Upanyasa - VNU050

GK-12 ವರಪರೀಕ್ಷೆ

21/07/2016

ಕನ್ಯಾದರ್ಶನ

ಮದುವೆಯಲ್ಲಿ ವಧುವನ್ನಷ್ಟೇ ಪರೀಕ್ಷಿಸಬೇಕು ಎನ್ನುವದು ಜನರು ತಿಳಿದುಕೊಂಡಿರುವದು. ಆದರೆ ವರನನ್ನೂ ಪರೀಕ್ಷಿಸಬೇಕು ಎನ್ನುವದು ಶಾಸ್ತ್ರಗಳ ಆದೇಶ. ಬರಿಯ ಆದೇಶವಷ್ಟೇ ಅಲ್ಲ, ಹಿಮವಂತ ರಾಜ ಸ್ವಯಂ ರುದ್ರದೇವರನ್ನೇ ಪರೀಕ್ಷಿಸಿ ಮದುವೆ ಮಾಡಿಕೊಟ್ಟ ಇತಿಹಾಸವನ್ನು ಈ ಉಪನ್ಯಾಸದಲ್ಲಿ ಕೇಳುತ್ತೇವೆ.

ಮದುವೆಯ ಮುಂದಿನ ಕಾರ್ಯಕ್ಕಾಗಿ ರುದ್ರದೇವರ ಆಜ್ಞೆಯನ್ನು ಪಡೆದ ವಸಿಷ್ಠಾದಿ ಋಷಿಗಳು ಕನ್ಯಾದರ್ಶನ,  ಕನ್ಯಾನಿಶ್ಚಯಕ್ಕಾಗಿ ಹಿಮಾಲಯನ ಮನೆಗೆ ಬರುತ್ತಾರೆ.  ಜಗತ್ತಿನಲ್ಲಿ ನಡೆಯುವಂತೆಯೇ ಮದುವೆ ನಡೆಯಬೇಕು ಎಂಬ ಪಾರ್ವತಿಯ ಅಪೇಕ್ಷೆಯಂತೆ ಈಗ ಕನ್ಯಾದರ್ಶನ, ವರಪರೀಕ್ಷೆ, ವಧೂಪರೀಕ್ಷೆ, ಕನ್ಯಾನಿಶ್ಚಯ ನಡೆಯುತ್ತದೆ. 

ಸಪ್ತರ್ಷಿಗಳಿಗೆ ಮಗಳನ್ನು ತೋರಿಸುವ ಹಿಮಾಲಯ, ಎಂತಹ ವ್ಯಕ್ತಿಗೆ ಮದುವೆ ಮಾಡಿಕೊಡಬಾರದು, ಯಾರಿಗೆ ಮಾಡಿಕೊಡಬೇಕು ಎನ್ನುವದನ್ನು ತಿಳಿಸುತ್ತಾನೆ. 

ಕಾಮನನ್ನೇ ಸುಟ್ಟು ಹಾಕಿದ ಶಿವನಿಗೆ ಮಗಳನ್ನು ಹೇಗೆ ಮದುವೆ ಮಾಡಿಕೊಡಲಿ ಎಂಬ ಹಿಮಾಲಯನ ಪ್ರಶ್ನೆಗೆ ಸಪ್ತರ್ಷಿಗಳು ಅದ್ಭುತವಾದ ಉತ್ತರವನ್ನು ನೀಡುತ್ತಾರೆ. 

ಶ್ರೀಮದಾಚಾರ್ಯರು ದ್ರೌಪದಿಯ ಕುರಿತು ನಿರ್ಣಯಿಸುವದಾಗ ಒಂದು ಅದ್ಭುತ ಪಾಠವನ್ನು ಹೇಳಿದ್ದಾರೆ. ಆ ದಿವ್ಯವಾಕ್ಯದ ಚಿಂತನೆಯೊಂದಿಗೆ ಈ ಭಾಗದ ವಿವರಣೆಯನ್ನು ಕೇಳುತ್ತೀರಿ. 

ಮಗಳ ಮದುವೆ ಮಾಡುವದಕ್ಕಿಂತ ಮುಂಚೆ ಪ್ರತಿಯೊಬ್ಬರೂ ಕೇಳಬೇಕಾದ ಭಾಗ. 

Play Time: 36 Minuts 13 Seconds

Size: 6.36 MB


Download Upanyasa Share to facebook View Comments
3301 Views

Comments

(You can only view comments here. If you want to write a comment please download the app.)
  • No Comment