Namaskara. Dhanyavadagalu achare