Upanyasa - VNU051

GK-13 ವಧೂಪರೀಕ್ಷೆ

21/07/2016


ಸಪ್ತರ್ಷಿಗಳಿಂದ ಪಾರ್ವತಿಯ ಪರೀಕ್ಷೆ 

ಹಿಂದಿನ ಉಪನ್ಯಾಸದಲ್ಲಿ ವರಪರೀಕ್ಷೆಯಾಯಿತು. ಇಂದಿನ ಗಿರಿಜಾಕಲ್ಯಾಣದ ಉಪನ್ಯಾಸದಲ್ಲಿ ವಧೂಪರೀಕ್ಷೆ. 

ನಾರಾಯಣನನ್ನು, ವಾಯುವನ್ನು, ಇಂದ್ರ-ಕುಬೇರಾದಿಗಳನ್ನು ಬಿಟ್ಟು ದಿಗಂಬರನಾದ, ಶ್ಮಶಾನವಾಸಿಯಾದ, ನಾಗಭೂಷಣನಾದ ರುದ್ರನನ್ನು ಯಾಕೆ ಮದುವೆಯಾಗುತ್ತಿದ್ದಿ ಎಂದು ಸಪ್ತರ್ಷಿಗಳು ಪಾರ್ವತಿಯನ್ನು ಪ್ರಶ್ನೆ ಮಾಡುತ್ತಾರೆ. 

ಪಾರ್ವತೀದೇವಿ ಅದ್ಭುತವಾದ ಉತ್ತರವನ್ನು ನೀಡುತ್ತಾಳೆ. ಮಹಾಭಾರತದ ವನಪರ್ವದಲ್ಲಿರುವ ದ್ರೌಪದೀದೇವಿಯ ವಚನದ ಅನುಸಂಧಾನದೊಂದಿಗೆ ಆ ಪಾರ್ವತಿಯ ಉತ್ತರವನ್ನು ವಿವರಿಸಲಾಗಿದೆ. ಪ್ರತಿಯೊಬ್ಬ ಗಂಡಸು, ಪ್ರತಿಯೊಬ್ಬ ಹೆಂಗಸು ಕೇಳಿ, ತಿಳಿದು, ಅನುಷ್ಠಾನ ಮಾಡಬೇಕಾದ ದಿವ್ಯ ತತ್ವ ಇಲ್ಲಿದೆ. 

ಮದುವೆಗೆ ದೇವತೆಗಳ ಆಗಮನ
ವಧೂಪರೀಕ್ಷೆಯನ್ನು ಮಾಡಿ ಕನ್ಯಾನಿಶ್ಚಯ ಮಾಡಿದ ಸಪ್ತರ್ಷಿಗಳು ಬಂದು ರುದ್ರದೇವರ ಮುಂದೆ ಮುಂದಿನ ಕಾರ್ಯವನ್ನು ನಿವೇದಿಸಿಕೊಳ್ಳುತ್ತಾರೆ. ರುದ್ರದೇವರು ನಾರದರ ಮುಖಾಂತರ ಪರಮಾತ್ಮನನ್ನು, ಬ್ರಹ್ಮದೇವರನ್ನು, ದೇವತೆಗಳನ್ನು ಮದುವೆಗಾಗಿ ಆಹ್ವಾನ ನೀಡುತ್ತಾರೆ. ಲಕ್ಷ್ಮೀಸಮೇತನಾಗಿ ಶ್ರೀಹರಿ, ಸರಸ್ವತೀಯುಕ್ತರಾಗಿ ಬ್ರಹ್ಮದೇವರು, ಇಂದ್ರಾದಿ ದೇವತೆಗಳು ತಮ್ಮ ಪತ್ನಿಯರ ಸಮೇತನಾಗಿ ರುದ್ರದೇವರು ಇರುವ ಸ್ಥಳಕ್ಕೆ ಆಗಮಿಸುತ್ತಾರೆ. 

ಮದುವೆಗೆ ಯಾವ ರೀತಿ ಆಹ್ವಾನ ನೀಡಬೇಕು ಎನ್ನುವದನ್ನು ನಾರದರು,  ಮದುವೆಗೆ ಹೇಗೆ ಬರಬೇಕು ಎನ್ನುವದನ್ನು ಈ ಭಾಗದಲ್ಲಿ ಕಲಿಯುತ್ತೇವೆ. 

ಹರಿಹರರ ಸಮಾಗಮ, ಕುಶಲೋಪರಿಗಳ ನಿರೂಪಣೆಯೊಂದಿಗೆ ಈ ಭಾಗದ ಉಪನ್ಯಾಸದ ಗುರ್ವಂತರ್ಯಾಮಿಗೆ ಸಮರ್ಪಿತವಾಗಿದೆ. 

Play Time: 43 Minuts 17 Seconds

Size: 7.58 MB


Download Upanyasa Share to facebook View Comments
4971 Views

Comments

(You can only view comments here. If you want to write a comment please download the app.)
  • Sudha R. Managuli,Bijapur

    11:57 AM, 09/04/2018

    Plus give permission for download ing